ಎಲ್ಲಾ ಸಾರ್ವಜನಿಕರ ಗಮನಕ್ಕೆ ಮಾರ್ಚ್ 1 ರಿಂದ 5 ಹೊಸ ನಿಯಮ ಜಾರಿ..! ಜನಸಾಮಾನ್ಯರಿಗೆ ಇದು ಒಂದು ರೀತಿ ಗುಡ್ & ಬ್ಯಾಡ್ ನ್ಯೂಸ್..!!

ಇದೇ ಮಾರ್ಚ್ 1 ರಿಂದ 5 ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಪ್ರತಿಯೊಬ್ಬ ಸಾರ್ವಜನಿಕರಿಗೂ ಕೂಡ ಈ ಹೊಸ ನಿಯಮಗಳಿಂದ ಭಾರಿ ದೊಡ್ಡ ವ್ಯತ್ಯಾಸ ಉಂಟಾಗಲಿದ್ದು ಜೊತೆಗೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಕೂಡ ಇದೆ. ಹಾಗೆ ಇದೆ ಮಾರ್ಚ್ 1 ನೇ ತಾರೀಖಿನಿಂದ ರಾಜ್ಯದಲ್ಲಿ ಹೊಸ ನಿಯಮ ಜಾರಿಗೆ ಬರಲಿದ್ದು ಎಲ್ಲ ರೈತರಿಗೆ ಬಂಪರ್ ಮಾಹಿತಿಗಳು ಕೂಡ ಇದೆ. ಹಾಗಾದರೆ ಮಾರ್ಚ್ 1ನೇ ತಾರೀಖಿನಿಂದ ಯಾವ ಹೊಸ ನಿಯಮಗಳು ಜಾರಿಗೆ ಬರಲಿದೆ ಹಾಗೂ ಅದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ, ಹಾಗೂ ಎಷ್ಟರ ಮಟ್ಟಿಗೆ ಅದು ನಷ್ಟವಾಗುತ್ತದೆ, ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯುತ್ತಾ ಹೋಗೋಣ.

ಬ್ಯಾಂಕುಗಳು ಸಾಲವನ್ನು ದುಬಾರಿಯಾಗಿಸಬಹುದು, ಹೊಸ ವೈಶಿಷ್ಟ್ಯಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿಯೂ ನೋಡ ಬಹುದು, ರೈಲಿನ ವೇಳಾಪಟ್ಟಿಯಲ್ಲಿಯೂ ಕೂಡ ಬದಲಾವಣೆ ಆಗ ಬಹುದು, ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ಮಾರ್ಚ್ 1ನೇ ತಾರೀಖಿನಿಂದ ಯಾವ ಹೊಸ ನಿಯಮಗಳು ಜಾರಿಗೆ ಬರಲಿದೆ ಎಂದು ನೋಡುವುದಾದರೆ. ಮಾರ್ಚ್ 1 ನೇ ತಾರೀಖಿನಿಂದ ಫೇಸ್ಬುಕ್ ಇನ್ಸ್ಟಾಗ್ರಾಮ್, ಟ್ವಿಟರ್, ಅಂತಹ ಸಾಮಾಜಿಕ ಮಾಧ್ಯಮ ಕಂಪನಿಗಳ ಅನಿಯಂತ್ರತೆಯನ್ನು ನಿಗ್ರಹಿಸಲಾಗುವುದು.

ಇದಕ್ಕಾಗಿ ಕೇಂದ್ರ ಸರ್ಕಾರವು 3 ದೂರು ಮೇಲ್ಮನವಿ ಸಮಿತಿಗಳನ್ನು ಅಂದರೆ GSC ರಚಿಸುವುದಾಗಿ ಘೋಷಿಸಿದೆ. ಇದು ಮಾರ್ಚ್ 1, 2023 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಈ ಸಮಿತಿಗಳು ಬಳಕೆದಾರರ ದೂರುಗಳನ್ನು 30 ದಿನಗಳಲ್ಲಿ ನಿರ್ವಹಿಸುತ್ತದೆ. ಇದಲ್ಲದೆ ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಗಳಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವಂತಹ ಪೋಸ್ಟ್ ಗಳಿಗೆ ಹೊಸ ನಿಯಮ ಬರಲಿದೆ ಇದರಲ್ಲಿ ಬಳಕೆದಾರರು ಭಾರಿ ಪ್ರಮಾಣದ ದಂಡವನ್ನು ಪಾವತಿಸ ಬೇಕಾಗಬಹುದು.

ಇನ್ನು ಗ್ಯಾಸ್ ಸಿಲಿಂಡರ್ ಬದಲಾವಣೆ, ಮಾಧ್ಯಮಗಳ ವರದಿಯ ಪ್ರಕಾರ ಮಾರ್ಚ್ 1ನೇ ತಾರೀಖಿನಿಂದ ಗ್ಯಾಸ್ ಬುಕಿಂಗ್ ನಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗುವುದು. LPG ಬೆಲೆಗಳು ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಾಕೆ ಎಂದರೆ ಕಳೆದ 6 ತಿಂಗಳಿನಿಂದ ವಾಣಿಜ್ಯ ಸಿಲಿಂಡರ್ ಬೆಲೆಗಳನ್ನು ಮಾತ್ರ ಕಡಿತಗೊಳಿಸಲಾಗಿದೆ. ದೇಶೀಯ ಸಿಲಿಂಡರ್ ಬಳಕೆಗಳು ಏರಿಕೆಯಾಗಿದೆ ಅಥವಾ ಸ್ಥಿರವಾಗಿ ಉಳಿದಿದೆ. ಆದ್ದರಿಂದ ಹೋಳಿಗೆ ಮುಂಚಿತವಾಗಿ ಜನರು ಈ ಒಳ್ಳೆಯ ಸುದ್ದಿಯನ್ನು ಸಹ ಪಡೆಯಬಹುದು. ಇನ್ನು ಅನೇಕ ಬ್ಯಾಂಕುಗಳಲ್ಲಿ EMI ಹೆಚ್ಚಾಗಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ದರಗಳನ್ನು ಹೆಚ್ಚಿಸಿರುವುದರಿಂದ ಅನೇಕ ಬ್ಯಾಂಕುಗಳು ತಮ್ಮ MCLR ಅನ್ನು ಹೆಚ್ಚಿಸಿದೆ. ಇದರಿಂದ ಇದರ ಹೆಚ್ಚಿದ ದರಗಳು ಮಾರ್ಚ್ 1 ನೇ ತಾರೀಖಿ ನಿಂದ ಅನ್ವಯವಾಗಲಿದೆ. ಇದಲ್ಲದೆ ಇದೇ ರೀತಿಯ ಅನೇಕ ಬ್ಯಾಂಕು ಗಳು ಸಹ ಹೆಚ್ಚಾಗಬಹುದು. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಆದ್ದರಿಂದ ಇಂದಿನಿಂದ ಬಜೆಟ್ ಅನ್ನು ಜನರಿಗಾಗಿ ಇಡುವುದು ತುಂಬಾ ಅಗತ್ಯವಾಗಿರುತ್ತದೆ. ಮಾರ್ಚ್ 1ನೇ ತಾರೀಖಿನಿಂದ 10,000 ಪ್ರಯಾಣಿಕರ ರೈಲುಗಳು ಮತ್ತು 5000 ಸರಕು ರೈಲುಗಳು ಬದಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ವಾಟ್ಸಪ್ ತನ್ನ ಸೇವೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಲು ಹೊರಟಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: