ಜಗತ್ತಿನ ಶ್ರೇಷ್ಠ ವಿಜ್ಞಾನಿ ಎನಿಸಿರುವ ಐನ್ಸ್ಟೀನ್ (Einstein) ಕೂಡ ಹಣವನ್ನು ದುಡಿಸುವ ಕಲೆ ಬಗ್ಗೆ ನುಡಿದಿದ್ದಾರೆ. ಕಾಂಪೌಂಡ್ ಇಂಟರೆಸ್ಟ್ (Compound Intrest) ಜಗತ್ತಿನ ಎಂಟನೇ ಅದ್ಭುತ, ಯಾರು ಕಾಂಪೌಂಡ್ ಇಂಟರೆಸ್ಟ್ ತೆಗೆದುಕೊಳ್ಳುತ್ತಾರೋ ಅವರು ಅದನ್ನು ಗಳಿಸುತ್ತಾರೆ ಯಾರು ತಿಳಿದುಕೊಳ್ಳುವುದಿಲ್ಲವೋ ಅವರು ಅದನ್ನು ಪಾವತಿಸುತ್ತಾರೆ ಎಂದಿದ್ದಾರೆ.
ದುಡಿಮೆ ಎನ್ನುವುದು ಬದುಕಿಗೆ ಅನಿವಾರ್ಯ ಆದರೆ ಬುದ್ಧಿವಂತಿಕೆಯಿಂದ ದುಡಿಯುವ ಸಮಯದಲ್ಲಿ ಹಣವನ್ನು ಕೂಡಿಡುತ್ತಾ ಹಣದಿಂದ ದುಡಿಸುವುದು ಜಾಣತನದ ಲಕ್ಷಣ. ಹಾಗಾಗಿ ಇದನ್ನು ಒಂದು ಕಲೆ ಎಂದೆ ಹೇಳಬಹುದು ಇದರ ಬಗ್ಗೆ ತಿಳಿದುಕೊಂಡವರು ಕಡಿಮೆ ವಯಸ್ಸಿಗೆ ಹಣಕಾಸಿನ ವಿಷಯದಲ್ಲಿ ಹೆಚ್ಚು ಸಾಧನೆ ಮಾಡುತ್ತಾರೆ ಹಾಗಾಗಿ ಈ ಅಂಕಣದಲ್ಲಿ ಕಾಂಪೌಂಡ್ ಇಂಟರೆಸ್ಟ್ ವಿಷಯದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ನಾವು ಯಾವುದಾದರೂ ಒಂದು ಹಣಕಾಸು ಸಂಸ್ಥೆಯಲ್ಲಿ 1ಲಕ್ಷ ಹಣವನ್ನು ಹೂಡಿಕೆ ಮಾಡುತ್ತಿದ್ದೇವೆ ಎಂದುಕೊಳ್ಳೋ. ನಮಗೆ 10% ಬಡ್ಡಿದರ ಅನ್ವಯವಾದರೆ ವರ್ಷಕ್ಕೆ 10,000 ಲಾಭ ಪಡೆಯುತ್ತೇವೆ, ಆ ವರ್ಷದ ಅಂತ್ಯಕ್ಕೆ ನಮ್ಮ ಬಳಿ 1,10,000 ಹಣ ಇರುತ್ತದೆ. ಈಗ ಎರಡನೇ ವರ್ಷ ಈ ಹಣದ ಜೊತೆ ಮತ್ತೆ 1 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಅದೇ ಬಡ್ಡಿದರದಲ್ಲಿ 21000 ಆದಾಯವಾಗುತ್ತದೆ, ಎರಡು ವರ್ಷಗಳು ಸೇರಿ ನಿಮ್ಮ ಬಳಿ 2,31,000 ಹಣವಾಗುತ್ತದೆ.
ಹೀಗೆ ಐದು ವರ್ಷಗಳ ವರೆಗೆ ಪ್ರತಿ ವರ್ಷ 1 ಲಕ್ಷ ಹಣವನ್ನು ಬರುವ ಲಾಭದ ಜೊತೆ ಹೂಡಿಕೆ ಮಾಡುತ್ತ ಹೋದರೆ 5ನೇ ವರ್ಷದ ಅಂತ್ಯಕ್ಕೆ ನಿಮ್ಮ ಬಳಿ 6,71,501 ರೂ. ಇರುತ್ತದೆ. ಐದು ವರ್ಷದಲ್ಲಿ ನೀವು ಹೂಡಿಕೆ ಮಾಡಿದ್ದು ಕೇವಲ 5 ಲಕ್ಷಗಳು ಮಾತ್ರ ಆದರೆ ಅದಕ್ಕೆ 1,71,501ರೂ. ಲಾಭವಾಗಿರುತ್ತದೆ. ಇದು ಕಾಂಪೌಂಡ್ ಇಂಟರೆಸ್ಟಿಂಗ್ ಶಕ್ತಿಯಾಗಿದೆ.
ಕಾಂಪೌಂಡ್ ಇಂಟರೆಸ್ಟ್ ವೈಶಿಷ್ಟವೇನೆಂದರೆ ಇದರಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಮಾತ್ರವಲ್ಲದೆ ನಮಗೆ ಅದಕ್ಕೆ ಬರುವ ಬಡ್ಡಿಯ ಮೇಲೆ ಕೂಡ ಅವರು ಇಂಟರೆಸ್ಟ್ ಹಾಕಿ ಕೊಡುತ್ತಾರೆ. ಇದನ್ನು ಧೀರ್ಘಕಾಲದವರೆಗೆ ಲೆಕ್ಕ ಹಾಕಿ ಎಷ್ಟು ಲಾಭ ಕೊಡುತ್ತದೆ ಎಂದು ನೋಡುವುದಾದರೆ ಉದಾಹರಣೆಗೆ ನೀವು 20 ವರ್ಷದ ವ್ಯಕ್ತಿಯಾಗಿದ್ದು ಪ್ರತಿ ತಿಂಗಳು 10 ಸಾವಿರ ಹೂಡಿಕೆ ಮಾಡುವ ಯಾವುದಾದರೂ ಸ್ಕೀಮ್ ನಲ್ಲಿ ಹೂಡಿಕೆ ಮಾಡುತ್ತಿದ್ದೀರಾ ಎಂದರೆ 35 ವರ್ಷ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ಕಟ್ಟಿದ 10,000 ಹಣ ದುಡಿದು 14 ಕೋಟಿ ಹಣವಾಗಿರುತ್ತದೆ.
ಇದನ್ನು ಕಾಂಪೌಂಡ್ ಇಂಟರೆಸ್ಟ್ ಮ್ಯಾಜಿಕ್ ಎಂದು ಸಹ ಹೇಳಬಹುದು. ಈ ರೀತಿ ಹೂಡಿಕೆ ಮಾಡಲು ಎರಡು ವಿಧಾನಗಳಿವೆ ಅಂಚೆ ಕಚೇರಿಯ FD, NSC, PPF ಸಿಗುವ ಯೋಜನೆಗಳು ಮತ್ತು LIC ಯೋಜನೆಗಳು ಹಣಕ್ಕೆ ಭದ್ರತೆ ನೀಡಿ ಕಡಿಮೆ ಲಾಭ ಕೊಟ್ಟರೆ ಮ್ಯೂಚುವಲ್ ಫಂಡ್, ELSS ಶೇರ್ ಮಾರ್ಕೆಟ್ ಇವುಗಳು ಬಹಳ ಬೇಗವಾಗಿ ಲಾಭ ಕೊಡುತ್ತದೆ ಆದರೆ ರಿಸ್ಕ್ ಕೂಡ ಇರುತ್ತದೆ.
ಶೇರ್ ಮಾರ್ಕೆಟ್ ಮೇಲಿನ ಹೂಡಿಕೆ ಅನೇಕರ ಪಾಲಿಗೆ ಬೆಸ್ಟ್ ಎನಿಸುತ್ತದೆ. ಯಾಕೆಂದರೆ ಇಂದು ರೂ.100 ಮೌಲ್ಯದ ಶೇರ್ 10 ವರ್ಷದಲ್ಲಿ 10,000 ತೂಗಿದರು ಅನುಮಾನವಿಲ್ಲ, ಅದಕ್ಕಿಂತ ಹೆಚ್ಚಾದರೂ ಆಶ್ಚರ್ಯವಿಲ್ಲ. ಭದ್ರವಾಗಿ ನೆಲೆ ಗಟ್ಟಿ ಇರುವ ಕಂಪನಿಗಳ ಶೇರ್ ಖರೀದಿಸುವುದು ಕಾಂಪೌಂಡ್ ಇಂಟರೆಸ್ಟ್ ಬೆಸ್ಟ್ ಪಾರ್ಟ್ ಅಂತಲೂ ಹೇಳಬಹುದು.
ಈ ವಿಚಾರದ ಬಗ್ಗೆ ಡೀಟೇಲ್ ಆದ ಮಾಹಿತಿಯನ್ನು ಮತ್ತು ಯಾವ ರೀತಿ ಹೂಡಿಕೆ ಮಾಡುವುದು, ಯಾವುದು ಉತ್ತಮ, ಯಾವುದು ಹೆಚ್ಚು ಲಾಭ ಕೊಡುತ್ತದೆ ಎನ್ನುವ ಎಲ್ಲ ಮಾಹಿತಿಯನ್ನು ಭಾರತದಲ್ಲಿIND Money super money app ನೀಡುತ್ತಿದೆ. ಈ ವೆಬ್ ಸೈಟ್ಗೆ ಭೇಟೀ ಕೊಟ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ. ಇದರ ಬಗ್ಗೆ ಇನ್ನಷ್ಟು ವಿವರಣೆಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.