ಗೃಹಲಕ್ಷ್ಮಿ 2,000 ಹಣ ಪಡೆಯಲು ತಪ್ಪದೇ ಗ್ರಾಮ ಪಂಚಾಯಿತಿ ಕ್ಯಾಂಪ್ ನಲ್ಲಿ ಭಾಗವಹಿಸಬೇಕು.!

 

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Congress) ಅಧಿಕಾರಕ್ಕೆ ಬಂದ ಮೇಲೆ ತಾನು ಕೊಟ್ಟಿದ್ದ ವಾಗ್ದಾನದಂತೆ ಪಂಚ ಖಾತ್ರಿ ಯೋಜನೆಗಳನ್ನು (Guarantee Schemes) ಹಂತ ಹಂತವಾಗಿ ಜಾರಿಗೆ ತರುತ್ತಿದ್ದು ಇದರಲ್ಲಿ ಮಹತ್ವಕಾಂಕ್ಷಿ ಯೋಜನೆಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಜುಲೈ 19 ರಿಂದ ಚಾಲನೆ ಸಿಕ್ಕಿದೆ.

ಅಂದಿನಿಂದ ಯಶಸ್ವಿಯಾಗಿ 1.17 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಮತ್ತು ಇಲ್ಲಿವರೆಗೆ ಮೂರು ಕಂತುಗಳ ಹಣವನ್ನು ಯಶಸ್ವಿಯಾಗಿ DBT ಪೂರಕ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆದು ಈಗ ನಾಲ್ಕನೇ ಕಂತಿನ ಹಣ ಕೂಡ ವರ್ಗಾವಣೆ ಯಾಗುತ್ತಿದೆ. ಗೃಹಲಕ್ಷ್ಮಿ ಆರಂಭವಾದಾಗಲಿಂದಲೂ ಕೂಡ ಮಹಿಳೆಯರು ಯೋಜನೆಗೆ ಅರ್ಹರಾಗಿ ನೋಂದಾಯಿಸಿಕೊಂಡಿದ್ದರು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ,

ಇದಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನಾ (Gruhalakshmi Pragathi Parisheelana Sabhe) ಸಭೆಯಲ್ಲಿ ಮುಖ್ಯಮಂತ್ರಿಗಳು ಪರಿಹಾರ ಮಾರ್ಗವನ್ನು ಸೂಚಿಸಿದ್ದಾರೆ. ಅಂತೆಯೇ ಅಧಿಕೃತವಾಗಿ ಸರ್ಕಾರದಿಂದ ಈ ಸಂಬಂಧ ಸುತ್ತೋಲೆ ಕೂಡ ಹೊರಬಿದ್ದಿದೆ. ಅದರಲ್ಲಿ ತಿಳಿಸಿರುವ ಪ್ರಕಾರವಾಗಿ ಡಿಸೆಂಬರ್ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಗ್ರಾಮ ಪಂಚಾಯಿತಿಗಳಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi camp at Grama Panchayath) ನಡೆಸಲಾಗುತ್ತದೆ.

ಇದುವರೆಗೂ ಯಾರು ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಸಾಧ್ಯವಾಗಿಲ್ಲ ಅಥವಾ ಒಂದು ತಿಂಗಳು ಹಣ ಪಡೆದು ಮತ್ತೆ ಸ್ಥಗಿತಗೊಂಡಿದೆ ಇಂತಹ ಮಹಿಳೆಯರು ಈ ಕ್ಯಾಂಪ್ ಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಈ ಮೊದಲು ಕೂಡ ಯಾವೆಲ್ಲ ಸಮಸ್ಯೆಗಳಿಂದ ಹಣ ಪಡೆಯಲಾಗುತ್ತಿಲ್ಲ ಎನ್ನುವುದನ್ನು ತಿಳಿಸಲಾಗಿತ್ತು, ಅದನ್ನು ಸರಿಪಡಿಸಿಕೊಂಡವರು ನಂತರದ ದಿನಗಳಲ್ಲಿ ತಮ್ಮ ಖಾತೆಗಳಿಗೆ ಹಣ ಪಡೆದಿದ್ದಾರೆ.

ಅದಾಗ್ಯೂ 2.5 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗದೆ ಇರುವುದು ಮತ್ತು 70,000 ಮಹಿಳೆಯರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿರುವುದು ಹಣ ವರ್ಗಾವಣೆ ಆಗದಿರುವುದಕ್ಕೆ ಕಾರಣ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ ಕೆಲವರು ಹಣ ಪಡೆಯಲಾಗಿಲ್ಲ ಎನ್ನುವುದು ತಿಳಿದು ಬಂದಿದೆ.

ಹಾಗಾಗಿ ಅಂತವರು ಗೃಹಲಕ್ಷ್ಮಿ ಕ್ಯಾಂಪ್ ಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುತ್ತೊಲೆಯಲ್ಲಿ ತಿಳಿಸಲಾಗಿದೆ. ಡಿಸೆಂಬರ್ 27 ರಿಂದ 29 ರವರೆಗೆ ಬೆಳಗ್ಗೆ 9:00 ರಿಂದ ಸಂಜೆ 5:00 ರವರೆಗೆ ಅವರ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ನೇತೃತ್ವದಲ್ಲಿ ಗೃಹಲಕ್ಷ್ಮಿ ಗೆ ಸಂಬಂಧಿಸಿದ ಬ್ಯಾಂಕ್ ಸಮಸ್ಯೆ ಹಾಗೂ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಕೂಡ ಪರಿಹರಿಸಲಾಗುತ್ತದೆ.

ಈ ಕ್ಯಾಪ್ ನಲ್ಲಿ ಸ್ಥಳೀಯ ಬಾಪೂಜಿ ಸೇವಕೇಂದ್ರದ ಕಂಪ್ಯೂಟರ್ ಆಪರೇಟರ್ ಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು EDCS ತಂಡಗಳು, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪ್ರತಿನಿಧಿಗಳು ಮತ್ತು ಇತರ ಸ್ಥಳೀಯ ಬ್ಯಾಂಕ್ ಪ್ರತಿನಿಧಿಗಳು ಕೂಡ ಮಹಿಳೆಯರ ಸಮಸ್ಯೆ ಪರಿಹರಿಸಲು ಭಾಗವಹಿಸುತ್ತಾರೆ.

ಮಹಿಳೆಯರ ಗೃಹಲಕ್ಷ್ಮಿ ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ಆಧಾರ್ ಲಿಂಕ್ ಮಾಡಲಾಗುತ್ತದೆ, ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವವರಿಗೆ ಹೊಸ ಬ್ಯಾಂಕ್ ಖಾತೆ ತೆಗೆದುಕೊಳ್ಳಲಾಗುತ್ತದೆ, ಆಧಾರ್ KYC ಮಾಡಿಕೊಡಲಾಗುತ್ತದೆ ಮತ್ತು ಇನ್ನಿತರ ಯಾವುದೇ ತಾಂತ್ರಿಕ ಸಮಸ್ಯೆಗಳು ಇದ್ದರೂ ಕೂಡ ಅದನ್ನು ಪರಿಹರಿಸಲಾಗುತ್ತದೆ.

ಮುಖ್ಯಮಂತ್ರಿಗಳು ನೀಡಿರುವ ಸೂಚನೆಯ ಪ್ರಕಾರ ಡಿಸೆಂಬರ್ ಅಂತ್ಯದ ಒಳಗೆ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ತಲುಪಿಸಬೇಕು ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಎಲ್ಲ ಮಹಿಳೆಯರಿಗೂ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now