ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ಸಾಮಾನ್ಯ ಜನರಿಂದ ಹಿಡಿದು ಪ್ರತಿಯೊಬ್ಬರಿಗೂ ಕೂಡ ಉಪಯೋಗವಾಗುವಂತಹ ಮಾಹಿತಿಯಾಗಿದೆ ಎಂದೇ ಹೇಳಬಹುದು. ಅದೇನೆಂದರೆ ಯಶಸ್ವಿನಿ ಆರೋಗ್ಯ ಕಾರ್ಡ್ ಹೊಂದಿರುವಂತಹ ಜನರು ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಬ್ಬರಲ್ಲ ಒಬ್ಬರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ ಹಾಗಾಗಿ ಅವರಿಗೆ ಅವರ ಚಿಕಿತ್ಸೆಗೆ ಹಲವಾರು ಹಣವನ್ನು ಖರ್ಚು ಮಾಡುತ್ತಿರುತ್ತಾರೆ.
ಅಂತವರಿಗೆ ಈ ದಿನ ನಾವು ಯಶಸ್ವಿನಿ ಕಾರ್ಡ್ ಅನ್ನು ಹೇಗೆ ಮಾಡಿಸಿಕೊಳ್ಳುವುದು ಹಾಗೂ ಇದನ್ನು ಯಾರು ಪಡೆಯಲು ಅರ್ಹರಿರುತ್ತಾರೆ, ಹಾಗೂ ಈ ಕಾರ್ಡ್ ಮಾಡಿಸಲು ಬೇಕಾಗುವ ದಾಖಲಾತಿಗಳೇನು. ಜೊತೆಗೆ ಈ ಕಾರ್ಡ್ ಹೊಂದಿರುವಂತಹ ಸದಸ್ಯ ಯಾವ ಯಾವ ಆಸ್ಪತ್ರೆ ಗಳಲ್ಲಿ ಹೋಗಿ ತೋರಿಸುವುದರ ಮೂಲಕ ಉಚಿತವಾದಂತಹ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು ಹಾಗೆಯೇ ಈ ಕಾರ್ಡ್ ಅನ್ನು ಮೊಟ್ಟ ಮೊದಲನೆಯದಾಗಿ ಮಾಡಿಸುವುದಕ್ಕೆ ಎಷ್ಟು ಹಣ ಖರ್ಚಾಗುತ್ತದೆ.
ಹಾಗೂ ಯಶಸ್ವಿನಿ ಕಾರ್ಡ್ ಇದ್ದರೆ ಅಂತಹವರಿಗೆ ಯಾವ ಸಮಸ್ಯೆಗೆ ಎಷ್ಟು ಹಣ ಖರ್ಚಾಗುತ್ತದೆ ಎಷ್ಟು ಹಣ ಸರ್ಕಾರದಿಂದ ಬರುತ್ತದೆ.? ಹೀಗೆ ಈ ಕಾರ್ಡ್ ಗೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ. ಮೊದಲನೆಯದಾಗಿ ಯಶಸ್ವಿನಿ ಕಾರ್ಡ್ ಅನ್ನು ಮಾಡಿಸುವಾಗ ಎಲ್ಲಿ ನೀವು ಇದನ್ನು ರಿಜಿಸ್ಟರ್ ಮಾಡಿಸಿ ಈ ಕಾರ್ಡ್ ಪಡೆದುಕೊಳ್ಳಬಹುದು ಎಂದು ನೋಡುವುದಾದರೆ.
ನೀವೇನಾದರೂ ಯಾವುದಾದರೂ ಸಹಕಾರ ಸಂಘದಲ್ಲಿ ಸದಸ್ಯರಾಗಿರುತ್ತೀರೋ ಅಲ್ಲಿಗೆ ಹೋಗಿ ಯಶಸ್ವಿನಿಗಾಗಿ ಒಂದು ಸರಳವಾದಂತಹ ಅರ್ಜಿ ದೊರೆಯುತ್ತದೆ. ಅದನ್ನು ತಂದು ಅದರಲ್ಲಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಹಾಗೆಯೇ ಆ ಅರ್ಜಿಯ ಜೊತೆ ಕುಟುಂಬದ ಒಟ್ಟು ಸದಸ್ಯರ ಆಧಾರ್ ಕಾರ್ಡ್ ನೊಂದಿಗೆ ಅಲ್ಲಿ ನೀವು ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಹೀಗೆ ಅರ್ಜಿ ಭರ್ತಿ ಮಾಡಿದ ನಂತರ ಅಲ್ಲೇ ಸಹಕಾರ ಸಂಘದಲ್ಲಿರುವ ಅಧ್ಯಕ್ಷರಿಗೆ ಕೊಟ್ಟರೆ ಅದನ್ನು ರಿಜಿಸ್ಟರ್ ಮಾಡುತ್ತಾರೆ.
ಹಾಗೂ ತಕ್ಷಣವೇ ನಿಮ್ಮ ಮೊಬೈಲ್ ಗೂ ಕೂಡ ಮೆಸೇಜ್ ಬರುತ್ತದೆ ರಿಜಿಸ್ಟರ್ ಆಗಿರುವ ಬಗ್ಗೆ ಒಮ್ಮೆ ನೀವು ಈ ಒಂದು ಅರ್ಜಿಯನ್ನು ರಿಜಿಸ್ಟರ್ ಮಾಡಿದ ನಂತರ 15 ದಿನಗಳವರೆಗೆ ಇದು ಜಾರಿಯಲ್ಲಿ ಇರುತ್ತದೆ. ಹಾಗೂ ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ನಿಗದಿತ ಸಮಯಕ್ಕೆ ಅಂದರೆ ವರ್ಷಕ್ಕೆ ಒಮ್ಮೆ ವಂತಿಕೆ ಹಣವನ್ನು ಕಟ್ಟಬೇಕಾಗುತ್ತದೆ ಅಂದರೆ ನೀವು ಕನಿಷ್ಠ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ಇಂತಿಷ್ಟು ವಂತಿಕೆ ಹಣವನ್ನು ಕಟ್ಟಲೇಬೇಕಾಗುತ್ತದೆ ಆದ್ದರಿಂದ ಇದನ್ನು ಕಟ್ಟುವುದು ಬಹಳ ಮುಖ್ಯವಾಗಿರುತ್ತದೆ.
ಯಶಸ್ವಿನಿ ಯೋಜನೆಯ ಅಡಿ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಸರ್ಕಾರ ಎಷ್ಟು ಹಣ ಕೊಡುತ್ತದೆ ಎಂದು ನೋಡುವುದಾದರೆ. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯ ಸಹಕಾರ ಸಂಘದ ಸದಸ್ಯತ್ವವನ್ನು ಹೊಂದಿದ್ದರೆ ಅವನ ಕುಟುಂಬದಲ್ಲಿ ಬರುವ ಎಲ್ಲಾ ಜನರ ಶಾಸ್ತ್ರ ಚಿಕಿತ್ಸೆಗಾಗಿ ಒಟ್ಟು ವಾರ್ಷಿಕವಾಗಿ 5 ಲಕ್ಷದ ವರೆಗೂ ಉಚಿತ ಶಾಸ್ತ್ರಚಿಕಿತ್ಸೆಗಾಗಿ ಹಣವನ್ನು ಸರ್ಕಾರ ಬರಿಸುತ್ತದೆ ಎಂದೇ ಹೇಳಬಹುದು. ಒಬ್ಬೊಬ್ಬರಿಗೆ 5 ಲಕ್ಷ ಬರುವುದಿಲ್ಲ ಬದಲಿಗೆ ಒಟ್ಟು ಕುಟುಂಬದವರಿಗೆ ವರ್ಷಕ್ಕೆ 5 ಲಕ್ಷ ಹಣ ಮಾತ್ರ ಉಚಿತವಾಗಿ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.