ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣದ ಅವಶ್ಯಕತೆ ಇದ್ದೇ ಇದೆ. ಅದರಲ್ಲೂ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗಂತೂ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆರಂಭಿಕ ಹಂತದಲ್ಲಿ ಬಂಡವಾಳವಾಗಿ ಎಂತಹದೇ ಸಣ್ಣ ಪುಟ್ಟ ವ್ಯವಹಾರ ಆಗಿದ್ದರೂ ಕನಿಷ್ಠ 10,000 ಕ್ಕಿಂತ ಹೆಚ್ಚಿನ ಹಣ ಬೇಕಿರುತ್ತದೆ.
ಮತ್ತು ಅವರ ಬಳಿ ಯಾವಾಗಲು ಅವರ ವ್ಯಾಪಾರಕ್ಕೆ ಅನುಸಾರವಾಗಿ ಮೇಂಟೆನೆನ್ಸ್ ಆಗಿ ಮೂರು ತಿಂಗಳ ಖರ್ಚಿಗಾಗುವಷ್ಟಾದರೂ ಹಣ ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ ಆರ್ಥಿಕ ತಜ್ಞರು. ಆದರೆ ಇಂದಿನ ಕಾಲದಲ್ಲಿ ಯಾವಾಗ ನಮ್ಮ ಅಕೌಂಟ್ ಪೂರ್ತಿ ಖಾಲಿ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ.
ನಾವು ಯಾವುದೇ ಉದ್ದೇಶದಿಂದ ಹಣ ಇಟ್ಟಿದ್ದರು ಕೂಡ ಹತ್ತಾರು ಕಾರಣಗಳು ಹುಟ್ಟಿಕೊಂಡು ಖರ್ಚಾಗಿ ಬಿಡುತ್ತದೆ ಅನಿವಾರ್ಯ ಸಂದರ್ಭ ಇದ್ದಾಗ ಅಷ್ಟು ಬೇಗ ಎಲ್ಲೂ ಸುಲಭವಾಗಿಸಾಲ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿಮಗೆ ಗೂಗಲ್ ಪೇ (loan through google pay) ಅನುಕೂಲಕ್ಕೆ ಬರೆದಿದೆ ಗೂಗಲ್ ಮೂಲಕ ನೀವು ಹಣವನ್ನು ಸಾಲ ಕೂಡ ಪಡೆದುಕೊಳ್ಳಬಹುದು.
ಗೂಗಲ್ ಪೇ ಮೂಲಕ ಸುಲಭವಾಗಿ ನೀವು ಹೆಚ್ಚಿನ ಯಾವ ದಾಖಲೆಯೂ ನೀಡದೆ ನಿಮಿಷಗಳಲ್ಲಿ ಸ್ಯಾಚೆಟ್ ಸಾಲವನ್ನು (Sachet loan) ಪಡೆಯಬಹುದು. ಸ್ಯಾಚೆಟ್ ಸಾಲ ಎಂದರೆ ಅಷ್ಟೊಂದು ರೀತಿಯ ನ್ಯಾನೋ ಕ್ರೆಡಿಟ್ ಸಾಲ (Nano credit loan). ಸಣ್ಣ ಮೊತ್ತದ ಸಾಲವನ್ನು ಹೆಚ್ಚಿನ ಕಾಗದಪತ್ರಗಳಿಲ್ಲದೇ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಮತ್ತು ಪ್ರತಿ ತಿಂಗಳು EMI ರೂಪದಲ್ಲಿ ತೀರಿಸುವ ಅವಕಾಶ ಇರುತ್ತದೆ.
ಇದು ಹೆಚ್ಚು ಹೊರೆ ಎಣಿಸುವುದೂ ಇಲ್ಲ. ಯಾವುದೇ ಹೆಚ್ಚುವರಿ ದಾಖಲೆಯಿಲ್ಲದೆ ರೂ.10,000 ಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ನೀವು ಸ್ಯಾಚೆಟ್ ಲೋನ್ ಪಡೆದುಕೊಳ್ಳಬಹುದು. ಈಗ ಗೂಗಲ್ ಸಣ್ಣ ವ್ಯಾಪಾರಿಗಳಿಗೆ ತಕ್ಷಣ ಬೇಕಾಗಿರುವ ಸಾಲವನ್ನು ನೀಡಲು ಮುಂದಾಗಿದೆ, ಗೂಗಲ್ ಪೇ ನಲ್ಲಿ 15,000 ರೂ. ಸ್ಯಾಚೆಟ್ ಸಾಲವನ್ನು ಆರಂಭದಲ್ಲಿ ಪಡೆಯಬಹುದು.
ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 15,000 ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಕೇವಲ 111 ರೂ. ಗಳ ಚಿಕ್ಕ EMI ಇರುತ್ತದೆ. ಗೂಗಲ್ ಪೇ DMI ಫೈನಾನ್ಸ್ ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಈ ಸಾಲ ನೀಡುತ್ತದೆ. ಗೂಗಲ್ ಪೇ ನೀಡುವ ಈ ಸಾಲವನ್ನು pay later ಸಹಭಾಗಿತ್ವದಲ್ಲಿ ನೀಡಲಾಗುತ್ತದೆ.
ಅಂದರೆ ವ್ಯಾಪಾರಿಗಳಿಗೆ ಪೇ ಲೇಟರ್ ಕ್ರೆಡಿಟ್ ಲೈನ್ (Pay later credit line)ಸಕ್ರಿಯಗೊಳಿಸಲಾಗಗುತ್ತದೆ. ವ್ಯಾಪಾರಿಗಳು ಈ ಹಣವನ್ನು ಆನ್ಲೈನ್ ಮತ್ತು ಆಫ್ಲೈನ್ ವಿತರಕರ ಬಳಿ ವಸ್ತು ಖರೀದಿಸಲು ಈ ಬಳಸಿಕೊಳ್ಳಬಹುದು ಗೂಗಲ್ ಪೇ ಆಕ್ಸಿಸ್ ಬ್ಯಾಂಕ್ (Axis bank) ನೊಂದಿಗೆ ಸಹಭಾಗಿತ್ವ ಹೊಂದಿದೆ.
ಗೂಗಲ್ ವೈಯಕ್ತಿಕ ಸಾಲ (Personal Loan) ಸೌಲಭ್ಯವನ್ನು ನೀಡುತ್ತದೆ. ಗೂಗಲ್ ಪೇ ವೈಯಕ್ತಿಕ ಸಾಲ ಪೋರ್ಟ್ಫೋಲಿಯೋವನ್ನು (portfolio) ಗೂಗಲ್ ಇಂಡಿಯಾಕ್ಕೂ ವಿಸ್ತರಿಸಲಾಗಿದೆ. ಗೂಗಲ್ ಪೇ ನೀಡುತ್ತಿರುವ ಸಾಲ ಸೌಲಭ್ಯಗಳಿಂದಲೇ ಕಳೆದ ಒಂದು ವರ್ಷಗಳಲ್ಲಿ 167 ಲಕ್ಷ ಕೋಟಿ ವ್ಯವಹಾರ ನಡೆಸಿದೆ ಎಂದು ಗೂಗಲ್ ಅಧ್ಯಕ್ಷರೇ ಮಾಹಿತಿ ಹಂಚಿಕೊಂಡಿದ್ದಾರೆ.
ಗೂಗಲ್ ಪೇ ನಲ್ಲಿ ಈ 15,000ರೂ. ಗಳ ಸ್ಯಾಚೆಟ್ ಸಾಲ ಪಡೆದುಕೊಳ್ಳಲು ಕೇಳಗಾಗುವ ಒಂದೇ ಒಂದು ಪ್ರಮುಖ ಮಾನದಂಡವೆಂದರೆ ಆ ವ್ಯಕ್ತಿಯ ತಿಂಗಳ ಆದಾಯ 30,000ಗಳಿಗಿಂತ ಕಡಿಮೆ ಇರಬೇಕು.
ಪಟ್ಟಣದಲ್ಲಿ ವ್ಯಾಪಾರ ಮಾಡುವವರು ಹಾಗೂ ಪಟ್ಟಣದ ಹೊರವಲಯದಲ್ಲಿ ವ್ಯಾಪಾರ ಮಾಡುವವರು ಎಂದು ಎರಡು ರೀತಿಯಲ್ಲಿ ವಿಭಾಗ ಮಾಡಿ ಸಾಲ ಸೌಲಭ್ಯ ನೀಡಲಾಗುತ್ತದೆ. ಇನ್ನು ಮುಂದೆ ಗೂಗಲ್ ಪೇ ಉಪಯೋಗಿಸುವ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ತುರ್ತು ಹಣ ಬೇಕಿದ್ದಾಗ ಗೂಗಲ್ ಪೇ ಮೂಲಕ ಈ ಪ್ರಯೋಜನ ಪಡೆದುಕೊಳ್ಳಬಹುದು.