ಅನ್ನ ಭಾಗ್ಯ ಯೋಜನೆಯಡಿ 10Kg ಪಡಿತರ ನೀಡುವುದಾಗಿ ಹೇಳಿದ ಸರ್ಕಾರ ದಾಸ್ತಾನು ಲಭ್ಯವಾಗದ ಕಾರಣ ಎಂದಿನಂತೆ ಒಬ್ಬ ಸದಸ್ಯನಿಗೆ 5Kg ಅಕ್ಕಿ ಹಾಗೂ 170ರೂ ಹಣ ನೀಡಲು ನಿರ್ಧಾರ ಮಾಡಿದೆ. ಸಚಿವ ಸಂಪುಟ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡ ಬಳಿಕ ಈ ಕಾರ್ಯಕ್ಕೆ ಜುಲೈ 10ರಂದು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಸೋಮವಾರದಿಂದ ಚಾಲನೆ ನೀಡಿದ್ದಾರೆ.
ಒಂದು ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಅವರೆಲ್ಲರ ಒಟ್ಟು ಮೊತ್ತದ ಹಣ DBT ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಆಗಲಿದೆ. ನಿಮ್ಮ ಕುಟುಂಬದಲ್ಲಿ ಇಬ್ಬರು ಸದಸ್ಯರಿದ್ದರೆ ನಿಮಗೆ ಈ ಜುಲೈ ತಿಂಗಳಲ್ಲಿ ನಿಮ್ಮ ಕುಟುಂಬಕ್ಕೆ 10Kg ಉಚಿತ ಪಡಿತರ ಹಾಗೂ ಕುಟುಂಬದ ಮುಖ್ಯಸ್ಥರ ಖಾತೆಗೆ 340ರೂ ಹಣ ವರ್ಗಾವಣೆ ಆಗಲಿದೆ. ಮೂರು ಜನ ಸದಸ್ಯರಿದ್ದರೆ 15 ಕೆಜಿ ಪಡಿತರ ಹಾಗೂ ಕುಟುಂಬದ ಮುಖ್ಯಸ್ಥರ ಖಾತೆಗೆ 510ರೂ. ಹಣ ವರ್ಗಾವಣೆ ಆಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬದವರಿಗೂ ಕೂಡ ಈ ಪ್ರಯೋಜನ ಸಿಗಲಿದೆ. ಸೋಮವಾರ ಪಾಯೋಗಿಕವಾಗಿ ಮೈಸೂರು ಮತ್ತು ಕೋಲಾರ ಜಿಲ್ಲೆಯ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಯಿತು. ಹಂತ ಹಂತವಾಗಿ ಎಲ್ಲಾ ಜಿಲ್ಲೆಯವರೆಗೂ ಕೂಡ ಸರ್ಕಾರ ಹಣ ವರ್ಗಾವಣೆ ಮಾಡುವುದಾಗಿ ಹೇಳಿದೆ.
ಇದಕ್ಕಾಗಿ ಸರ್ಕಾರ ಯಾವುದೇ ಅರ್ಜಿ ಆಹ್ವಾನ ಮಾಡಿಲ್ಲ, ಬದಲಾಗಿ ಪಡಿತರ ಚೀಟಿಯಲ್ಲಿ ಮೊದಲ ಪುಟದಲ್ಲಿ ಇರುವವರನ್ನೇ ಕುಟುಂಬದ ಮುಖ್ಯಸ್ಥ ಎಂದು ಪರಿಗಣಿಸಿ ಈಗಾಗಲೇ ಅವರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವುದರಿಂದ, KYC ಅಪ್ಡೆಟ್ ಆಗಿರುವುದರಿಂದ ಆ ಫಲಾನುಭವಿಗಳ ಆಧಾರ್ ಸಂಖ್ಯೆ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿ NPCI ಮ್ಯಾಚಿಂಗ್ ಆಗಿದೆಯೋ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ.
ನೀವು ಇದರ ಫಲಾನುಭವಿಗಳಾಗಿದ್ದೀರಿ ಎಂದು ಆಹಾರ ಇಲಾಖೆಯ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ತಿಳಿದುಕೊಳ್ಳಬಹುದು. ಹಾಗೆ ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ ಫಲಾನುಭವಿಗಳಾಗಿದ್ದಾರೆ ಎನ್ನುವ ಪಟ್ಟಿಯನ್ನು ಕೂಡ ಪಡೆದುಕೊಳ್ಳಬಹುದು.
ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿಯನ್ನು ಪಡೆದುಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:-
● ಮೊದಲಿಗೆ https://ahara.kar.nic.in/Home/Eservices ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
● ಆಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಎಡಭಾಗದ ಮೇಲಿರುವ ಮೂರು ಅಡ್ಡ ಗೆರೆಗಳ ಮೇಲೆ ಕ್ಲಿಕ್ ಮಾಡಿ.
ಹಲವರು ಆಪ್ಷನ್ ಗಳು ಇರುತ್ತವೆ ಅದರಲ್ಲಿ e-ration card ಆಪ್ಷನ್ ಕ್ಲಿಕ್ ಮಾಡಿ.
● ನಂತರ ಶೋ ವಿಲೇಜ್ ಲಿಸ್ಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
● ವಿಲೇಜ್ ಲಿಸ್ಟ್ ಎಂದು ಸ್ಕ್ರೀನ್ ಮೇಲೆ ಬರುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಇವುಗಳನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಇದೆಲ್ಲ ಸೆಲೆಕ್ಟ್ ಆದ ಮೇಲೆ Go ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಇಷ್ಟಾದ ಮೇಲೆ ಒಂದು ಪಟ್ಟಿಯ ಬರುತ್ತದೆ ಅದರಲ್ಲಿ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಂಬರ್, ಹೆಸರು,ವಿಳಾಸ,ಕಾರ್ಡ್ ನ ವಿಧ ಹಾಗೂ ಕುಟುಂಬದ ಸದಸ್ಯರ ಸಂಖ್ಯೆ ತೋರಿಸುತ್ತದೆ.
● ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಅಥವಾ ನಿಮ್ಮ ಕಾರ್ಡ್ ನ RC ನಂಬರ್ ಹಾಕಿ ಚೆಕ್ ಮಾಡುವುದರಿಂದ ನೀವು ಈ ಅನ್ನಭಾಗ್ಯ ಯೋಜನೆಯ ಹಣ ಪಡೆಯಲು ಅರ್ಹರಾಗಿದ್ದೀರೆಯೇ ಎಂದು ತಿಳಿದುಕೊಳ್ಳಬಹುದು.