ದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಕಲ್ಪಿಸಬೇಕು ಎನ್ನುವುದು ಸರ್ಕಾರಗಳ ಉದ್ದೇಶ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಇನ್ನು ಮಂತಾದ ಯೋಜನೆಗಳನ್ನು ರೂಪಿಸುವ ಮೂಲಕ ಈ ರೀತಿ ಬಡಸಾಮಾನ್ಯರು ಮತ್ತು ನಿರ್ಗತಿಗಳು ಕೂಡ ಸ್ವಂತ ಮನೆಗಳಲ್ಲಿ ವಾಸಿಸುವಂತೆ ಆಗಬೇಕು ಎಂದು ನೆರವಾಗುತ್ತಿದ್ದಾರೆ.
ಈಗ ರಾಜ್ಯದಲ್ಲಿರುವ ಸ್ವಂತ ಮನೆ ಹೊಂದುವ ಕನಸು ಇರುವವರು ರಾಜೀವ್ ಗಾಂಧಿ ವಸತಿ ಯೋಜನೆ ಉಪಯೋಗವನ್ನು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರದ ವಸತಿ ನಿಗಮ ನಿಯಮಿತದ ಸಹಯೋಗದೊಂದಿಗೆ ನನ್ನ ಮನೆ ವಸತಿ ಯೋಜನೆ ಎನ್ನುವ ಹೊಸ ಯೋಜನೆಯನ್ನು ನೂತನ ಸರ್ಕಾರ ಆರಂಭಿಸಿ ವಸತಿ ಘಟಕಗಳನ್ನು ನಿರ್ಮಿಸಿ ಹಂಚುತ್ತಿದೆ.
ಈ ಬಾರಿ ಬೆಂಗಳೂರಿನಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಹಂಚುತ್ತಿರುವುದರಿಂದ ಬೆಂಗಳೂರಿನಲ್ಲಿ ವಾಸವಿರುವ ಸ್ವಂತ ಮನೆ ಇಲ್ಲದವರು ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ರೀತಿ ವಸತಿ ಸಮುಚ್ಛಯಗಳನ್ನು ಪಡೆಯಲು ನೋಂದಣಿ ಮಾಡಿಕೊಳ್ಳುವವರು ರಾಜೀವ್ ಗಾಂಧಿ ವಸತಿ ಯೋಜನೆಯಗೆ ಅರ್ಜಿ ಸಲ್ಲಿಸಿ ನೀವು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಅಂತಿಮ ಗಡುವು. ಹಾಗಾಗಿ ಫಲಾನುಭವಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಅರ್ಜಿದಾರರ ಆಧಾರ್ ಕಾರ್ಡ್.
● ಅರ್ಜಿದಾರರ ಜಾತಿ ಪ್ರಮಾಣ ಪತ್ರ.
● ಕುಟುಂಬದ ಪಡಿತರ ಚೀಟಿ.
● ಕುಟುಂಬದ ಆದಾಯ ಪ್ರಮಾಣ ಪತ್ರ.
● ಬೆಂಗಳೂರು ನಗರ ಜಿಲ್ಲೆ, ವ್ಯಾಪ್ತಿಯಲ್ಲಿ ಕನಿಷ್ಠ 1 ವರ್ಷಕ್ಕಿಂತ ಮೇಲ್ಮಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ.
● ಬ್ಯಾಂಕ್ ಖಾತೆ ವಿವರ.
● ದಿವ್ಯಾಂಗ ಚೇತನರಾಗಿದ್ದರೆ ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ.
● ಇನ್ನಿತರ ಪ್ರಮುಖ ದಾಖಲೆಗಳು.
ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸುವ ವಿಧಾನ:-
● ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ashraya.karnataka.gov.in ವೆಬ್ ಸೈಟ್ ಗೆ ಭೇಟಿ ಕೊಡಿ.
● ಹೋಮ್ ಪೇಜ್ ಓಪನ್ ಆಗುತ್ತದೆ. ಆನ್ಲೈನ್ ಅರ್ಜಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ ಎನ್ನುವ ಆಪ್ಷನ್ ಇರುತ್ತದೆ ಕ್ಲಿಕ್ ಮಾಡಿ.
● ಈಗ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿ, ನಂತರ ತಾಲೂಕು, ಹೋಬಳಿ ಹೀಗೆ ಕೇಳಲಾದ ಎಲ್ಲಾ ವಿವರಗಳನ್ನು ಆಯ್ಕೆ ಮಾಡಿ.
● ಆಧಾರ್ ನಂಬರ್ ಹಾಗೂ ಆಧಾರ್ ನಂಬರ್ ನಲ್ಲಿರುವಂತೆ ಹೆಸರು ನಮೂದಿಸಿ ಮುಂದುವರೆಸಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ಇದೇ ರೀತಿ ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳುತ್ತದೆ, ಸರಿಯಾದ ವಿವರಗಳನ್ನು ಫಿಲ್ ಮಾಡಿ. ಹಾಗೂ ಕೇಳಲಾಗುವ ಸಂಬಂಧ ಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ಅರ್ಜಿ ಸ್ವೀಕೃತಿ ಪ್ರತಿ ಅಥವಾ ಅಕ್ನಾಲೆಜ್ಮೆಂಟ್ ಪಡೆಯಿರಿ.
● ಆಫ್ಲೈನಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಕೆಳಗೆ ತಿಳಿಸಿದ ಕಚೇರಿ ವಿಳಾಸಕ್ಕೆ ಭೇಟಿ ಕೊಡಿ.
ಕಛೇರಿ ವಿಳಾಸ: ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, 8/9ನೇ ಮಹಡಿ,
ಇ ಬ್ಲಾಕ್, ಕ.ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560 009.
ಫೋನ್ : 91-080-23118888