ಸೆಪ್ಟೆಂಬರ್ 30ರ ಒಳಗೆ ಹಳೆ ಬಾಕಿ ಪಾವತಿಸದೆ ಇದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.!

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು (karnataka government) ನೀಡುತ್ತಿರುವ 5 ಗ್ಯಾರಂಟಿ ಕಾರ್ಡ್ ಯೋಜನೆಗಳ (guarantee Scheme) ಪೈಕಿ ಗೃಹಜ್ಯೋತಿ ಯೋಜನೆ ಆಗಸ್ಟ್ 05 ಲಾಂಚ್ ಆಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಕರ್ನಾಟಕದ ಪ್ರತಿ ಕುಟುಂಬಗಳಿಗೂ ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (free current) ನೀಡುವ ಮೊದಲ ಗ್ಯಾರಂಟಿ ಕಾರ್ಡ್ ಯೋಜನೆ ಎಂದು ಘೋಷಿಸಿಕೊಂಡಿದ್ದ ಗೃಹಜ್ಯೋತಿ ಯೋಜನೆಗೆ ಜೂನ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ಈ ಯೋಜನೆ ಫಲಾನುಭವಿಗಳಾಗಲು ಮನೆಯ ವಿದ್ಯುತ್ ಖಾತೆ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನೀಡಿ ಸೇವಾಸಿಂಧು ಪೋರ್ಟಲ್ಲಿ (seva sindhu portal) ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ಅದೇ ರೀತಿ ಜೂನ್ ತಿಂಗಳಿನಿಂದ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿ ಸರ್ಕಾರ ನೀಡಿರುವ ಕಂಡೀಷನ್ ಪ್ರಕಾರ ವಿದ್ಯುತ್ ಬಳಸಿರುವ ಕುಟುಂಬಗಳು ಈಗ ಶೂನ್ಯ ವಿದ್ಯುತ್ ಬಿಲ್ (zero current bill) ಪಡೆದಿದ್ದಾರೆ.

ಕಾನೂನಿನ ಪ್ರಕಾರ ವಿಚ್ಛೇದನ ಇಲ್ಲದೆ ಎರಡನೇ ಮದುವೆ ಆಗಬಹುದ.?

ಈ ವಿದ್ಯುತ್ ಬಿಲ್ ಅಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿರುವ ದಿನಾಂಕ, ಕುಟುಂಬವು ಪ್ರಸ್ತುತ ತಿಂಗಳಲ್ಲಿ ಬಳಸಿರುವ ಒಟ್ಟು ಯೂನಿಟ್ ಬಳಕೆಯ ವಿವರ, ಶುಲ್ಕದ ವಿವರ, ಸರಾಸರಿ ಯೂನಿಟ್ ಬಳಕೆ ಮತ್ತು ಹೆಚ್ಚುವರಿ 10% ವಿದ್ಯುತ್ ಸೇರಿ ಒಟ್ಟು ಯೋಜನೆಯ ಲಾಭದ ಮಿತಿ ಮತ್ತು ಬಾಕಿ ವಿದ್ಯುತ್ ವಿವರ ಇತ್ಯಾದಿಗಳನ್ನು ಕೂಡ ಮುದ್ರಿಸಿ ನೀಡಲಾಗಿದೆ.

ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ನೀಡಿರುವ ವರದಿಯ ಒಟ್ಟು ಅಂಕಿ ಅಂಶಗಳ ಪ್ರಕಾರ ಜೂನ್ ತಿಂಗಳಿನಿಂದ ಜುಲೈ 25ರ ಒಳಗೆ ಕರ್ನಾಟಕದಲ್ಲಿ 1,41,23,240 ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಿದ್ದಾರೆ. ಜುಲೈ 25ರ ನಂತರ ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಅನುಕೂಲತೆ ಸಿಗುತ್ತಿಲ್ಲ.

IBPS ನೇಮಕಾತಿ ಅಧಿಸೂಚನೆ, ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 3049 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

ಆದರೆ ಜುಲೈ 25 ರಿಂದ ಆಗಸ್ಟ್ 25ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ತಿಂಗಳಿನಲ್ಲಿ ಬಳಕೆ ಮಾಡುವ ವಿದ್ಯುತ್ ಉಚಿತವಾಗಿ ಸಿಗಲಿದೆ ಮತ್ತು ಗೃಹಜ್ಯೋತಿ ಯೋಜನೆಗೆ ಯಾವುದೇ ಕಡೆ ದಿನಾಂಕವನ್ನು ಇಂಧನ ಇಲಾಖೆ ಘೋಷಣೆ ಮಾಡಿಲ್ಲ. ಇಂಧನ ಸಚಿವರಾದ ಕೆ.ಜೆ ಜಾರ್ಜ್ (K.J George) ಅವರೇ ಹೇಳಿಕೆ ಕೊಟ್ಟಿರುವ ಪ್ರಕಾರ ಇನ್ನು ಯಾರು ಅರ್ಜಿ ಸಲ್ಲಿಸಿಲ್ಲ ಅವರು ಅರ್ಜಿ ಸಲ್ಲಿಸಿ ನೋಂದಣಿ ಆಗಬಹುದು.

ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25 ನೇ ತಾರೀಖನ್ನು ವಿದ್ಯುತ್ ಮಾಪನ ಮಾಡಲು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಜೂನ್ ತಿಂಗಳಿಂದ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದವರು ಮೊದಲ ತಿಂಗಳ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

ರೇಷನ್ ಕಾರ್ಡ್ ಅಪ್ಡೇಟ್ ಮಾಡದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಇಲ್ಲ ಸಿಗಲ್ಲ, ರೇಷನ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ ನೋಡಿ.!

ಇದರೊಂದಿಗೆ ಸರ್ಕಾರ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ ಹೊರಡಿಸಿದಾಗಲೇ ಗೃಹಜೋತಿ ಯೋಜನೆಗೆ ಫಲಾನುಭವಿಗಳಾಗಲು ಹಳೆ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಳ್ಳಬಾರದು ಎನ್ನುವುದನ್ನು ತಿಳಿಸಲಾಗಿತ್ತು. ಈಗ ಅದಕ್ಕೆ ಕಾಲಾವಧಿಯನ್ನು ಮತ್ತಷ್ಟು ವಿಸ್ತರಿಸಿರುವ ಸರ್ಕಾರವು ಸೆಪ್ಟೆಂಬರ್ 30ರ ಒಳಗೆ ಬಾಕಿ ಉಳಿಸಿಕೊಂಡಿರುವ ಹಳೆ ವಿದ್ಯುತ್ ಬಿಲ್ಲನ್ನು (Arrears) ಪಾವತಿ ಮಾಡಲೇಬೇಕು.

ಇಲ್ಲವಾದಲ್ಲಿ ಗೃಹಜ್ಯೋತಿ ಯೋಜನೆಯಿಂದ ಕೈ ಬಿಡಲಾಗುವುದು ಎಂದು ಎಚ್ಚರಿಸಿದೆ. ವಿದ್ಯುತ್ ಇಲಾಖೆಯು ವಿದ್ಯುತ್ ಬಿಲ್ ನಲ್ಲಿಯೂ ಸಹಾ ಬಾಕಿ ಮೊತ್ತವನ್ನು 30 ಸೆಪ್ಟೆಂಬರ್, 2023ರ ಒಳಗೆ ಪಾವತಿಸತಕ್ಕದ್ದು ಎಂದು ಮುದ್ರಿಸಿ ಹಳೆ ಬಾಕಿ ಪಾವತಿ ಮಾಡಲು ಸೂಚಿಸಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now