ಮನುಷ್ಯ ನಾಗರಿಕನಾದಂತೆಲ್ಲಾ ಪ್ರಕೃತಿಗೆ ಹೊಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಚಾಲೆಂಜ್ ಮಾಡಿಯೇ ಬದುಕುತ್ತಿದ್ದೇನೆ ಅಂತಲೇ ಹೇಳಬಹುದು. ವಿಜ್ಞಾನವನ್ನು ಅನುಸರಿಸುವುದು ಎಷ್ಟು ಸೂಕ್ತವೋ ಹಾಗೇ ಪ್ರಕೃತಿದತ್ತವಾಗಿ ಜೀವನ ನಡೆಸಿದಾಗ ಮಾತ್ರ ಈ ಜೀವ ಸರಪಳಿಯು ಸಮತೋಲನದಲ್ಲಿ ಇರುತ್ತದೆ.
ಇಲ್ಲಿ ಎಲ್ಲಾ ಬೌತಿಕ ವಸ್ತುಗಳಿಗೆ ಅಭೌತಿಕ ವಸ್ತುಗಳ ಜೊತೆಗೂ ಕೂಡ ನಿಕಟ ಸಂಬಂಧ ಇರುತ್ತದೆ ಹೀಗಾಗಿ ಭೂಮಿ ಮೇಲೆ ಇರುವ ಸೂಕ್ಷ್ಮಾಣು ಜೀವಿಯಿಂದ ಹಿಡಿದು ಬೃಹದಾಕಾರದ ಮರದತನಕ, ಸಮುದ್ರದ ಆಳದಿಂದ ಎತ್ತರದ ಶಿಖರದವರೆಗೆ ಎಲ್ಲಾದಕ್ಕೂ ಒಂದಲ್ಲ ಒಂದು ರೀತಿಯ ಸಂಪರ್ಕ ಕೊಂಡಿ ಬೆಳೆದು ಹೋಗಿದೆ ಯಾವುದೇ ನವೀಕರಿಸಬಲ್ಲ ಅಥವಾ ನವಿಕರಿಸಲಾಗದ ಸಂಪನ್ಮೂಲಗಳ ಕೊರತೆಯು ಅಥವಾ ವಿಕೃತಿಯು ಬದುಕನ್ನು ಅಲ್ಲೋಲಕಲ್ಲೋಲ ಮಾಡಿಬಿಡಬಹುದು.
ಈ ಪೀಠಿಕೆಯನ್ನು ಸರಳವಾಗಿ ವಿವರಿಸುವುದಾದರೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ಚಟುವಟಿಕೆಗಳನ್ನು ಹಾಗೂ ಕಳೆದೊಂದು ದಶಕದಲ್ಲಿ ಇದರಲ್ಲಾಗಿರುವ ಸಾಕಷ್ಟು ವ್ಯತ್ಯಾಸಗಳನ್ನು ಗಮನಿಸಿ ನೋಡಿ ಮನುಷ್ಯ ಎಷ್ಟು ಬದಲಾಗಿ ಹೋಗಿದ್ದಾನೆ, ಇಡೀ ಭೂಮಿ ತನ್ನದೊಬ್ಬನದ್ದೇ ಎಂದು ಭಾವಿಸಿದ್ದಾನೆ. ನೇರವಾಗಿ ಕೃಷಿ ವಿಚಾರಕ್ಕೆ ಬಂದರೆ ಮಳೆ ಆಶ್ರಿತ ಭೂಮಿಯನ್ನು ತನಗೆ ಅವಶ್ಯಕತೆ ಇರುವ ಆಹಾರ ಉತ್ಪಾದನೆಗೆ ಬಳಸಿದ ಮನುಷ್ಯ ಬಳಿಕ ಬಾವಿ ನೀರಾವರಿ ಅನುಸರಿಸಿ ಬಹಳ ಲಾಭ ಪಡೆದುಕೊಂಡು
ಈ ಸುದ್ದಿ ಓದಿ:- ಅನ್ನಭಾಗ್ಯ ಹಣ ಪಡೆಯದವರಿಗೆ ಹೊಸ ನಿಯಮ ಜಾರಿ, ಈ ರೀತಿ ಮಾಡಿ ಹಣ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತೆ.!
ಈಗ ತನ್ನ ದುರಾಸೆಯಿಂದ ತೆರೆದ ಬಾವಿಗಳನ್ನು ಮುಚ್ಚಿ ಕೊಳವೆ ಬಾವಿ ಕೊರೆಸಿ ನೀರು ತೆಗೆಯುತ್ತಿದ್ದಾನೆ. ಒಂದು ಕಡೆ ಸಾಂಪ್ರದಾಯಿಕವಾಗಿ ಇದನ್ನು ಗಂಗಾ ಮಾತೆ ಗಂಗಮ್ಮ ಎಂದು ಪೂಜಿಸುತ್ತಾರೆ ಹಾಗಾಗಿ ಮಣ್ಣು ನೀರು ಎಲ್ಲವೂ ಒಲಿಯಬೇಕು ಎಂದರೆ ಋಣ ಇರಬೇಕು.
ಇದನ್ನರಿಯದೆ ಮತ್ತೊಂದು ಕಡೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಎಷ್ಟು ಖರ್ಚು ಮಾಡಿಯಾದರೂ ನೀರನ್ನು ಪಡೆಯಲೇಬೇಕು ಎಂದು ಎಷ್ಟು ಆಳಕ್ಕೆ ಬೇಕಾದರೂ ಭೂಮಿಯನ್ನು ಕೊರೆಸಲು ಸಿದ್ಧ, ಯಂತ್ರಕ್ಕೆ ಇರುವ ಸಾಮರ್ಥ್ಯದಷ್ಟು ಆಳಕ್ಕೆ ಕೂಡ ಅಹಂಕಾರದಿಂದ ಲಗ್ಗೆ ಇಡುತ್ತಿದ್ದಾನೆ.
ಮತ್ತೊಂದೆಡೆ ಸಾಮಾನ್ಯ ರೈತರು ಕೂಡ ತನ್ನ ಕುಟುಂಬದ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವುದನ್ನು ನಂಬಿ ಸಾಲ ಸೋಲ ಮಾಡಿ ಬೋರ್ವೆಲ್ ಕೊರೆಸಿ ನೀರು ಬರದೇ ಇದ್ದಾಗ ಸಾಲದ ಶೂಲಕ್ಕೆ ಸಿಲುಕಿ ನರಳುತ್ತಿದ್ದಾನೆ. ಹಾಗಾದರೆ ಯಾಕೆ ನೀರು ಎಲ್ಲಾ ಭೂಮಿಯಲ್ಲೂ ಬರುವುದಿಲ್ಲ ಮತ್ತು ಇದನ್ನು ಪಾಯಿಂಟ್ ಮಾಡಿ ತೋರಿಸುವವರು ಯಾಕೆ ನೀರು ಬರುತ್ತದೆ ನಿಖರವಾಗಿ ಹೇಳುವುದಿಲ್ಲ ಎನ್ನುವ ಅನುಮಾನ ಬರುತ್ತದೆ ಇದಕ್ಕೆ ಉತ್ತರ ಹೀಗಿದೆ.
ಈ ಸುದ್ದಿ ಓದಿ:- ಹೈನುಗಾರಿಕೆಯಲ್ಲಿ ಯಶಸ್ಸು ಪಡೆದಿರುವ ಲೇಡಿಸ್ ಸೂಪರ್ ಸ್ಟಾರ್, ತಿಂಗಳಿಗೆ 7 ಲಕ್ಷದವರೆಗೆ ಆದಾಯ.!
ಸಾಮಾನ್ಯವಾಗಿ ರೈತರು ಹಳ್ಳಿಗಳಲ್ಲೇ ತೆಂಗಿನಕಾಯಿ, ಕಬ್ಬಿಣದ ರಾಡ್, ತೆಂಗಿನಕಾಯಿ, ಉಂಗುರ,ತೆಂಗಿನಕಾಯಿ, ಇತ್ಯಾದಿ ಪರಿಕರ ಗಳಿಂದ ನೀರಿನ ಸೆಲೆ ಕಂಡು ಹಿಡಿದು ಪಾಯಿಂಟ್ ಮಾಡಿಕೊಡುತ್ತೇವೆ ಎಂದು ನಂಬಿಸುತ್ತಾರೆ, ಇದು ಪಾರಂಪರಿಕ ವಿಧಾನ. ಇನ್ನು ಯುಟ್ಯೂಬ್ ಚಾನೆಲ್ ಗಳನ್ನು ತೆರೆದರಂತೂ U.S.A ಟೆಕ್ನಾಲಜಿ, ಜಪಾನ್ ಟೆಕ್ನಾಲಜಿ ನೂರಕ್ಕೆ ನೂರರಷ್ಟು ಸಕ್ಸಸ್ ರೇಟ್ ಎಂದೆಲ್ಲಾ ವಿಡಿಯೋಗಳು ಹರಿದಾಡುತ್ತಿರುತ್ತವೆ ಇದನ್ನು ನೋಡಿ ಯಾಮಾರಿರುತ್ತಾರೆ.
ಆದರೆ ಇದೆಲ್ಲದಕ್ಕೂ ಕೂಡ ಯಾವುದೇ ಹಿಸ್ಟರಿ ಇಲ್ಲ ಖ್ಯಾತ ಕೊಳವೆ ಬಾವಿ ತಜ್ಞ ದೇವರಾಜ್ ರೆಡ್ಡಿ ಅವರು ಹೇಳುವ ಪ್ರಕಾರ ಇಡಿ ದೇಶದಲ್ಲಿ ಭೂ ವಿಜ್ಞಾನಿಗಳ ಭೂಮಿಯನ್ನು ಸ್ಕ್ಯಾನ್ ಮಾಡಿ ಸರಿಯಾಗಿ ನೀರಿನ ಸೆಲೆ ಕಂಡು ಹಿಡಿದು ಹೇಳುವ ಒಂದೇ ವಿಧಾನ ಎಂದರೆ ಜಿಯೋವಫಿಸಿಕಲ್ ಎಲೆಕ್ಟ್ರಾನಿಕ್ ಸರ್ವೆ ವಿಧಾನ ಮಾತು ನೂರಕ್ಕೆ ನೂರರಷ್ಟು ವೈಜ್ಞಾನಿಕ ವಿಧಾನದ ಮೂಲಕ ಬೋರ್ವೆಲ್ ಹಾಕಿಸಿದರೆ 25 ವರ್ಷದವರೆಗೆ ಗ್ಯಾರೆಂಟಿ ನೀರು ಬರುತ್ತದೆ ಅನ್ನುತ್ತಾರೆ. ಈ ವಿಚಾರದ ಬಗ್ಗೆ ಇನ್ನು ಡೀಟೇಲ್ ಆಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.