ಕರ್ನಾಟಕ ಸರ್ಕಾರ (Karnataka Government Gyarantee Scheme) ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಇದುವರೆಗೆ ರಾಜ್ಯದಾದ್ಯಂತ 1.17 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ.
ಆಗಸ್ಟ್ ತಿಂಗಳ ಅಂತ್ಯದಿಂದ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಈವರೆಗೂ ಯಶಸ್ವಿಯಾಗಿ ಮೂರು ಕಂತಿನ ಹಣಗಳನ್ನು ಅರ್ಹ ಫಲಾನುಭವಿಗಳು ಪಡೆದಿದ್ದಾರೆ. ಆದರೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗುತ್ತಿಲ್ಲ ಅನೇಕರು ಮೊದಲನೇ ಕಂತಿನ ಹಣವನ್ನೆ ಪಡೆದಿಲ್ಲ ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಬಾರಿ ದೂರುಗಳು ಕೂಡ ಸಲ್ಲಿಕೆ ಆಗಿವೆ ಇತರ ಕುರಿತು ಒಂದು ಅಪ್ ಡೇಟ್ ಇದೆ.
ಕಳೆದ ತಿಂಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು (CM Siddaramaih) ಒಳಗೊಂಡಂತೆ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆ (Gruhalakshmi Pragathi Parisheelana Sabhe) ನಡೆಯಿತು.
ಈ ಸಭೆಯಲ್ಲಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವೆಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಲು ಸಮಸ್ಯೆ ಆಗುತ್ತಿದೆ ಅವರ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಹೋಗಿ ಮಾಹಿತಿ ಪಡೆದು ಸಮಸ್ಯೆ ಬಗ್ಗೆ ಹರಿಸಲು ಪ್ರಯತ್ನಿಸುತ್ತಿದ್ದಾರೆ, ಸ್ವತಃ ಅವರೇ ಬ್ಯಾಂಕಿಗೆ ಕರೆದುಕೊಂಡು ಹೋಗಿ ಬ್ಯಾಂಕ್ ಖಾತೆಗಳಲ್ಲಿ ಆಗಿರುವ ಸಮಸ್ಯೆಗಳನ್ನು ಸರಿ ಪಡಿಸುತ್ತಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿರದ ಮತ್ತು ಬ್ಯಾಂಕ್ ಖಾತೆಗಳು ಆಕ್ಟಿವ್ ಇರದ ಕಾರಣದಿಂದಾಗಿ ಅನೇಕರಿಗೆ ಹಣ ತಲುಪಿಲ್ಲ ಎನ್ನುವ ಮಾಹಿತಿ ನೀಡಿದ್ದರು. ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳವರು ಕೂಡ ಅಧಿಕಾರಿಗಳಿಗೆ ಒಂದು ಸೂಚನೆಯನ್ನು ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ (Adalath) ನಡೆಸಿ ಯಾರಿಗೆಲ್ಲ ಹಣ ತಲುಪಿಲ್ಲ ಅವರ ಸಮಸ್ಯೆಗಳನ್ನು ಬಗೆ ಹರಿಸಬೇಕು.
ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ವತಃ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಅವರ ದಾಖಲೆಗಳನ್ನು ನೋಡಿ ಸಮಸ್ಯೆ ಆಗಿರುವುದನ್ನು ಸರಿಪಡಿಸಿ ಅವರಿಗೆ ಹಣ ಹೋಗುವಂತೆ ಮಾಡಬೇಕು. ಇದರ ಜೊತೆಗೆ ಯಾರೆಲ್ಲ ಇನ್ನು ಸಹ ಯೋಜನೆಯಿಂದ ಹೊರಗುಳಿದಿದ್ದಾರೆ ಅವರನ್ನು ಯೋಜನಾ ವ್ಯಾಪ್ತಿಗೆ ಸೇರಿಸಿ ಡಿಸೆಂಬರ್ ಅಂತ್ಯದ ವೇಳೆಗೆ ಯಶಸ್ವಿಯಾಗಿ ಕರ್ನಾಟಕದ ಎಲ್ಲಾ ಅರ್ಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಹೋಗುವಂತೆ ಮಾಡಬೇಕು ಎಂದು ಆಜ್ಞೆ ಮಾಡಿದ್ದರು.
ಈಗ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಅದಾಲತ್ ಕಾರ್ಯಕ್ರಮಗಳಲ್ಲಿ ಗೃಹಲಕ್ಷ್ಮಿ ಹಣ ಪಡೆಯಲಾಗದವರು ಭಾಗವಹಿಸಿ ಸಮಸ್ಯೆ ನೋಂದಾಯಿಸಿಕೊಂಡರೆ ನಿಮ್ಮ ಮನೆ ಬಾಗಿಲಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಬಂದು ಸಮಸ್ಯೆ ಪರಿಹರಿಸಿ ಕೊಡುತ್ತಾರೆ.
ಇದಾದ ಬಳಿಕ ಮಲ್ಲೇಶ್ವರಂನ ಬೆಂಗಳೂರು ಒನ್ ಕೇಂದ್ರದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಗಸ್ಟ್ 15ಕ್ಕೂ ಮುಂಚೆ ನೋಂದಾಯಿಸಿಕೊಂಡು ಇನ್ನು ಸಹ ಯಾರು ಮೊದಲ ಕಂತಿನ ಹಣವನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ ಅವರಿಗೆ ಒಟ್ಟಿಗೆ ರೂ.6,000 ಹಣ ಸಿಗಲಿದೆ ಹಾಗಾಗಿ ಚಿಂತಿಸುವ ಅವಶ್ಯಕತೆ ಬೇಡ ಎಂದು ಭರವಸೆ ನೀಡಿದ್ದಾರೆ.
ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ ಆಗಿರದ ಕಾರಣ, ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರದ ಕಾರಣ ಮತ್ತು ದಾಖಲೆಗಳಲ್ಲಿ ಹೆಸರಿನ ಹೊಂದಾಣಿಕೆ ಆಗದ ಕಾರಣ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಮಸ್ಯೆ ಆಗಿರಬಹುದು ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಅರ್ಜಿ ಸಲ್ಲಿಕೆ ಯಶಸ್ವಿಯಾಗದೆ ಇರಬಹುದು.
ಈಗಾಗಲೇ ನಿಮ್ಮ ಯಾವುದಾದರೂ ಬ್ಯಾಂಕ್ ಖಾತೆಗೆ ಹಣ ಹೋಗಿರಬಹುದು ಅದರ ಸಂಬಂಧಿತ SMS ನಿಮಗೆ ಬರದೇ ಇರಬಹುದು. ಇವುಗಳನ್ನು ತಿಳಿದುಕೊಂಡು ಸಮಸ್ಯೆ ಬಗೆಹರಿಸಿಕೊಂಡು ಎಲ್ಲ ಮಹಿಳೆಯರು ಕೂಡ ಈ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳಲಿ ಎನ್ನುವುದಷ್ಟೇ ಈ ಅಂಕಣದ ಆಶಯ.