ಭಾರತದ ಮಹಿಳೆಯರಿಗೆ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ ಅವರ ಆರೋಗ್ಯ ರಕ್ಷಣೆ ಉದ್ದೇಶದಿಂದ 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡಿ ಸ್ಟೌವ್ ಕೂಡ ವಿತರಣೆ ಮಾಡಲಾಗಿತ್ತು.
ದೇಶದಾದ್ಯಂತ ಕೋಟ್ಯಾಂತರ ಮಹಿಳೆಯರು ಈ ಯೋಜನೆ ಪ್ರಯೋಜನವನ್ನು ಪಡೆದಿದ್ದರು. ಈ ಯೋಜನೆಗೆ ಕಂಡುಬಂದ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಯೋಜನೆಯನ್ನು ವಿಸ್ತರಿಸಲಾಗಿದೆ. ಈಗ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು? ದಾಖಲೆಗಳೇನು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಇರುವ ನಿಬಂಧನೆಗಳು:-
● ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು, 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅರ್ಜಿ ಸಲ್ಲಿಸಬಹುದು.
● ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಇನ್ನಿತರ ಯಾವುದೇ ಸದಸ್ಯರ ಹೆಸರಿನಲ್ಲೂ ಕೂಡ LPG ಕಲೆಕ್ಷನ್ ಇರಬಾರದು.
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
(SC/ST, PMAY, AAY, ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು ಮಹಿಳಾ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು).
ಪ್ರಧಾನಮಂತ್ರಿ ಉಜ್ವಲ್ ಯೋಜನೆ 2.0 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
● ಆಧಾರ್ ಕಾರ್ಡ್
● ರೇಷನ್ ಕಾರ್ಡ್
● ರೇಷನ್ ಕಾರ್ಡ್ ನಲ್ಲಿ ಹೆಸರಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿ
● ಬ್ಯಾಂಕ್ ಪಾಸ್ ಬುಕ್ ವಿವರ
● KYC ಅಪ್ಡೇಟ್ ಆಗಿರಬೇಕು.
ಪ್ರಧಾನಮಂತ್ರಿ ಉಜ್ವಲ್ ಯೋಜನೆ 2.0 ಅರ್ಜಿ ಸಲ್ಲಿಸುವ ವಿಧಾನ:-
● ಯೋಜನೆಯ ಅಧಿಕೃತ ವೆಬ್ಸೈಟ್ ಆದ pmujjwalayojana.com ವೆಬ್ ಸೈಟ್ ಗೆ ಭೇಟಿ ಕೊಡಿ.
● ಪೇಜ್ ಓಪನ್ ಆದ ಮೇಲೆ ಇಂಡಿಯನ್, ಭಾರತ್ ಗ್ಯಾಸ್ ಮತ್ತು LPG ಈ ಮೂರು ಕಂಪನಿಗಳ ಆಪ್ಷನ್ ಸಿಗುತ್ತದೆ. ಅದರಲ್ಲಿ ನಿಮ್ಮ ಇಚ್ಛೆಯ ಕಂಪನಿ ಅಥವಾ ನಿಮ್ಮ ಊರಿಗೆ ಯಾವ ಕಂಪನಿ ಏಜೆನ್ಸಿ ಇದೆ ಅದನ್ನು ಆಯ್ಕೆ ಮಾಡಿ, ಅದರ ಪಕ್ಕದಲ್ಲಿಯೇ ಕ್ಲಿಕ್ ಹಿಯರ್ ಟು ಅಪ್ಲೈ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ಆಯ್ಕೆ ಮಾಡಿದ ಮೇಲೆ ಅದೇ ಕಂಪನಿಯ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಟೈಪ್ ಆಫ್ ಕನೆಕ್ಷನ್ ಇರುತ್ತದೆ. ಅದರಲ್ಲಿ ರೆಗ್ಯುಲರ್ LPG ಅಥವಾ ಉಜ್ವಲ್ ಯೋಜನೆ 2.0 ಎನ್ನುವ ಆಯ್ಕೆ ಇರುತ್ತದೆ ಉಜ್ವಲ್ ಯೋಜನೆ ಆಯ್ಕೆಯನ್ನು ಕ್ಲಿಕ್ ಮಾಡಿ.
● ಅದರ ಕೆಳಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸುವುದಕ್ಕೆ ಘೋಷಣ ವಾಕ್ಯ ಇರುತ್ತದೆ ಅದನ್ನು ಓದಿ ಒಪ್ಪಿಗೆ ಇದ್ದರೆ ರೈಟ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ ಆಗ ಮುಂದಿನ ಹಂತಕ್ಕೆ ಹೋಗುತ್ತೀರಿ.
● ಮುಂದಿನ ಆಯ್ಕೆಯಲ್ಲಿ ನಿಮ್ಮ ರಾಜ್ಯ ಹಾಗೂ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
● ಇದಾದ ಮೇಲೆ PM ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಬರುತ್ತದೆ ಮತ್ತು ಪೂರಕವಾಗಿ ಇರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದಕ್ಕೆ ತಿಳಿಸಲಾಗುತ್ತದೆ ಈ ಎಲ್ಲಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸಿದರೆ ಈ ವರ್ಷ ನೀವು ಯೋಜನೆಯ ಪ್ರಯೋಜನ ಪಡೆಯುತ್ತೀರಿ.