ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಬಂಪರ್ ನ್ಯೂಸ್. ಅದೇನೆಂದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು 2000 ರುಪಾಯಿ ಸಹಾಯಧನವನ್ನು ಗೃಹಲಕ್ಷ್ಮಿ ಯೋಜನೆ ಅಡಿ ನೀಡುತ್ತೇವೆ ಎಂದು ಚುನಾವಣೆ ವೇಳೆ ಪ್ರಚಾರ ಮಾಡಿತ್ತು. ಇದರೊಂದಿಗೆ ಇನ್ನು ನಾಲ್ಕು ಗ್ಯಾರಂಟಿ ಯೋಜನೆಗಳ ಗ್ಯಾರಂಟಿ ಕಾರ್ಡ್ ಕೊಟ್ಟು ಅಂತಿಮವಾಗಿ ಕಾಂಗ್ರೆಸ್ ಪಕ್ಷ ಜನರ ಮತಸೆಳೆಯುವಲ್ಲಿ ಯಶಸ್ವಿ ಆಯಿತು.
ಈಗ ಸ್ಪಷ್ಟ ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಕಡೆಯಿಂದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ ಅಂದೇ ಜನತೆಗೆ ತಮ್ಮ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ಪ್ರಚಾರದ ವೇಳೆ ತಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್ ಅಲ್ಲಿಯೇ ಈ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಆದೇಶ ಹೊರಡಿಸುತ್ತೇವೆ ಎಂದು ಹೇಳಿತ್ತು.
ಈಗ ನುಡಿದಂತೆ ನಡೆಯಲು ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ದಿನವೇ ಸಚಿವರನ್ನು ಆರಿಸಿ ಅವರ ಜೊತೆ ಮೊದಲ ಸುತ್ತಿನ ಮಾತುಕತೆಯನ್ನು ನಡೆಸಿ ಈ ಐದು ಗ್ಯಾರಂಟಿಗಳಿಗೆ ತಾತ್ವಿಕ ಆದೇಶವನ್ನು ನೀಡಿ ಆದೇಶ ಪತ್ರವನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಕೂಡ ಹಂಚಿಕೊಂಡಿದ್ದಾರೆ. ಈ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದರೆ ಕರ್ನಾಟಕದ ಜನತೆಗೆ ಬಹಳ ಅನುಕೂಲತೆ ಆಗಲಿದೆ.
ಸದ್ಯಕ್ಕೀಗ ಕರ್ನಾಟಕದ ಮಹಿಳೆಯರ ಪಾಲಿಗೆ ಗೃಹಲಕ್ಷ್ಮಿ ಯೋಜನೆಯು ವರದಾನವಾಗಿದೆ. ಮೊದಲ ಗ್ಯಾರಂಟಿ ಆಗಿ ಗೃಹಲಕ್ಷ್ಮಿ ಯೋಜನೆಯೇ ಮೊದಲು ಜಾರಿಗೆ ಬರುವ ಸಾಧ್ಯತೆ ಇದೆ. ಮನೆಯ ಯಜಮಾನಿಗೆ ಮನೆ ನಿರ್ವಹಣೆಗಾಗಿ 2000 ರೂಗಳನ್ನು ಕರ್ನಾಟಕದ ಎಲ್ಲಾ ಕುಟುಂಬಗಳ ಒಡತಿಗೂ ನೀಡುವುದಾಗಿ ಕಾಂಗ್ರೆಸ್ ಪಕ್ಷವು ಹೇಳಿತ್ತು ಗೃಹಲಕ್ಷ್ಮಿ ಯೋಜನೆ ಎನ್ನುವ ಹೆಸರನ್ನು ಕೂಡ ಇಟ್ಟಿತ್ತು.
ಬಲವಾದ ಮೂಲಗಳ ಪ್ರಕಾರ ಈಗ ಕುಟುಂಬದ ಒಡತಿಯನ್ನು ರೇಷನ್ ಕಾರ್ಡ್ ಮೂಲಕ ಗುರುತಿಸಿ ಅವರ ಖಾತೆಗೆ 2,000 ರೂಗಳನ್ನು DBT ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾಕೆಂದರೆ ಈಗಾಗಲೇ ಎಲ್ಲಾ ಪಡಿತರ ಚೀಟಿಗಳಿಗೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಅದೇ ಆಧಾರದ ಮೇಲೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ಸುಲಭವಾಗಿ ಹಣ ಜಮೆ ಮಾಡಬಹುದಾದ ಕಾರಣ ಕುಟುಂಬದ ಒಡತಿಯನ್ನು ಗುರುತಿಸುವುದು ಹಾಗೂ ಹಣ ವರ್ಗಾವಣೆ ಮಾಡುವ ಎರಡು ಕೆಲಸಗಳು ಸರಳವಾಗಲಿದೆ.
ಇದಕ್ಕಾಗಿ ಮತ್ತೊಮ್ಮೆ ಅರ್ಜಿ ಆಹ್ವಾನಿಸುವ ಅವಶ್ಯಕತೆ ಇರುವುದಿಲ್ಲ. ಇದೇ ಮಾನದಂಡವನ್ನು ಸರ್ಕಾರ ಉಪಯೋಗಿಸಲಿದೆ ಎನ್ನುವ ಮಾತುಕತೆ ಎಲ್ಲೆಡೆ ಜೋರಾಗಿದೆ. ಬಡ ಕುಟುಂಬಗಳ ಯಜಮಾನಿಗೆ ಮಾತ್ರ ಈ ಯೋಜನೆ ಫಲಾನುಭವಿಗಳಾಗುವ ಅರ್ಹತೆ ಇರುವುದರಿಂದ BPL ಮತ್ತು AAY ಕಾರ್ಡ್ ಹೊಂದಿರುವ ಕುಟುಂಬದ ಒಡತಿಗಷ್ಟೇ ಈ ಯೋಜನೆಯ ಫಲಾನುಭವಿಯಾಗಲು ಅವಕಾಶ ಇರುತ್ತದೆ.
ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮುಂದಿನ ವಾರದಲ್ಲೇ ಮತ್ತೊಮ್ಮೆ ಕ್ಯಾಬಿನೆಟ್ ಮೀಟಿಂಗ್ ಕರೆದು ಯೋಜನೆಗಳಿಗೆ ಇರುವ ಮಾರ್ಗಸೂಚಿ ಮತ್ತು ರೂಪುರೇಷೆಗಳ ಬಗ್ಗೆ ಸ್ಪಷ್ಟ ಚಿತ್ರಣ ಕೊಡಲಿದ್ದೇವೆ ಎನ್ನುವುದನ್ನು ಹೇಳಿರುವುದರಿಂದ ಈ ವಾರದಲ್ಲಿಯೇ ಈ ಎಲ್ಲಾ ಗೊಂದಲಗಳಿಗೂ ಪರಿಹಾರ ಸಿಗಲಿದೆ. ಸರ್ಕಾರ ರೇಷನ್ ಕಾರ್ಡ್ ಮೂಲಕವೇ ಈ ರೀತಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲಿದೆಯೋ ಅಥವಾ ಅದಕ್ಕಾಗಿ ಪ್ರತ್ಯೇಕ ಅರ್ಜಿ ಆಹ್ವಾನಿಸಲಿದೆಯೋ ಎನ್ನುವುದು ಸ್ಪಷ್ಟವಾಗಲಿದೆ.