ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023. ಉದ್ಯೋಗಾಕಾಂಕ್ಷಿಗಳು ಇಂದೇ ಅರ್ಜಿ ಸಲ್ಲಿಸಿ.

ಜ್ಯೋತಿಷ್ಯ ಜಾಹೀರಾತು
ಜ್ಯೋತಿಷ್ಯ ಜಾಹೀರಾತು

ವಿದ್ಯುತ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ನೇಮಕಾತಿಯನ್ನು ಈಗಾಗಲೇ ಪ್ರಾರಂಭ ಮಾಡಿದ್ದು, ಹಾಗಾದರೆ ಯಾವ ಯಾವ ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದಾರೆ ಹಾಗೂ ಯಾರೆಲ್ಲ ಇದಕ್ಕೆ ಅರ್ಜಿಯನ್ನು ಹಾಕಬಹುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯುತ್ತಾ ಹೋಗೋಣ. ಈ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಿರುವಂತಹ ಇಲಾಖೆ ಅಥವಾ ಸಂಸ್ಥೆಯ ಹೆಸರು ಯಾವುದು ಎಂದು ನೋಡುವುದಾದರೆ.

REC ವಿದ್ಯುತ್ ವಿತರಣೆ ಕಂಪನಿ ಲಿಮಿಟೆಡ್ (RECPDCL) ಇವರು ವಿದ್ಯುತ್ ಇಲಾಖೆಯಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಹಾಗಾದರೆ ಒಟ್ಟು ಎಷ್ಟು ಹುದ್ದೆಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ ಎಂದು ನೋಡುವುದಾದರೆ. ಒಟ್ಟು 25 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಅದರಲ್ಲೂ ಕಾರ್ಯನಿರ್ವಾಹಕ ಹುದ್ದೆಗೆ ಇಲ್ಲಿ ನೇಮಕಾತಿ ನಡೆಯುತ್ತಿದೆ ಎಂದೇ ಹೇಳಬಹುದು. ಈ ಒಂದು ಹುದ್ದೆಗೆ ಅಖಿಲ ಭಾರತದ ಎಲ್ಲಾ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು.

ಈ ಒಂದು ಅರ್ಜಿಯನ್ನು ಆನ್ಲೈನ್ ಮೂಲಕ ಕರೆದಿದ್ದಾರೆ. ಹಾಗೂ ನಮ್ಮ ಭಾರತದಲ್ಲಿಯೇ ಅವರಿಗೆ ಹಲವಾರು ಕಡೆ ಹುದ್ದೆಗಳಿಗೆ ಕಳುಹಿಸಿ ಕೊಡುತ್ತಾರೆ. ಈ ಒಂದು ಹುದ್ದೆಗೆ ನೇಮಕಾತಿ ಯಾದವರಿಗೆ ವೇತನದ ಶ್ರೇಣಿ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ 62,000 ದಿಂದ 1,35,000 ವರೆಗೆ ವೇತನದ ಶ್ರೇಣಿಯನ್ನು ನಿಗದಿಪಡಿಸಿದ್ದಾರೆ. ಹಾಗೂ ಇನ್ನೂ ಹೆಚ್ಚಿನ ಕೆಲಸದಲ್ಲಿ ಅಭಿವೃದ್ಧಿಯಾದರೆ ಇನ್ನೂ ಹೆಚ್ಚಿನ ವೇತನ ಸಿಗುವ ಸಾಧ್ಯತೆ ಇದೆ ಎಂದು ಕೂಡ ಹೊರಡಿಸಿದ್ದಾರೆ.

ವಯೋಮಿತಿ ಸಡಿಲಿಕೆ ಯಾವ ರೀತಿ ಇದೆ ಎಂದು ನೋಡುವುದಾದರೆ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದ್ದು, SC ಮತ್ತು ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರುತ್ತದೆ, ಹಾಗೂ PWBD ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ, ಮತ್ತು PWBD OBC ಅಭ್ಯರ್ಥಿಗಳಿಗೆ 13 ವರ್ಷ ಸಡಲಿಕೆ ಇರುತ್ತದೆ. ಹಾಗೆಯೇ PWBD SC ಮತ್ತು ST ಅಭ್ಯರ್ಥಿಗಳಿಗೆ 13 ವರ್ಷ ಸಡಿಲಿಕೆ ಇರುತ್ತದೆ ಎಂದೇ ಹೇಳಬಹುದು.

ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿ ನೋಡುವುದಾದರೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 30 ವರ್ಷದ ಒಳಗಿನ ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಅರ್ಜಿಯನ್ನು ಹಾಕಬಹುದಾಗಿದೆ. ಹಾಗೆ ಈ ಒಂದು ಅರ್ಜಿಯು ಸಂಪೂರ್ಣ ವಾದಂತಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ ವಾಗಿದ್ದು ಇದರಲ್ಲಿ ಯಾವುದೇ ರೀತಿಯಾದಂತಹ ಅರ್ಜಿ ಶುಲ್ಕ ಇರುವುದಿಲ್ಲ.

REC ವಿದ್ಯುತ್ ವಿತರಣೆ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿ ಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , ಸ್ನಾತಕೋತ್ತರ ಪದವಿ, BE ಅಥವಾ B.Tec ಪಾಸ್ ಆಗಿರಬೇಕು. ಹಾಗೂ ಇಲ್ಲಿ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಇಲ್ಲಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ 08 ಫೆಬ್ರವರಿ 2023 ಹಾಗೂ ಕೊನೆಯ ದಿನಾಂಕ 06 ಮಾರ್ಚ್ 2023. ಹಾಗಾಗಿ ಕೊನೆಯ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: