ನಾವು ದುಡಿಯುವ ದುಡ್ಡನ್ನು ನಮ್ಮ ಭವಿಷ್ಯದ ಕಾರಣಕ್ಕಾಗಿ ಅಥವಾ ವೃದ್ಯಾಪದ ಸಮಯದ ಅವಶ್ಯಕತೆಗಾಗಿ ಅಥವಾ ನಮ್ಮ ಯಾವುದೋ ದೊಡ್ಡ ಕನಸಿನ ಸಾಕಾರಕ್ಕಾಗಿ ಉಳಿಸಿ ಇಡುವುದು ಬಹಳ ಮುಖ್ಯ. ನಮಗಾಗಿ ಅಥವಾ ನಮ್ಮ ಪೋಷಕರ, ಮಡದಿ-ಮಕ್ಕಳ ಸಲುವಾಗಿಯಾದರೂ ಹಣವನ್ನು ಉಳಿಸಲೇಬೇಕು. ಈ ರೀತಿ ಹಣ ಉಳಿತಾಯ ಮಾಡುವಾಗ ಉಳಿತಾಯ ಜೊತೆ ಭಧ್ರತೆ ಕೂಡ ಮುಖ್ಯವಾಗುತ್ತದೆ.
ಹಣವನ್ನು ಉಳಿತಾಯ ಮಾಡುವುದಲ್ಲದೆ ಹಣವನ್ನು ಮತ್ತೊಂದೆಡೆ ಹೂಡಿಕೆ ಮಾಡಿ ಅದರಿಂದ ಇನ್ನಷ್ಟು ಲಾಭ ಪಡೆದುಕೊಳ್ಳುವತ್ತ ಜನ ಆಸಕ್ತಿ ತೋರುತ್ತಿದ್ದಾರೆ. ಸಾಮಾನ್ಯವಾಗಿ ಇಂದು ಎಲ್ಲರೂ ಸಹ ತಾವು ಉಳಿತಾಯ ಮಾಡುವ ಹಣವನ್ನು ಹಾಗೆಯೇ ಇಡುವ ಬದಲು ಸುರಕ್ಷಿತವಾದ ಕಡೆ ಹೂಡಿಕೆ ಮಾಡಿ ಅದರಿಂದಲೂ ಲಾಭ ಮಾಡುವ ಪದ್ಧತಿ ಸರ್ವೇ ಸಾಮಾನ್ಯವಾಗಿದೆ.
ಆದರೆ ಶೇರ್ ಮಾರ್ಕೆಟ್ ಅಥವಾ ಕೈ ಸಾಲ ಇನ್ನಿತರ ವಿಷಯಗಳಲ್ಲಿ ಲಾಭ ಇದ್ದರು ಇರಬಹುದು ಆದರೆ ಹಣಕ್ಕೆ ಅಷ್ಟೇ ಮಟ್ಟಿಗೆ ಸುರಕ್ಷತೆ ಇದೆ ಎನ್ನುವುದು ಸುಳ್ಳು. ಈ ರೀತಿ ಆರ್ಥಿಕ ಭದ್ರತೆಯ ಜೊತೆಗೆ ಒಳ್ಳೆ ಮೊತ್ತದ ಲಾಭ ಸಿಗಬೇಕು ಎಂದರೆ ಅಂಚೆ ಕಚೇರಿ ಯೋಜನೆಗಳ ಮೊರೆ ಹೋಗಬಹುದು. ಈಗಾಗಲೇ ಅಂಚೆ ಕಚೇರಿಗಳಲ್ಲಿ ಹೆಣ್ಣು ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಸೇರಿದಂತೆ ದೇಶದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿಯೇ ತೆರೆಯಲಾಗಿದೆ.
ಇಂತಹ ಒಂದು ಯೋಜನೆಗಳಲ್ಲಿ ಈಗ ದೇಶದಾದ್ಯಂತ ಪ್ರಚಲಿತವಾಗಿರುವ ಗ್ರಾಮ್ ಸುರಕ್ಷಾ ಯೋಜನೆ ಕೂಡ ಒಂದು. ಈ ಗ್ರಾಮ್ ಸುರಕ್ಷಾ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ನಿಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುತ್ತದೆ ಮತ್ತು ಕಡಿಮೆ ಮೊತ್ತದ ಪ್ರೀಮಿಯಂ ಪಾವತಿಸಿದರೆ ಸಾಕು ಅದು ಮೆಚೂರ್ ಆಗುವ ಒಳ್ಳೆ ನಿಮಗೆ ದೊಡ್ಡ ಮೊತ್ತದ ಹಣ ಕೂಡ ಕೈ ಸೇರುತ್ತದೆ.
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಅಂಚೆ ಕಛೇರಿಗೆ ಭೇಟಿ ಕೊಟ್ಟು ವಿಚಾರಿಸಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಅಂಕಣಗಳು ಸಹ ಆಸಕ್ತಿ ಇರುವವರಿಗೆ ಸಲುವಾಗಿ ಈ ಯೋಜನೆ ಕುರಿತ ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ.
● ಯೋಜನೆಯ ಹೆಸರು:- ಗ್ರಾಮ್ ಸುರಕ್ಷಾ ಯೋಜನೆ
● ಯೋಜನೆ ಕುರಿತ ಪ್ರಮುಖ ಮಾಹಿತಿಗಳು:-
1. ಗ್ರಾಮ್ ಸುರಕ್ಷಾ ಯೋಜನೆಯನ್ನು 19 ವರ್ಷ ತುಂಬಿದ 55 ವರ್ಷದ ಒಳಗಿನ ಯಾರು ಬೇಕಾದರೂ ಖರೀದಿಸಬಹುದು.
2. ಈ ಯೋಜನೆಯಲ್ಲಿ ಪ್ರತಿ ತಿಂಗಳು ಕನಿಷ್ಠ 10 ಸಾವಿರದವರೆಗೆ ಮತ್ತು ವಾರ್ಷಿಕವಾಗಿ 10 ಲಕ್ಷದವರೆಗೆ ಕೂಡ ಹೂಡಿಕೆ ಮಾಡಬಹುದು.
3. ಅಂಚೆ ಕಚೇರಿಗಳಲ್ಲಿ ಹೋಗಿ ಈ ಯೋಜನೆ ಖರೀಸಬೇಕು ಅಥವಾ ಆನ್ಲೈನ್ ಮೂಲಕ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಖರೀದಿಸಬಹುದು.
4. ಈ ಯೋಜನೆಯಲ್ಲಿ ತಿಂಗಳಿಗೆ 1500 ಉಳಿತಾಯ ಮಾಡುತ್ತಾ ಬಂದರೆ ನಿಮಗೆ 55 ವರ್ಷ ತುಂಬಿದ ಬಳಿಕ ನಿಮ್ಮ ಉಳಿತಾಯ ಹಣದ ಜೊತೆಗೆ ಹೆಚ್ಚುವರಿ ಬಡ್ಡಿ ಹಣ ಸೇರಿ 31.60 ಲಕ್ಷ ಹಣ ಸಿಗಲಿದೆ.
5. ಇದರ ಪ್ರೀಮಿಯಂ ಮೊತ್ತವನ್ನು ನೀವು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ ಅಥವಾ ಅರ್ಧವಾರ್ಷಿಕವಾಗಿ ಮತ್ತು ವಾರ್ಷಿಕವಾಗಿ ಕೂಡ ಪಾವತಿಸಬಹುದು. ಪ್ರೀಮಿಯಂ ಪಾವತಿಸಲು 30 ದಿನಗಳ ಗ್ರೇಸ್ ಅವಧಿ ಕೂಡ ಸಿಗುತ್ತದೆ.
6. ಯೋಜನೆ ಖರೀದಿಸಿದ ಮೂರು ವರ್ಷ ತುಂಬಿದ ಬಳಿಕ ಅದನ್ನು ವಿತ್ಡ್ರಾ ಕೂಡ ಮಾಡಬಹುದು ಆದರೆ ಆ ವೇಳೆ ನಿಮ್ಮ ಹಣಕ್ಕೆ ಯಾವುದೇ ಲಾಭಗಳು ಸಿಗುವುದಿಲ್ಲ.