ಕಾಂಗ್ರೆಸ್ ಪಕ್ಷವು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿದೆ. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿ 10 ದಿನಗಳಾದರು ಚುನಾವಣೆ ಪ್ರಚಾರದ ವೇಳೆ ಹೇಳಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಇನ್ನು ಜಾರಿ ಮಾಡಿಲ್ಲ ಎನ್ನುವ ಗೊಂದಲದಲ್ಲಿ ಜನಸಾಮಾನ್ಯರಿದ್ದಾರೆ.
ಮೊದಲ ಕ್ಯಾಬಿನೆಟ್ ನಲ್ಲಿ ಕೊಟ್ಟ ಮಾತಿನಂತೆ ಈ ಗ್ಯಾರಂಟಿ ಕಾರ್ಡ್ ಯೋಜನೆಗಳು ಗ್ಯಾರೆಂಟಿಯಾಗಿ ಜಾರಿಗೆ ಬರುತ್ತದೆ ಎನ್ನುವುದಕ್ಕೆ ತಾತ್ವಿಕ ಆದೇಶ ಪತ್ರ ಹೊರಡಿಸಿದ್ದ ಮುಖ್ಯಮಂತ್ರಿಗಳು ಇದಕ್ಕೆ ಸಂಬಂಧಪಟ್ಟ ರೂಪುರೇಷೆಗಳು ಮಾರ್ಗಸೂಚಿಗಳು ಹಾಗೂ ನಿಯಮಗಳ ಬಗ್ಗೆ ಶೀಘ್ರದಲ್ಲಿ ಇನ್ನೊಂದು ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ನಡೆಸಿ ಪ್ರತ್ಯೇಕ ಆದೇಶಪತ್ರ ಹೊರಡಿಸಲಾಗುವುದು ಎಂದು ಸಮಯಾವಕಾಶ ಕೇಳಿದ್ದರು.
ಈಗ ಸರ್ಕಾರದ ಸಚಿವರಿಗೆಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಕುರಿತೇ ಪ್ರಶ್ನೆ ಎದುರಾಗುತ್ತಿದೆ. ಕೆಲ ಯೋಜನೆಗಳ ಬಗ್ಗೆ ಯಾರಿಗೆ ಸಹಾಯಧನ ತಲುಪಿಸಬೇಕು ಎನ್ನುವ ಗೊಂದಲ ಇದೆ ಎಂದು ಮಾತನಾಡಿದ್ದ ಸಿಎಂ ಮತ್ತು ಡಿ ಸಿಎಂ ಗೃಹಲಕ್ಷ್ಮಿ ಯೋಜನೆಯಲ್ಲಿಯೇ ಇದಕ್ಕೆ ಹೆಚ್ಚಾದ ಅಡೆತಡೆಗಳು ಇರುವುದಾಗಿ ಹೇಳಿದ್ದರು. ಯಾಕೆಂದರೆ ಕುಟುಂಬದ ಯಜಮಾನಿಗೆ 2000ರೂ. ಸಹಾಯಧನ ಎಂದು ಹೇಳಿದ್ದರಿಂದ.
ಕೆಲವು ಕುಟುಂಬಗಳಲ್ಲಿ ಒಂದೇ BPL ಕಾರ್ಡ್ ನಲ್ಲಿ ಅತ್ತೆ, ಸೊಸೆ ಇಬ್ಬರೂ ಇರುವುದರಿಂದ ಈ ಸಹಾಯಧನ ಯಾರಿಗೆ ಬರುತ್ತದೆ ಎಂದು ಜನಸಾಮಾನ್ಯರು ಕೂಡ ಕೇಳುತ್ತಿದ್ದರು. ಈಗ ಈ ಬಗ್ಗೆ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮೀಡಿಯಾದವರು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಇತ್ತು. ಮೊದಲಿಗೆ ಎಲ್ಲಾ ಗ್ಯಾರೆಂಟಿ ಕಾರ್ಡ್ ಯೋಚನೆಗಳನ್ನು ಕೂಡ ನಮ್ಮ ಸರ್ಕಾರ ಗ್ಯಾರಂಟಿಗಾಗಿ ಜಾರಿಗೆ ತರುತ್ತದೆ ಇದು ಬಹಳ ಸ್ಪಷ್ಟ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಮಾತನಾಡಿ ಸರ್ಕಾರದ ಯಾವುದೇ ಯೋಜನೆ ಆದರು ಕೂಡ ಅದಕ್ಕೆ ಮಾನದಂಡ ಇರಬೇಕು ಇಲ್ಲವಾದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ ಹಾಗಾಗಿ ಸರ್ಕಾರ ಮತ್ತೊಂದು ಆದೇಶ ಪತ್ರದಲ್ಲಿ ಇದಕ್ಕಿರುವ ಕಂಡೀಶನ್ಗಳ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ ಅಲ್ಲಿಗೆವರೆಗೂ ಕಾಯಬೇಕು ಎಂದು ಹೇಳಿದ್ದಾರೆ.
ಇವರ ಜೊತೆಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಚಿವರನ್ನು ಹಾಗೂ ಗ್ಯಾರಂಟಿ ಕಾರ್ಡ್ ಯೋಜನೆಗಳು ಜಾರಿಗೆ ಬರುವುದಕ್ಕೆ ಸಹಾಯ ಬೇಕಾದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕೂಡ ಇದರ ಬಗ್ಗೆ ಚರ್ಚೆ ಮಾಡಲು ಸಭೆ ಕರೆದಿದ್ದಾರೆ. ಈಗಾಗಲೇ ಎಲ್ಲ ಯೋಜನೆಗಳಿಗೂ ಕೂಡ ಏನೇನು ಅರ್ಹತೆ ಮಾನದಂಡಗಳು ಇರಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿ ರೆಡಿಯಾಗುತ್ತಿತ್ತು ಜೂನ್ 1ನೇ ತಾರೀಕು ಇದರ ಅನೌನ್ಸ್ಮೆಂಟ್ ಆಗಲಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಯಾರು ಎನ್ನುವ ಗೊಂದಲದ ಬಗ್ಗೆ ಸುಳಿವು ಕೊಟ್ಟ ಅವರು ನಮ್ಮ ಸಂಸ್ಕೃತಿಯ ಪ್ರಕಾರ ಕುಟುಂಬದ ಯಜಮಾನಿ ಅತ್ತೆಯೇ ಆಗಿರುತ್ತಾರೆ. ಹಾಗಾಗಿ ಅತ್ತೆಗೆ ಈ ಸಹಾಯಧನ ಹೋಗಬೇಕು ಎಂದು ಗುರುತಿಸುತ್ತೇವೆ. ಒಂದು ವೇಳೆ ಅತ್ತೆ ಪ್ರೀತಿಯಿಂದ ಅದನ್ನು ಸೊಸೆ ಮನೆ ನಿರ್ವಹಿಸುತ್ತಾಳೆ ಎಂದು ಬಿಟ್ಟು ಕೊಡುವುದಾದರೆ ಆಕ್ಷೇಪಣೆಗಳಿರುವುದಿಲ್ಲ. ನಮ್ಮ ಕುಟುಂಬ ವ್ಯವಸ್ಥೆಯ ಪ್ರಕಾರದಲ್ಲಿ ಇದನ್ನು ನಿರ್ಧಾರ ಮಾಡಿದ್ದೇವೆ ಅದು ಕೂಡ 1ನೇ ತಾರೀಕಿನಂದು ಹೊರಬೀಳುವ ಆದೇಶ ಪತ್ರದಲ್ಲಿ ಹೇಗೆ ಏನು ಎಂಬುದನ್ನು ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ.