ಕಿಡ್ನಿ ಸ್ಟೋನ್‌ ಆದವರು ಎಳನೀರಿಗೆ ಇದನ್ನು ಹಾಕಿ ಕುಡಿಯಿರಿ 3 ದಿನದಲ್ಲಿ ಕಲ್ಲು ಕರಗಿ ಹೋಗುತ್ತೆ.

 

ಕಿಡ್ನಿಯಲ್ಲಿ ಕಲ್ಲು ಆಗಿರುವುದು ಈ ಸಮಸ್ಯೆಯನ್ನು ಹೆಚ್ಚಾಗಿ ಈ ದಿನಗಳಲ್ಲಿ ಕೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಕಲುಷಿತ ಆಗಿರುವುದೇ ಇದಕ್ಕೆ ಮುಖ್ಯ ಕಾರಣ. ಹಿಂದಿನ ಕಾಲದಲ್ಲೂ ಕೂಡ ಈ ರೀತಿ ಸಮಸ್ಯೆ ಇದ್ದರೂ ಅದು ದೊಡ್ಡ ಮಟ್ಟದಲ್ಲಿ ಆಪರೇಷನ್ ಮಾಡಿಸುವ ತನಕ ಬೆಳೆಯುತ್ತಾ ಇರಲಿಲ್ಲ. ಕೆಲವೊಂದು ಆಹಾರ ಪದಾರ್ಥಗಳು ಸೇವಿಸುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು. ಈಗಲೂ ಕೆಲ ಆಹಾರ ಪದಾರ್ಥಗಳನ್ನು ಸೇವಿಸಿದರೆ ಕಿಡ್ನಿ ಅಲ್ಲಿ ಆಗಿರುವ ಕಲ್ಲು ಆಶ್ಚರ್ಯಕರ ರೀತಿಯಲ್ಲಿ ಕರಗಿ ಹೋಗುತ್ತದೆ.

ಅದಕ್ಕಾಗಿ ನಮ್ಮ ಪೂರ್ವಿಕರು ಮಾಡುತ್ತಿದ್ದ ಕೆಲಸ ಮನೆಮದ್ದುಗಳು ಈ ರೀತಿ ಇವೆ. ಇವುಗಳನ್ನು ತಿಳಿದುಕೊಂಡು ಅದೇ ರೀತಿ ಪಾಲಿಸಿ, ಯಾವುದೇ ಆಪರೇಷನ್ ಇಲ್ಲದೆ ಕಿಡ್ನಿ ಸ್ಟೋನಿನ ಸಮಸ್ಯೆಯಿಂದ ಹೊರಬನ್ನಿ. ಮೊದಲನೇದಾಗಿ ಬಾಳೆದಿಂಡಿನ ಸಹಾಯ ಕರಗಿಸುವದಲ್ಲಿ ದೊಡ್ಡ ಮಟ್ಟದಲ್ಲಿ ಇದೆ. ಬಾಳೆ ಗಿಡಯಲ್ಲಿ ಬಿಳಿ ಬಣ್ಣದ ದಿಂಡನ ಭಾಗ ಕತ್ತರಿಸಿ ಅದರ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗಿ ಬಿಡುತ್ತದೆ ಅಥವಾ ಬಾಳೆ ದಿಂಡಿನಿಂದ ಅನೇಕ ಆಹಾರ ಪದಾರ್ಥಗಳನ್ನು ಮಾಡುತ್ತಾರೆ.

ಈ ಆಹಾರ ಪದಾರ್ಥಗಳನ್ನು ವಾರಕ್ಕೆ ಒಮ್ಮೆ ಆದರೂ ಸೇವಿಸುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆ ಬರುವುದಿಲ್ಲ, ಅಕಸ್ಮಾತ್ ಬಂದಿದ್ದರೆ ಅದು ಸಹ ಪರಿಹಾರ ಆಗುತ್ತದೆ. ಇದರ ಜೊತೆಗೆ ಬಸಳೆ ಸೊಪ್ಪಿನ ರಸ ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ನ ಸಮಸ್ಯೆ ಪರಿಹಾರ ಆಗುತ್ತದೆ. ಕಾಡು ಬಸಳೆ ಸೊಪ್ಪನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು ಅದರಿಂದ ರಸ ತೆಗೆದು 50 ಗ್ರಾಮಿನಷ್ಟು ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ನ ಸಮಸ್ಯೆ ಆಶ್ಚರ್ಯಕರ ರೀತಿಯಲ್ಲಿ ವಾಸಿಯಾಗಿ ಬಿಡುತ್ತದೆ.

ಗೋರಕ್ಷಗಂಜ ಎನ್ನುವ ಈ ಗಿಡದ ಎಲೆ ಅಥವಾ ಬೇರೂ ಕೂಡ ಕಿಡ್ನಿ ಸ್ಟೋನ್ ಕರಗಿಸುತ್ತದೆ. ಇದರ ಎಲೆಯನ್ನು ಅಥವಾ ಬೇರನ್ನು ತೆಗೆದುಕೊಂಡ ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿ ಒಂದು ಲೋಟ ನೀರಿಗೆ ಹಾಕಿ ಅದು ಕಾಲು ಲೋಟ ಬರುವವರೆಗೂ ಕುದಿಸಿ ನಂತರ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೂ ಸಹ ಕಿಡ್ನಿಯಲ್ಲಿ ಆಗಿರುವ ಕಲ್ಲಿನ ಸಮಸ್ಯೆ ಕರಗಿ ಹೋಗುತ್ತದೆ. ನೆಗ್ಗಿಲ ಮುಳ್ಳು ಎಂದು ಕರೆಸಿಕೊಳ್ಳುವ ಈ ಆಯುರ್ವೇದ ಪದಾರ್ಥದ ಎಲೆಗಳನ್ನು ಸಹ ಸಂಗ್ರಹಿಸಿ ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸೇವಿಸುವುದರಿಂದ ಕೂಡ ಉತ್ತಮ ಫಲ ಕಾಣಬಹುದು.

ಅಂಗಡಿಯಲ್ಲಿ ಸಿಗುವ ಪೆಟ್ಟುಪ್ಪು ಎನ್ನುವ ಪದಾರ್ಥವನ್ನು ಬಿಳಿ ಕಲ್ಲುಸಕ್ಕರೆ ಜೊತೆ ಸೇರಿಸಿ ಚೆನ್ನಾಗಿ ಪುಡಿ ಮಾಡಿಕೊಂಡು ಇದರ ಜೊತೆ ಅಲೋವೆರಾ ರಸ ಸೇರಿಸಿ ಮಣ್ಣಿನ ಪಾತ್ರೆಯಲ್ಲಿ ಹಾಕಿ ಅದನ್ನು ಒಲೆ ಮೇಲೆ ಇಟ್ಟು ಪುಡಿ ಆಗುವ ತನಕ ಬಿಸಿ ಮಾಡಿಕೊಂಡು ನಂತರ ಒಂದು ಡಬ್ಬದಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬೇಕು.

ಪ್ರತಿದಿನ ಬೆಳಿಗ್ಗೆ ಎಳನೀರಿನ ಜೊತೆ 2 ಗ್ರಾಂಅಷ್ಟು ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೂಡ ಕಿಡ್ನಿ ಕಲ್ಲಿನ ಸಮಸ್ಯೆ ಪರಿಹಾರ ಆಗುತ್ತದೆ. ಈಗ ಹೇಳಿರೋ ಎಲ್ಲಾ ಮನೆ ಮುದ್ದುಗಳು ಕೂಡ ಕೆಲಸ ಮಾಡುವುದಕ್ಕೆ 7ರಿಂದ 21 ದಿನ ತೆಗೆದುಕೊಳ್ಳುತ್ತದೆ. ಆದ್ದರಿಂದ ನಿಮ್ಮ ಸಮಸ್ಯೆ ಗಾತ್ರಕ್ಕೆ ಅನುಸಾರವಾಗಿ ಏಳು ದಿನ ಅಥವಾ 21 ದಿನ ಇದನ್ನು ಪಾಲಿಸಿ ಯಾವುದೇ ಔಷಧಿ ಇಲ್ಲದೆ ಶಸ್ತ್ರ ಚಿಕಿತ್ಸೆ ಇಲ್ಲದೆ ಪರಿಹಾರ ಮಾಡಿಕೊಳ್ಳಿ.

Leave a Comment

%d bloggers like this: