ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಪಡೆದುಕೊಳ್ಳಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದಿದೆ. ಈ ವರ್ಷವೂ ಕೂಡ ಅರ್ಹರಿಂದ ಉಜ್ವಲ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಸರ್ಕಾರ ವಿಧಿಸಿರುವ ಮಾನದಂಡಗಳನ್ನು ಪೂರೈಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* 18 ವರ್ಷ ತುಂಬಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.
* ಈಗಾಗಲೇ ಕುಟುಂಬ ಯಾವುದೇ LPG ಸಂಪರ್ಕ ಇರಬಾರದು.
* SC/ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟುಗಳು, ಅರಣ್ಯವಾಸಿಗಳು, ವಾಸಿಸುವ ಜನರು ದ್ವೀಪಗಳು ಮತ್ತು ನದಿ ದ್ವೀಪಗಳು, SECC ಕುಟುಂಬಗಳು (AHL TIN) ಮುಂತಾದ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯು ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಗುರುತಿನ ಪುರಾವೆ
* ವಿಳಾಸದ ಪುರಾವೆ
* ಆಧಾರ್ ಕಾರ್ಡ್
* ಪಡಿತರ ಚೀಟಿ (BPL / AAY)
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
* KYC
ಸಿಗುವ ಸೌಲಭ್ಯಗಳು:-
* ಉಚಿತವಾಗಿ ಗ್ಯಾಸ್ ಸ್ಟವ್, ಒಂದು ಸಿಲಿಂಡರ್, ರೆಗುಲೇಟರ್, ಒಂದು ಲೈಟರ್
* ಪ್ರತಿ ಗ್ಯಾಸ್ ಬುಕಿಂಗ್ ಆಗಿ ಸರ್ಕಾರದಿಂದ ಸಬ್ಸಿಡಿ ಹಣ
ಅರ್ಜಿ ಸಲ್ಲಿಸುವ ವಿಧಾನ:-
* ಗೂಗಲ್ ನಲ್ಲಿ LPG GAS free ಎಂದು ಸರ್ಚ್ ಮಾಡಿ
* PMUY – Home ಎಂದು ಇರುತ್ತದೆ ಇದು ಅಧಿಕೃತ ವೆಬ್ಸೈಟ್ ಲಿಂಕ್ ಆಗಿರುತ್ತದೆ, ಕ್ಲಿಕ್ ಮಾಡಿ
* ಮುಖಪುಟದಲ್ಲಿ Click here to apply for New Ujjwala 2.0 connection ಮೇಲೆ ಕ್ಲಿಕ್ ಮಾಡಿ
* ತಕ್ಷಣ ನಿಮಗೆ ಭಾರತದಲ್ಲಿ ಸಂಪರ್ಕ ನೀಡುವ ಕಂಪನಿಗಳಾದ Bharath, Indian, HP ಕಂಪನಿಗಳ ಆಪ್ಷನ್ ಕಾಣುತ್ತದೆ ನಿಮಗೆ ಯಾವ ಕಂಪನಿ ಕನೆಕ್ಷನ್ ಬೇಕು ಅದನ್ನು ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಿ.
* ಆಗ ನೀವು ಯಾವ ಕಂಪನಿ ಸೆಲೆಕ್ಟ್ ಮಾಡಿದ್ದಿರಾ ಅದರ ವೆಬ್ಸೈಟ್ ಓಪನ್ ಆಗುತ್ತದೆ.
* Type of Connection ಆಪ್ಷನ್ ನಲ್ಲಿ Regular LPG connection or Ujwala 2.0 New connection ಎನ್ನುವ ಆಯ್ಕೆಗಳು ಕಾಣುತ್ತದೆ ಅದರಲ್ಲಿ ಎರಡನೇ ಆಯ್ಕೆಯಾದ Ujjwala 2.0 New Connection ಎನ್ನುವುದನ್ನು ಸೆಲೆಕ್ಟ್ ಮಾಡಿ.
* ನೀಡಿರುವ terms and Conditions ಓದಿಕೊಂಡು Declaration check nox ನಲ್ಲಿ right mark click ಮಾಡಿ,
* ನಂತರ ನಿಮ್ಮ State and District ಸೆಲೆಕ್ಟ್ ಮಾಡಿ showlist ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಆಗ ನಿಮ್ಮ ಜಿಲ್ಲೆಯಲ್ಲಿ ಇರುವ ನೀವು ಆರಿಸಿದ ಎಲ್ಲಾ ಕಂಪನಿಯ ಏಜೆನ್ಸಿಗಳ ಲಿಸ್ಟ್ ಬರುತ್ತದೆ, ಅದರಲ್ಲಿ ನಿಮ್ಮ ಮನೆಗೆ ಸಮೀಪವಾಗಿರುವುದನ್ನು select ಮಾಡಿ, Continue ಮೇಲೆ click ಮಾಡಿ
* ಯಾರ ಹೆಸರಿನಲ್ಲಿ ಅಪ್ಲಿಕೇಶನ್ ಹಾಕುತ್ತಿದ್ದೀರಾ ಅವರ ಮೊಬೈಲ್ ಸಂಖ್ಯೆ ಹಾಕಿ, ಅಲ್ಲಿ ನೀಡಲಾಗಿರುವ ಕ್ಯಾಪ್ಚಾ ಕೋಡ್ ಕೂಡ ನಮೂದಿಸಿ Generate OTP ಮೇಲೆ ಕ್ಲಿಕ್ ಮಾಡಿ ಬಂದಿರುವ OTP Submit ಮಾಡಿ, Verify ಮಾಡಿ.
* Ujwala (2.0) KYC ಎನ್ನುವ ಪೇಜ್ ಓಪನ್ ಆಗುತ್ತದೆ ಅದರ ಕೆಳಗೆ ಇರುವ New KYC ಎನ್ನುವುದನ್ನು ಸೆಲೆಕ್ಟ್ ಮಾಡಿ Proceed ಕ್ಲಿಕ್ ಮಾಡಿ.
* ಮುಂದಿನ ಹಂತಗಳಲ್ಲಿ ಡಾಕ್ಯುಮೆಂಟ್ ಗಳನ್ನು ಕೇಳಲಾಗುತ್ತದೆ ನಿಮ್ಮ ಅಂತ್ಯೋದಯದ ಅಥವಾ BPL ರೇಷನ್ ಕಾರ್ಡ್ ಹಾಗೂ ಕೇಳಲಾಗುವ ಇನ್ನಿತರ ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ.