ನಿಮ್ಮ APL ಕಾರ್ಡ್ ಅನ್ನು BPL ಕಾರ್ಡ್ ಆಗಿ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

 

WhatsApp Group Join Now
Telegram Group Join Now

BPL ಕಾರ್ಡ್ ಹೊಂದಿರುವವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಎನ್ನುವುದನ್ನು ಪ್ರತಿನಿಧಿಸುವುದರಿಂದ BPL ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ಅನೇಕ ಯೋಜನೆಗಳ ಅನುಕೂಲ ಸಿಗುತ್ತಿದೆ. BPL ಕಾರ್ಡ್ ಹೊಂದಿರುವವರ ವಾರ್ಷಿಕ ಆದಾಯದ ಮಿತಿ ಹೆಚ್ಚಾದಾಗ ಅದನ್ನು APL ಕಾರ್ಡ್ ಆಗಿ ಬದಲಾಯಿಸಬಹುದು ಆದರೆ ಒಂದು ಬಾರಿ APL ಕಾರ್ಡ್ ಪಡೆದ ಮೇಲೆ ಅದನ್ನು BPL ಕಾರ್ಡ್ ಆಗಿ ಬದಲಾಯಿಸುವುದು ಬಹಳ ಕಷ್ಟ.

ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಈ ರೀತಿ ವ್ಯತ್ಯಾಸ ಆಗಿರುತ್ತದೆ, ನಂತರ ಬದಲಾಯಿಸಬೇಕಾದ ಅವಶ್ಯಕತೆ ಬರುತ್ತದೆ. ಉದಾಹರಣೆಗೆ BPL ಕಾರ್ಡ್ ಗೆ ಅರ್ಹತೆ ಇದ್ದರೂ ಮಂಜೂರು ಮಾಡುವಾಗ APL ಕಾರ್ಡ್ ಮಂಜೂರು ಮಾಡಿರಬಹುದು ಅಥವಾ ಮಗಳು ಸರ್ಕಾರಿ ಉದ್ಯೋಗ ಹೊಂದಿದ್ದು ಮದುವೆ ಆದ ಬಳಿಕ ಬೇರೆ ಮನೆ ಸೇರುವುದರಿಂದ ಆಗ ತಂದೆ ಮನೆಯವರು BPL ಕಾರ್ಡ್ ಪಡೆಯಬಹುದು.

ಆಸ್ತಿ ಖರೀದಿಗೆ ಮಿತಿ ವಿಧಿಸಿದ ಸರ್ಕಾರ. ಒಬ್ಬ ವ್ಯಕ್ತಿ ಎಷ್ಟು ಜಮೀನು ಖರೀದಿಸಬಹುದು ಗೊತ್ತಾ.?

ಹೆಚ್ಚು ಕೃಷಿ ಭೂಮಿ ಇರುವ ಕಾರಣ APL ಕಾರ್ಡ್ ಪಡೆದವರು ಕಾರಣಾಂತರಗಳಿಂದ ಅದನ್ನು ಕಳೆದುಕೊಂಡಾಗ ಅಥವಾ ಮಾರಾಟ ಮಾಡಿದರೆ ಆ ಬಳಿಕ ಅವರು ಬಡತನ ರೇಖೆಗಿಂತ ಕೆಳಗೆ ಬರುವುದರಿಂದ BPL ಕಾರ್ಡ್ ಗೆ ಅವರ ರೇಷನ್ ಕಾರ್ಡನ್ನು ಬದಲಾಯಿಸಿಕೊಳ್ಳಬೇಕಾಗಿ ಬರುತ್ತದೆ. ಅಂತಹ ಸಮಯದಲ್ಲಿ ಯಾವ ರೀತಿ ಅರ್ಜಿ ಸಲ್ಲಿಸಬಹುದು ಅದಕ್ಕೆ ಇರುವ ಸುಲಭ ವಿಧಾನ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ. ಆನ್ಲೈನ್ ಮತ್ತು ಆಫ್ಲೈನ್ ಎರಡು ಮೂಲಕವಾಗಿ ಕೂಡ ನೀವು ಅರ್ಜಿ ಸಲ್ಲಿಸಬಹುದು.

ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸುವ ವಿಧಾನ:-

● ಹತ್ತಿರದ CSC ಸೆಂಟರ್ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಿ ಅರ್ಜಿ ಸಲ್ಲಿಬಹುದು. ಅಥವಾ ಸ್ವತಃ ಮೊಬೈಲ್ ಫೋನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಆದರೆ ಕಡ್ಡಾಯವಾಗಿ ಬಯೋಮೆಟ್ರಿಕ್ ನ ಅವಶ್ಯಕತೆ ಇರುತ್ತದೆ.
ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್‌ ಭೇಟಿ ನೀಡಿ ಹೋಗಿ, E Service ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ.

● e-ration card ಆಪ್ಷನ್ ನಿಂದ New Ration card ಆಯ್ಕೆ ಮಾಡಿ, New ration card request ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ಆದ್ಯತಾ ಕುಟುಂಬ ಹಾಗು ಆದ್ಯತೇತರ ಕುಟುಂಬ ಎಂಬ ಎರಡು ಆಯ್ಕೆಗಳಿದ್ದು,
(PHH) ಆದ್ಯತಾ ಕುಟುಂಬ : BPL
(NPHH) ಆದ್ಯತೇತರ ಕುಟುಂಬ: APL

ಇವುಗಳಲ್ಲಿ ಆದ್ಯತ ಕುಟುಂಬ ಆಯ್ಕೆ ಮಾಡಿದರೆ ಬಯೊಮೆಟ್ರಿಕ್ ಕಡ್ಡಾಯವಾಗಿರುತ್ತದೆ. ನಿಮ್ಮ ಬಳಿ ಬಯೊಮೆಟ್ರಿಕ್ ಡಿವೈಸ್ ಇಲ್ಲದಿದ್ದರೆ ಹತ್ತಿರದ CSC ಕೇಂದ್ರಕ್ಕೆ ತೆರಳಿ ಮಾಡಿಸಿಕೊಳ್ಳಿ. ಜತೆಗೆ ಇನ್ನಿತರ ಮಾಹಿತಿಯನ್ನು ಒದಗಿಸಿ. ಒಂದು ವೇಳೆ ನಿಮ್ಮ ಆಯ್ಕೆ ಆದ್ಯತೇತರ ಕುಟುಂಬ APL ಆದಲ್ಲಿ ನಿಮ್ಮ Aadhar number ನಮೂದಿಸಿ.

● ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ GO ಕ್ಲಿಕ್ ಮಾಡಿದರೆ OTP ಬರುತ್ತದೆ ಅದನ್ನು ನಮೂದಿಸಿ ಅಥವಾ Fingerprint ಪರಿಶೀಲನೆಯನ್ನು ಬಳಸಿಕೊಂಡು ಯಶಸ್ವಿ ದೃಢೀಕರಣ ಮಾಡಿ, GO ಕ್ಲಿಕ್ ಮಾಡಿ.
● ಯಶಸ್ವಿ ಪರಿಶೀಲನೆಯ ನಂತರ Aadhar details ತೋರಿಸಲಾಗುತ್ತದೆ. ನಂತರ Add ಬಟನ್ ಕ್ಲಿಕ್ ಮಾಡಿ ಆಗ application number ಕ್ರಿಯೇಟ್ ಆಗುತ್ತದೆ.

● ಇಲ್ಲಿ ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಕರ್ನಾಟಕ BPL ಪಡಿತರ ಚೀಟಿ ಹೊಸ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು GO ಆಪ್ಷನ್ ಆಯ್ಕೆ ಮಾಡಿ.
● ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಇದೆಲ್ಲವನ್ನು ಪೂರ್ಣಗೊಳಿಸಿದ ನಂತರ Submit ಮೇಲೆ ಕ್ಲಿಕ್ ಮಾಡಿ.

● ಸ್ಕ್ರೀನ್ ಮೇಲೆ ನಿಮ್ಮ ಕಾರ್ಡಿನ ಮಾದರಿ ಪ್ರತಿಯಲ್ಲಿನ ವಿವರಗಳು ಬರುತ್ತದೆ. ಅದು ಸರಿಯಾಗಿವೆಯೇ ಎಂದು ಬಳಕೆದಾರರು ಚೆಕ್ ಮಾಡಿ ನಂತರ RC ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಪಡಿತರ ಕಾರ್ಡ್ ಅನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

ಇನ್ಮುಂದೆ ಗಂಡಸರಿಗೂ ಪ್ರತಿ ತಿಂಗಳು 3000 ಕೊಡಲು ನಿರ್ಧರಿಸಿದ ಸರ್ಕಾರ. ಇದ್ಯಾವ ಸ್ಕೀಮ್ ಅಂತ ಒಮ್ಮೆ ನೋಡಿ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಅಲ್ಲಿಸಿ ಹಣ ಪಡೆಯಬಹುದು.!

ಆಫ್ ಲೈನ್ (Offline) ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-

● ತಾಲೂಕ ಕಚೇರಿಯಲ್ಲಿ ಒಂದು ಲಿಖಿತ ಅರ್ಜಿ ಬರೆದು ಅದರಲ್ಲಿ ಕಾರಣವನ್ನು ತಿಳಿಸಿ, ಅದರ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
● ತಾಲೂಕು ಅಧಿಕಾರಿಗಳು ವಾರದ ಒಳಗೆ ನಿಮ್ಮ ಅರ್ಜಿ & ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ನಿಮ್ಮ APL ಕಾರ್ಡ್ ಅನ್ನು ರದ್ದು ಪಡಿಸುತ್ತಾರೆ. ನಂತರ ನೀವು ಅಗತ್ಯ ದಾಖಲೆಗಳೊಂದಿಗೆ ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-

● ಆಧಾರ್ ಕಾರ್ಡ್
● ಜಾತಿ ಮತ್ತು ಆದಾಯ
● ರೇಷನ್ ಕಾರ್ಡ್ ಸಂಖ್ಯೆ
● ಜನನ ಪ್ರಮಾಣ ಪತ್ರ ( 6 ವರ್ಷದ ಒಳಗೆ ಮಕ್ಕಳಿಗೆ ).

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now