ಗೃಹಲಕ್ಷ್ಮಿ 6ನೇ ಕಂತಿನ ಹಣ ಇಂದು 11:00 ಘಂಟೆಗೆ ಈ ಜಿಲ್ಲೆಯವರಿಗೆ 2,000 ಜಮೆ, ತಕ್ಷಣ ಹಣ ಪಡೆಯಲು ಈ ರೀತಿ ಮಾಡಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯು(Gruhalakshmi Scheme) ಯಶಸ್ವಿಯಾಗಿ ನಡೆಯುತ್ತಿದ್ದು ರಾಜ್ಯದ 1.20 ಕೋಟಿ ಮಹಿಳೆಯರು ಈ ಯೋಜನೆಯ ಅನುದಾನ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದ ಪ್ರತಿಯೊಂದು ಕುಟುಂಬದ ಮುಖ್ಯಸ್ಥೆ ಕೂಡ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಸಹಾಯಧನ ನೀಡುವ ಯೋಜನೆ ಇದಾಗಿದ್ದು ಜುಲೈ ತಿಂಗಳಿನಿಂದ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ಮೊದಲ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದವರು ಯಶಸ್ವಿಯಾಗಿ ಇದುವರೆಗೂ ಐದು ಕಂತುಗಳ ಹಣ ಪಡೆದಿದ್ದಾರೆ ಮತ್ತು 6ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಇದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ವರ್ಗಾವಣೆ ಯಾಗಿತ್ತು ಈಗ 6ನೇ ತಿಂಗಳು ನಡೆಯುತ್ತಿದ್ದು 6ನೇ ತಿಂಗಳ ಜನವರಿ ತಿಂಗಳ ಕಂತಿನ ಹಣ ಇಂದಿನಿಂದ ಜಿಲ್ಲಾವಾರು ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತಿದೆ.

ಈ ಸುದ್ದಿ ನೋಡಿ:-ಕೇವಲ 27 ಲಕ್ಷಕ್ಕೆ ಸೈಟ್ ಜೊತೆ ಮನೆ ಕೂಡ ನಿಮ್ಮದಾಗಿಸಿಕೊಳ್ಳಬಹುದು.! ಸ್ವಂತ ಮನೆ ಕನಸು ಇದ್ದವರು ನೋಡಿ.!

ಸರ್ಕಾರದಿಂದ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಣ ವರ್ಗಾವಣೆಯಾಗಿದ್ದು ಇಲಾಖೆ ವತಿಯಿಂದ ಜಿಲ್ಲಾ ಖಜಾನೆಗಳಿಗೆ ಹಣ ವರ್ಗಾಯಿಸಲಾಗುತ್ತಿದೆ. ಆ ಪ್ರಕಾರವಾಗಿ ಇಂದು ಕರ್ನಾಟಕದ ದಕ್ಷಿಣ ಕನ್ನಡ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಉಡುಪಿ, ಶಿವಮೊಗ್ಗ, ರಾಮನಗರ ಮಂಡ್ಯ, ತುಮಕೂರು, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ಕೋಲಾರ, ಚಿಕ್ಕಮಗಳೂರು, ಚಾಮರಾಜನಗರ, ಗದಗ, ಹಾವೇರಿ, ಬೆಳಗಾವಿ, ಯಾದಗಿರಿ, ರಾಯಚೂರು, ವಿಜಯಪುರ ಹಾಗೂ ಕಲ್ಬುರ್ಗಿ ಜಿಲ್ಲೆಯವರಿಗೆ

ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗುತ್ತಿದ್ದೆ ಮತ್ತು ಉಳಿದ ಜಿಲ್ಲೆಯವರಿಗೂ ಕೂಡ ಕೆಲವೇ ದಿನಗಳಲ್ಲಿ ಹಂತ ಹಂತವಾಗಿ ಹಣ ಸಿಗಲಿದೆ ಆದರೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯುವುದಕ್ಕೆ ನಿಮಗೆ ಒಂದು ಕಂಡೀಶನ್ ಇದೆ. ಗೃಹಲಕ್ಷ್ಮಿ ಯೋಜನೆ ಆರಂಭವಾದಾಗಲಿಂದ ಕೇಳಿಬರುತ್ತಿರುವ ಒಂದು ಸಾಮಾನ್ಯ ಸಮಸ್ಯೆ ಏನೆಂದರೆ ಅರ್ಜಿ ಸಲ್ಲಿಸಿದ್ದರು ಅನೇಕ ಫಲಾನುಭವಿಗಳು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ.

ಈ ಸುದ್ದಿ ನೋಡಿ:-ಇನ್ಮುಂದೆ ಮನೆ, ಸೈಟ್, ಜಮೀನು, ಇನ್ನಿತರ ಆಸ್ತಿ ನೋಂದಣಿಗೆ ಈ ದಾಖಲೆ ನೀಡುವುದು ಕಡ್ಡಾಯ.! ಇಲ್ಲದಿದ್ರೆ ರಿಜಿಸ್ಷ್ರೇಷನ್ ಕ್ಯಾನ್ಸಲ್

ಇದಕ್ಕಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi Camp ) ನಡೆಸಿ ಸಮಸ್ಯೆ ಬಗ್ಗೆ ಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಆಗಿದ್ದರೂ ಕೂಡ ಇನ್ನು ಹಣ ಪಡೆಯಲು ಆಗದೇ ಇರುವವರು ಅಥವಾ ಇದುವರೆಗೂ ಗೃಹಲಕ್ಷ್ಮಿ ಯೋಜನೆ ಹಣ ಪಡೆದು ಈಗ ಈ ಕಂತಿನ ಹಣ ಮಿಸ್ ಆಗಿದ್ದರೆ ಅಂತಹವರು ರೇಷನ್ ಕಾರ್ಡ್ ಸಕ್ರಿಯವಾಗಿದೆಯೇ (Ration card Status) ಎಂದು ಪರಿಶೀಲಿಸಿಕೊಳ್ಳಬೇಕು.

ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿ (fair price shop) ಸಂಪರ್ಕಿಸಿದರೆ ಅವರು ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದೆಯೇ? ಇಲ್ಲವೇ? ಎನ್ನುವುದನ್ನು ತಿಳಿಸಿಕೊಡುತ್ತಾರೆ. ಆಹಾರ ಇಲಾಖೆ ವತಿಯಿಂದ ಪ್ರತಿ ತಿಂಗಳು ಕೂಡ ಅನರ್ಹ ಕಾರ್ಡುಗಳನ್ನು ರದ್ದುಪಡಿಸಲಾಗುತ್ತಿದೆ ಮತ್ತು ಅದಕ್ಕೆ ಕಾರಣವನ್ನು ನೀಡಲಾಗುತ್ತಿದೆ ಈ ರೀತಿ ನಿಮ್ಮ ರೇಷನ್ ಕಾರ್ಡ್ ಏನಾದರೂ ಈ ತಿಂಗಳು ರದ್ದಾಗಿದ್ದರೆ ಈ ಕಂತಿನ ಗೃಹಲಕ್ಷ್ಮಿ ಹಣ ಹಾಗೂ ಈ ತಿಂಗಳ ಅನ್ನಭಾಗ್ಯ ಹಣ ಕೈ ತಪ್ಪುತ್ತದೆ.

ಈ ಸುದ್ದಿ ನೋಡಿ:-1 ಮಿಷಿನ್ ಇದ್ದರೆ ಸಾಕು, ಮನೆಯಲ್ಲಿಯೇ 2 ಗಂಟೆ ಕೆಲಸ 30,000 ವರೆಗೆ ದುಡಿಯಬಹುದು.!

ಇದನ್ನು ಹೊರತುಪಡಿಸಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಹಾಗೂ NPCI ಮ್ಯಾಪಿಂಗ್ ಆಗಿರದೆ ಇದ್ದರೆ ಅಂತಹ ಫಲಾನುಭವಿಗಳಿಗೂ DBT ಮೂಲಕ ಹಣ ವರ್ಗಾವಣೆ ಮಾಡಲು ಆಗುವುದಿಲ್ಲ. ಈ ತಿಂಗಳು ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಹಣ ಬಂದಿಲ್ಲ ಎಂದರೆ ಇದೇ ಕಾರಣ ಆಗಿರಬಹುದು ಅವರು ಮತ್ತೊಮ್ಮೆ ದೃಢಪಡಿಸಿಕೊಳ್ಳಿ.

ಮತ್ತು ನ್ಯಾಯಬೆಲೆ ಅಂಗಡಿಗಳಲ್ಲೂ ಕೂಡ ಅನ್ನಭಾಗ್ಯ ಶಿಬಿರಗಳನ್ನು ಏರ್ಪಡಿಸಿ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಪಡೆಯಲು ತೊಂದರೆ ಆಗಿರುವ ಫಲಾನುಭವಿಗಳಿಗೆ ಸಮಸ್ಯೆ ಪರಿಹರಿಸಿ ಕೊಡಲಾಗುತ್ತಿದೆ. ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಬಗ್ಗೆ ಮಾಹಿತಿ ಪಡೆದು ಶಿಬಿರಗಳಲ್ಲಿ ಭಾಗವಹಿಸಿ ಸಮಸ್ಯೆ ಸರಿಪಡಿಸಿಕೊಳ್ಳಿ.

https://youtu.be/t2_iusNW2NQ?si=kk9eRsmQ0C2_FIwh

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now