ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ 2000 ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ರೆ ಹಣ ಬರಲ್ಲ.!

 

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಜಾರಿಯಾಗಿ ಅರ್ಹ ಫಲಾನುಭವಿಗಳಿಗೆ ಖಾತೆಗೆ DBT ಮೂಲಕ ಮೂರು ಕಂತಿನ ಹಣ ತಲುಪಿದೆ. ಆದರೂ ಕೂಡ ಇನ್ನು ಅನೇಕರು ನಮಗೆ ಒಂದು ಕಂತಿನ ಹಣ ಕೂಡ ಬಂದಿಲ್ಲ ಎಂದು ದೂರುತ್ತಿದ್ದಾರೆ. ಇವರಿಗೆಲ್ಲ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ (Gruhalakshmi Adalath) ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ.

ಇದರೊಂದಿಗೆ ಈ ಒಂದು ದಾಖಲೆಯನ್ನು ಸರಿಪಡಿಸಿಕೊಳ್ಳದೆ ಇದ್ದರೆ ಈಗ ಹಣ ಪಡೆಯುತ್ತಿರುವವರೆಗೂ ಕೂಡ ಅದು ನಿಂತು ಹೋಗಬಹುದು. ಗೃಹಲಕ್ಷ್ಮಿ ಯೋಜನೆ ಹಣ ಮಾತ್ರ ಅಲ್ಲದೆ DBT ಮೂಲಕ ವರ್ಗಾವಣೆಯಾಗುವ ಉಳಿದ ಸರ್ಕಾರದ ಯಾವುದೇ ಅನುದಾನ ಕೂಡ ಸ್ಥಗಿತಗೊಳ್ಳಬಹುದು ಯಾಕೆಂದರೆ ಆಧಾರ್ ಕಾರ್ಡ್ ಈಗ ಅಷ್ಟೊಂದು ಪ್ರಮುಖ ದಾಖಲೆಯಾಗಿದೆ.

ಆಧಾರ್ ಕಾರ್ಡ್ ನಮ್ಮ ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಎಲ್ಲದಕ್ಕೂ ಕೂಡ ಲಿಂಕ್ ಆಗಿರುತ್ತದೆ ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ಚೀಟಿ ಆಗಿರುವ ಈ ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬ ನಾಗರಿಕನ್ನು ಪಡೆದಿರಲೇಬೇಕು. ಇದು ಸ್ಥಗಿತಗೊಂಡರೆ ಉಳಿದ ಎಲ್ಲಾ ಚಟುವಟಿಕೆಗಳಿಗೂ ತೊಡಕಾಗುತ್ತದೆ.

ಈಗ ಆಧಾರ್ ಕಾರ್ಡ್ ವಿಚಾರವಾಗಿ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದೇನೆಂದರೆ, UIDAI ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ (Aadhar Update) ಅವರು ಈಗಾಗಲೇ ಆಧಾರ್ ಕಾರ್ಡ್ ನಲ್ಲಿರುವ ಯಾವುದಾದರೂ ಮಾಹಿತಿ ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು.

ಒಂದು ವೇಳೆ ಎಲ್ಲಾ ದಾಖಲೆಗಳು ಸರಿ ಇದ್ದರೂ ಕೂಡ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿ ಆಧಾರ್ ಕಾರ್ಡ್ ನವೀಕರಿಸಿಕೊಳ್ಳಬೇಕು ಎಂದು ಸೂಚಿಸಿದೆ. ಇಲ್ಲವಾದಲ್ಲಿ ಆಧಾರ್ ಕಾರ್ಡ್ ಸ್ಥಗಿತಕೊಳ್ಳುತ್ತದೆ. ನಂತರ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಡುವೆ ಯಾವುದೇ ಹಣಕಾಸು ಹಾಗೂ ಹಣಕಾಸೇತರವಾದ ಚಟುವಟಿಕೆಗಳು ನಡೆಯುವುದಿಲ್ಲ.

ಹಾಗಾಗಿ ಯಾರು ಕಳೆದ ಹತ್ತು ವರ್ಷಗಳಿಂದ ಅಂದರೆ 2013ಕ್ಕಿಂತ ಮುಂಚೆ ಆಧಾರ್ ಕಾರ್ಡ್ ಪಡೆದಿದ್ದರೂ ಅವರು ತಪ್ಪದೇ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ನಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರ ಹಾಗೂ ಪ್ರತಿ ವ್ಯಕ್ತಿಗೂ 12 ಸಂಖ್ಯೆಗಳ ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿ ಮಾಹಿತಿಗಳು ಇರುತ್ತವೆ.

ಈ ಮಾಹಿತಿಗಳು ಇರುವ ಪಕ್ಕದಲ್ಲಿಯೇ ನೀವು ಯಾವ ದಿನಾಂಕದಂದು ಆಧಾರ್ ಕಾರ್ಡ್ ಪಡೆದಿದ್ದೀರಿ ಆ ದಿನಾಂಕವನ್ನು ಕೂಡ ಪ್ರಿಂಟ್ ಮಾಡಲಾಗಿರುತ್ತದೆ. ನೀವು ಅದನ್ನು ತಿಳಿದುಕೊಂಡು ನೀವೀಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕಾ ಮಾಡಿಸಬಾರದ ಎನ್ನುವುದನ್ನು ಅರಿತುಕೊಳ್ಳಬಹುದು.

ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷಗಳಾಗಿದ್ದರು ಮಧ್ಯದಲ್ಲಿ ಯಾವಾಗಲಾದರೂ ಯಾವುದೇ ಒಂದು ಮಾಹಿತಿಯನ್ನು ತಿದ್ದುಪಡಿ ಮಾಡಿಸಿದ್ದರೆ ನಿಮಗೆ ಈಗ ಮತ್ತೆ ತಿದ್ದುಪಡಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ.

ಸರ್ಕಾರದ ಆದೇಶ ಪ್ರಕಾರ ನೀವು ಆಧಾರ್ ಕಾರ್ಡ್ ಪಡೆದು ಹತ್ತು ವರ್ಷಗಳಾಗಿದ್ದರೆ ಈಗ ನಿಮಗೆ ಯಾವುದೇ ತಿದ್ದುಪಡಿ ಇದ್ದರೂ ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಕೊಟ್ಟು ಒಂದು ವೇಳೆ ಯಾವುದೇ ತಿದ್ದುಪಡಿ ಇಲ್ಲದೆ ಇದ್ದರೆ ನವೀಕರಣಕ್ಕಾಗಿ POI ಅಥವಾ POA ಅಪ್ಡೇಟ್ ಮಾಡಿಸಿ.

ಇಲ್ಲವಾದಲ್ಲಿ ಮುಂದಿನ ತಿಂಗಳಿಂದಲೇ ನಿಮ್ಮ ಅನ್ನಭಾಗ್ಯ ಗೃಹಲಕ್ಷ್ಮಿ ಹಣ, ಸಾಮಾಜಿಕ ಭದ್ಲತಾ ಯೋಜನೆಯಡಿ ನೀಡುವ ಪಿಂಚಣಿಗಳು PMKSY ಹಣ ಇನ್ನು ಮುಂತಾದ ಯಾವುದೇ ಹಣ ಕೂಡ ಬರುವುದಿಲ್ಲ. ನೀವು ಆಧಾರ್ ಕೇಂದ್ರಗಳು ಅಥವಾ ಅಂಚೆ ಕಚೇರಿ ಅಥವಾ UIDAI ನ ಅಧಿಕೃತ ವೆಬ್ಸೈಟ್‌ಗೆ ಭೇಟಿ ಕೊಡುವ ಮೂಲಕ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು.

https://youtu.be/hUq4-7nU_Q4?si=Xzef3tEyGAsh8YSw

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now