ಬಿಳಿ ಕೂದಲಿನ ಸಮಸ್ಯೆ ಹಾಗು ಕೂದಲು ಉದುರುವಂತಹ ಸಮಸ್ಯೆ ಯಾರಿಗೆ ತಾನೇ ಇಲ್ಲ ಹೇಳಿ ಇತ್ತೀಚಿನ ದಿನಗಳಿಗೆ ಈ ಸಮಸ್ಯೆ ಮಾಮೂಲಿಯಾಗಿ ಬಿಟ್ಟಿದೆ ಈ ಒಂದು ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡಬಾರದು ಬದಲಿಗೆ ನಾವು ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನೇ ಬಳಸಿಕೊಂಡು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಕೂದಲಿಗೆ ಉತ್ತಮವಾದಂತಹ ಪೋಷಕಾಂಶಗಳು ಒದಗುವ ರೀತಿಯಲ್ಲಿ ನಾವು ನೋಡಿಕೊಳ್ಳಬೇಕು. ಕೂದಲು ಉದುರದೆ ಇರಲು ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥಗಳು ಒಂದು ನಿಂಬೆ ಹಣ್ಣು, ಎರಡು ಟೇಬಲ್ ಸ್ಪೂನ್ ನೆಲ್ಲಿಕಾಯಿ ಪೌಡರ್, ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಈ ಎಲ್ಲ ಪದಾರ್ಥಗಳು ಸಹ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೆ ನಮ್ಮ ಕೂದಲಿಗೂ ಸಹ ಇದರಿಂದ ಉತ್ತಮವಾದಂತಹ ಆರೋಗ್ಯ ದೊರೆಯುತ್ತದೆ.
ಇಲ್ಲಿ ಬಳಸಿರುವಂತಹ ನಿಂಬೆಹಣ್ಣಿನ ರಸ ನಮ್ಮ ಕೂದಲಿನ ಬುಡದಲ್ಲಿ ಇರುವಂತಹ ಡೆಡ್ ಸೆಲ್ಸ್ ತೊಲಗಿಸುತ್ತದೆ ಕೂದಲು ಉದುರಿರುವಂತಹ ಜಾಗದಲ್ಲಿ ಮತ್ತೆ ಹೊಸ ಕೂದಲು ಬರಲು ಇದು ಸಹಾಯ ಮಾಡುತ್ತದೆ. ಎರಡು ಟೇಬಲ್ ಸ್ಪೂನ್ ನಷ್ಟು ನೆಲ್ಲಿಕಾಯಿ ಪೌಡರನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆಹಣ್ಣಿನ ಸರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ನ ರೀತಿಯಲ್ಲಿ ಮಾಡಿಕೊಂಡು ಎರಡು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿದರೆ ಪ್ಯಾಕ್ ತಯಾರಾಗುತ್ತದೆ. ನೀವು ತಯಾರಿಸಿಕೊಂಡಿರುವಂತಹ ಪ್ಯಾಕನ್ನು 10 ವರ್ಷ ಮೇಲ್ಪಟ್ಟಂತಹ ಮಕ್ಕಳಿಗೂ ಸಹ ಉಪಯೋಗ ಮಾಡಬಹುದು ಯಾರಿಗೆಲ್ಲ ಕೂದಲು ಉದುರುವಿಕೆಯ ಸಮಸ್ಯೆ ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳುಪಾಗುವಂತಹ ಸಮಸ್ಯೆ ಇರುತ್ತದೆ ಅಂತಹವರು ಈ ಒಂದು ಮನೆಮದ್ದನ್ನು ಬಳಸಿದ್ದೆ ಆದಲ್ಲಿ ನಿಮಗೆ ಉತ್ತಮವಾದಂತಹ ಫಲಿತಾಂಶ ದೊರೆಯುತ್ತದೆ.
ತಲೆಯಲ್ಲಿ ಡ್ಯಾಂಡ್ರಫ್ ಇರುವವರು ಹಾಗೆ ಹೆಚ್ಚಾಗಿ ಕೂದಲು ಉದುರುತ್ತಾ ಇದ್ದರೆ ನೀವು ವಾರದಲ್ಲಿ ಎರಡು ಬಾರಿ ಪ್ಯಾಕ್ ಅನ್ನು ಉಪಯೋಗ ಮಾಡಿಕೊಳ್ಳಬಹುದು ಹಾಗೆ ನೀವು ನಿಮ್ಮ ತಲೆಯಲ್ಲಿ ಎಣ್ಣೆ ಹಚ್ಚಿದರೂ ಸಹಿತ ಈ ಒಂದು ರೆಮಿಡಿಯನ್ನು ಬಳಸಬಹುದು. ನಮ್ಮ ತಲೆಯಲ್ಲಿ ಕೂದಲು ಉದರುವುದಕ್ಕೆ ಹಲವಾರು ರೀತಿಯ ಕಾರಣಗಳು ಇರುತ್ತದೆ ನಮ್ಮ ದೇಹದಲ್ಲಿ ಆಗುವಂತಹ ಹಾರ್ಮೋನಿಯಂ ಇಂಬ್ಯಾಲೆನ್ಸ್ ಹಾಗೂ ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ ಹಾಗೆ ಇನ್ನಿತರ ಕಾರಣಗಳಿಂದಾಗಿ ನಮ್ಮ ತಲೆಕೂದಲು ಉದುರುತ್ತಾ ಇರುತ್ತದೆ.
ಬಿಳಿಕೂದಲು ಅತಿ ಚಿಕ್ಕ ವಯಸ್ಸಿನಲ್ಲಿ ಕಂಡುಬರುತ್ತದೆ ಈ ಎಲ್ಲಾ ಸಮಸ್ಯೆಗಳನ್ನು ನಾವು ಈ ಒಂದು ಮನೆಮದ್ದನ್ನು ಉಪಯೋಗಿಸಿಕೊಂಡು ನಿವಾರಣೆ ಮಾಡಬಹುದು. ಆದಷ್ಟು ನಾವು ಕೆಮಿಕಲ್ ಬಳಸಿರುವ ಪ್ರಾಡಕ್ಟ್ ಗಳನ್ನು ಉಪಯೋಗ ಮಾಡುವುದರ ಬದಲು ಮನೆಯಲ್ಲಿ ಇರುವಂತಹ ಶುದ್ಧವಾದಂತಹ ನಮ್ಮ ದೇಹಕ್ಕೆ ನಮ್ಮ ಕೂದಲಿಗೆ ಆರೋಗ್ಯಕರವಾಗಿ ಇರುವಂತಹ ಸಾಮಗ್ರಿಗಳ್ಳನ್ನು ಬಳಸಬೇಕು. ನಾವು ಹೆಚ್ಚಾಗಿ ಹಣ್ಣು, ತರಕಾರಿ, ಸೊಪ್ಪು ಈ ರೀತಿಯಾದಂತಹ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಮಾಡಬೇಕು. ನಾವು ಸೇವಿಸುವಂತಹ ಆಹಾರದ ಮೇಲು ಸಹ ನಮ್ಮ ದೇಹ ಸ್ಥಿತಿ ಹಾಗೆಯೇ ನಮ್ಮ ಕೂದಲಿನ ಆರೋಗ್ಯ ಅಡಗಿರುತ್ತದೆ ಆದ್ದರಿಂದ ಅತಿ ಹೆಚ್ಚು ನಾವು ಉತ್ತಮವಾಗಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.