Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೈ ಕಾಲು ಜೋಮು ಹಿಡಿಯುವುದು, ಕೈ ಕಾಲು ನರಗಳ ಸೆಳೆತ ಇದರಿಂದ ವಿಪರೀತವಾದ ನೋವು, ಕೈ ಕಾಲುಗಳು ಮರಗಟ್ಟುವುದು, ಶಕ್ತಿ ಕಳೆದುಕೊಳ್ಳುವುದು ಇದೆಲ್ಲದರಿಂದ ಕೂಡ ನರದೌರ್ಬಲ್ಯ ಉಂಟಾಗುತ್ತದೆ. ನರದೌರ್ಬಲ್ಯ ಉಂಟಾಗಲು ಪ್ರಮುಖ ಕಾರಣ ಏನೆಂದರೆ, ಅಜೀರ್ಣ ಮಲಬದ್ಧತೆ ಹಾಗೂ ಇನ್ನಿತರ ವಿಕಾರಗಳು. ದೇಹದಲ್ಲಿ ವಾತ ಪಿತ್ತ ಮತ್ತು ಕಫ ಮುಂತಾದ ದೋಷಗಳಿಂದ ಇವುಗಳು ಉಂಟಾಗುತ್ತದೆ.
ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣ ಆಗದೆ ಅದರ ಮೂಲಕ ಉಂಟಾಗುವ ಆಮಗಳು ಇದೆಲ್ಲದಕ್ಕೂ ಕೂಡ ಕಾರಣವಾಗಿದೆ. ಈಗ ನಾವು ಅತಿಯಾದ ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳ ಸೇವನೆ ರೂಢಿಸಿಕೊಂಡಿದ್ದೇವೆ. ಇವುಗಳಲ್ಲಿ ವಿಟಮಿನ್ ಗಳು, ನ್ಯೂಟ್ರಿಯೆಂಟ್ ಗಳು ಬಹಳ ಕಡಿಮೆ ಇರುತ್ತದೆ. ಈ ರೀತಿ ತಿಂದ ಆಹಾರವು ಕೂಡ ಸರಿಯಾಗಿ ಜೀರ್ಣ ಆಗದ ರೀತಿ ನಾವು ತಪ್ಪಾದ ಜೀವನ ಶೈಲಿ ಅಳವಡಿಸಿಕೊಂಡಿದ್ದೇವೆ.
ಆ ಕಾರಣದಿಂದಾಗಿ ಇನ್ನಷ್ಟು ದೇಹ ದುರ್ಬಲವಾಗುತ್ತಿದೆ. ಅಂತಿಮವಾಗಿ ನಾವು ಈ ರೀತಿ ನಡೆದಾಡುವುದಕ್ಕೆ ಕಷ್ಟವಾಗಿ ಈ ಮೇಲೆ ತಿಳಿಸಿದ ಎಲ್ಲ ನೋ’ವನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೂ ಕೂಡ ಇದರಲ್ಲಿಯೇ ಇದೆ. ನಾವು ಆದಷ್ಟು ದೇಹಕ್ಕೆ ಪೂರಕವಾದ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು,
ಅವೈಜ್ಞಾನಿಕವಾಗಿ ತಯಾರಾದ ಆಹಾರಗಳನ್ನು ಸೇವಿಸಿ ದೇಹವನ್ನು ಕೆಡಿಸಿಕೊಳ್ಳಬಾರದು, ಬಹಳ ಲೇಟಾಗಿ ಮಲಗೋದು ಲೇಟಾಗಿ ಏಳುವುದು ಕೂಡ ದೇಹದಲ್ಲಿ ಅನೇಕ ದೋಷಗಳಿಗೆ ಕಾರಣವಾಗುತ್ತದೆ ಹೀಗಾಗಿ ನಿದ್ರೆಯಲ್ಲಿ ಶಿಸ್ತು ಆಹಾರದಲ್ಲಿ ಶಿಸ್ತು ರೂಢಿಸಿಕೊಂಡು ಉತ್ತಮ ಜೀವನಶೈಲಿಯಲ್ಲಿ ರೂಢಿಸಿಕೊಳ್ಳಬೇಕು.
ವ್ಯಾಯಾಮ ಮಾಡುವುದು, ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಕೂಡ ಒಂದು ಚಿಕಿತ್ಸೆಯೇ ಆದರೆ ಇಂದು ನಾವು ಸೂರ್ಯನಿಗೆ ಮುಖ ತೋರಿಸುತ್ತಿಲ್ಲ ಇನ್ನು ವ್ಯಾಯಾಮ ಯೋಗ ಇಂತಹ ಅಭ್ಯಾಸಗಳನ್ನು ಮಾಡಲು ಸಮಯವಿಲ್ಲ ಎಂದು ನೆಪ ಹೇಳುತ್ತೇವೆ.
ಆದಷ್ಟು ಬೆಳಗಿನ ಜಾವದಲ್ಲಿ ಸೂರ್ಯನ ಬೆಳಕಿನಲ್ಲಿ ಅಥವಾ ಸಂಜೆ ಸೂರ್ಯನ ಎಳೆ ಬಿಸಿಲು ದೇಹದ ಮೇಲೆ ಬೀಳುವಂತೆ ಓಡಾಡುವುದರಿಂದ ಆ ಸಮಯದಲ್ಲಿ ಹುಲ್ಲು ಹಾಸಿಗೆ ಮೇಲೆ ಅಥವಾ ಮರಳಿನ ಮೇಲೆ ಬರಿ ಕಾಲಿನಲ್ಲಿ ನಡೆಯುವುದು ಈ ರೀತಿ ಅಭ್ಯಾಸ ಮಾಡಿದಾಗ ನರಗಳು ಕ್ರಿಯಾಶೀಲಗೊಳ್ಳುತ್ತವೆ, ಆ ಮೂಲಕ ದೇಹಕ್ಕೆ ಶಕ್ತಿ ಬರುತ್ತದೆ.
ರಕ್ತ ಸಂಚಾರದಲ್ಲಿ ಉಂಟಾಗಿದ್ದ ತೊಂದರೆಗಳು ನಿವಾರಣೆ ಆಗುವುದರಿಂದ ನಿಧಾನವಾಗಿ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ. ಹಾಗಾಗಿ ತಪ್ಪದೆ ಇವುಗಳನ್ನು ಪಾಲಿಸಿ ಇದರ ಜೊತೆಗೆ ಎಲ್ಲ ರೀತಿಯ ಜೀವಸತ್ವಗಳು ಪೋಷಕಾಂಶಗಳು ಸಿಗುವಂತಹ ಆಹಾರವನ್ನು ಸೇವಿಸಿ ಆಲ್ಕೋಹಾಲ್ ಕಾಫಿ ಚಹಾ ಮುಂತಾದ ದುರಭ್ಯಾಸಗಳನ್ನು ಬಿಟ್ಟುಬಿಡಿ. ಹಾಗೆಯೇ ವಾರಕ್ಕೊಮ್ಮೆಯಾದರೂ ಎಣ್ಣೆ ಮಸಾಜ್ ಮಾಡಿ ಅಭ್ಯಂಜನ ಸ್ನಾನ ಮಾಡಿ ಇದು ಕೂಡ ನರಗಳ ಕ್ರಿಯಾಶಕ್ತಿಯನ್ನು ಹೆಚ್ಚಿಸುತ್ತದೆ.
ಆ ಮೂಲಕ ಬ್ಲಾಕೆಜ್ ಗಳು ಆಗಿದ್ದರೆ ಮತ್ತು ನರಗಳ ದುರ್ಬಲತೆ ಇದ್ದರೆ ಸರಿಪಡಿಸುತ್ತದೆ ಅಶ್ವಗಂಧ ಹಾಗೂ ಶತಾವರಿ ಬೇರು ಆಯುರ್ವೇದಿಕ್ ಅಂಗಡಿಗಳಲ್ಲಿ ಅಥವಾ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ. ಇವುಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಎರಡು ಲೋಟ ಹಾಲಿಗೆ ಒಂದು ಚಮಚ ಈ ಪುಡಿ ಹಾಕಿ ಆ ಹಾಲು ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿ ಶೋಧಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ 6:00 ಕ್ಕೆ ಅಥವಾ ರಾತ್ರಿ ಊಟ ಆದ ಮೇಲೆ ಕುಡಿಯುವುದರಿಂದ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ.