ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರೇಷನ್ ಕಾರ್ಡ್ ಹೊಂದಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi) ರೂ.2,000 ಮತ್ತು ಅನ್ನಭಾಗ್ಯ ಯೋಜನೆಯ (Annabhagya) ಮೂಲಕ ಕುಟುಂಬದ ಎಲ್ಲಾ ಸದಸ್ಯರ ಹೆಚ್ಚುವರಿ 5Kg ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥೆ ಖಾತೆಗೆ DBT ಮೂಲಕ ನೀಡುತ್ತಿದೆ.
ಅನ್ನ ಭಾಗ್ಯ ಯೋಜನೆ ಆರಂಭವಾಗಿ 7ನೇ ತಿಂಗಳು ಹಾಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತು ಹಣ ಪಡೆಯುವ ಸಮಯವಾಗಿದ್ದರು ಇನ್ನೂ ಅನೇಕ ಫಲಾನುಭವಿಗಳಿಗೆ ಒಂದು ಕಂತಿನ ಹಣ ಕೊಡ ಬಂದಿಲ್ಲ. ಇನ್ನೂ ಕೆಲವರಿಗೆ ಕೆಲವು ತಿಂಗಳು ಹಣ ಬಂದಿದೆ ಮತ್ತೆ ಕೆಲವು ತಿಂಗಳು ಹಣ ಬರದೆ ತೊಂದರೆಯಾಗಿದೆ.
ಈ ಸುದ್ದಿ ಓದಿ:- ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!
ಈ ಸಮಸ್ಯೆಗಳಿಗೆ 2 ಮುಖ್ಯ ಕಾರಣವೇನೆಂದರೆ, ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿ ಇಲ್ಲದೆ ಇರುವುದು ಮತ್ತು ಆ ಖಾತೆಗಳಿಗೆ ಆಧಾರ್ ಲಿಂಕ್ NPCI ಮ್ಯಾಪಿಂಗ್ ಆಗದೆ ಇರುವುದು DBT ಮೂಲಕ ಹಣ ತುಂಬಿಸುವುದಕ್ಕೆ ಇರುವ ಸಮಸ್ಯೆ ಆಗಿದೆ ಮತ್ತೊಂದು ಮುಖ್ಯ ಕಾರಣವೇನೆಂದರೆ
ಈ ಎರಡು ಯೋಜನೆಗಳು ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿರುವುದರಿಂದ (Ration card based Schemes) ನಿಮ್ಮ ರೇಷನ್ ಕಾರ್ಡ್ ರದ್ದು ಅಥವಾ ತಡೆಹಿಡಿಯಲಾಗಿರುವ (Rationcard Cancel / Suspended) ತಿಂಗಳುಗಳಲ್ಲಿ ಹಣ ಬರದೆ ಸಮಸ್ಯೆಗಳು ಆಗಿರುತ್ತವೆ. ಪ್ರತಿ ತಿಂಗಳೂ ಕೂಡ ಆಹಾರ ಇಲಾಖೆ ಅಧಿಕಾರಿಗಳು BPL ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ BPL ರೇಷನ್ ಕಾರ್ಡ್ ಹೊಂದಿದ್ದರೆ ಅವುಗಳ ಪರಿಶೀಲನೆ ನಡೆಸಿ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ:- ಇನ್ಮುಂದೆ ಪ್ರತಿ ಮನೆಗೂ ಸಿಗಲಿದೆ ಸೋಲಾರ್ ವಿದ್ಯುತ್, ಕೇಂದ್ರ ಸರ್ಕಾರದ ಹೊಸ ಯೋಜನೆ.!
ಆ ರೀತಿ ಏನಾದರೂ ನಿಮ್ಮ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ ಆ ತಿಂಗಳ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ. ಹಾಗಾಗಿ ನಿಮ್ಮ ಕಾರ್ಡ್ ಸ್ಟೇಟಸ್ (Status) ತಿಳಿದುಕೊಂಡು ಸಮಸ್ಯೆ ಪರಿಹಾರ ಮಾಡಿಕೊಂಡರೆ ಮುಂದಿನ ತಿಂಗಳಿಂದ ನಿಮಗೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಬರಲಿದೆ.
ಮತ್ತೊಮ್ಮೆ ಸರ್ಕಾರವೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದೆ ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ದಾಖಲೆಗಳ ವ್ಯತ್ಯಾಸವಾಗಿದ್ದರೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಯಲ್ಲಿರುವಂತೆ ಹೆಸರನ್ನು ತಿದ್ದುಪಡಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಿ ಮುಂದಿನ ತಿಂಗಳಿನಿಂದ ನಿಮಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಹಣ ಸಿಗಲಿದೆ.
ಈ ಸುದ್ದಿ ಓದಿ:- ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ವಿಧಾನ:-
* https://ahara.kar.nic.in/ ಈ ಲಿಂಕ್ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ
* ಮುಖಪುಟದಲ್ಲಿ ಇ-ಸೇವೆಗಳು (e-services) ಆಪ್ಷನ್ ಸೆಲೆಕ್ಟ್ ಮಾಡಿ ಮತ್ತು ನಿಮ್ಮ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳುವ ಆಕ್ಷನ್ ಕೂಡ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ
* ಎಡಭಾಗದಲ್ಲಿ ಸೇವೆಗಳ ಲಿಸ್ಟ್ ಇರುತ್ತದೆ ಅದರಲ್ಲಿ ಇ-ಪಡಿತರ ಚೀಟಿ ಎನ್ನುವ ಆಪ್ಷನ್ ಕ್ಲಿಕ್ ಮಾಡಿ.
* ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ ಎನ್ನುವ ಆಪ್ಷನ್ ಇರುತ್ತದೆ ಇದರಲ್ಲಿ ಪ್ರತಿ ತಿಂಗಳು ಅಪ್ಡೇಟ್ ಆಗುತ್ತಿರುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ ಕೆಲವು ಆಪ್ಷನ್ ನೀಡಲಾಗಿರುತ್ತದೆ ಅದರಲ್ಲಿ ನಿಮ್ಮ District, Thaluk, Month, Year ಇದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ನೀವು ಪರಿಶೀಲಿಸುತ್ತಿರುವ ತಿಂಗಳು ಹಾಗೂ 2024 ಎಂದು ಸೆಲೆಕ್ಟ್ ಮಾಡಿ Go ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…
* ನೀವು ಸೆಲೆಕ್ಟ್ ಮಾಡಿರುವ ಮಾಹಿತಿ ಪ್ರಕಾರ ನಿಮ್ಮ ತಾಲೂಕಿನಲ್ಲಿ ಎಷ್ಟೆಲ್ಲ ರೇಷನ್ ಕಾರ್ಡ್ ಗಳು ಆ ತಿಂಗಳಿನಲ್ಲಿ ರದ್ದಾಗಿವೆ ಅಥವಾ ತಡೆಹಿಡಿಯಲಾಗಿದೆ ರೇಷನ್ ಕಾರ್ಡ್ ನಂಬರ್ ಸಮೇತ ಲಿಸ್ಟ್ ಬರುತ್ತದೆ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ಹೆಸರು ಇದೆ ಯಾವ ಕಾರಣಕ್ಕಾಗಿ ರದ್ದಾಗಿದೆ ಮಾಹಿತಿ ಇರುತ್ತದೆ.
ಒಂದು ವೇಳೆ ಆದಾಯ ಮಿತಿ ಹೆಚ್ಚಾಗಿರುವ ಕಾರಣದಿಂದ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ ನೀವು ನಿಮ್ಮ ಕುಟುಂಬದಲ್ಲೇ ಆದಾಯ ಪಾವತಿದಾರರಾಗಿರುವ ಅಥವಾ ಸರ್ಕಾರಿ ಹುದ್ದೆಯಲ್ಲಿರುವ ಆ ಸದಸ್ಯನ ಹೆಸರನ್ನು ರೇಷನ್ ಕಾರ್ಡ್ ನಿಂದ ಡಿಲೀಟ್ ಮಾಡಿಸುವ ಮೂಲಕ ಮತ್ತೆ ಕಾರ್ಡ್ ಸ್ಥಿತಿ ಸಕ್ರಿಯಗೊಳಿಸಿಕೊಳ್ಳಬಹುದು ಆಹಾರ ಇಲಾಖೆ ಭೇಟಿ ಕೊಟ್ಟು ಅವರ ಸೂಚನೆ ಅನುಸಾರ ಪರಿಹಾರ ಪಡೆದುಕೊಳ್ಳಿ.