ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಕೂಡ ಸೇರಿದೆ. ಕರ್ನಾಟಕದ ರೈತರು ಸೇರಿದಂತೆ ದೇಶದ ಎಲ್ಲಾ ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಕ್ಕರೆಯಷ್ಟೇ ಸಿಹಿಯಾದ ಗುಡ್ ನ್ಯೂಸ್ ನೀಡಿದೆ.
ಈಗಷ್ಟೇ ದೇಶದ ಮುಂಗಾರು ಸೀಸನ್ ನ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ್ದ ಕೇಂದ್ರ ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಯ FRP ಕೂಡ ಹೆಚ್ಚಿಸುವ ತೀರ್ಮಾನಕ್ಕೆ ಬಂದು ರೈತರ ಮುಖದಲ್ಲಿ ಸಂತಸ ಮೂಡುವ ಹಾಗೆ ಮಾಡಿದೆ.
ಈಗಾಗಲೇ ಹಲವಾರು ರೈತ ಪರ ಯೋಜನೆಗಳನ್ನು ಕೈಗೊಂಡಿರುವ ಸರ್ಕಾರವು ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಪಾವತಿಸ ಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಯನ್ನು ಪ್ರತಿ ಕ್ವಿಂಟಲ್ 10 ರೂಪಾಯಿ ಹೆಚ್ಚಿಸಲು ಒಪ್ಪಿಗೆ ನೀಡಿದೆ.
2014-15ನೇ ಸಾಲಿನಲ್ಲಿ ಕಬ್ಬಿನ FRP ಪ್ರತಿ ಕ್ವಿಂಟಲ್ ಗೆ 210 ಇತ್ತು, ಕಳೆದ ವರ್ಷ 2022-23 ರಲ್ಲಿ ಪ್ರತಿ ಕ್ವಿಂಟಲ್ ಗೆ 305 ರೂ ಹೆಚ್ಚಿಸಲಾಗಿತ್ತು. ಈಗ ಮತ್ತೊಮ್ಮೆ 2023-24ನೇ ಸಾಲಿಗೆ ಅನ್ವಯವಾಗುವಂತೆ ಪ್ರತಿ ಕ್ವಿಂಟಲ್ ಗೆ 10 ರೂಪಾಯಿ FRP ಹೆಚ್ಚಿಸಲು ಒಪ್ಪಿಗೆ ನೀಡಿದೆ.
ಹಾಗಾಗಿ 2023-24ನೇ ಹಂಗಾಮಿನಲ್ಲಿ ಕಾರ್ಖಾನೆಗಳು ಕಬ್ಬಿಗೆ ಪ್ರತಿ ಕ್ವಿಂಟಲ್ ಗೆ 315ರೂ. ಪಾವಿತಸಬೇಕು ಎಂದು ವಾರ್ತ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜೊತೆ ವಿಷಯ ಹಂಚಿಕೊಂಡರು. 2022-23ರ ಸಾಲಿನಲ್ಲಿ ಅಂದಾಜು 1,11,366 ಕೋಟಿ ರೂಪಾಯಿ ಮೌಲ್ಯದ 3,353 ಲಕ್ಷ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಖರೀದಿಸಿದೆ ಆದರೆ ಈ ಅವಧಿಯ ಯಾವುದೇ ಹಣವನ್ನು ಕೂಡ ಮೋದಿ ಸರ್ಕಾರ ಬಾಕಿ ಉಳಿಸಿಕೊಂಡಿಲ್ಲ.
ಸಮಯಕ್ಕೆ ಸರಿಯಾಗಿ ರೈತರಿಗೆ ಹಣ ತಲುಪುವಂತೆ ಮಾಡಿದ ಕಾರಣ ರೈತರು ಯಾವುದೇ ರೀತಿ ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ಎದುರಾಗಲಿಲ್ಲ ಎನ್ನುವ ವಿಷಯವನ್ನು ಹೇಳಿ ಕೇಂದ್ರ ಸರ್ಕಾರವು ಸದಾ ರೈತರ ಕ್ಷೇಮಾಭಿವೃದ್ದಿ ಬಗ್ಗೆ ಚಿಂತಿಸುತ್ತದೆ ಎನ್ನುವುದನ್ನು ಸಮರ್ಥಿಸಿಕೊಂಡಿದ್ದಾರೆ. ಎಥೆನಾಲ್ ಅನ್ನು ಕಚ್ಚಾತೈಲದ ಜೊತೆ ಬೆರೆಸುವ ಯೋಜನೆ ರೈತರಿಗೆ ಪ್ರಯೋಜನ ನೀಡಲಿದೆ, ಈ ಯೋಜನೆಗೆ ಕೇಂದ್ರ ಸರ್ಕಾರ 20,500 ಕೋಟಿ ಅನುದಾನ ನೀಡಿದೆ ಎನ್ನುವ ವಿಷಯವನ್ನು ಕೂಡ ಸಚಿವ ಅನುರಾಗ್ ಠಾಕೂರ್ ಅವರು ಹಂಚಿಕೊಂಡರು.
ಇದರೊಂದಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರ್ಯಾಯ ರಸಗೊಬ್ಬರವನ್ನು ಉತ್ತೇಜಿಸಲು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ರಾಜ್ಯಗಳಿಗೆ ಪ್ರೋತ್ಸಾಹ ನೀಡುವ ಹೊಸ ಯೋಜನೆಯಾದ ಪಿಎಂ ಪ್ರಣಾಮ್ ಬಗ್ಗೆ ಕೂಡ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಈ ಯೋಜನೆಗೂ ಕೂಡ ಅನುಮೋದನೆ ದೊರೆತಿದೆ ಎನ್ನುವ ಮಾಹಿತಿ ಇದೆ.
ಕೇಂದ್ರ ಸರ್ಕಾರವು ಕಬ್ಬಿಗೆ 10ರೂ. FRP ಹೆಚ್ಚಿಸಿರುವುದರಿಂದ ನಮ್ಮ ರಾಜ್ಯದ ಹಾಗೂ ದೇಶದ ಎಲ್ಲಾ ಕಬ್ಬು ಬೆಳೆಗಾರ ರೈತರಿಗೆ ಬಹಳಷ್ಟು ಅನುಕೂಲ ಆಗಲಿದೆ. ನೀವು ಸಹ ಕಬ್ಬು ಬೆಳೆಗಾರರಾಗಿದ್ದರೆ ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದರ ತಪ್ಪದೆ ಕಮೆಂಟ್ ಮಾಡಿ ತಿಳಿಸಿ. ಮತ್ತು ಇಂತಹ ಸಿಹಿ ಸುದ್ದಿಯನ್ನು ನಿಮ್ಮ ಭಾಗದ ಎಲ್ಲ ರೈತರಿಗೂ ತಲುಪಿಸುವ ಉದ್ದೇಶದಿಂದ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.