2019-20ನೇ ಸಾಲಿನಲ್ಲಿ ದೇಶದ ರೈತರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೇಂದ್ರದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮೂಲಕ ರೈತರುಗಳು ಕೃಷಿ ಹಾಗೂ ಕೃಷಿ ಸಂಬಂಧಿತ ಕಸುಬುಗಳಿಗೆ ಕಡಿಮೆ ಬಡ್ಡಿದರಕ್ಕೆ ಯಾವುದೇ ದಾಖಲೆ ಇಲ್ಲದೆ ಸಾಲ (loan)ಪಡೆಯಬಹುದು.
ಯೋಜನೆ ಆರಂಭದಲ್ಲಿ ರೈತರಿಗಾಗಿ ಇದ್ದ ಈ ಯೋಜನೆಯನ್ನು ನಂತರ ಪಶುಸಂಗೋಪನೆ (Animal Husbandry) ಹಾಗೂ ಮೀನುಗಾರಿಕೆ (fishing) ಕೂಡ ವಿಸ್ತರಿಸಲಾಗಿದೆ. ಮೊದಲಿಗೆ ಹರಿಯಾಣ ರಾಜ್ಯವು (Haryana State) ಈ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ತನ್ನ ರಾಜ್ಯದ ರೈತರಿಗೆ ವಿತರಣೆ ಮಾಡಿತು.
ಈಗ ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲೂ ಕೂಡ ಫಲಾನುಭವಿಗಳು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಅಂತೆಯೇ ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಇರುವವರು, ಕುರಿ ಕೋಳಿ ಮೇಕೆ ಸಾಕಾಣಿಕೆಗೆ ಯಾವುದೇ ದಾಖಲೆ ಇಲ್ಲದೆ ಸಾಲ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ವಿವರ ಹೀಗಿದೆ ನೋಡಿ.
ಯೋಜನೆ ಹೆಸರು :- ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu Kisan Credit Card)
ಸಿಗುವ ಸೌಲಭ್ಯಗಳು:-
* ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಮೀನು ಸಾಕಣೆ, ಕೋಳಿ ಸಾಕಣೆ, ಕುರಿ ಮೇಕೆ ಹಸು ಮತ್ತು ಎಮ್ಮೆ ಸಾಕಾಣಿಕೆಗೆ ರೈತರಿಗೆ ಸಾಲ ನೀಡಲಾಗುತ್ತದೆ.
* ಈ ಕಾರ್ಡ್ ಮೂಲಕ ಫಲಾನುಭವಿಗಳು ಗರಿಷ್ಠ 3 ಲಕ್ಷದವರೆಗೆ ಸಾಲ ಪಡೆಯಬಹುದು ಮತ್ತು 1.6 ಲಕ್ಷ ಮೊತ್ತಕ್ಕೆ ಯಾವುದೇ ರೀತಿ ದಾಖಲೆಗಳನ್ನು ಒದಗಿಸುವ ಅವಶ್ಯಕತೆ ಇಲ್ಲ
* ಹಣಕಾಸು ಸಂಸ್ಥೆಗಳು / ಬ್ಯಾಂಕ್ ಗಳು 7% ನಲ್ಲಿ ಸಾಲ ನೀಡಿದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 4% ಬಡ್ಡಿದರದಲ್ಲಿ ಸಾಲ ಪಡೆಯಬಹುದು.
* ಸದ್ಯಕ್ಕೆ ಪ್ರಸ್ತುತವಾಗಿ ಯೋಜನೆಯಡಿ ಪಶುಸಂಗೋಪನೆಗೆ ಹೆಚ್ಚಿನ ನೆರವು ನೀಡಲಾಗುತ್ತಿದ್ದು ಎಮ್ಮೆ ಖರೀದಿಗೆ ರೂ.60,249 ಪ್ರತಿ ಹಸುವಿಗೆ ರೂ. 40,783 ಮತ್ತು ಕುರಿ ಅಥವಾ ಮೇಕೆ ಸಾಕಾಣಿಕೆಗೆ 4,063 ಹಾಗೂ ಮೊಟ್ಟೆ ಇಡುವ ಪ್ರತಿ ಕೋಳಿಗೆ 720ರೂ. ಸಾಲ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು:-
* ರೈತರು, ಜಾನುವಾರುಗಳ ಮಾಲೀಕರು ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವವರು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
* ಈ ರೀತಿ ಆರ್ಥಿಕವಾಗಿ ದುರ್ಬಲವಾದ ರೈತರಿಗೆ ಹಾಗೂ ಕೃಷಿ ಸಂಬಂಧಿತ ಕಸುಬು ಮಾಡುವವರಿಗೆ ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, SBI ಬ್ಯಾಂಕ್ ಗಳು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುತ್ತವೆ.
ಅರ್ಜಿ ಸಲ್ಲಿಸುವುದು ಹೇಗೆ:-
* ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಭೇಟಿ ಕೊಟ್ಟು ಅರ್ಜಿ ಫಾರಂ ಪಡೆದು ವಿವರಗಳನ್ನು ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಕಾರ್ಡ್ ಗಳನ್ನು ಪಡೆಯಬಹುದು.
* ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕ್ ಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಿರಿ. ಹಾಗೆ ಸಾಲದ ಬಗ್ಗೆ ಕೂಡ ಮಾಹಿತಿ ನೀಡುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ರೈತನಾಗಿದ್ದರೆ ಭೂಮಿಗೆ ಸಂಬಂಧಿಸಿದ ದಾಖಲೆಗಳು
* ಪಶುಸಂಗೋಪನೆಯಲ್ಲಿ ತೊಡಗಿರುವ ರೈತನಾಗಿದ್ದರೆ ಸರ್ಕಾರಿ ಪಶು ವೈದ್ಯರಿಂದ ಪಡೆದ ಪ್ರಾಣಿಗಳ ಆರೋಗ್ಯ ಪ್ರಮಾಣ
* ಪಾಸ್ಪೋರ್ಟ್ ಅಳಯೆಯ ಭಾವಚಿತ್ರಗಳು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ರೇಷನ್ ಕಾರ್ಡ್
* ವೋಟರ್ ಐಡಿ
* ಬ್ಯಾಂಕ್ ಖಾತೆ ವಿವರ
* ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು.