SC & ST ಗೆ 90% ಸಾಮಾನ್ಯ ವರ್ಗಕ್ಕೆ 50% ರಿಯಾಯಿತಿ ದರದಲ್ಲಿ ಕೃಷಿ & ಇನ್ನಿತರ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ನೀಡುತ್ತಿದ್ದಾರೆ ಇಂದೆ ಅರ್ಜಿ ಅಲ್ಲಿಸಿ.

 

ಸರ್ಕಾರದಿಂದ ರೈತರಿಗಾಗಿ ಹೊಸದಾಗಿ ಘೋಷಣೆ ಆಗಿರುವ ಸಹಾಯಧನ, ಯೋಜನೆ ಕುರಿತು ಮಾಹಿತಿಗಾಗಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೂ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂದರೆ ರೈತರು ಕೃಷಿಗೆ ಉಪಯೋಗಿಸುವ ಕೃಷಿ ಮಾಡುವುದಕ್ಕಾಗಿ ಅವಶ್ಯಕತೆ ಇರುವ ಮತ್ತು ರೈತರಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ಕೃಷಿ ಉತ್ಪನ್ನ ಸಂಸ್ಕರಣ ಉಪಕರಣಗಳಾದ ಹಿಟ್ಟಿನ ಗಿರಣಿ, ಖಾರ ಕಟ್ಟುವ ಯಂತ್ರ, ಶಾವಿಗೆ ಯಂತ್ರ, ರಾಗಿ ಕ್ಲೀನಿಂಗ್ ಮಿಷನ್, ಪಲ್ಮರೈಜರ್, ಕಬ್ಬಿನ ಹಾಲು ತೆಗೆಯುವ ಯಂತ್ರ, ಮೋಟರ್ ಚಾಲಿತ ಸಣ್ಣ ಎಣ್ಣೆ ಗಾಣ ಇವುಗಳು ಸೇರಿದಂತೆ ಇನ್ನಿತರ ಉಪಕರಣಗಳನ್ನು ಇಲಾಖೆ ಕೊಡುವ ಸಹಾಯ ಧನ ಉಪಯೋಗಿಸಿಕೊಂಡು ಖರೀದಿಸಲು ಈ ವರ್ಷದ ಸಾಲಿನಲ್ಲಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈಗಾಗಲೇ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರ ಉನ್ನತಿಗಾಗಿ ಮತ್ತು ರೈತರಿಗೆ ಒಂದು ಭದ್ರ ನೆಲೆ ಒದಗಿಸುವ ಉದ್ದೇಶದಿಂದ ನಾನಾ ಯೋಜನೆಗಳನ್ನು ಜಾರಿಗೆ ತಂದಿವೆ. ಕಿಸ್ಸಾನ್ ಸಮ್ಮಾನ್ ಯೋಜನೆ, ಸಹಕಾರಿ ಬ್ಯಾಂಕ್ ಗಳ ಮೂಲಕ ಕೃಷಿಗೆ ಸಾಲ ಒದಗಿಸುವುದು, ಕೃಷಿ ವಾಹನಗಳ ಖರೀದಿ ಮಾಡುವುದಕ್ಕೆ ಸಬ್ಸಿಡಿ ನೀಡುವುದು, ಇವುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಕೂಡ ಸಾಲ ಸೌಲಭ್ಯ ಇನ್ನು ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಇಂತಹದೇ ಮತ್ತೊಂದು ಮಹತ್ವಪೂರ್ಣ ಯೋಜನೆಯನ್ನು ಮತ್ತೊಮ್ಮೆ ಕೈಗೊಂಡಿದೆ ಅದೇನೆಂದರೆ.

2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ ವತಿಯಿಂದ ರೈತರಿಗಾಗಿ ಸಿಗುತ್ತಿರುವ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆ ಖರೀದಿಗೆ ಸಹಾಯ ಧನ ನೀಡುವ ಯೋಜನೆ. ಈ ಯೋಜನೆಯ ಅರ್ಜಿಯನ್ನು ಎಲ್ಲಿ ಯಾವಾಗ ಯಾವ ರೀತಿ ಸಲ್ಲಿಸಬೇಕು ಎನ್ನುವ ಕುರಿತು ಮಾಹಿತಿ ತಿಳಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವ ಇಚ್ಛೆ ಇರುವ ಆಸಕ್ತ ರೈತರುಗಳು ಇದರಿಂದ ಬಹಳ ಉಪಯೋಗ ಪಡೆದುಕೊಳ್ಳಬಹುದು.

ಯಾಕೆಂದರೆ ಈ ರೀತಿ ಕೃಷಿ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳ ಸಹಾಯ ಧನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ಶೇಕಡ 90ರಷ್ಟು ಸಬ್ಸಿಡಿ ಇರುತ್ತದೆ ಮತ್ತು ಸಾಮಾನ್ಯ ವರ್ಗ ಹಾಗೂ ಇನ್ನಿತರ ವರ್ಗದವರಿಗೆ ಶೇಕಡ 50ರಷ್ಟು ಸಬ್ಸಿಡಿ ರೂಪದಲ್ಲಿ ಹಣ ದೊರೆಯುತ್ತದೆ. ಈ ಕಾರಣದಿಂದ ರಾಜ್ಯದ ಎಲ್ಲಾ ರೈತರುಗಳು ಕೂಡ ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ಆರ್ಥಿಕತೆಯನ್ನು ಉತ್ತಮ ಗೊಳಿಸಿಕೊಳ್ಳಬೇಕು.

ಹೀಗಾಗಲು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಈ ಕೂಡಲೇ ತಕ್ಷಣ ಎಲ್ಲರೂ ಕರ್ನಾಟಕದಾದ್ಯಂತ ಇರುವ ರೈತರಿಗೆ ಈ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು. ಈ ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಅಥವಾ ಏನೇ ಗೊಂದಲ ಇದ್ದರೆ ಈ ಕೂಡಲೇ ಹತ್ತಿರದಲ್ಲೇ ಇರುವ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿದರೆ ಅಲ್ಲಿನ ಸಿಬ್ಬಂದಿಗಳು ಸಹಾಯ ಮಾಡಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಈ ಯೋಜನೆಗೆ ರೈತರ ಪಹಣಿ ಪತ್ರ, ಆಧಾರ್ ಕಾರ್ಡ್, ಪಾಸ್ ಬುಕ್ ಬುಕ್, ಜಾತಿ ಪ್ರಮಾಣ ಪತ್ರ ಮತ್ತು ಭಾವಚಿತ್ರ ಅಗತ್ಯ ದಾಖಲೆಗಳಾಗಿ ಬೇಕಾಗುತ್ತದೆ.

Leave a Comment

%d bloggers like this: