ಇನ್ಮುಂದೆ ಇಂಥವರಿಗೆ ಅಕ್ಕಿ ಬಂದ್, ಆಹಾರ ಇಲಾಖೆಯಿಂದ ಹೊಸ ರೂಲ್ಸ್ ಜಾರಿ.!

 

WhatsApp Group Join Now
Telegram Group Join Now

ಆಹಾರ ಇಲಾಖೆಯು ರೇಷನ್ ಕಾರ್ಡ್ (Ration card) ವಿಚಾರವಾಗಿ ಹಾಗೂ ರೇಷನ್ ಕಾರ್ಡ್ ಮೂಲಕ ನೀಡುತ್ತಿರುವ ಪಡಿತರ ವಿಚಾರವಾಗಿ ಹಾಗಾಗ ಹೊಸ ನಿಯಮ ಮಾಡುತ್ತಲೇ ಇರುತ್ತದೆ. ಈಗ ಬಹಳ ಪ್ರಮುಖವಾದ ಸೂಚನೆಯೊಂದು ಇದೆ. ಆಹಾರ ಇಲಾಖೆಯ (Food Department) ರಾಜ್ಯದಲ್ಲಿ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಕುರಿತು ಸೂಚನೆ ಕೊಟ್ಟಿದೆ.

ಇದಕ್ಕೆ ಸಕಾರಣ ಕೂಡ ಇದ್ದು ಸರ್ಕಾರದ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿರುವ ಅಂಶಗಳು ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ದೇಶದಲ್ಲಿ APL, BPL ಹಾಗೂ ಅಂತ್ಯೋಯದ ಕಾರ್ಡ್ ಎನ್ನುವ ಮೂರು ಬಗೆಯ ಕಾರ್ಡ್ ಗಳು ಇದ್ದು, ಇವರಿಗೆ ಸರ್ಕಾರದ ವತಿಯಿಂದ ನ್ಯಾಯಬೆಲೆ ಅಂಗಡಿಗಳ (Fareprice shop) ಮೂಲಕ ಉಚಿತವಾಗಿ ಅಕ್ಕಿ ಹಾಗೂ ಕಡಿಮೆ ಬೆಲೆಗೆ ಇತರ ಧಾನ್ಯಗಳನ್ನು ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳನ್ನು ಈ ರೇಷನ್ ಕಾರ್ಡ್ ಹೊಂದಿರುವವರು ಪಡೆಯಲಿದ್ದಾರೆ. ಅಂಕಿ ಅಂಶಗಳ ಪ್ರಕಾರ ನಮ್ಮ ರಾಜ್ಯದಲ್ಲಿ 1.16 ಕೋಟಿ BPL ಕಾರ್ಡ್, 24 ಲಕ್ಷ APL ಕಾರ್ಡ್ ಹಾಗೂ 10.88 ಲಕ್ಷ ಅಂತ್ಯೋದಯ ಕಾರ್ಡ್ ಗಳಿವೆ. ಇದರಲ್ಲಿ APL ಕಾರ್ಡ್ ಗಳನ್ನು ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು, BPL ಹಾಗೂ ಅಂತ್ಯೋದಯ ಕಾರ್ಡ್ ಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಎಂದು ಗುರುತಿಸಿ ಸರ್ಕಾರ ಇತರ ಯೋಜನೆಗಳನ್ನು ಪಡೆದುಕೊಳ್ಳಲು ಕೂಡ ಅನುಕೂಲ ಮಾಡಿಕೊಡಲಾಗುತ್ತಿದೆ.

ಈ ರೀತಿಯ ಕಾರಣಕ್ಕಾಗಿ ಕೂಡ ಕುಟುಂಬಗಳು ರೇಷನ್ ಕಾರ್ಡ್ ಹೊಂದಿವೆ ಆದರೆ ರೇಷನ್ ಕಾರ್ಡ್ ಪಡೆಯುವ ಪರಿಕಲ್ಪನೆ ಇದಕ್ಕಿಂತ ಮುಖ್ಯವಾಗಿ ಸರ್ಕಾರದಿಂದ ಉಚಿತ ಪಡಿತರ ಪಡೆಯುವುದೇ ಆಗಿದೆ ಎಂದು ಇದುವರೆಗೂ ಭಾವಿಸಲಾಗುತ್ತಿತ್ತು, ಅಂತೆಯೇ ಸರ್ಕಾರವು ರೇಷನ್ ಕಾರ್ಡ್ ಸಂಖ್ಯೆಗಳ ಆಧಾರದ ಮೇಲೆ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರವನ್ನು ಕಳುಹಿಸುತ್ತಿತ್ತು.

ಆದರೆ ಇವರಲ್ಲಿ ಲಕ್ಷಾಂತರ ಕಾರ್ಡ್ ದಾರರು ಈ ರೀತಿ ಸರ್ಕಾರದಿಂದ ಸಿಗುತ್ತಿರುವ ಉಚಿತ ಪಡಿತರವನ್ನು ಪಡೆಯುತ್ತಿಲ್ಲ, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನ’ಷ್ಟವಾಗುತ್ತಿದೆ. ಈ ನಷ್ಟದ ಮೊತ್ತವು ಅಂದಾಜು ತಿಂಗಳಿಗೆ 50 ಲಕ್ಷ ಹಾಗೂ ವಾರ್ಷಿಕವಾಗಿ ಸುಮಾರು 60 ಲಕ್ಷಕ್ಕಿಂತ ಎಂದು ಅಂದಾಜಿಸಲಾಗಿದೆ.

ಇಂತಹ ರೇಷನ್ ಅನ್ನು ಕಾಳಸಂತೆಯಲ್ಲಿ ಮಾರಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದುಬಂದಿರವ ಕಾರಣ ಆಹಾರ ಇಲಾಖೆಯ ಯಾರೆಲ್ಲಾ ರೇಷನ್ ಕಾರ್ಡ್ ಇದ್ದು ಕೂಡ ಉಚಿತ ಪಡಿತರ ಪಡೆಯಲು ಆಸಕ್ತಿ ತೋರುತ್ತಿಲ್ಲ ಅಂತಹ ರೇಷನ್ ಕಾರ್ಡ್ ಗಳನ್ನು ರ’ದ್ದು (Ration card Cancel) ಮಾಡಲು ಮುಂದಾಗಿದೆ.

ರಾಜ್ಯದಲ್ಲಿ 3.32 ಲಕ್ಷ BPL ಕಾರ್ಡ್, 14826 ಅಂತ್ಯೋದಯ ಕಾರ್ಡ್ ಹಾಗೂ 24 ಲಕ್ಷ APL ಕಾರ್ಡ್ ದಾರರು ಈ ರೀತಿ ತಮ್ಮ ಪಾಲಿನ ಉಚಿತ ಪಡಿತರವನ್ನು ಪಡೆದಿಲ್ಲ ಎಂದು ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ. ಆದರೆ ರೇಷನ್ ಕಾರ್ಡ್ ಪಡಿತರ ಉದ್ದೇಶಕ್ಕಾಗಿ ಮಾತ್ರ ಅಲ್ಲದೆ RTE ಶಿಕ್ಷಣದ ಸೀಟ್, ಪಿಂಚಣಿ, ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆ ರಿಯಾಯಿತಿ ಇವುಗಳಿಗಾಗಿ ಕೂಡ ಬಳಸುತ್ತಿದ್ದಾರೆ.

ಈ ಉದ್ದೇಶಕ್ಕಾಗಿ ಬಳಸುತ್ತಿರುವವರಿಗೂ ಕೂಡ ತೊಂದರೆ ಆಗಬಾರದು ಎನ್ನುವ ಕಾರಣದಿಂದಾಗಿ ಪಡಿತರ ಉದ್ದೇಶಕ್ಕಾಗಿ ರೇಷನ್ ಕಾರ್ಡ್ ಹೊಂದಿರುವವರು ಹಾಗೂ ಸರ್ಕಾರದ ಇತರ ಸೌಲಭ್ಯಗಳಿಗಾಗಿ ರೇಷನ್ ಕಾರ್ಡ್ ಪಡೆದಿರುವವರು ಎನ್ನುವ ಪ್ರತ್ಯೇಕ ವಿಭಾಗ ಮಾಡಿ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವ ನಿರ್ಧಾರಕ್ಕೆ ಆಹಾರ ಇಲಾಖೆಯು ಬಂದಿದೆ.

ಈ ಹಿಂದೆ ಕೂಡ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪ (K.H Muniyappa) ಅವರು ಒಮ್ಮೆ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದರು ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರ ಬೀಳಲಿದೆ. ಆದರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now