ಪ್ರತಿ ರೈತನು ಕೂಡ ತನ್ನ ಜಮೀನಿನ ಅಳತೆ ಮಾಡಿಸಬೇಕು. ಯಾಕೆಂದರೆ ತಾನು ಬಳಸುತ್ತಿರುವ ಜಮೀನು ತನ್ನ ಹೆಸರಿನಲ್ಲಿರುವ ಸರ್ವೇ ನಂಬರ್ ವಿಸ್ತಿರ್ಣಕ್ಕೆ ಸರಿಯಾಗಿದೆಯೇ ಅಥವಾ ಹೆಚ್ಚಾಗಿದೆಯೇ ಕಡಿಮೆ ಆಗಿದೆಯೇ, ತಾನು ಅದೇ ಸ್ಥಳದಲ್ಲಿ ಉಳುಮೆ ಮಾಡುತ್ತಿದ್ದಾನಯೇ ಇತ್ಯಾದಿಗಳನ್ನು ಧೃಡಪಡಿಸಿಕೊಳ್ಳುವುದಕ್ಕಾಗಿ ಸರ್ವೇ ಮಾಡಿಸಿ ಬಂದೋಬಸ್ತ್ ಮಾಡಿಕೊಳ್ಳಬೇಕು.
ಒಂದು ವೇಳೆ ಸರ್ವೆ ಮಾಡಿಸಲು ಆಗದಿದ್ದರೆ ನೀವು ಮೊಬೈಲ್ ಮೂಲಕವೇ ನಿಮ್ಮ ಜಮೀನಿನ ಅಳತೆ ಮಾಡಬಹುದು ಪ್ರತಿಯೊಬ್ಬ ರೈತನಿಗೂ ಕೂಡ ಈ ಮಾಹಿತಿ ಗೊತ್ತಿರಬೇಕು ಹಾಗಾಗಿ ಈ ಅಂಕಣದಲ್ಲಿ ಇದ್ದರೆ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಅಳತೆ ಮಾಡಲು ಈ ಕೆಳಗಿನ ವಿಧಾನಗಳಲ್ಲಿ ಅನುಸರಿಸಿ.
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ದಿಶಾಂಕ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಜೊತೆಗೆ ನೀವು ಲೊಕೇಶನ್ ಕೂಡ ಆನ್ ಮಾಡಿ
* ಈ ಆಪ್ ಓಪನ್ ಮಾಡಿದ ತಕ್ಷಣ ಕೆಳಗಡೆ ಎಡಭಾಗದ ಕೊನೆಯಲ್ಲಿ ಮಾಪನ ಸಾಧನೆಗಳು ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ
* ಮೇಲೆ ಮೂರು ಸಿಂಬಲ್ ಗಳು ಕಾಣುತ್ತವೆ ಇವು ಜಮೀನು ಇರುವ ಸ್ಥಳ, ಜಮೀನಿನ ವಿಸ್ತೀರ್ಣ ಮತ್ತು ಜಮೀನಿನ ನಕ್ಷೆಯನ್ನು ತೋರಿಸುವ ಸಿಂಬಲ್ ಆಗಿರುತ್ತದೆ.
* ಅದರಲ್ಲಿ ಜಮೀನ ಹದ್ದುಬಸ್ತು ನಕ್ಷೆ ತೋರಿಸುವಂತಹ ಸಿಂಬಲ್ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಹಲವು ಆಪ್ಷನ್ ಗಳು ಬರುತ್ತವೆ. ಅದರಲ್ಲಿ ಕರ್ನಾಟಕದ ಮ್ಯಾಪ್ ಇರುವ K-GIS ಉಪಗ್ರಹ ನಕ್ಷೆ ಎನ್ನುವುದನ್ನು ಸೆಲೆಕ್ಟ್ ಮಾಡಿ.
* ಮತ್ತೆ ಪೇಜ್ ಕೆಳಗಡೆ ಸ್ಕ್ರೋಲ್ ಮಾಡಿ ಮಾಪನ ಸಾಧನೆಗಳು ಎನ್ನುವುದರ ಪಕ್ಕ ಸರ್ವೆ ನಂಬರ್ ಹುಡುಕಿ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
* ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ನಿಮ್ಮ ಗ್ರಾಮವನ್ನು ಕೂಡ ಸೆಲೆಕ್ಟ್ ಮಾಡಿ, ನಿಮ್ಮ ಸರ್ವೆ ನಂಬರ್ ನಮೂದಿಸಿ
* ತಕ್ಷಣ ಗ್ರಾಮ ನಕ್ಷೆ ಡೇಟಾ ವಿವರ ಬರುತ್ತದೆ. ಸರ್ವೆ ನಂಬರ್ ಗ್ರಾಮದ ಹೆಸರು ಹೋಬಳಿ ಹೆಸರು ತಾಲೂಕಿನ ಹೆಸರು ಹಾಗೂ ಜಿಲ್ಲೆಯ ಹೆಸರಿನೊಂದಿಗೆ ನೀವು ಈಗ ಇರುವ ಲೋಕೇಶನ್ ನಿಂದ ಆ ಸ್ಥಳಕ್ಕೆ ಎಷ್ಟು ದೂರ ಆಗುತ್ತದೆ ಎನ್ನುವುದರ ಮಾಹಿತಿ ಕೂಡ ಇರುತ್ತದೆ.
* ಜೊತೆಗೆ ಹೆಚ್ಚಿನ ವಿವರಗಳು ಎನ್ನುವ ಆಯ್ಕೆ ಕೂಡ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಸರ್ವೆ ನಂಬರ್ ಹಾಗೂ ಹಿಸ್ಸಾ ಸಂಖ್ಯೆ ಹಾಕಿದರೆ ಮಾಲೀಕನ ವಿವರ ಕೂಡ ಬರುತ್ತದೆ. RTC ತೆಗೆದುಕೊಳ್ಳುವ ಆಪ್ಷನ್ ಕೂಡ ಇರುತ್ತದೆ
* ಸರ್ಕಾರದ ಡಾಟಾ ಪ್ರಕಾರ ನಿಮ್ಮ ಜಮೀನಿನ ನಕ್ಷೆ ಹೇಗಿದೆ ಎಂದು ತಿಳಿದುಕೊಳ್ಳಲು ಮತ್ತೊಮ್ಮೆ ಮಾಪನ ಸಾಧನಗಳು ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಮೇಲಿನ ಮೂರು ಸಿಂಬಲ್ ಗಳಲ್ಲಿ ಕೊನೆಯ ನಕ್ಷೆ ತೋರಿಸುವ ಸಿಂಬಲ್ ಕ್ಲಿಕ್ ಮಾಡಿ
* ಸ್ಕ್ರೀನ್ ಮೇಲೆ ನಿಮ್ಮ ಜಮೀನಿನ ನಕ್ಷೆ ಕಾಣುತ್ತದೆ ನೀವು ಬೌಡರಿ ಸೆಲೆಕ್ಟ್ ಮಾಡಿದಾಗ ಸರ್ಕಾರದ ಡೇಟಾ ಪ್ರಕಾರ ಮಾಹಿತಿ ಹೇಗಿದೆ ಎನ್ನುವ ಲೈನ್ ಕ್ರಿಯೇಟ್ ಆಗುತ್ತದೆ. ನೀವು ಹೆಚ್ಚು ಎಷ್ಟು ಬಳಸುತ್ತಿದ್ದೀರಿ ಅಥವಾ ಕಡಿಮೆಯಾಗಿದ್ದರೆ ಕಡಿಮೆ ಎನ್ನುವುದರ ಮ್ಯಾಪ್ ಕೂಡ ಸ್ಕ್ರೀನ್ ಮೇಲೆ ಬರುತ್ತದೆ ಅದರ ವಿಸ್ತೀರ್ಣ ಕೂಡ ತಿಳಿದುಕೊಳ್ಳಬಹುದು.
* Area ಎಷ್ಟಿದೆ ಎನ್ನುವ ವಿವರ ಕೂಡ ಇರುತ್ತದೆ. sq.mt, sq.ft, sq.km, sq.metre ಮುಂತಾದ ಆಪ್ಷನ್ ಇರುತ್ತದೆ ಅದರಲ್ಲಿ sq.metre ಎನ್ನುವುದನ್ನು ಸೆಲೆಕ್ಟ್ ಮಾಡಿ.
* Sq.metre ನಲ್ಲಿ ಇರುವ ವಿಸ್ತೀರ್ಣವನ್ನು ಗುಂಟೆಗೆ ಕನ್ವರ್ಟ್ ಮಾಡಿ. ಉದಾಹರಣೆಗೆ 9682sq.metre Area ಇದ್ದರೆ 9682 x 0.0098 ನಿಂದ ಗುಣಿಸಿ 94.8836 ಬರುತ್ತದೆ.
* ಒಂದು ಎಕರೆ 40 ಗುಂಟೆ ಹಾಗಾಗಿ ಈ ಅಳತೆಯಲ್ಲಿ 2 ಎಕರೆ 14 ಗುಂಟೆ ಎಂದು ಲೆಕ್ಕಾಚಾರ ಹಾಕಬಹುದು.