ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ.! ಯಾವ್ಯಾವ ಜಿಲ್ಲೆಗಳು‌.? ಅರ್ಜಿ ಹಾಕಲು ಅರ್ಹತೆಗಳೇನು.? ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ…

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳು ದೇಶದ ನಾಗರಿಕರಾಗಿ ನೀಡುವ ವಿಶೇಷ ಯೋಜನೆಗಳ ಪ್ರಯೋಜನಗಳನ್ನು ಮತ್ತು ಸೇವೆಗಳನ್ನು ಗ್ರಾಮೀಣ ಭಾಗದಲ್ಲಿರುವ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಇದ್ದು ತಲುಪಿಸುವುದಕ್ಕೆ ಕೊಂಡಿಯಾಗಿರುವುದು ಗ್ರಾಮ ಒನ್ ಕೇಂದ್ರಗಳು ಎಂದರೆ ತಪ್ಪಾಗುವುದಿಲ್ಲ.

WhatsApp Group Join Now
Telegram Group Join Now

ಅಲ್ಲದೆ ಗ್ರಾಮೀಣ ಭಾಗದಲ್ಲಿ ಇರುವಂತಹ ಪ್ರತಿಭಾವಂತ ನಿರುದ್ಯೋಗಿ ಯುವ ಜನತೆಗೆ ಸ್ವಯಂ ಉದ್ಯೋಗ ಸ್ಥಾಪಿಸಲು ಇದು ಅವಕಾಶವೂ ಹೌದು. ಪ್ರಸ್ತುತ ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿರುವ 80 ಇಲಾಖೆಗಳ 798 ಸೇವೆಗಳನ್ನು ಗ್ರಾಮೀಣ ಜನರಿಗೆ ಒದಗಿಸಿ ಕೊಡಲಾಗುತ್ತಿದೆ.

ನೀವು ಕೂಡ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಬೇಕು ಎನ್ನುವ ಆಸಕ್ತಿ ಹೊಂದಿದ್ದರೆ ಇದು ನಿಮಗೆ ಸುವರ್ಣ ಅವಕಾಶ. ಯಾಕೆಂದರೆ, ಗ್ರಾಮ ಒನ್ ಫ್ರಾಂಚೈಸಿ ತೆರೆಯಲು ಬಯಸುವ ಮೈಸೂರು ಮತ್ತು ಕಲ್ಬುರ್ಗಿ ವಿಭಾಗದ 15 ಜಿಲ್ಲೆಗಳ ನೂರಾರು ಗ್ರಾಮಗಳ ಆಸಕ್ತ ಯುವ ಜನತೆಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಗ್ರಾಮ ಒನ್ ಕೇಂದ್ರಗಳನ್ನು ತೆಗೆಯುವುದರಿಂದ ಸ್ವಂತ ಊರಿನಲ್ಲಿ ಉದ್ಯೋಗ ಮಾಡುವ ಅವಕಾಶ ಸಿಗುವುದು ಅಲ್ಲದೆ ಗ್ರಾಮೀಣ ಭಾಗದ ಜನತೆಗೆ ಸೇವೆ ಸಲ್ಲಿಸಿದ ಸಮಾಧಾನ ಮತ್ತು ಅದಕ್ಕೆ ತಕ್ಕವಾದ ಗೌರವಯುತವಾದ ಸಂಪಾದನೆ ಕೂಡ ಆಗುತ್ತದೆ. ನೀವು ಕೂಡ ಗ್ರಾಮ ಒನ್ ಫ್ರಾಂಚೈಸಿ ತೆರೆಯುವ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ವಿವರವನ್ನು ಪೂರ್ತಿಯಾಗಿ ಓದಿ ನಂತರ ಮುಂದುವರೆಯಿರಿ.

ಜಿಲ್ಲೆಗಳ ವಿವರ:-

1. ಮೈಸೂರು ವಿಭಾಗದ ಜಿಲ್ಲೆಗಳು:-
* ಚಾಮರಾಜನಗರ
* ಚಿಕ್ಕಮಗಳೂರು
* ದಕ್ಷಿಣ ಕನ್ನಡ
* ಹಾಸನ
* ಕೊಡಗು
* ಮಂಡ್ಯ
* ಉಡುಪಿ
* ಮೈಸೂರು

ಕಲ್ಬುರ್ಗಿ ವಿಭಾಗದ ಜಿಲ್ಲೆಗಳು:-
* ಬಳ್ಳಾರಿ
* ಬೀದರ್
* ಗುಲ್ಬರ್ಗ
* ಕೊಪ್ಪಳ
* ರಾಯಚೂರು
* ಯಾದಗಿರಿ
* ವಿಜಯನಗರ

ಅರ್ಜಿ ಸಲ್ಲಿಸಲು ಮಾನದಂಡಗಳು:-

* ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
* 18 ವರ್ಷ ಮೇಲ್ಪಟ್ಟಿರಬೇಕು
* ಕನಿಷ್ಠ 10ನೇ ತರಗತಿ ವಿದ್ಯಾಭ್ಯಾಸ ಹೊಂದಿರಬೇಕು ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿಗೆ ಮೊದಲು ಆದ್ಯತೆ
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು
* ಕನ್ನಡ ಭಾಷೆಯನ್ನು ಓದಲು ಬರೆಯಲು ಬರಬೇಕು, ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಟೈಪಿಂಗ್ ಬಲ್ಲವರಾಗಿರಬೇಕು.

* ಅರ್ಜಿದಾರನ ಮೇಲೆ ಯಾವುದೇ ಸಾಮಾಜಿಕ ಅಥವಾ ಕ್ರಿಮಿನಲ್ ಅಪರಾಧವಿರಬಾರದು ಇದಕ್ಕೆ ಸಾಕ್ಷಿಯಾಗಿ ಪೊಲೀಸ್ ಧೃಡೀಕರಣ ಪತ್ರ ಕೂಡ ಸಲ್ಲಿಸಬೇಕು
* ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ರಸ್ತೆ ಸಂಪರ್ಕ ವಿದ್ಯುತ್ ಮುಂತಾದ ಸೌಕರ್ಯಗಳನ್ನು ಹೊಂದಿರುವ ಅಗತ್ಯ ಜಾಗ ಹೊಂದಿರಬೇಕು. ಐಟಿ ಹಾಗೂ ಐಟಿಯೇತರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡಲು ಸಿದ್ಧರಿರಬೇಕು

ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಬೇಕಾಗುವ ಸಾಮಗ್ರಿಗಳು :-

* ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ (Computer / laptop)
* ಪ್ರಿಂಟರ್ (Multi function Printer)
* ಫಿಂಗರ್ ಪ್ರಿಂಟ್ ಸ್ಕ್ಯಾನರ್ (Biometric Scanner)
* ವೆಬ್ ಕ್ಯಾಮೆರಾ (web camera)

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ನಿವಾಸ ದೃಢೀಕರಣ ಪತ್ರ
* ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಬ್ಯಾಂಕ್ ಪಾಸ್ ಬುಕ್ ವಿವರ
* ಶೈಕ್ಷಣಿಕ ವಿದ್ಯಾರ್ಥಿಗೆ ಸಂಬಂಧಪಟ್ಟ ದಾಖಲೆಗಳು
* ಇನ್ನಿತರ ಕೇಳಲಾಗುವ ಯಾವುದೇ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

* kal-mys.gramaone.karnataka.gov.in ವೆಬ್ಸೈಟ್ ಗೆ ಭೇಟಿ ಕೊಟ್ಟು ಕೇಳಲಾಗುವ ವೈಯಕ್ತಿಕ ಮಾಹಿತಿಗಳನ್ನು ಸಲ್ಲಿಸಿ. ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಶುಲ್ಕ ರೂ.100 ಇರುತ್ತದೆ ಇದನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಪೇಮೆಂಟ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪತ್ರ ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿರುವ ಇ-ರಶೀದಿ ಪಡೆದುಕೊಳ್ಳಿ
* ಡಿಸೆಂಬರ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

ಹೆಚ್ಚಿನ ಮಾಹಿತಿಗಾಗಿ:-
ಸಹಾಯವಾಣಿ:
9148712473

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now