ನಾವು ನಮ್ಮ ಪ್ರಮುಖ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದರೆ ಆತಂಕ ಪಡುತ್ತೇವೆ, ಚಿಕ್ಕ ವಸ್ತುಗಳು ಕಳುವಾದ್ರೆ ಅದನ್ನು ಕೊಂಚ ತಾಳ್ಮೆಯಿಂದ ಹುಡುಕುತ್ತೇವೆ. ಆದ್ರೆ, ದೊಡ್ಡ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದ್ರೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತೇವೆ. ಆದ್ರೆ, ಇನಮುಂದೆ ಆ ಚಿಂತೆ ಬಿಡಿ. ಈಗ ನಿಮ್ಮ ಅಂಗೈಲಿರೋ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದಾಗಿದೆ.
ಹೌದು, ವಾಹನಗಳು ಕಳವಾದರೆ ಆನ್ಲೈನ್ ಮೂಲಕ ದೂರು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಾಹನಗಳು ಕಳವಾದರೆ ಆನ್‌ಲೈನ್‌ನಲ್ಲಿ ಯಾವ ಆ್ಯಪ್ ಮೂಲಕ ದೂರನ್ನು ಸಲ್ಲಿಸಬೇಕು?, ದೂರನ್ನು ಸಲ್ಲಿಸುವ ವಿಧಾನ ಹೇಗೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಅಕೊನೆವರೆಗೂ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.
ವಾಹನ ಕಳವಾದರೆ ದೂರು ದಾಖಲಿಸಲು ಜನರು ಇನ್ನು ಪೊಲೀಸ್ ಠಾಣೆಗೆ ಅಲೆಯಬೇಕಿಲ್ಲ. ಆನ್‌ಲೈನ್ ಮೂಲಕ ದೂರು ದಾಖಲಿಸುವ ಜನಸ್ನೇಹಿ ಸೇವೆಯನ್ನು ರಾಜ್ಯ ಪೊಲೀಸ್ ಇಲಾಖೆ ಆರಂಭಿಸಿದೆ. ದಾಖಲಾದ ದೂರಿಗೆ ಪ್ರತಿಯಾಗಿ ಇಲಾಖೆಯು ದೂರುದಾರರಿಗೆ ಇ-ಎಫ್‌ಐಆರ್ ಒದಗಿಸಿ ತನಿಖೆ ನಡೆಸಲಿದೆ. ಬೈಕ್, ಕಾರು, ಆಟೊ ಸೇರಿದಂತೆ ಯಾವುದೇ ವಾಹನ ಕಳವಾದರೆ, ಮಾಲೀಕರು ದೂರು ದಾಖಲಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮೊದಲು ಹೋಗಬೇಕಿತ್ತು.
ಠಾಣೆಗಳಲ್ಲಿ ದೂರು ದಾಖಲಿಸಲು ಸಿಬ್ಬಂದಿ ಹಿಂದೇಟು ಹಾಕುವ ಹಾಗೂ ಜನರನ್ನು ಠಾಣೆಯಿಂದ ಠಾಣೆಗೆ ಅಲೆಸುತ್ತಿದ್ದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆದರೆ, ಇನ್ನು ಮುಂದೆ ಇಂತಹ ಸಮಸ್ಯೆಗಳಿಲ್ಲ. ಇದೀಗ ನೂತನ ವ್ಯವಸ್ಥೆಯಲ್ಲಿ ಕಳುವಾದ ವಾಹನದ ಮಾಲೀಕರು ತಮ್ಮ ಮೊಬೈಲ್‌ನಲ್ಲಿ ಆನ್ ಲೈನ್ ಮೂಲಕ ದೂರು ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಜನರಿಗೆ ಠಾಣೆಗೆ ಹೋಗುವ ತೊಂದರೆ ತಪ್ಪಲಿದೆ.
ಇ-ಎಫ್‌ಐಆರ್ ಸೇವೆ (E-FIR)
ವಾಹನ ಕಳವಾದಾಗ ದೂರು ದಾಖಲಿಸುವ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ವಿಳಂಬ ಮತ್ತು ಠಾಣೆಗೆ ಜನರ ಅಲೆದಾಟ ತಪ್ಪಿಸುವ ಉದ್ದೇಶಕ್ಕೆ ಇ-ಎಫ್‌ಐಆರ್ ಸೇವೆ ಆರಂಭಿಸಲಾಗಿದೆ. ಇದರಿಂದ ವಾಹನ ಕಳವು ಪ್ರಕರಣಗಳಲ್ಲಿ ದೂರು ದಾಖಲಿಸುವುದು ಸುಲಭವಾಗುತ್ತದೆ.
ವಾಹನ ಕಳವಾದ ಬಗ್ಗೆ ಮಾಲೀಕರು ಆನ್ ಲೈನ್‌ನಲ್ಲಿ ದೂರು ನೀಡಿದರೆ ಸಂಬಂಧಪಟ್ಟ ಠಾಣೆಯ ಸಿಬ್ಬಂದಿಗಳು ವಿಚಾರವನ್ನು ಕೈಗೊಳ್ಳುತ್ತಾರೆ. ಸಾರ್ವಜನಿಕ ಸೇವಾ ಕೇಂದ್ರ ವ್ಯವಸ್ಥೆ ಮೂಲಕ ಆನ್‌ಲೈನ್ ದೂರು ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ದ್ ತಿಳಿಸಿದ್ದಾರೆ. ನೂತನ ಸೇವೆಯ ಸದುಪಯೋಗ ಪಡೆಯಬೇಕು. “ಸುಳ್ಳು ದಾಖಲಿಸಿ, ಸಿಬ್ಬಂದಿಗೆ ಸಮಸ್ಯೆ ಮಾಡಿದರೆ ಶಿಸ್ತುಕ್ರಮ ಜರುಗಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ದೂರು ದಾಖಲಿಸುವ ವಿಧಾನ
* ಮೊದಲನೆಯದಾಗಿ ದೂರು ದಾಖಲಿಸಲು ಪೊಲೀಸ್ ರಾಜ್ಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು, ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
* ನಂತರ ನಾಗರಿಕ ಕೇಂದ್ರಿತ ತಾಣ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಕ್ರಮ ನಾಗರಿಕ ಕೇಂದ್ರಿತ ಪೋರ್ಟಲ್ ಪುಟದಲ್ಲಿ ಲಾಗಿನ್ ಬಟನ್ ಒತ್ತಬೇಕು.
* ಅಲ್ಲಿ ನ್ಯೂ ಟು ಎನ್‌ಎಸ್‌ಒ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ನಮೂದಿಸಿ.
* ಹೊಸ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿಕೊಂಡು ಲಾಗಿನ್ ಆಗಿ.
* ನಂತರ ಮುಂದಿನ ಪುಟದಲ್ಲಿ ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ ಸೇರಿದಂತ ಪೂರಕ ವಿವರ ದಾಖಲಿಸಿ ದೂರು ಸಲ್ಲಿಸಬೇಕು.
* ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗುತ್ತದೆ.
* ಆ ನಂತರ ಠಾಣೆಗಳ ತನಿಖಾಧಿಕಾರಿಯ ಸಹಿ ಸಮೇತ ಇ-ಎಫ್‌ಐಆರ್ ಪ್ರತಿ ಸಿಗುತ್ತದೆ.
ಈ ಎಫ್‌ಐಆರ್ ಪ್ರತಿಗೆ ಕಾನೂನು ಬದ್ದ ಮಾನ್ಯತೆ ಇದ್ದು, ಪೊಲೀಸರು ಬೇರೆ ಪ್ರಕರಣಗಳಂತೆ ತನಿಖೆ ಮಾಡುತ್ತಾರೆ. ಎಲ್ಲಾ ನಾಗರಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.