ರಾಜ್ಯದ ಮಹಿಳೆಯರೆಲ್ಲರೂ ಬಹಳ ನಿರೀಕ್ಷೆ ಇಟ್ಟುಕೊಂಡಿರುವಂತಹ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅಂತಿಮವಾಗಿ ದಿನಾಂಕ ಫಿಕ್ಸ್ ಆಗಿದೆ. ಆರಂಭದಲ್ಲಿ ಈ ಯೋಜನೆ ಕುರಿತು ಆದೇಶ ಪತ್ರ ಹೊರ ಬಿದ್ದಾಗ ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಆಹ್ವಾನ ಮಾಡಲಾಗುವುದು.
ಜುಲೈ 15 ರಿಂದ ಆಗಸ್ಟ್ 15 ರವರೆಗೆ ಅವುಗಳ ಪರಿಶೀಲನೆ ನಡೆದು ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆ ಅಂಗವಾಗಿ ಈ ಯೋಜನೆಯನ್ನು ಲಾಂಚ್ ಮಾಡಲಾಗುವುದು ಈ ಯೋಜನೆಯಡಿ ಫಲಾನುಭವಿಗಳಾಗುವ ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿ ಮಹಿಳೆ ಖಾತೆಗೆ 2,000ರಿಂದ. ಸಹಾಯಧನವನ್ನು ಅಂದು DBT ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುವುದು.
ಬಳಿಕ ಪ್ರತಿ ತಿಂಗಳೂ ಕೂಡ ತಪ್ಪದೇ ಈ ಸಹಾಯದನವನ್ನು ಕುಟುಂಬ ನಿರ್ವಹಣೆಯಗಾಗಿ ಮನೆ ಯಜಮಾನಿ ಖಾತೆಗೆ ಜಮೆ ಮಾಡಲಾಗುತ್ತದೆ ಎನ್ನುವುದು ಆದೇಶ ಪತ್ರದಲ್ಲಿ ಇತ್ತು. ಆದರೆ ಕಾರಣಾಂತರಗಳಿಂದ ಜೂನ್ 15ರಂದು ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಲಿಲ್ಲ. ಮೂರ್ನಾಲ್ಕು ದಿನಗಳ ನಂತರ ಆರಂಭಿಸಲಾಗುವುದು ಎಂದು ಆರಂಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹೊಣೆಗಾರಿಕೆಯನ್ನು ಹೊತ್ತಿರುವಂತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದರು ಕೂಡ ಪದೇಪದೇ ದಿನಾಂಕ ಮುಂದೂಡಲಾಗುತ್ತಿತ್ತು.
ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ ಆರಂಭವಾದ್ದರಿಂದ ಎಲ್ಲರೂ ಒಮ್ಮೆಲೇ ಅರ್ಜಿ ಸಲ್ಲಿಸುತ್ತಿರುವುದರಿಂದ ಸರ್ವರ್ ಮೇಲೆ ಹೊಡೆತ ಬಿದ್ದಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಗೂ ಸರ್ವರ್ ಸಮಸ್ಯೆ ಆಗುವುದು ಬೇಡ ಎನ್ನುವ ಕಾರಣಕ್ಕಾಗಿ ಇದನ್ನು ನಿಧಾನ ಮಾಡುತ್ತಿದ್ದೇವೆ ಎನ್ನುವ ಮಾಹಿತಿಯನ್ನು ಈ ಹಿಂದೆ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸಹ ತಿಳಿಸಿದ್ದರು.
ಈ ನಡುವೆ ಗೃಹಲಕ್ಷ್ಮಿ ಯೋಜನೆಗೆ ಆಪ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ ಎಲ್ಲ ಮಹಿಳೆಯರಿಗೂ ಕೂಡ ಅವರೇ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸರಳವಾಗಿ ಇದನ್ನು ಸಿದ್ಧಪಡಿಸಲಾಗುತ್ತಿದೆ ಅದಕ್ಕಾಗಿ ವಿಳಂಭವಾಗುತ್ತಿದೆ, ಜೊತೆಗೆ ಆಫ್ಲೈನ್ನಲ್ಲಿ ಕೂಡ ಅರ್ಜಿ ಸ್ವೀಕಾರ ಮಾಡುತ್ತಿರುವುದರಿಂದ ಸಿಬ್ಬಂದಿಗಳನ್ನು ತರಬೇತಿಗೊಳಿಸಲಾಗುತ್ತಿದೆ ಅದಕ್ಕಾಗಿ ತಡವಾಗುತ್ತಿದೆ ಎನ್ನುವ ಕಾರಣ ಕೂಡ ಕೇಳಿ ಬಂದಿತ್ತು.
ಬುಧವಾರದಂದು ನಡೆಯುವ ಸಂಚಿವ ಸಂಪುಟ ಸಭೆಯಲ್ಲಿ ಈ ಆಪ್ ಪ್ರಸ್ತಾವನೆಯನ್ನು ಮಾನ್ಯ ಮುಖ್ಯಮಂತ್ರಿಗಳ ಅವರ ಎದುರಿಗಿಟ್ಟು ಅವರ ಅನುಮತಿ ಪಡೆದ ಬಳಿಕ ಮಾಹಿತಿ ನೀಡುತ್ತೇವೆ ಎಂದು ಕಳೆದ ವಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದರು. ಅಂತಿಮವಾಗಿ ನೆನ್ನೆ ಅಂದರೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳಿಂದ ಇದಕ್ಕೆ ಅನುಮತಿ ದೊರೆತಿದೆ.
ಬಳಿಕ ಮಾತನಾಡಿದ ಸಚಿವೆ ಜೂನ್ 14ರಿಂದ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗುವುದು ಎಂದು ತಾತ್ಕಾಲಿಕವಾಗಿ ದಿನಾಂಕ ಕೂಡ ನಿಗದಿ ಆಗಿದೆ, ಆದರೆ ಜುಲೈ 3ರಂದು ಅಧಿಕೃತವಾಗಿ ಯಾವ ದಿನಾಂಕ ಎಂದು ಅನೌನ್ಸ್ ಮಾಡಲಿದ್ದೇವೆ ಎಂದಿದ್ದಾರೆ. ಆಪ್ ಸಿದ್ಧವಾಗಿದ್ದರೂ ಸರ್ವರ್ ಸಮಸ್ಯೆಯೇ ಎಂದು ಪ್ರಶ್ನೆ ಕೇಳಿದವರಿಗೆ ಆಪ್ ಆಗಿದ್ದರೂ ಕೂಡ ಸರ್ವರ್ ಮೇಲೆ ಬೀಳುವ ಒತ್ತಡದಿಂದ ಆಗುವ ತಾಂತ್ರಿಕ ಸಮಸ್ಯೆಯನ್ನು ತಪ್ಪಿಸಲಾಗುವುದಿಲ್ಲ
ಸಾರ್ವಜನಿಕರಿಗೆ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಯಲ್ಲಿ ಆದಂತೆ ಸರ್ವರ್ ಸಮಸ್ಯೆ ಆಗುವುದು ಬೇಡ ಎನ್ನುವ ಕಾರಣಕ್ಕೆ ತಡ ಮಾಡುತಿದ್ದೇವೆ. ಸದ್ಯಕ್ಕೆ ಈಗ ಗೃಹಜ್ಯೋತಿ ಯೋಜನೆ ಕೂಡ ಸರಾಗವಾಗಿ ನಡೆಯುತ್ತಿದೆ. ಏನೇ ಆದರೂ ಆಗಸ್ಟ್ ತಿಂಗಳ 18ನೇ ತಾರೀಕು ಕಡಾ ಖಂಡಿತವಾಗಿ ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿ ಖಾತೆಗೆ ಈ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ತಲುಪಲಿದೆ ಎನ್ನುವ ಭರವಸೆ ನೀಡಿದ್ದಾರೆ.