ಗ್ರಾಸ್ ರೂಟ್ ಫಿಲೋಷಿಪ್ 2024 ಯೋಜನೆಯ ಮೂಲಕ ಪ್ರಸಕ್ತ ವರ್ಷದ ಸಾಲಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಒಂದು ವರ್ಷದ ಈ ಕಾರ್ಯಗಾರಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗಲಿದೆ 12 ಸಾವಿರದವರೆಗೂ ಮಾಸಿಕ ವೇತನ ಕೂಡ ಸಿಗುತ್ತದೆ. ಇದರ ವಿವರದ ಬಗ್ಗೆ ಹೇಳುವುದಾದರೆ, ಇದು ಗೂಂಜ್ ಎನ್ನುವ ಒಂದು ಸಂಸ್ಥೆಯು ಏರ್ಪಡಿಸಲಾಗಿರುವ ಕಾರ್ಯಕ್ರಮ ಆಗಿದೆ.
ಈ ಸಂಸ್ಥೆಯು ಈ ನೆಲದ ಕೆಲ ಸಮುದಾಯಗಳ ಜೊತೆ ಬೆರೆತು ಅವರೊಂದಿಗೆ ತೊಡಗಿಕೊಳ್ಳುವ ಉದ್ದೇಶವನ್ನು ಹೊಂದಿದೆ. ನಂತರ ಮುಂದಿನ ದಿನಗಳಲ್ಲಿ ಆ ಕಾರ್ಯಗಾರದಿಂದ ಪಡೆದ ಮಾಹಿತಿಗಳನ್ನು ಆಧರಿಸಿ ಸಮುದಾಯಗಳ ಅಭಿವೃದ್ಧಿಗೆ ಇನ್ನಷ್ಟು ಸಹಾಯವಾಗುವ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮಹತ್ವಾಕಾಂಕ್ಷೆ ಹೊಂದಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಮೆಟ್ರಿಕ್ಯುಲೇಶನ್ ಪಾಸ್ ಆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆ ಫೆಲೋಗಳನ್ನು ವಿವಿಧ ಪ್ರದೇಶಗಳಲ್ಲಿ ಸಮುದಾಯದ ಜೊತೆ ಬೆರೆಯಲು ಬಿಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಫೆಲೋ ಆಗಿ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಂಸ್ಥೆಯು ತಿಳಿಸಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲ ಮಾನ್ಯತ ದಂಡಗಳನ್ನು ಕೂಡ ವಿಧಿಸಿದೆ. ಈ ವಿಚಾರಗಳನ್ನು ಮತ್ತು ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ ಎಷ್ಟಿರಲಿದೆ, ಅದರ ವಿವರ ಹಾಗೂ ಅರ್ಜಿ ಸಲ್ಲಿಸಲು ಇರುವ ಕಡೆ ದಿನಾಂಕ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಪ್ರಮುಖ ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡುತಿದ್ದೇವೆ. ಇದನ್ನು ಸಂಪೂರ್ಣವಾಗಿ ಓದಿ ನಿಮಗೂ ಆಸಕ್ತಿ ಇದ್ದರೆ ಈ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಿ ಗೂಂಜ್ ಸಂಸ್ಥೆಯ ಭಾಗವಾಗಿ.
ಹೇಳಲಾಗಿರುವ ಅರ್ಹತೆಗಳು:-
● 31 ಜುಲೈ 2024ರ ದಿನಾಂಕಕ್ಕೆ ಸರಿಯಾಗಿ ಅವರು 18 ವರ್ಷ ಪೂರೈಸಬೇಕು ಮತ್ತು 30 ವರ್ಷ ವಯೋಮಿತಿಯನ್ನು ಮೀರಿದ ಬಾರದು.
● 31 ಜುಲೈ 2024ರ ಒಳಗೆ ಅವರು ಮೆಟ್ರಿಕ್ಯುಲೇಷನ್ ಪಾಸ್ ಆಗಿರಬೇಕು
● ಸದ್ಯಕ್ಕೀಗ ಇದು ಭಾರತದ ಉತ್ತರದ ಕಡೆ ನಡೆಯುತ್ತಿರುವ ಕಾರ್ಯಕ್ರಮ ಆಗಿರುವುದರಿಂದ ಹಿಂದಿ ಮತ್ತು ಇಂಗ್ಲಿಷ್ ಅನ್ನು ಓದಲು ಬರೆಯಲು ಮತ್ತು ನಿರರ್ಗಳವಾಗಿ ಮಾತನಾಡಲು ಅರಿತಿರಬೇಕು.
● ನಿಯೋಜನೆ ಆಗುವ ಪ್ರದೇಶಗಳ ವಾಸ್ತವತೆ, ಭೌಗೋಳಿಕ ಪರಿಸ್ಥಿತಿ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಜ್ಞಾನ ಹೊಂದಿರಬೇಕು.
ವೇತನದ ವಿವರ:-
● ಸ್ಥಳೀಯ ಜಿಲ್ಲೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 10,000 ರೂ. ಮಾಸಿಕವಾಗಿ ಸ್ಟೈಫಂಡ್ ಇರುತ್ತದೆ.
● ಇತರ ಜಿಲ್ಲೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 12,000 ಸಾವಿರ ರೂ. ಮಾಸಿಕವಾಗಿ ಸ್ಟೈಫಂಡ್ ಇರುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-
● ಶೈಕ್ಷಣಿಕ ಅಂಕಪಟ್ಟಿ
● ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಇನ್ನಿತರ ಯಾವುದೇ ಗುರುತಿನ ಚೀಟಿ
● ಬ್ಯಾಂಕ್ ಖಾತೆ ವಿವರ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:-
● ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ಗೂಂಜ್ ಗ್ರಾಸ್ ರೂಟ್ ಫೆಲೋಶಿಪ್ 2024-2025 ಅಪ್ಲೈ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ನೊಂದಾಯಿತ ಐಡಿಯೊಂದಿಗೆ buddy4study ಗೆ ಲಾಗಿನ್ ಆಗಿ, ಒಂದುವೇಳೆ ಐಡಿ ಇಲ್ಲದಿದ್ದರೆ ಮೊಬೈಲ್ ಮೂಲಕ ಅಥವಾ ಇ-ಮೇಲ್ ಮೂಲಕ ಮೊದಲು ನೋಂದಣಿ ಆಗಿ ಐಡಿ ಪಡೆದು ನಂತರ ಆ ಐಡಿ ಸಂಖ್ಯೆಯಿಂದ buddy4study ಗೆ ಲಾಗಿನ್ ಆಗಿ.
● ಸ್ಕಾಲರ್ಶಿಪ್ ಪ್ರೋಗ್ರಾಮ್ ಅರ್ಜಿ ನಮೂನೆಯ ತೆಗೆದುಕೊಳ್ಳುತ್ತದೆ, ಅರ್ಜಿ ನಮೂನೆ ಫಿಲ್ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಕೂಡ ಲಗತ್ತಿಸಿ ಸಬ್ಮಿಟ್ ಮಾಡಿ. ನಿಯಮ ಮತ್ತು ಶರತುಗಳನ್ನೆಲ್ಲಾ ಒಪ್ಪಿಕೊಂಡು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ