ಸದ್ಯಕ್ಕೆ ಈಗ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ ಯಾಕೆಂದರೆ ಪೂರ್ತಿಯಾಗಿ ಎಲ್ಲಾ ಫಲಾನುಭವಗಳ ಖಾತೆಗೂ ಹಣ ವರ್ಗಾವಣೆ (amount) ಆಗಿಲ್ಲ ಹಾಗಾಗಿ ಅರ್ಜಿ ಸಲ್ಲಿಸಿದವರೆಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ ಹಣ ಬರುತ್ತದೆಯೋ ಇಲ್ಲವೋ ಎನ್ನುವ ಅನುಮಾನದಲಿದ್ದಾರೆ. ಅವರಿಗೆಲ್ಲ ಇಂದು ಈ ಅಂಕಣದಲ್ಲಿ ಬಹು ಮುಖ್ಯವಾದ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಅದೇನೆಂದರೆ ಈವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಕರ್ನಾಟಕ ರಾಜ್ಯದ 1.15 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೇ.
ಅವರಲ್ಲಿ ಆಗಸ್ಟ್ 30 ರಂದು ಯೋಜನೆ ಲಾಂಚ್ ಆದಾಗಿನಿಂದ 65 ಲಕ್ಷ ಫಲಾನುಭವಿಗಳ ಖಾತೆಗೆ ಮಾತ್ರ ಹಣ ವರ್ಗಾವಣೆ ಆಗಿದೆ. ಉಳಿದ 45 ಲಕ್ಷ ಮಹಿಳೆಯರಲ್ಲಿ 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆ ಮಾಹಿತಿಗಳು ಸಮಸ್ಯೆಯಾಗಿರುವ ಕಾರಣ ಹಣ ತುಂಬಿಸಲು ಸಾಧ್ಯವಾಗಿಲ್ಲ ಎನ್ನುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಂಚಿಕೊಂಡಿದೆ. ಆದರೆ ಎಲ್ಲಾ ಸರಿಯಿದ್ದು ಕೂಡ ಹಣ ಪಡೆಯದೆ ಇರುವವರು ಬಹಳ ಬೇಸರವಾಗಿದೆ ಅವರಿಗೆ ಕೆಲ ಮುಖ್ಯ ವಿಷಯಗಳಲ್ಲಿ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ATM ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 90 ಸಾವಿರ ಆದಾಯ ಗಳಿಸಿ.! ಬಂಡವಾಳವಿಲ್ಲದೆ ಲಾಭಗಳಿಸುವ ಮಾರ್ಗ.!
● ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಬರೆದಿದ್ದರೆ ಖಂಡಿತವಾಗಿಯೂ ನಿಮ್ಮ ಖಾತೆಗೆ ಹಣ ಬರಲಿದೆ ಆದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದೆಯೇ, ಆ ಖಾತೆ ಆಕ್ಟಿವ್ ಆಗಿ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಈ ಮಾಹಿತಿಯನ್ನು ಪರಿಶೀಲಿಸಬಹುದು.
● ಒಂದು ವೇಳೆ ನೀವು ಅರ್ಜಿ ಸಲಿಸಿದಾಗ ಮಂಜೂರಾತಿ ಪತ್ರ ನೀಡಿಲ್ಲ ಎಂದರೆ 8147500500 ಈ ಸಂಖ್ಯೆಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸುವ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಆಗಿದೆಯೇ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳಿ. ಒಂದು ವೇಳೆ ಅರ್ಜಿ ಸ್ವೀಕರಿಸಿಲ್ಲ ಎಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ರಿಪ್ಲೈ ಬರುತ್ತದೆ.
ಹೆಣ್ಣು ಮಕ್ಕಳಿರುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 25 ಸಾವಿರ ಆಸಕ್ತರು ಅರ್ಜಿ ಸಲ್ಲಿಸಿ.!
● ಎಲ್ಲಾ ಮಾಹಿತಿ ಸರಿ ಇದ್ದು ಕೂಡ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಿಲ್ಲ ಎಂದರೆ ತಾಂತ್ರಿಕ ಸಮಸ್ಯೆಗಳಿಂದ ಈ ರೀತಿ ಹಣ ವರ್ಗಾವಣೆ ಮಾಡಲು ತೊಡಕಾಗಿದೆ ಎನ್ನುವ ವಿಷಯವನ್ನು ಇಲಾಖೆಯೂ ಕೂಡ ಹಂಚಿಕೊಂಡಿದೆ. ಇದು ಮೊದಲನೇ ಕಂತಿನ ಹಣ ವರ್ಗಾವಣೆ ಆಗಿರುವುದರಿಂದ ಸಮಸ್ಯೆ ಆಗಿದೆ. RBI ಮೂಲಕ ಹಣ ವರ್ಗಾವಣೆ ಮಾಡಬೇಕಿತ್ತು ಆದರೆ ಆ ರೀತಿ ವ್ಯವಸ್ಥೆ ಮಾಡಿದ ಕಾರಣ ತಡವಾಗುತ್ತಿದೆ ಆದರೆ, ಮುಂದಿನ ತಿಂಗಳಿಂದ 15ನೇ ತಾರೀಕಿನ ಒಳಗಡೆ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ವರ್ಗಾವಣೆ ಆಗಲಿದೆ ಎನ್ನುವ ಭರವಸೆಯನ್ನು ಇಲಾಖೆ ನೀಡಿದೆ.
● ಈಗಾಗಲೇ ಸರ್ಕಾರದಿಂದ ಯೋಜನೆಗೆ ಹಣ ಬಿಡುಗಡೆ ಆಗಿದೆ ಸೆಪ್ಟೆಂಬರ್ 30ರ ವರೆಗೂ ಕೂಡ ಹಂತ ಹಂತವಾಗಿ ಮೊದಲನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೂ ಕೂಡ ಹಣ ಪಡೆಯಲು ಸಾಧ್ಯವಾಗದೇ ಹೋದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇದರ ಕುರಿತು ಮಾಹಿತಿ ಸಂಗ್ರಹಿಸಿ ಸಮಸ್ಯೆ ಪರಿಹಾರ ಮಾಡಲು ಪ್ರಯತ್ನಿಸುತ್ತದೆ.
ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ, ಹೊಸದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ಪ್ರತಿ ಟನ್ ಗೆ 5,000ರೂ. ಹೆಚ್ಚಳ.!
ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ಅಂಗನವಾಡಿ ಕಾರ್ಯಕರ್ತೆಯಿಂದ ಮನೆ ಮನೆಗೆ ತೆರಳಿ ಈ ಕುರಿತು ಮಾಹಿತಿ ಸಂಗ್ರಹಿಸಿ ಗೃಹಲಕ್ಷ್ಮಿ ಹಣ ಪಡೆಯಲು ಇರುವ ಸಮಸ್ಯೆಗಳನ್ನು ಪರಿಹರಿಸಿ ಪ್ರತಿ ಕುಟುಂಬದ ಯಜಮಾನಿಗೂ ಹಣ ತಲುಪುವಂತೆ ಮಾಡಲಾಗುವುದು ಎನ್ನುವ ಮಾಹಿತಿಯನ್ನು ಇಲಾಖೆ ಮೂಲಗಳು ತಿಳಿಸಿದೆ, ಆದ್ದರಿಂದ ಅಲ್ಲಿಯವರೆಗೂ ಕಾದು ನೋಡಿ.