ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಿದ ಮೇಲೆ ತನ್ನ ಮಹತ್ವಕಾಂಕ್ಷಿಯ ಪಂಚ ಖಾತ್ರಿ ಯೋಜನೆಗಳು (Gyarantee Scheme) ಮಾತ್ರವಲ್ಲದೆ ಬಜೆಟ್ ನಲ್ಲಿಯೂ ಸಹ ಅನೇಕ ಜನಪರ ಯೋಜನೆಗಳನ್ನು ಘೋಷಿಸಿದೆ. ಇದರ ನಡುವೆ ಸಾಕಷ್ಟು ಯೋಜನೆಗಳಿಗೆ ತಿದ್ದುಪಡಿ ಕಾರ್ಯ ಕೂಡ ನಡೆಯುತ್ತಿದ್ದು ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಪರ್ವವೇ ನಡೆಯುತ್ತಿದೆ ಎನ್ನಬಹುದು.
ಈ ವರ್ಷ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳು ಬದಲಾವಣೆ ಆಗಿದ್ದು, ಸರ್ಕಾರವು ಈ ಹಿಂದೆ ಭರವಸೆ ಕೊಟ್ಟಿದ್ದ ರೀತಿಯಲ್ಲಿಯೇ ದಲಿತರ ಭೂಮಿ ವಾಪಸ್ ಕೊಡಿಸುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕವನ್ನು (PTCL Act) ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ತಿದ್ದುಪಡಿ ಹೇಳುವ ವಿಚಾರವೇನೆಂದರೆ, ಇನ್ನು ಮುಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ (SC & ST) ಸೇರಿದ ಜನರು ಸರ್ಕಾರದಿಂದ ಮಂಜೂರಾತಿಯಾಗಿರುವ ಈ ಜಮೀನುಗಳನ್ನು ಪರಭಾರೆ ಮಾಡಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಂಡಿರಬೇಕು. ಒಂದು ವೇಳೆ ಅನುಮತಿಯಿಲ್ಲದೆ ಮಾರಾಟ ಮಾಡಿದ್ದರೆ ಅಂತಹ ಜಮೀನುಗಳ ಮೂಲ ಮಂಜೂರುದಾರರಿಗೆ ಮತ್ತೆ ಜಮೀನಿನ ಹಕ್ಕನ್ನು ನೀಡಬೇಕು ಎಂದು ಹೇಳುತ್ತದೆ.
ಯಾಕೆಂದರೆ, ಈ ರೀತಿ ದಮನಿತ ವರ್ಗಕ್ಕೆ ಬೆದರಿಕೆ ಹಾಕಿ ಅಥವಾ ಸಣ್ಣ ಮೊತ್ತವನ್ನು ಸಾಲ ರೂಪದಲ್ಲಿ ಕೊಟ್ಟು ಅನಕ್ಷರಸ್ಥರು ಹಾಗೂ ಅಸಹಾಯಕರಾಗಿರುವ ಇವರಿಂದ ಭೂಮಿ ಹೊಡೆಯುತ್ತಿರುವ ಸಂಖ್ಯೆ ಹೆಚ್ಚಳವಾಗಿತ್ತು ಈ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಇಂತಹದೊಂದು ಮಹತ್ವದ ತಿದ್ದುಪಡಿಗೆ ಕೈ ಹಾಕಿದೆ.
ಈ ಅಧಿನಿಯಮದ ಪ್ರಕಾರ ಆ ಕುಟುಂಬಗಳಲ್ಲಿ ಕುಟುಂಬ ಸದಸ್ಯರ ನಡುವಿನ ಪಾಲುದಾರಿಕೆ ಸಮಯದಲ್ಲಿ ವಿಭಾಗದ ಮೂಲಕ ಮತ್ತು ಆ ತಂದೆಯು ಮೇಲಿನ ಮೂಲಕ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಿಕೊಟ್ಟಿರುವುದು ಹೊರತುಪಡಿಸಿ ಭೋಗ್ಯ, ಕ್ರಯದ ಮೂಲಕ ಇನ್ಯಾವುದೇ ರೀತಿಯಲ್ಲಿ ಜಮೀನನ್ನು ಪಡೆದಿದ್ದರು ಕೂಡ ಪಡೆದದ್ದವರಿಗೆ ಸಂ’ಕ’ಷ್ಟ ಎದುರಾಗಲಿದೆ.
ಈ ಮೂಲಕ 1978ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು (Ex. PM Indira Gandhi) ಜಾರಿಗೆ ತಂದ ಕಾನೂನಿಗೆ ಮರು ಜೀವ ತುಂಬಿದಂತಾಗಿದೆ. ಈ ಆದೇಶದ ಪ್ರಕಾರ ಇನ್ನು ಮುಂದೆ ಮಾತ್ರವಲ್ಲದೇ ಈಗಾಗಲೇ ಇಂತಹ ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ಯಾವುದೇ ಹಂತದಲ್ಲಿ ಇದ್ದರೂ AC, DC, ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲೇ ಇದ್ದರೂ ಪೆಂಡಿಂಗ್ ಆಗಿದ್ದರೂ ಸಹ ಅವುಗಳಿಗೆ ಈ ಕಾಯ್ದೆ ಜಾರಿಯಾಗುತ್ತದೆ.
ಆದರೆ ಒಂದು ವೇಳೆ ಯಾವುದಾದರೂ ಪ್ರಕರಣಗಳು ನ್ಯಾಯ ಸಮ್ಮತವಾಗಿ ವಿಲೇ ಆಗಿಹೋಗಿದ್ದರೆ ಅವು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈ ಕಾನೂನು ಜಾರಿಗೆ ಬಂದ ನಂತರ ಪೆಂಡಿಂಗ್ ಇರುವ ಕೇಸ್‍ಗಳಿಗೂ ಈ ತಿದ್ದುಪಡಿ ನಿಯಮ ಅನ್ವಯವಾಗುತ್ತದೆ ಎಂದು ಈ ಸಂಬಂಧ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue Minister Krishna Bairegowda) ಅವರು ಮಾಹಿತಿ ತಿಳಿಸಿದ್ದಾರೆ.
ಸದ್ಯಕ್ಕಿರುವ ಮಾಹಿತಿಯ ಪ್ರಕಾರ 2017ರಿಂದ ಇತ್ತೀಚೆಗೆ 1558 ಪ್ರಕರಣಗಳು ಖರೀದಿದಾರರ ಪರವಾಗಿಯೇ ಇತ್ಯರ್ಥವಾಗಿವೆ, ಮತ್ತು 1003 ಪ್ರಕರಣಗಳು ಪರಿಶಿಷ್ಟರ ಪರವಾಗಿ ಇತ್ಯರ್ಥವಾಗಿವೆ. ಈ ಕಾನೂನಿನಲ್ಲಿ ಜಿಲ್ಲಾಧಿಕಾರಿಗಳಿಗೂ ಅಪೀಲ್ ಹೋಗುವ ಪವರ್ ಇದೆ. ಹಾಗಾಗಿ ಒಟ್ಟಾರೆಯಾಗಿ 2303 ಅರ್ಜಿಗಳು ಜಿಲ್ಲಾಧಿಕಾರಿಗಳ ಮುಂದೆ ಇವೆ. ರಾಜ್ಯ ರಾಜಧಾನಿಯಲ್ಲೂ ಈ ಕಾಯ್ದೆಗೆ ಸಂಬಂಧಪಟ್ಟ ಕೇಸ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇವೆ. ಇನ್ನು ಮುಂದೆ ನ್ಯಾಯ ಬದ್ಧವಾಗಿ ಇತ್ಯರ್ಥವಾಗಲಿದೆ ಎಂದು ನಿರೀಕ್ಷಿಸೋಣ.