ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಕೆಲವರಿಗೆ ಈಗಾಗಲೇ ಸಾಕಷ್ಟು ಆದಾಯವಿದ್ದರೆ ಅಥವಾ ಇದಕ್ಕೂ ಮುಂಚೆ ಮನೆ ಕಟ್ಟುವ ಬಗ್ಗೆ ಯೋಚನೆ ಮಾಡಿದ್ದರೆ ಕೂಡಿಟ್ಟ ಹಣದಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ಎಷ್ಟೋ ಜನರೇ ಜೀವನದ ಜಂಜಾಟಗಳು ಹಣಕಾಸಿನ ಕೊರತೆಯಿಂದಾಗಿ ಈ ಕನಸನ್ನು ಹಾಗೆ ಉಳಿಯುವಂತೆ ಮಾಡಿಬಿಡುತ್ತದೆ.
ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಲೇಬೇಕು, ಸ್ವಂತ ಮನೆ ಎನ್ನುವುದು ಒಂದು ಭಾವನೆ ಹಾಗೂ ಅದು ಖರ್ಚು ಕಡಿಮೆ ಮಾಡುವ ವಿಚಾರ ಕೂಡ. ಹೌದು, ಇಲ್ಲವಾದಲ್ಲಿ ಪ್ರತಿ ತಿಂಗಳಲ್ಲಿ ಹೆಚ್ಚಿನ ಮೊತ್ತ ಬಾಡಿಗೆಗೆ ಹೋಗುತ್ತದೆ. ಆದರೆ ಕೈಯಲ್ಲಿ ಹಣ ಇಲ್ಲದಿದ್ದಾಗಲೂ ಗೃಹ ಸಾಲ (Home loan) ಪಡೆದುಕೊಳ್ಳುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಭಾರತದಲ್ಲಿ ಅನೇಕ ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಗೃಹ ಸಾಲಗಳನ್ನು ಕೊಡುತ್ತಿವೆ.
ಈ ಸುದ್ದಿ ಓದಿ:- ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?…
ಗೃಹ ಸಾಲಗಳ ಮೂಲಕ ಲೋನ್ ಪಡೆದು ಮನೆ EMI ಗಳನ್ನು ಕಟ್ಟಿಕೊಳ್ಳುತ್ತಾ ನೆಮ್ಮದಿಯಾಗಿರುವವರ ಸಂಖ್ಯೆ ಒಂದು ಕಡೆ ಆದರೆ ಇದೇ ಸಾಲದ ಸುಳಿಯಲ್ಲಿ ಸಿಕ್ಕಿ ಬದುಕನ್ನು ಬೆಂಕಿಯಿಂದ ಬಾಣಲೆಗೆ ಎಂದು ಮಾಡಿಕೊಂಡ ಉದಾಹರಣೆಗಳು ಕೂಡ ಇವೆ. ಹಾಗಾದರೆ ಹೋಂ ಲೋನ್ ತೆಗೆದುಕೊಳ್ಳಬೇಕು ಎನ್ನುವ ಸಮಯದಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಗಮನಕೊಟ್ಟರೆ ಇಂತಹ ಸಮಸ್ಯೆ ತಪ್ಪುತ್ತದೆ ಎನ್ನುವುದು ನಿಮಗೆ ಗೊತ್ತಾ?
ಪ್ರತಿಯೊಬ್ಬರೂ ಕೂಡ ಈ ಬೇಸಿಕ್ ಅಂಶಗಳ ಬಗ್ಗೆ ತಿಳಿದುಕೊಂಡಿರಬೇಕು. ಆಗ ಯಾವುದೇ ಸಮಸ್ಯೆ ಇಲ್ಲದೆ ಹೆಚ್ಚಿನ ಹೊರೆ ಇಲ್ಲದೆ ನೀವಂದು ಕೊಂಡಿದ್ದು ನೆರವೇರುತ್ತದೆ. ನೀವೇನಾದರೂ ಹೋಂ ಲೋನ್ ಬಗ್ಗೆ ಯೋಚಿಸುತ್ತಿದ್ದರೆ ಈ ಕೆಳಗಿನ ಅಂಶಗಳ ಬಗ್ಗೆ ಗಮನ ಕೊಟ್ಟು ಆರಿಸಿ.
* RBI ತನ್ನ ರಿಪೋ ದರ ಹೆಚ್ಚಿಸಿದರೆ ಆಗ ಹೋಂ ಲೋನ್ ಗಳ ಬಡ್ಡಿ ದರವೂ ಕೂಡ ಹೆಚ್ಚಾಗುತ್ತದೆ. RBI ರೆಪೋದರದ ಅನುಗುಣವಾಗಿ ಬ್ಯಾಂಕುಗಳು ತಮ್ಮ ಹೋಂ ಲೋನ್ ಗಳ ಬಡ್ಡಿ ದರದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತವೆ.
ಈ ಸುದ್ದಿ ಓದಿ:- ಯುವನಿಧಿ ಯೋಜನೆ ಫಲಾನುಭವಿಗಳೇ ಇಲ್ಲಿ ಗಮನಿಸಿ… ನಿಮಗೆ ಹಣ ಬರಬೇಕಾದ್ರೆ ಪ್ರತಿ ತಿಂಗಳು ಈ ದಾಖಲೆ ಸಲ್ಲಿಸಬೇಕು.!
* ನಿಮಗೆ ಗೃಹ ಸಾಲ ನೀಡಲು ಬ್ಯಾಂಕ್ ಗಳು ನಿಮ್ಮ ಸಿಬಿಲ್ ಸ್ಕೋರ್ (CIBIL) ಕೂಡ ಚೆಕ್ ಮಾಡುತ್ತವೆ. ಸಿಬಿಲ್ ಸ್ಕೋರ್ ಚೆನ್ನಾಗಿ ನಿರ್ವಹಿಸಿದ್ದಷ್ಟು ಸಾಲ ಸುಲಭವಾಗಿ ಸಿಗುತ್ತದೆ.
* ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವುದು ಎನ್ನುವುದನ್ನು ನಿರ್ಧರಿಸುವ ಮೊದಲು ಯಾವ ಬ್ಯಾಂಕ್ ಗಳಲ್ಲಿ ಹೋಂ ಲೋನ್ ಗಳ ಬಡ್ಡಿದರ ಎಷ್ಟೆಷ್ಟು ನಡೆಯುತ್ತಿದೆ ಎನ್ನುವುದನ್ನು ವಿಚಾರಿಸಿ ನಿರ್ಧಾರ ಮಾಡಿ.
* ಬ್ಯಾಂಕ್ ಗಳು ಸಾಲ ನೀಡುವುದಕ್ಕೆ ಡಾಕುಮೆಂಟೇಶನ್ ಮತ್ತು ಪ್ರೋಸೆಸಿಂಗ್ ಚಾರ್ಜ್ ಮತ್ತು ಕಾನೂನು ಶುಲ್ಕ ಈ ರೀತಿ ಸ್ವಲ್ಪ ಮೊತ್ತದ ಹಣ ಚಾರ್ಜ್ ಮಾಡುತ್ತವೆ. ಇವು ಕೂಡ ಬ್ಯಾಂಕಿಂದ ಬ್ಯಾಂಕಿಗೆ ವ್ಯತ್ಯಾಸವಿರುತ್ತದೆ ಇದರ ಬಗ್ಗೆಯೂ ವಿಚಾರಿಸಿ ನಿರ್ಧರಿಸಿ.
ಈ ಸುದ್ದಿ ಓದಿ:- HSRP Number Plate: ಹೆಚ್.ಎಸ್.ಆರ್.ಪಿ ನೋಂದಣಿಗೆ ಪಾವತಿಸಬೇಕಾದ ಶುಲ್ಕ ವಿವರದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.!
* ನೀವು ಸಾಲ ಪಡೆದುಕೊಳ್ಳುತ್ತಿರುವ ಮೊತ್ತಕ್ಕೆ ಅನುಗುಣವಾಗಿ ಎಷ್ಟು EMI ಬೀಳುತ್ತದೆ ಮತ್ತು ಇದು ತೀರಲು ಎಷ್ಟು ವರ್ಷ ಆಗುತ್ತದೆ. ಈ ಸಾಲ ಅಂತ್ಯ ಹೊಂದಿದಯೆ ಇಲ್ಲವೇ ಎನ್ನುವ ವಿಚಾರಗಳ ಬಗ್ಗೆಯೂ ಕೂಡ ಹೆಚ್ಚು ಗಮನ ಕೊಡಬೇಕು
* ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಟ್ಯಾಕ್ಸ್ ಬಗ್ಗೆಯೂ ತಿಳಿದುಕೊಳ್ಳಬೇಕು. ಕೆಲವೊಮ್ಮೆ ನೀವು ಪಾವತಿಸುವ ಅಸಲು ಬಡ್ಡಿಯ ಮೇಲೆ ವಿನಾಯಿತಿ ಸಿಗುವ ಸಾಧ್ಯತೆಯೂ ಇರುತ್ತದೆ.
ಗೃಹ ಸಾಲ ಪಡೆದುಕೊಳ್ಳುವುದಕ್ಕೆ ಕೇಳುವ ದಾಖಲೆಗಳು:-
* KYC ಡಾಕ್ಯೂಮೆಂಟ್ಸ್
* ನಿಮ್ಮ ಆದಾಯಕ್ಕೆ ಸಂಬಂಧಿಸಿದ ಯಾವುದಾದರೂ ದಾಖಲೆ (Salary Slip / ITR )
* ಬ್ಯಾಂಕ್ ಸ್ಟೇಟ್ ಮೆಂಟ್
* ನಿಮ್ಮ ಪ್ರಾಪರ್ಟಿಗೆ ಸಂಬಂಧಿಸಿದ ದಾಖಲೆಗಳು
* ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಕೆಲ ದಾಖಲೆಗಳು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಗಳಲ್ಲಿ ವಿಚಾರಿಸಿ.