ಬಿಸಿನೆಸ್ ಐಡಿಯಾ ಇದ್ದು ಬಂಡವಾಳ ಇಲ್ಲದ ಮಹಿಳೆಯರಿಗೆ SBI ಬ್ಯಾಂಕ್ ನಿಂದ ನೆರವು, ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ 20 ಲಕ್ಷದವರೆಗೆ ಸಾಲ.!

 

WhatsApp Group Join Now
Telegram Group Join Now

ಕೆಲವರಿಗೆ ಬಿಸಿನೆಸ್ (buisness) ಆರಂಭಿಸಲು ಆಸಕ್ತಿ ಇರುತ್ತದೆ, ಅವರ ಬಳಿ ಐಡಿಯಾಗಳು ಕೂಡ ಇರುತ್ತವೆ. ಆದರೆ ಬಂಡವಾಳದ ಕೊರತೆಯಿಂದ ಅವರು ಹಾಗೆ ಉಳಿತು ಬಿಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಹಣಕಾಸಿನ ಅನುಕೂಲತೆ ಕಡಿಮೆ ಇರುವುದರಿಂದ ಅವರ ಇಚ್ಛೆಗಳು ಆರಂಭದಲ್ಲಿಯೇ ಮುಗಿದು ಹೋಗುತ್ತವೆ.

ಆದರೆ ಇನ್ನು ಮುಂದೆ ಈ ಕಾರಣಕ್ಕಾಗಿ ಬೇಸರಪಡುವ ಅವಶ್ಯಕತೆ ಇಲ್ಲ. ಏಕೆಂದರೆ, SBI ಬ್ಯಾಂಕ್ ನಿಂದ ಸ್ತ್ರೀ ಶಕ್ತಿ ಯೋಚನೆಯಡಿ (SBI Sthree shakthi Scheme) ಗರಿಷ್ಠ 20 ಲಕ್ಷದವರೆಗೆ ಸಾಲ (loan) ಸಿಗುತ್ತದೆ. ಆದರೆ ಅನೇಕರಿಗೆ ಸಾಲ ಹೇಗೆ ಪಡೆದುಕೊಳ್ಳಬೇಕು ಎನ್ನುವುದೇ ತಿಳಿದಿರುವುದಿಲ್ಲ. ಅದಕ್ಕಾಗಿ ಈ ಯೋಜನೆ ಕುರಿತ ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● SBI ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರು ತಮ್ಮ ಇಚ್ಛೆಯ ಬಿಸಿನೆಸ್ ಆರಂಭಿಸಲು ಕನಿಷ್ಠ 10,000 ದಿಂದ 20 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು.
● 18 ವರ್ಷ ಮೇಲ್ಪಟ್ಟ ಹಾಗೂ 60 ವರ್ಷ ವಯೋಮಾನದ ಒಳಗಿನ ಭಾರತೀಯ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
● ನಿಮ್ಮ ಬಿಸಿನೆಸ್ ಪ್ರೊಫೈಲ್ ಆಧಾರದ ಮೇಲೆ ನೀವು ಎಷ್ಟು ಮೊತ್ತದ ಹಣವನ್ನು ಸಾಲವಾಗಿ ಪಡೆಯುತ್ತಿದ್ದೀರಾ ಎನ್ನುವುದರ ಆಧಾರದ ಮೇಲೆ ಬಡ್ಡಿದರ ನಿರ್ಧಾರವಾಗುತ್ತದೆ.

ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಕಾಯ್ದೆ, ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲೆಷ್ಟು ಗೊತ್ತಾ.?

● ನೀವು ಈಗಾಗಲೇ ಯಾವುದಾದರೂ ಕೋ ಆಪರೇಟಿವ್ ಬ್ಯಾಂಕ್ ಅಥವಾ ಪಾರ್ಟ್ನರ್ಶಿಪ್ ಮೂಲಕ 50% ಗಿಂತ ಕಡಿಮೆ ಶೇರ್ ಹೊಂದಿರುವ ಬಿಸಿನೆಸ್ ಆರಂಭಿಸಿದ್ದೀರಿ ಎಂದರೆ ಬಹಳ ಸುಲಭವಾಗಿ ನಿಮಗೆ ಸಾಲ ಸಿಗುತ್ತದೆ. ನೀವು ವೈದ್ಯರಾಗಿದ್ದರೂ, ಬ್ಯೂಟೇಷಿಯನ್ ಆಗಿದ್ದರೂ ನಿಮ್ಮ ಉದ್ದಿಮೆಯ ಜೊತೆ ಮತ್ತೊಂದು ಬಿಸಿನೆಸ್ ಆರಂಭಿಸಲು ಸಾಲ ಪಡೆದುಕೊಳ್ಳಲು ಇಚ್ಚಿಸುತ್ತಿದ್ದರೆ ಅದಕ್ಕೂ ಕೂಡ ಅವಕಾಶವಿದೆ.

● 5 ಲಕ್ಷದವರೆಗಿನ ಸಾಲಕ್ಕೆ ಯಾವುದೇ ರೀತಿಯ ಮೇಲಾಧಾರಗಳನ್ನು ಕೂಡ ಒದಗಿಸುವ ಅವಶ್ಯಕತೆ ಇರುವುದಿಲ್ಲ.
● ಬಿಸಿನೆಸ್ ಲೋನ್ ಗಳಿಗೆ ಬೇರೆ ಕಡೆ ಪ್ರೊಸೆಸಿಂಗ್ ಫೀ ಹೆಚ್ಚಿರುತ್ತದೆ. ಆದರೆ SBI ನಲ್ಲಿ ನಿಮ್ಮ ಒಟ್ಟು ಲೋನ್ ಮೊತ್ತದ 1%-5% ಮಾತ್ರ ಫೀ ಇರುತ್ತದೆ.
● SBI ಸ್ತ್ರೀ ಶಕ್ತಿ ಯೋಜನೆಯಡಿ ಸಾಲ ಪಡೆದುಕೊಳ್ಳಲು ಆನ್ಲೈನ್ ಮತ್ತು ಆಫ್ಲೈನ್ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸಲು ಅವಕಾಶಗಳಿವೆ. ನಿಯಮ ಹಾಗೂ ನಿಬಂಧನೆಗಳನ್ನು ಸ್ಪಷ್ಟವಾಗಿ ತಿಳಿಸಲಾಗುತ್ತದೆ, ಒಪ್ಪಿಗೆಯಾದರೆ ಮಾತ್ರ ಮುಂದುವರೆಯಬಹುದು.

● SBI ನ ಸ್ತ್ರೀಶಕ್ತಿ ಯೋಜನೆಯಲ್ಲಿ ಸಾಲ ಪಡೆಯಬೇಕು ಎಂದರೆ ಅರ್ಜಿ ಸಲ್ಲಿಸುವ ಮಹಿಳೆಯು ಕಡ್ಡಾಯವಾಗಿ SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರಲೇಬೇಕು.
● ಸಾಮಾನ್ಯವಾಗಿ ವ್ಯವಹಾರದ ಸಾಲಗಳಿಗೆ 4-8 ವಾರದ ಒಳಗಡೆ ಸಾಲ ಮಂಜೂರಾಗುತ್ತದೆ. SBI ಸ್ತ್ರೀ ಶಕ್ತಿ ಯೋಜನೆಯಡಿ ಕೂಡ ನೀವು ಅರ್ಜಿ ಸಲ್ಲಿಸುವ ಮೊತ್ತಕ್ಕೆ ಅನುಗುಣವಾಗಿ ಇದು ನಿರ್ಧಾರವಾಗುತ್ತದೆ. ನಿಮ್ಮ ದಾಖಲೆಗಳ ಪರಿಶೀಲನೆ ನಡೆದು ಸಾಲಕ್ಕೆ ಅನುಮೋದನೆ ಆಗುತ್ತದೆ. ಒಂದು ವೇಳೆ ದೊಡ್ಡ ಮೊತ್ತದ ಸಾಲವಾಗಿದ್ದರೆ 8 ವಾರಗಳಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಸರ್ಕಾರದಿಂದ 5 ಲಕ್ಷಕ್ಕೆ ಮನೆ ಸಿಗಲಿದೆ.! ರಾಜೀವ್ ಗಾಂಧಿ ವಸತಿ ಯೋಜನೆಯಡಿ 1 ಲಕ್ಷ ಪಾವತಿಸಿದರೆ ಸಾಕು ಹೊಸ ಮನೆ ನಿಮ್ಮದಾಗುತ್ತೆ.! ಇಂದೇ ಅರ್ಜಿ ಸಲ್ಲಿಸಿ

● EDP (Entrepreneurship development programme) ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರಿಗೆ ಸುಲಭವಾಗಿ ಲೋನ್ ಸಿಗುತ್ತದೆ.
● ಈ ಯೋಜನೆಯು ಬಿಸಿನೆಸ್ ಆರಂಭಿಸುವವರ ಸಲುವಾಗಿಯೇ ಇರುವುದರಿಂದ ಸಂದರ್ಭಕ್ಕೆ ಅನುಸಾರವಾಗಿ ಅನೇಕ ವಿನಾಯಿತಿಗಳು ಕೂಡ ಸಿಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ SBI ಶಾಖೆಗೆ ಭೇಟಿ ಕೊಡಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
1. ಆಧಾರ್ ಕಾರ್ಡ್
2. ಪ್ಯಾನ್ ಕಾರ್ಡ್
3. ವಿಳಾಸ ಪುರಾವೆ
4. ಬ್ಯಾಂಕ್ ಖಾತೆ ಮಾಹಿತಿ
5. ಬಿಸಿನೆಸ್ ವಿವರ
6. Income tax, annual tax ಪಾವತಿ ಮಾಡುತ್ತಿರುವ ವಿವರಗಳು

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now