ಕರ್ನಾಟಕದ ಎಲ್ಲಾ ಜನತೆಯು ಕೂಡ ಈಗ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 5 ಗ್ಯಾರೆಂಟಿ ಯೋಜನೆಗಳು ಅನುಷ್ಟಾನವಾಗುವುದನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಜೊತೆ ಚರ್ಚಿಸಿ, ತಾತ್ವಿಕ ಅನುಮೋದನೆ ನೀಡಿರುವ ಬಗ್ಗೆ ಆದೇಶ ಪತ್ರ ಹೊರಡಿಸಿದ್ದರು.
ನಂತರ ಮತ್ತೊಂದು ಪ್ರತ್ಯೇಕ ಆದೇಶ ಪತ್ರವನ್ನು ಹೊರಡಿಸಿ ಅದರಲ್ಲಿ ಈ ಗ್ಯಾರಂಟಿ ಕಾರ್ಡ್ ಯೋಚನೆಗಳಿಗೆ ಇರುವ ಮಾರ್ಗಸೂಚಿಗಳನ್ನು ತಿಳಿಸುವುದಾಗಿ ಹೇಳಿದ್ದರು. ಈಗ ಮತ್ತೊಂದು ಕ್ಯಾಬಿನೆಟ್ ಮೀಟಿಂಗ್ ಜೂನ್ 1ರಂದು ನಡೆಯುವ ಸಾಧ್ಯತೆ ಇದ್ದು, ಕಳೆದ 10 ದಿನಗಳಲ್ಲೂ ಕೂಡ ಈ ಗ್ಯಾರಂಟಿ ಕಾರ್ಡ್ ಯೋಜನೆ ಜಾರಿಗೆ ಬಗ್ಗೆ ಇರುವ ಸಾಧಕ ಭಾದಕಗಳನ್ನು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.
ಕರ್ನಾಟಕದ ಜನತೆಯು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ಈ ಎಲ್ಲ ಯೋಜನೆಗಳು ಘೋಷಣೆಯೇ ಆಗಿ ಹೋಗಿವೆ ಎನ್ನುವಷ್ಟು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರು ಮತ್ತು ವಿದ್ಯುತ್ ಬಿಲ್ ಕೇಳಲು ಬರುವ ಪ್ರತಿನಿಧಿಗಳ ಜೊತೆ ಗ್ರಾಮಸ್ಥರು ಗಲಾಟೆ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ.
ಅಂತಿಮವಾಗಿ ಎಲ್ಲ ಗೊಂದಲಗಳಿಗೂ ಕೂಡ ಜೂನ್ 1 ರಂದು ಸ್ಪಷ್ಟತೆ ಸಿಗಲಿದೆ. ಅಲ್ಲಲ್ಲಿ ಮಾಧ್ಯಮಗಳಿಗೆ ಕಾಣಿಸಿಕೊಂಡ ಮಿನಿಸ್ಟರ್ ಗಳನ್ನು ಕೂಡ ಈ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತಿದೆ. ಸದ್ಯಕ್ಕೆ ಶಕ್ತಿ ಯೋಜನೆ ಅಡಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಬಸ್ ವ್ಯವಸ್ಥೆಯನ್ನು ನೀಡುವುದಾಗಿ ಚುನಾವಣೆ ವೇದಿಕೆಗಳಲ್ಲಿ ಘೋಷಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಈ ಯೋಜನೆ ಜಾರಿ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಬಹಿರಂಗವಾಗಿ ಮಾತನಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮೇ 29ರಂದು ಕರ್ನಾಟಕದ ಸಾರಿಗೆ ಸಂಸ್ಥೆಗಳಾದ KSPTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆಯೊಂದನ್ನು ಏರ್ಪಡಿಸಿ ಪಾಲ್ಗೊಂಡಿದ್ದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಶಕ್ತಿ ಯೋಜನೆ ಯಡಿ ಉಚಿತವಾಗಿ ಮಹಿಳೆಯರಿಗೆ ಬಸ್ ಕೊಡುವ ಬಗ್ಗೆ ಚರ್ಚೆ ನಡೆಸಿದ್ದಾರಂತೆ.
ಇದಾದ ಬಳಿಕ ಮಾಧ್ಯಮಗಳ ಮಾತನಾಡಿದ್ದ ರಾಮಲಿಂಗ ರೆಡ್ಡಿ ಅವರು ನಾವು ಪ್ರಣಾಳಿಕೆಯಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಎಂದು ಹೇಳಿದ್ದೆವು ಈಗ ಅದೇ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. APL, BPL ಇನ್ಯಾವುದೇ ಮಾನದಂಡಗಳನ್ನು ಆಗ ಹೇಳಿರಲಿಲ್ಲ ಹಾಗಾಗಿ ಖಡಾಖಂಡಿತವಾಗಿ ಯಾವುದೇ ಕಂಡಿಷನ್ ಗಳು ಇಲ್ಲದೆ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತ ಬಸ್ ಅನುಕೂಲತೆ ಸಿಗಲಿದೆ ಎಂದು ಸುಳಿವು ನೀಡಿದ್ದಾರೆ.
ಕಳೆದ ಹತ್ತು ದಿನಗಳಿಂದಲೂ ಕೂಡ ಉಚಿತ ಬಸ್ ಪಾಸ್ ವ್ಯವಸ್ಥೆ ಬಗ್ಗೆ ಸಾಕಷ್ಟು ಗೊಂದಲಗಳು ಏರ್ಪಟ್ಟು ಅದಕ್ಕಾಗಿ ವೆಬ್ಸೈಟ್ ತೆರೆಯುತ್ತಾರೆ ಉಚಿತ ಪಾಸ್ ಕೊಡಲು ಕೆಲವೊಂದು ಕಂಡೀಶನ್ ಗಳನ್ನು ಹಾಕುತ್ತಾರೆ ಎನ್ನುವ ಗಾಳಿ ಸುದ್ದಿಗಳು ಹರಿದಾಡಿದ್ದವು. ಈಗ ಸ್ವತಃ ರಾಮಲಿಂಗ ರೆಡ್ಡಿಯವರೇ ಇಂಥದೊಂದು ಭರವಸೆಯನ್ನು ಕರ್ನಾಟಕದ ಮಹಿಳೆಯರಿಗೆ ನೀಡಿದ್ದಾರೆ.
ಇದರೊಂದಿಗೆ ಜೂನ್ 1 ರವರೆಗೂ ಕೂಡ ಕಾಯಿರಿ, ನಾವು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಿಎಂ ಹೇಳಿದಂತೆ ಎಷ್ಟು ಖರ್ಚಾಗಬಹುದು, ಎಷ್ಟು ಮಹಿಳೆಯರು ಪ್ರತಿದಿನ ಪ್ರಯಾಣಿಸುತ್ತಾರೆ ಎಂಬೆಲ್ಲಾ ವರದಿಯನ್ನು ಸಿಎಂಗೆ ಕೊಟ್ಟಿದ್ದೇವೆ. ಜೂನ್ 1 ರಂದು ಅವರೇ ಈ ಯೋಜನೆಯನ್ನು ಘೋಷಣೆ ಮಾಡುತ್ತಾರೆ ಎಂದಿದ್ದಾರೆ.
https://youtu.be/FUsuc6Oihwo