ಎದೆ ಭಾಗದಲ್ಲಿ ನೋವು ಬರುತ್ತಿದೆ ಎಂದ ತಕ್ಷಣ ಎಲ್ಲರಿಗೂ ಅಳುಕು ಆರಂಭವಾಗುತ್ತದೆ. ಎದೆ ನೋವು ಬಂದರೆ ಇದು ಹಾರ್ಟ್ ಗೆ ತೊಂದರೆಯಾಗಿರುವ ಲಕ್ಷಣ ಇನ್ನೇನು ಹೃದಯಘಾ.ತವಾಗಿ ಬಿಡುತ್ತದೆ ಎಂದು. ಆದರೆ ಎಲ್ಲಾ ಬಾರಿಯೂ ಎದೆ ನೋವು ಹೃದಯಘಾತ ಅಥವಾ ಹೃದಯದ ಆರೋಗ್ಯ ಹಾಳಾಗಿರುವ ಲಕ್ಷಣವಲ್ಲ ಹೃದಯದ ಸಮಸ್ಯೆ ಮಾತ್ರವಲ್ಲದೇ ಇತರೆ ಆರೋಗ್ಯ ಸಮಸ್ಯೆಗಳನ್ನು ಕೂಡ ಎದೆ ಭಾಗದಲ್ಲಿ ನೋವು ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಹೃದಯಘಾ.ತದ ನೋವು ಹೇಗಿರುತ್ತದೆ ಮತ್ತು ಉಳಿದ ಆರೋಗ್ಯ ಸಮಸ್ಯೆಗಳಿಂದ ಬರುವ ಎದೆ ಭಾಗದ ನೋವು ಯಾವ ರೀತಿ ಲಕ್ಷಣ ಹೊಂದಿರುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಹೃದಯಾಘಾ.ತ ಆದವರು ಅನುಭವಿಸಿದ ನೋವಿನ ಪ್ರಕಾರ ಅವರು ಹೇಳುವುದೇನೆಂದರೆ, ಹೃದಯಕ್ಕೆ ಒಂದೇ ಬಾರಿ ಒಂದು ದೊಡ್ಡ ಬಂಡೆ ಕಲ್ಲು ಎತ್ತಿ ಹಾಕಿದ ಅಥವಾ ಹೃದಯವನ್ನು ಯಾರೋ ಬಿಗಿದು ಎಳೆದು ಕಟ್ಟಿದ ರೀತಿ ಆಗುತ್ತದೆ ಅಷ್ಟು ನೋವು ಒಮ್ಮೆಲೆ ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಕಡಿಮೆ ಆಗುವುದೇ ಇಲ್ಲ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಇಂದು 11:00 ಘಂಟೆಗೆ ಈ ಜಿಲ್ಲೆಯವರಿಗೆ 2,000 ಜಮೆ, ತಕ್ಷಣ ಹಣ ಪಡೆಯಲು ಈ ರೀತಿ ಮಾಡಿ.!
ಉಸಿರಾಡಲು ಸಮಸ್ಯೆಯಾಗುತ್ತದೆ ಹೃದಯದ ಭಾಗದಲ್ಲಿ ಆರಂಭವಾಗಿ ನಂತರ ಎಡ ಭುಜ ಕುತ್ತಿಗೆ ಹೀಗೆ ಎಡ ಭಾಗದಲ್ಲಿಯೇ ಹೆಚ್ಚು ನೋವಿರುತ್ತದೆ. ಈ ರೀತಿ ಆದಾಗ ಒಂದು ಕಡೆ ಕುಳಿತುಕೊಳ್ಳಬೇಕು, ತಕ್ಷಣ ಯಾರನ್ನಾದರೂ ಸಹಾಯಕ್ಕೆ ಕರೆಯಬೇಕು ಈಗಾಗಲೇ ಹೃದಯ ಸಮಸ್ಯೆ ಇದೆ ಎನ್ನುವ ವಿಷಯ ಗೊತ್ತಿದ್ದರೆ Nitroglycerin or Asprin ಮಾತ್ರೆಗಳನ್ನು ಯಾವಾಗಲೂ ಜೊತೆಗೆ ಇಟ್ಟುಕೊಂಡಿರಬೇಕು ಅದನ್ನು ಸೇವಿಸಬೇಕು.
ತಡ ಮಾಡದೆ ಮತ್ತೊಬ್ಬರ ಸಹಾಯದಿಂದ ಆಸ್ಪತ್ರೆಗೆ ಹೋಗಬೇಕು. ಇಂತಹ ನೋವು ಹೃದಯಾಘಾತವಾಗುವ ಮುನ್ಸೂಚನೆಯಾಗಿದೆ ಹೃದಯಘಾ.ತವೇನೆಂದರೆ, ರಕ್ತನಾಳಗಳಲ್ಲಿ ರಕ್ತ ಸಂಚಾರಣೆಗೆ ಬ್ಲಾಕೇಜ್ ಉಂಟಾಗಿ ಒಂದು ಬಾರಿ ಅದು ಸಂಪೂರ್ಣವಾಗಿ ಬ್ಲಾಕ್ ಆದಾಗ ಆ ಹೃದಯದ ಭಾಗಕ್ಕೆ ರಕ್ತ ಸಂಚಾರಣೆಯಾಗದೆ ಅಲ್ಲಿರುವ ನರಗಳು ಸ.ತ್ತು ಹೋಗಿ ಹಾರ್ಟ್ ನಿಷ್ಕ್ರಿಯಗೊಳ್ಳುತ್ತದೆ, ಇದೆ ಹಾರ್ಟ್ ಅಟ್ಯಾಕ್.
ಆಗ ಹೆಚ್ಚು ತಡ ಮಾಡಿದಷ್ಟು ಮನುಷ್ಯನ ಪ್ರಾಣಕ್ಕೂ ಅಪಾ.ಯವಿರುತ್ತದೆ. ಹೆಚ್ಚು ಬೆವರುವುದು, ನಡೆಯುವಾಗ ಮೆಟ್ಟಿಲು ಹತ್ತುವಾಗ, ಹೃದಯದ ಭಾಗಕ್ಕೆ ನೋವಾದ ರೀತಿ ಹಾಕುವುದು ಇದೆಲ್ಲವೂ ಇದರ ಲಕ್ಷಣವೇ. ಇಂತಹವರು ಹೆಚ್ಚು ಸಂತೋಷದ ಸುದ್ದಿ ಅಥವಾ ಗಾಬರಿಯಾಗುವ ಸುದ್ದಿ ಕೇಳಿದಾಗಲೂ ಈ ರೀತಿ ಆಗಬಹುದು.
ಈ ಸುದ್ದಿ ಓದಿ:- ಕೇವಲ 27 ಲಕ್ಷಕ್ಕೆ ಸೈಟ್ ಜೊತೆ ಮನೆ ಕೂಡ ನಿಮ್ಮದಾಗಿಸಿಕೊಳ್ಳಬಹುದು.! ಸ್ವಂತ ಮನೆ ಕನಸು ಇದ್ದವರು ನೋಡಿ.!
ಹಾಗಾಗಿ ಇವರು ಯಾವಾಗಲೂ ಕೂಲ್ ಆಗಿರಬೇಕು ಪ್ರತಿನಿತ್ಯವೂ ತಪ್ಪದೇ ವಾಕಿಂಗ್ ಹಾಗೂ ನಿಯಮಿತವಾದ ವ್ಯಾಯಾಮ, ಕೊಲೆಸ್ಟ್ರಾಲ್ ಕಡಿಮೆ ಇರುವಂತಹ ಒಳ್ಳೆಯ ಆಹಾರ ಪದ್ಧತಿ ರೂಡಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು. ಇದು ಮಾತ್ರವಲ್ಲದೆ ಅನ್ನನಾಳದಲ್ಲಿ ಸಮಸ್ಯೆ ಆದಾಗಲು ಕೂಡ ಗ್ಯಾಸ್ಟ್ರೈಟಿಸ್ ಆಗಿ ಎದೆ ನೋವು ಬರುತ್ತದೆ.
ಇಂತಹ ಸಮಯದಲ್ಲಿ ಎದೆಯನ್ನು ಹಿಂಡಿದ ರೀತಿ ಆಗುತ್ತದೆ ಅಥವಾ ಹೆಚ್ಚು ಎದೆ ಉರಿ ಇರುತ್ತದೆ. ಕೆಲವರಿಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದಾಗ ಈ ರೀತಿಯ ಆಗುತ್ತದೆ. ಗೋಧಿ ಪದಾರ್ಥ ಅಥವಾ ಜಿಡ್ಡಿನಾಂಶ, ಮಸಾಲೆ ಪದಾರ್ಥ ಅಥವಾ ಕಾಫಿ ಸೇವಿಸಿದಾಗ ಹೀಗಾಗುತ್ತಿದ್ದರೆ ಅಂತವರು ಇಂತಹ ಆಹಾರ ಪದಾರ್ಥಗಳಿಂದ ದೂರ ಇರಬೇಕು ಮತ್ತು ತಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದ ಇದನ್ನು ಗುಣಪಡಿಸಿಕೊಳ್ಳಬೇಕು.
ಶ್ವಾಸಕೋಶದ ಮೂಳೆ ಹಾಗೂ ನರಗಳ ನೋವಿನಿಂದಲೂ ಕೂಡ ಎದೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದು ಆಗಾಗ ಕಾಣಿಸಿಕೊಳ್ಳುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಅದಕ್ಕೆ ಸಂಬಂಧಿಸಿದ ಔಷಧಿ ಸೇವಿಸಿದರೆ ಇದು ಹೊರಟು ಹೋಗುತ್ತದೆ.
ಈ ಸುದ್ದಿ ಓದಿ:- ಇನ್ಮುಂದೆ ಮನೆ, ಸೈಟ್, ಜಮೀನು, ಇನ್ನಿತರ ಆಸ್ತಿ ನೋಂದಣಿಗೆ ಈ ದಾಖಲೆ ನೀಡುವುದು ಕಡ್ಡಾಯ.! ಇಲ್ಲದಿದ್ರೆ ರಿಜಿಸ್ಷ್ರೇಷನ್ ಕ್ಯಾನ್ಸಲ್
ಈ ರೀತಿ ಯಾವುದೇ ಕಾರಣದಿಂದ ಎದೆ ನೋವು ಬರುತ್ತಿದ್ದರು ಗಾಬರಿಗೊಳ್ಳಬೇಡಿ ತಪ್ಪದೆ ಹೃದಯ ತಜ್ಞರನ್ನು ಸಂಪರ್ಕಿಸಿ ನಿಮ್ಮ ಅನುಮಾನ ಬಗೆಹರಿಸಿಕೊಂಡು ನಿಶ್ಚಿಂತೆಯಿಂದಿರಿ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆಗೆ ಹೋಗಿ ಹೃದಯದ ಆರೋಗ್ಯ ರಕ್ಷಿಸಿಕೊಳ್ಳಿ, ಆದಷ್ಟು ರಿಲಾಕ್ಸ್ ಆಗಿರಿ.