ಪೌತಿ ಖಾತೆ ನಂತರ ಜಮೀನನ್ನು ಹೇಗೆ ಭಾಗ ಮಾಡಿಕೊಳ್ಳಬೇಕು ಅಂದರೆ ತಾತ ಅಥವಾ ತಂದೆಯ ಹೆಸರಿನಲ್ಲಿ ಜಮೀನು ಇರುತ್ತದೆ ಅವರೇನಾದರೂ ಅಕಾಲಿಕವಾಗಿ ಮರಣವನ್ನು ಹೊಂದಿದರೆ. ಅವರ ಹೆಸರಿನಲ್ಲಿ ಇರುವಂತಹ ಆಸ್ತಿಯನ್ನು ಕುಟುಂಬದವರ ಎಲ್ಲರ ಹೆಸರಿಗು ಪೌತಿ ಖಾತೆಯ ಮೂಲಕ ಆಸ್ತಿ ಅಥವಾ ಜಮೀನು ಬರುತ್ತದೆ. ತದನಂತರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು.? ಮತ್ತು ಆಸ್ತಿ ಭಾಗ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಅಂದರೆ ನೋಂದಣಿಯನ್ನು ಹೇಗೆ ಮಾಡಿಸಬೇಕು.? ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿಯುವುದಿಲ್ಲ.
ಹಾಗೂ ಅವರು ತಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವಂತಹ ಆಸ್ತಿಯನ್ನು ಕೇವಲ ಬಾಯಿ ಮುಖಾಂತರ ಎಲ್ಲರೂ ಹಂಚಿಕೊಂಡಿರುತ್ತಾರೆ. ಆದರೆ ಅದನ್ನು ಯಾವುದೇ ರಿಜಿಸ್ಟರ್ ಮಾಡಿರುವುದಿಲ್ಲ ಆದರೆ ಅದು ಮುಂದಿನ ದಿನದಲ್ಲಿ ಹಲವಾರು ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ತಂದೆ ಅಥವಾ ತಾತನ ಹೆಸರಿನಲ್ಲಿರುವಂತಹ ಜಮೀನನ್ನು ಮನೆಯಲ್ಲಿರುವ ಎಲ್ಲ ಸದಸ್ಯರು ಅಂದರೆ ಅಣ್ಣ ತಮ್ಮಂದಿರು ಭಾಗ ಮಾಡಿಕೊಂಡಿದ್ದರೆ ಅದನ್ನು ರಿಜಿಸ್ಟರ್ ಮಾಡಿಸುವುದರ ಮೂಲಕ ತಮ್ಮ ಹೆಸರುಗಳಿಗೆ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಇದನ್ನು ಹೇಗೆ ಮಾಡಿಸುವುದು ಎಂದು ಹೆಚ್ಚಿನ ಜನಕ್ಕೆ ತಿಳಿದಿಲ್ಲ.
ಹಾಗೂ ಇದೇ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದಿರುತ್ತದೆ ಹಾಗಾದರೆ ಈ ದಿನ ಆಸ್ತಿ ಭಾಗ ಮಾಡಿಕೊಂಡ ನಂತರ ಹೇಗೆ ರಿಜಿಸ್ಟರ್ ಮಾಡಿಸುವುದು ಯಾವ ಯಾವ ದಾಖಲಾತಿಗಳು ಇದಕ್ಕೆ ಬೇಕಾಗುತ್ತದೆ, ಹಾಗೂ ಎಲ್ಲಿ ಇದನ್ನು ಮಾಡಿಸುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ನಿಮ್ಮ ಜಮೀನಿನ ಮಾಲೀಕ ಆಕಸ್ಮಿಕವಾಗಿ ಅಥವಾ ವಯಸ್ಸಿನ ಆಧಾರದ ಮೇಲೆ ಸಾಧಾರಣವಾಗಿ ಸಾವನ್ನಪ್ಪಿದಾಗ ತನ್ನ ಹೆಸರಿನಲ್ಲಿರುವ ಜಮೀನನ್ನು ತನ್ನ ಕುಟುಂಬದಲ್ಲಿರುವಂತಹ ಎಲ್ಲಾ ಸದಸ್ಯರಿಗೂ ಕೂಡ ಹಕ್ಕು ಬದಲಾವಣೆಯನ್ನು ಮಾಡಲಾಗುತ್ತದೆ ಇದನ್ನೇ ಪೌತಿ ಖಾತೆ ಎಂದು ಕರೆಯಬಹುದು.
ತದನಂತರ ಪೌತಿ ಖಾತೆ ಆದ ನಂತರ ಆಸ್ತಿಯ ಮೇಲೆ ಸಂಪೂರ್ಣವಾದ ಹಕ್ಕು ನಿಮ್ಮ ಮೇಲೆ ಇರುತ್ತದೆ ಎಂದುಕೊಳ್ಳಬೇಡಿ. ಈ ಪೌತಿ ಖಾತೆಯ ಉದ್ದೇಶ ಇಷ್ಟೇ ಕೇವಲ ಜಮೀನಿನ ಮೇಲಿನ ಕಂದಾಯ ವಸೂಲಿ ಮತ್ತು ಜಮೀನಿನ ನಿರ್ವಹಣೆಗೆ ಮಾತ್ರ ಹಕ್ಕು ಬದಲಾವಣೆಯನ್ನು ಮಾಡಲಾಗುತ್ತದೆ. ಹೀಗಾಗಿ ಪೌತಿ ಖಾತೆ ಬದಲಾವಣೆಯ ನಂತರ ನೀವು ಜಮೀನನ್ನು ವಿಭಾಗ ಮಾಡಿಕೊಳ್ಳಲೇ ಬೇಕಾಗುತ್ತದೆ. ಹಾಗಾದರೆ ಆ ವಿಭಾಗವನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಈ ಕೆಳಗೆ ನೋಡೋಣ.
ಈಗಾಗಲೇ ಮೇಲೆ ತಿಳಿಸಿದಂತೆ ಆ ಆಸ್ತಿಯ ಮಾಲೀಕ ಮರಣ ಹೊಂದಿದ ನಂತರ ಆ ಆಸ್ತಿ ಕುಟುಂಬದವರಿಗೆ ಸಮನಾಗಿ ಜಂಟಿ ಖಾತೆಯಾಗಿ ಪೌತಿ ಖಾತೆ ಬದಲಾವಣೆ ಆಗಿರುತ್ತದೆ. ಜಮೀನು ಜಂಟಿ ಖಾತೆಯನ್ನು ಹೊಂದಿರುವುದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದು ಕೊಳ್ಳಲು ಆಗುವುದಿಲ್ಲ, ಹಾಗೂ ಆ ಜಮೀನಿನ ಮೇಲೆ ಯಾರೊಬ್ಬ ರಿಗೂ ಕೂಡ ಪೂರ್ಣವಾದಂತಹ ಅಧಿಕಾರ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕುಟುಂಬದವರು ಒಟ್ಟಿಗೆ ಮಾತನಾಡಿ ಒಪ್ಪಿಗೆಯಾದ ನಂತರ ಜಮೀನನ್ನು ಭಾಗ ಮಾಡಿಕೊಳ್ಳಲು ನಿರ್ಧರಿಸಬೇಕಾಗುತ್ತದೆ.
ಎಲ್ಲವನ್ನು ನಿರ್ಧರಿಸಿದ ಮೇಲೆ ಕೊನೆಯಲ್ಲಿ ಮನೆ ಸದಸ್ಯರ ಹೆಸರು ಅಂದರೆ ಆಧಾರ್ ಕಾರ್ಡ್ ಮತ್ತು ಪಹಣಿಯೊಂದಿಗೆ ಸಂಬಂಧ ಪಟ್ಟ ನಾಡಕಚೇರಿಗೆ ಹೋಗಿ ಪೋಡಿ ಮಾಡಲು ಅಂದರೆ ವಿಭಾಗ ಮಾಡಲು ಅರ್ಜಿಯನ್ನು ಹಾಕಿ ರಶೀದಿಯನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.