HDFC ಪರಿವರ್ತನಾ ಸ್ಕಾಲರ್ಶಿಪ್ ಪ್ರತಿ ವಿದ್ಯಾರ್ಥಿಗೂ 75,000 ಸಹಾಯಧನ ಸಿಗಲಿದೆ.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ದೊಡ್ಡಮೊತ್ತದ ಹಣ ಬೇಕಾಗಿರುತ್ತದೆ. ಆದರೆ ಎಲ್ಲಾ ಪೋಷಕರಿಗೆ ಕೂಡ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲಾಗದೆ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಾಗೂ ಸರ್ಕಾರೇತರವಾಗಿ ಅನೇಕ ಪ್ರತಿಷ್ಠಿತ ಕಂಪನಿಗಳು ಸ್ಕಾಲರ್ಶಿಪ್ ಮೂಲಕ ಇಂತಹ ವಿದ್ಯಾರ್ಥಿಗೆ ಸಹಾಯ ಮಾಡುತ್ತಿವೆ.

ಪ್ರತಿ ಶೈಕ್ಷಣಿಕ ವರ್ಷದಲ್ಲೂ ಇದನ್ನು ಘೋಷಣೆ ಮಾಡಿ ಅರ್ಹರಿಂದ ಅರ್ಜಿ ಆಹ್ವಾನಿಸಿ ಅವರ ಖಾತೆಗೆ ನೇರವಾಗಿ ಹಣ ಕಳುಹಿಸಲಾಗುತ್ತದೆ. ಅಂತೆಯೇ HDFC ಬ್ಯಾಂಕ್ ಪರಿವರ್ತನ ECSS 2023-24 ಸ್ಕಾಲರ್ಶಿಪ್ ಗೆ (HDFC ECSS 2023-24 Scholorship) ಅರ್ಜಿ ಆಹ್ವಾನಿಸಲಾಗಿದೆ.

1 ರಿಂದ 12ನೇ ತರಗತಿ, ಡಿಪ್ಲೊಮೋ, ITI, ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವವರು ಗರಿಷ್ಠ 75000 ರವರೆಗೆ ಈ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದು. ಇದಕ್ಕೆ ಅರ್ಹತೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ ಮತ್ತು ಬೇಕಾಗಿರುವ ದಾಖಲೆಗಳೇನು? ಎನ್ನುವುದರ ವಿವರ ಹೀಗಿದೆ ನೋಡಿ…

PG ವಿದ್ಯಾರ್ಥಿಗಳಿಗೆ ಮಾನದಂಡಗಳು:-

● ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
● ಪ್ರಸಕ್ತ ಸಾಲಿನಲ್ಲಿ MSc, MA, M-tech, MBAಕೋರ್ಸ್‌ ಓದುತ್ತಿರಬೇಕು.
● ಪದವಿಯಲ್ಲಿ 55% ಅಂಕಗಳಿಗೆ ಕಡಿಮೆ ಇಲ್ಲದಂತೆ ಉತ್ತೀರ್ಣರಾಗಿರಬೇಕು.
● ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸಿಗುವ ಸಹಾಯಧನ:-

● M.Sc, MA ವಿದ್ಯಾರ್ಥಿಗಳಿಗೆ ರೂ.35,000.
● ವೃತ್ತಿಪರ ಕೋರ್ಸ್‌ಗಳಾದ M.Tec, MBA ವಿದ್ಯಾರ್ಥಿಗಳಿಗೆ ರೂ.75000.

ಪದವಿ ವಿದ್ಯಾರ್ಥಿಗಳಿಗೆ ಮಾನದಂಡಗಳು:-

● ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
● ಪ್ರಸಕ್ತ ಸಾಲಿನಲ್ಲಿ BCom, BSc, BA, BCA ಅಥವಾ ಇತರೆ ವೃತ್ತಿಪರ ಕೋರ್ಸ್‌ಗಳಾದ B-tech,MBBS, LLB, B-arch, ನರ್ಸಿಂಗ್ ಕೋರ್ಸ್‌ ಅಭ್ಯಾಸಿಸುತ್ತಿರಬೇಕು.
● ಕಳೆದ ವರ್ಷದ ಪರೀಕ್ಷೆಯಲ್ಲಿ 55% ನೊಂದಿಗೆ ಉತ್ತಿರ್ಣರಾಗಿರಬೇಕು.
● ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸಿಗುವ ಸಹಾಯಧನ:-

● ವೃತ್ತಿಪರ ಪದವಿ ಕೋರ್ಸ್‌ಗಳ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.50,000.
● ಸಾಮಾನ್ಯ ಪದವಿ ಕೋರ್ಸ್‌ಗಳ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.30000.

ಶಾಲಾ ವಿದ್ಯಾರ್ಥಿಗಳಿಗೆ ಮಾನದಂಡಗಳು:-

● 1 ರಿಂದ 12ನೇ ತರಗತಿ, ITI, Diploma, ಇತರೆ ಪಾಲಿಟೆಕ್ನಿಕ್ ಕೋರ್ಸ್‌ಗಳನ್ನು ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.
● ಹಿಂದಿನ ವರ್ಷದ ಪರೀಕ್ಷೆಯಲ್ಲಿ 55% ಕಡಿಮೆ ಇಲ್ಲದಂತೆ ಉತ್ತಿರ್ಣರಾಗಿರಬೇಕು.
● ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸಿಗುವ ಸಹಾಯಧನ:-

● 1 ರಿಂದ 6 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.15,000.
● 7 ರಿಂದ 12ನೇ ತರಗತಿವರೆಗಿನ ಹಾಗೂ ಡಿಪ್ಲೊಮ, ITI, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.18,000.

ಬೇಕಾಗುವ ದಾಖಲೆಗಳು:-

● ವಿದ್ಯಾರ್ಥಿಯ ಆಧಾರ್‌ ಕಾರ್ಡ್‌
● ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆ
● ಹಿಂದಿನ ವರ್ಷದ ಅಂಕ ಪಟ್ಟಿಗಳು
● ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
● ಆದಾಯ ಪ್ರಮಾಣ ಪತ್ರ.
● ಪ್ರಸ್ತುತ ಸಾಲಿನಲ್ಲಿ ಶಿಕ್ಷಣಕ್ಕೆ ದಾಖಲಾಗಿರುವ ಬಗ್ಗೆ ಪುರಾವೆ.

ಅರ್ಜಿ ಸಲ್ಲಿಸುವ ವಿಧಾನ:-

● ಆನ್ಲೈನ್ ಮೂಲಕ https://www.buddy4study.com/page/hdfc-bank-parivartans-ecss-programme ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30 ಡಿಸೆಂಬರ್, 2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now