ಫಾಲ್ಗುಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆ ದಿನಕ್ಕೆ ಬಹಳ ವಿಶೇಷವಿದೆ. ಏಕೆಂದರೆ ಈ ದಿನವನ್ನು ಹಿಂದೂಗಳು ಹೋಳಿ ಹಬ್ಬ ಎಂದು ಆಚರಿಸುತ್ತಾರೆ. ರಂಗ ಪಂಚಮಿ ಹಬ್ಬವನ್ನು ಮಕ್ಕಳಿಂದ ಹಿಡಿದು ಯುವಕರು ಹಾಗೂ ಹಿರಿಯರು ಎಲ್ಲರೂ ಸಹ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ತಿಂಗಳ ಹಿಂದಿನಿಂದಲೇ ಇದಕ್ಕೆ ತಯಾರಿ ಶುರುವಾಗಿರುತ್ತದೆ. ಆ ದಿನ ಸಂಜೆ ಸಮಯ ಬೆಂಕಿ ಹಾಕಿ ಅದರ ಸುತ್ತ ಎಲ್ಲರೂ ನೃತ್ಯ ಕೂಡ ಮಾಡುತ್ತಾರೆ. ಇದರ ಬಗ್ಗೆ ಪುರಾಣದಲ್ಲಿ ಬಹಳ ವಿಶೇಷತೆ ಇದೆ.
ಅದೇನೆಂದರೆ ರಾಧಾ ಮತ್ತು ಕೃಷ್ಣ ಲೀಲೆಯು ಶುರುವಾದ ದಿನ, ಹಿರಣ್ಯ ಕಶ್ಯಪನನ್ನು ನರಸಿಂಹನ ಅವತಾರ ತಾಳಿ ವಿಷ್ಣು ಸಂಹಾರ ಮಾಡಿದ ದಿನ ಹೀಗೆ ನಾನಾ ಕಥೆಗಳು ಇವೆ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಆಚರಿಸುವ ಹಬ್ಬ ಇದಾಗಿದ್ದು, ಜಾತಿ ಧರ್ಮ ಭಾಷೆ ಇದ್ಯಾವುದರ ಬೇಧ ಇಲ್ಲದೆ ಎಲ್ಲರೂ ಒಬ್ಬರಿಗೊಬ್ಬರು ಬಣ್ಣ ಹಾಕುತ್ತಾ ಹೊಸತನವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಪ್ರಕೃತಿಯು ಸಹ ವಸಂತ ಋತುವಿನತ್ತ ಹೋಗುತ್ತಿರುವುದರಿಂದ ಸುತ್ತಾ ನಿಸರ್ಗದಲ್ಲೂ ಹಸಿರುತನ ಚಿಗುರುತ್ತಿರುತ್ತದೆ.
ಈ ಹೋಳಿ ಹುಣ್ಣಿಮೆಯ ದಿನ ನರಸಿಂಹ ಅವತರ ತಾಳಿದ ಮಹಾವಿಷ್ಣುವು ಲಕ್ಷ್ಮಿ ಸಮೇತವಾಗಿ ಬಂದು ಒಂದು ವೃಕ್ಷದಲ್ಲಿ ನೆಲೆಸಿರುತ್ತಾರೆ ಎನ್ನುವ ಪ್ರತೀತಿಯಿದೆ. ಆ ದಿನ ಆ ವೃಕ್ಷವನ್ನು ಸ್ಪರ್ಶಿಸಿ ಭಕ್ತಿಯಿಂದ ಬೇಡಿಕೊಂಡರೆ ನಿಮ್ಮ ಮನೆಗೆ ಹಣದ ಹೊಳೆಯೇ ಹರಿದು ಬರುತ್ತದೆ. ಅದು ಯಾವ ಮರ ಗೊತ್ತಾ ಯಾವ ರೀತಿ ಆ ಮರಕ್ಕೆ ಪೂಜೆ ಸಲ್ಲಿಸಬೇಕು,ಇದಕ್ಕೆ ಏನು ಕೇಳಿಕೊಳ್ಳಬೇಕು ಮಾಹಿತಿ ಇಲ್ಲಿದೆ ನೋಡಿ
ಹೌದು ಔದುಂಗುರ ಅಥವಾ ಹತ್ತಿ ಮರ ಎಂದು ಈ ಮರವನ್ನು ಕರೆಯುತ್ತಾರೆ. ಆ ಮರದಲ್ಲಿ ವಿಷ್ಣುವು ನರಸಿಂಹನಾಗಿ ವಿಷ್ಣುವನ್ನು ಸಂಹರಿಸಿದ ನಂತರ ಉಗುರುಗಳಲ್ಲಿ ಇದ್ದ ಅವನ ಅಂಶದಿಂದ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಅದನ್ನು ತೆಗೆದುಕೊಳ್ಳಲಾಗದೆ ಒಂದು ಮರಕ್ಕೆ ಅದನ್ನು ಚುಚ್ಚುಬಿಡುತ್ತಾರೆ. ಆಗ ಆ ವಿಷಾಂಶದಿಂದ ಮರವು ಸಹ ನರಳುತ್ತದೆ. ವಿಷ್ಣುವಿಗೆ ವಿನಮ್ರದಿಂದ ಮರವು ಕೇಳಿಕೊಳ್ಳುತ್ತದೆ.
ನೀವೇನೋ ನನ್ನಲ್ಲಿ ಉಗುರುಗಳನ್ನು ಚುಚ್ಚಿ ನಿಮ್ಮ ತೊಂದರೆ ಸರಿಪಡಿಸಿಕೊಂಡಿರಿ, ಆದರೆ ನನಗೆ ಇದರಿಂದ ವಿಪರೀತ ಹಿಂಸೆ ಆಗುತ್ತಿದೆ ದೇವ ಎಂದು ಆಗ ಹರಿಯು ಇದನ್ನು ಈಗ ಸಹಿಸಿಕೊ ನಾನು ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ಬಂದು ನಿನ್ನಲ್ಲಿ ನೆಲೆಸಿ ನಿನ್ನನ್ನು ಪುನೀತನನ್ನಾಗಿ ಮಾಡುತ್ತೇನೆ ಎಂದು ವರ ಕೊಡುತ್ತಾನೆ. ಆ ಕಾರಣಕ್ಕಾಗಿ ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದಂದು ಶ್ರೀ ವಿಷ್ಣು ಮಹಾಲಕ್ಮಿಯ ಸಮೇತವಾಗಿ ಆ ಮರದಲ್ಲಿ ನೆಲೆಸಿರುತ್ತಾರೆ.
ಆ ದಿನ ಮಧ್ಯ ರಾತ್ರಿ ನೀವು ಒಂದು ತೆಂಗಿನ ಕಾಯಿ ಹಾಗೂ ಒಂದು ಕೆಂಪು ವಸ್ತ್ರ ಮತ್ತು ಐದು ಬತಾಸು ಅಥವಾ ಊದುಗಡ್ಡಿಗಳನ್ನು ತೆಗೆದುಕೊಂಡು ಮಹಾಲಕ್ಷ್ಮಿ ಸಮೇತ ಶ್ರೀ ವಿಷ್ಣುವೇ ನನ್ನ ಸಮಸ್ಯೆಗಳನ್ನೆಲ್ಲಾ ಪರಿಹಾರ ಮಾ,ಡಿ ನನ್ನ ಕೆಟ್ಟತನವನ್ನೆಲ್ಲ ದೂರ ಮಾಡಿ, ನನಗೆ ಸನ್ಮಾರ್ಗದಲ್ಲಿ ನಡೆಸಿ ಇಂದಿನಿಂದ ನನ್ನ ಎಲ್ಲಾ ಕಾರ್ಯಗಳು ಕೈಗೊಳ್ಳುವಂತೆ ಮಾಡಿ, ನನಗೆ ಹಣದ ಸಮಸ್ಯೆ ಇದೆ ಅದನ್ನು ಪರಿಹಾರ ಮಾಡಿ ಎಂದು ಹೇಳಿಕೊಂಡು ಕೊನೆಯಲ್ಲಿ ನಾನು ನಿಮ್ಮ ಸ್ಪರ್ಶ ಮಾಡುತ್ತೇನೆ.
ದಯವಿಟ್ಟು ನನಗೆ ಅನುಗ್ರಹಿಸಿ ಎಂದು ಕೇಳಿಕೊಳ್ಳಬೇಕು. ಆನಂತರ ಎರಡು ಕೈಗಳಿಂದ ನಮಸ್ಕರಿಸಿ ಕೆಂಪು ವಸ್ತ್ರದಿಂದ ಒಂದು ಹತ್ತಿ ಹಣ್ಣನ್ನು ತೆಗೆದುಕೊಂಡು ಮನೆಗೆ ಬರಬೇಕು. ಆದರೆ ಬರುವ ದಾರಿಯಲ್ಲಿ ಮತ್ತೆ ಹಿಂದೆ ತಿರುಗಿ ನೋಡಲೇಬಾರದು. ಮನೆಗೆ ಬಂದ ಮೇಲೆ ಅದನ್ನು ನಿಮ್ಮ ಹಣ ಇಡುವ ಬಾಕ್ಸ್ ಅಲ್ಲಿ ಇಟ್ಟುಕೊಂಡು ಯಾರಿಗೂ ರಹಸ್ಯ ತಿಳಿಯದಂತೆ ಕಾಪಾಡಿಕೊಳ್ಳಿ ನಂತರ ನಡೆವ ಚಮತ್ಕಾರವನ್ನು ನೀವೇ ನೋಡುತ್ತೀರಿ.