ATM ನಲ್ಲಿ ಹರಿದ ನೋಟು ಬಂದ್ರೆ ಗಾಬರಿ ಬೇಡ ಈ ರೀತಿ ಮಾಡಿ ಹೊಸ ನೋಟು ಪಡೆಯಿರಿ.!

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ UPI ಆಧಾರಿತ ಆಪ್ ಗಳಾದ ಗೂಗಲ್ ಪೇ / ಫೋನ್ ಪೇ / paytm ಇವುಗಳ ಮೂಲಕ ತಮ್ಮ ಹಣಕಾಸಿನ ವಹಿವಾಟುಗಳನ್ನು ನಡೆಸುತ್ತಾರೆ.

WhatsApp Group Join Now
Telegram Group Join Now

ಕನಿಷ್ಠ ಒಂದು ರೂಪಾಯಿ ಮೌಲ್ಯದ ಹಣಕಾಸಿನ ವಹಿವಾಟನ್ನು ಕೂಡ ಸರಾಗವಾಗಿ ಇವುಗಳ ಮೂಲಕ ಮಾಡಬಹುದಾಗಿರುವುದರಿಂದ ಜನರಿಗೆ ಚಿಲ್ಲರೆ ಸಮಸ್ಯೆ ಸೇರಿದಂತೆ ಅತಿ ದೊಡ್ಡ ಮೊತ್ತದ ಹಣವನ್ನು ಇಟ್ಟುಕೊಂಡು ಎದುರಾಗಬಹುದಾದ ಅಪಾಯಗಳ ಭ’ಯದಿಂದ ರಕ್ಷಣೆ ಸಿಕ್ಕಿದೆ ಎಂದು ಹೇಳಬಹುದು.

ಜನರು ಈ ಆನ್ಲೈನ್ ಪೇಮೆಂಟ್ ವ್ಯವಸ್ಥೆಗೆ ಮನಸೋತಿದ್ದಾರೆ ಮತ್ತು ಭಾರತದಂತಹ ಅಭಿವೃದ್ಧಿ ಶೀಲ ದೇಶ ಕೂಡ ಬೀದಿಬಳಿ ವ್ಯಾಪಾರಿಗಳಿಂದ ಹಿಡಿದು ಮಾಲ್ ಗಳ ವರೆಗೂ ಕೂಡ ಈ ರೀತಿ ಆನ್ಲೈನ್ ಪೇಮೆಂಟ್ ಸ್ವೀಕರಿಸುವುದಕ್ಕೆ ಹೊಂದಿಕೊಂಡಿರುವುದರಿಂದ ಬಹಳ ದೊಡ್ಡ ಕ್ರಾಂತಿಯೇ ಈ ಕ್ಷೇತ್ರದಲ್ಲಿ ನಡೆದಿದೆ.

ಆದರೂ ಕೂಡ ಸಂಪೂರ್ಣವಾಗಿ ATM ಹಾಗೂ ಬ್ಯಾಂಕ್ ಗಳ ಅವಲಂಬನೆ ಕಡಿಮೆಯಾಗಿಲ್ಲ. ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಬ್ಯಾಂಕ್ ಗಳಿಗೆ ಹೋಗಲೇಬೇಕಾಗುತ್ತದೆ ಆದರೆ ಒಂದು ವೇಳೆ ನಗದು ಹಣವನ್ನೇ ಹಿಂಪಡೆಯಬೇಕಾದ ಸಂದರ್ಭದಲ್ಲಿ ಬ್ಯಾಂಕ್ ಗಳಿಗೆ ಹೋಗಬೇಕಾದ ತಾಪತ್ರಯ ಇಲ್ಲ ಹತ್ತಿರದಲ್ಲಿರುವ ATM ಮಷೀನ್ ಗಳ ಬಳಿ ಹಣ ಪಡೆಯಬಹುದು.

ಈ ರೀತಿ ATM ಗಳಿಂದ ಹಣ ಪಡೆಯುವಾಗ ಎದುರಾಗಬಹುದಾದ ಸಮಸ್ಯೆಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳಲ್ಲಿ ಕೇಳಿ ಬಂದಿರುವ ಸಮಸ್ಯೆ ಏನೆಂದರೆ ATM ನಲ್ಲಿ ನಗದು ಪಡೆಯುವಾಗ ಹರಿದಿರುವ ನೋಟ್ ಗಳು ಮತ್ತು ಹಾನಿಗೊಳಗಾದ ನೋಟ್ ಗಳು ಬರುತ್ತವೆ, ಅದನ್ನು ಬೇರೆ ಕಡೆ ವ್ಯವಹರಿಸಲು ನೀಡಿದಾಗ ಸ್ವೀಕರಿಸುವುದಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಇದಕ್ಕೀಗ RBI ಹೊಸ ನಿಯಮ ಮಾಡಿ ಪರಿಹಾರ ಸೂಚಿಸಿದೆ.

ಒಂದು ವೇಳೆ ಗ್ರಾಹಕರಿಗೆ ತಮ್ಮ ಬ್ಯಾಂಕ್ ATM ಗೆ ಹೋಗಿ ಹಣ ಪಡೆಯುವ ಸಂದರ್ಭದಲ್ಲಿ ಇಂತಹ ಸಮಸ್ಯೆ ಎದುರಾದರೆ ಅವರು ಬ್ಯಾಂಕ್ ನಲ್ಲಿ ಹೋಗಿ ಆ ಹಣವನ್ನು ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು ಬ್ಯಾಂಕ್ ಗಳು ನೀವು ಕೊಟ್ಟ ನೋಟ್ ಸ್ವೀಕರಿಸಿ ಬೇರೆ ನೋಟ್ ಕೊಡುತ್ತಾರೆ.

ಆ ಸಂದರ್ಭದಲ್ಲಿ ನೀವು ಕೆಲ ವಿಧಾನವನ್ನು ಪಾಲಿಸಬೇಕು ವಿನಿಮಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ವ್ಯಕ್ತಿಗಳು ತಮ್ಮ ಬ್ಯಾಂಕ್‌ನಲ್ಲಿ ತಮಗಾದ ಅನಾನುಕೂಲದ ಕುರಿತು ಮತ್ತು ಅದರ ಪರಿಹಾರ ಕೋರಿ ಅರ್ಜಿಯನ್ನು ಸಲ್ಲಿಸಬೇಕು, ATM ನಿಂದ ಹಣ ಹಿಂಪಡೆಯುವ ದಿನಾಂಕ, ATM ಹೆಸರು ಮತ್ತು ಸ್ಥಳದಂತಹ ಅಗತ್ಯ ವಿವರಗಳನ್ನು ಅರ್ಜಿಯಲ್ಲಿ ವಿವರಿಸಬೇಕು.

ಮತ್ತು ಅರ್ಜಿಯೊಂದಿಗೆ ATM ರಸೀದಿ ಮತ್ತು ಮೊಬೈಲ್ ಸಂಖ್ಯೆಯ ಮಾಹಿತಿಯಂತಹ ಸಂಬಂಧಿತ ದಾಖಲೆಗಳು ಅಗತ್ಯವಿದೆ ಅದನ್ನು ಕೂಡ ಸಲ್ಲಿಸಬೇಕು. ಪ್ರಮುಖವಾದ ವಿಷಯವೇನೆಂದರೆ ಒಂದು ವೇಳೆ ನಿಮ್ಮ ಬ್ಯಾಂಕ್ ವಿನಿಮಯ ವಿನಂತಿಯನ್ನು ನಿರಾಕರಿಸಿದರೆ ಅದು ರೂ.10,000 ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.

ಇದೇ ರೀತಿ ಒಂದು ವೇಳೆ ನೀವೇನಾದರೂ ಬೇರೆ ಬ್ಯಾಂಕ್ ATM ನಲ್ಲಿ ಹಣ ಡ್ರಾ ಮಾಡುವಾಗ ಈ ರೀತಿ ಸಮಸ್ಯೆ ಆಗಿದ್ದರೆ RBI ಪ್ರತಿ ವಹಿವಾಟಿಗೆ 20 ರೂಪಾಯಿಗಳ ನಾಮಮಾತ್ರ ಶುಲ್ಕವನ್ನು ವಿಧಿಸಿದೆ. ಈ ಕ್ರಮವು ಗ್ರಾಹಕರಿಗೆ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಮೂಲಕ ಬ್ಯಾಂಕ್‌ಗಳಾದ್ಯಂತ ಶುಲ್ಕವನ್ನು ಸುವ್ಯವಸ್ಥಿತಗೊಳಿಸುವ ಮತ್ತು ಪ್ರಮಾಣೀಕರಿಸುವ ಗುರಿಯನ್ನು ಹೊಂದಿದೆ.

ಈ ಮೇಲೆ ತಿಳಿಸಿದ ಮಾದರಿಯಲ್ಲಿ ಬೇರೆ ಬ್ಯಾಂಕ್ ಆಗಿದ್ದರು ಯಾವ ಬ್ಯಾಂಕ್ ATM ನಿಂದ ಹಣ ಡ್ರಾ ಮಾಡಿದ್ದೀರಾ ಆ ಬ ಬ್ಯಾಂಕ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಲಾದ ಡೆಬಿಟ್ ಮೊತ್ತದ ತಕ್ಷಣದ SMS ಗಳನ್ನು ಕೂಡ ದಾಖಲೆಯಾಗಿ ತೋರಿಸಬಹುದು, ಆ ಬ್ಯಾಂಕ್ ಗಳು ಸ್ಪಂದಿಸುತ್ತವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now