ಕರ್ನಾಟಕದಲ್ಲಿ ಎರಡು ಸುತ್ತಿನ ಲೋಕಸಭಾ ಚುನಾವಣೆ (Assembly Election) ಅಂತ್ಯಗೊಂಡಿದೆ ಮತ್ತು ಸದ್ಯಕ್ಕಂತೂ ಎಲ್ಲರ ಚಿತ್ತವು ಲೋಕಸಭಾ ಚುನಾವಣೆ ಕಡೆ ಇದೆ. ಒಟ್ಟು ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ನಾಲ್ಕನೇ ಸುತ್ತಿನ ಚುನಾವಣೆ ಕೂಡ ಮುಗಿದಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಮೇ 13ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಮತ್ತೊಮ್ಮೆ ತಮ್ಮ ಪಕ್ಷದ ಖಾತರಿ ನ್ಯಾಯ ಯೋಜನೆಯ ಪ್ರಣಾಳಿಕೆಗಳ ಬಗ್ಗೆ ಮಾತನಾಡಿದ್ದಾರೆ.
ಈ ಸುದ್ದಿ ಓದಿ:-ಹೈನುಗಾರಿಕೆಯಿಂದ ತಿಂಗಳಿಗೆ 1.8 ಲಕ್ಷ ಆದಾಯ ಪಡೆಯುತ್ತಿರುವ ರೈತ, ದಿನಕ್ಕೆ 45 ಲೀ. ಹಾಲು ಕೊಡುವ ಹಸುಗಳು ಕೂಡ ಇವರ ಬಳಿ ಇವೆ.!
ಈ ವಿಡಿಯೋವನ್ನು ಸ್ವತಃ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ನೇರವಾಗಿ ತಮ್ಮ ಪಕ್ಷದ ಗ್ಯಾರಂಟಿ ಘೋಷಣೆಗಳಲ್ಲಿ ಒಂದಾದ ಮಹಾಲಕ್ಷ್ಮಿ ಯೋಜನೆ (Mahalakshmi Scheme) ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಸೋನಿಯಾ ಗಾಂಧಿಯವರು ನನ್ನ ಪ್ರೀತಿಯ ಸಹೋದರಿಯರೇ, ಸ್ವಾತಂತ್ರ್ಯ ಹೋರಾಟ ಸಮಯದಿಂದ ಆಧುನಿಕ ಭಾರತ ನಿರ್ಮಾಣದವರೆಗೆ ನಮ್ಮ ದೇಶದ ಮಹಿಳೆಯರು ನೀಡಿರುವ ಕೊಡುಗೆ ಅಪಾರ.
ಆದರೆ ಇಂದು ನಮ್ಮ ಮಹಿಳೆಯರು ತೀವ್ರ ಹಣದುಬ್ಬರದ ನಡುವೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಶ್ರಮ ಮತ್ತು ತಪಸ್ಸಿಗೆ ನ್ಯಾಯ ಸಲ್ಲಿಸಲು ಕಾಂಗ್ರೆಸ್ ಪಕ್ಷ ಸದಾ ಸಿದ್ಧವಿದೆ ಎನ್ನುತ್ತಾ ಮಹಾಲಕ್ಷ್ಮಿ ಯೋಜನೆಯ ಉದ್ದೇಶದ ಬಗ್ಗೆ ತಿಳಿಸಿದರು.
ಈ ಸುದ್ದಿ ಓದಿ:-MNC ಬಿಟ್ಟು ಬಣ್ಣ ಬಣ್ಣದ ಹೂ ಬೆಳೆದು ಹಳ್ಳಿಯಲ್ಲಿ ಒಂದು ಕೋಟಿ ದುಡಿದ MBA ಗ್ರಾಜುಯೇಟ್.!
ಈ ಯೋಜನೆ ಮೂಲಕ BPL ರೇಷನ್ ಕಾರ್ಡ್ ಹೊಂದಿರುವ ಮಹಿಳೆಯ ಖಾತೆಗೆ ನಾವು ನಾವು ಪ್ರತಿ ವರ್ಷ 1 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ. ಕಾಂಗ್ರೆಸ್‌ನ ಭರವಸೆಗಳು ಈಗಾಗಲೇ ದಕ್ಷಿಣದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಕುಟುಂಬಗಳ ಜೀವನವನ್ನು ಬದಲಾಯಿಸಿವೆ ಎಂದು ಅಲ್ಲಿಯೂ ನುಡಿದಂತೆ ನಡೆದು ಸರ್ಕಾರ ಸ್ಥಾಪನೆಯಾದ ತಕ್ಷಣ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
ಗ್ಯಾರಂಟಿ ಯೋಜನೆಗಳ ಹೊರತಾಗಿಯೂ MGNREGA, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಅಥವಾ ಆಹಾರ ಭದ್ರತೆಯಂತಹ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷವು ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಿದೆ. ಇದರ ಮುಂದಿನ ಹಂತವಾಗಿ ಮಹಾಲಕ್ಷ್ಮಿ ಯೋಜನೆಯು ನಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಇತ್ತೀಚಿನ ಭರವಸೆಯಾಗಿದೆ ಎಂದು ಸೋನಿಯಾ ಗಾಂಧಿ ನುಡಿದಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿ ಬದುಕು ದುಸ್ತರವಾಗಿರುವ ಈ ಸಮಯದಲ್ಲಿ, ಕಾಂಗ್ರೆಸ್‌ನ ಕೈ ನಿಮ್ಮೊಂದಿಗಿದೆ ಮತ್ತು ಈ ಕೈ ನಿಮ್ಮ ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಾಲ್ಕನೇ ಹಂತದ ಚುನಾವಣೆ ಸಮಯದಲ್ಲಿ ಮತಯಾಚನೆ ಮಾಡಿದ್ದಾರೆ.
ಈ ಸುದ್ದಿ ಓದಿ:-ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ.!
ರಾಹುಲ್ ಗಾಂಧಿ ಅವರು ತಮ್ಮ ತಾಯಿಯ ಸಂದೇಶವನ್ನು ಹಂಚಿಕೊಂಡು ಬಡ ಕುಟುಂಬದ ಮಹಿಳೆಯರು ನೆನಪಿಸಿಕೊಳ್ಳಿ, ನಿಮ್ಮ ಒಂದು ಮತವು ನಿಮ್ಮ ಖಾತೆಯಲ್ಲಿ ವಾರ್ಷಿಕ 1 ಲಕ್ಷ ರೂ. ತುಂಬುವಂತೆ ಮಾಡಲಿದೆ ಕಾಂಗ್ರೆಸ್‌ನ ಈ ಮಹಾಲಕ್ಷ್ಮಿ಼ಯೋಜನೆಯು ಭೀಕರ ಹಣದುಬ್ಬರ ಮತ್ತು ನಿರುದ್ಯೋಗದ ನಡುವೆ ಹೋರಾಡುತ್ತಿರುವ ಮಹಿಳೆಯರಿಗೆ ಜೀವರಕ್ಷಕವಾಗಲಿದೆ.
ಹಾಗಾಗಿ ಮತ ಚಲಾಯಿಸಿ ಮತ್ತು ನಿಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿ ಎಂದು ಸೋನಿಯಾ ಗಾಂಧಿ ಅವರ ಸಂದೇಶವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದು ದೆಹಲಿಯಲ್ಲಿ ಗದ್ದಿಗೆ ಏರಿದರೆ ದೇಶದ ಪ್ರತಿ ಬಡ ಕುಟುಂಬದ ಮಹಿಳೆ ಖಾತೆಗೆ ಕುಟುಂಬ ನಿರ್ವಹಣೆಗಾಗಿ ಮಹಾಲಕ್ಷ್ಮಿ ಯೋಜನೆಯಡಿ ರೂ.8500 DBT ಮೂಲಕ ವರ್ಗಾವಣೆ ಆಗಲಿದೆ. ಆದರೆ ಚುನಾವಣಾ ಫಲಿತಾಂಶ ಏನಾಗಲಿದೆ ಕಾದು ನೋಡೋಣ.