ಮಲಬದ್ಧತೆ ಎನ್ನುವಂತಹದ್ದು ತುಂಬ ಚಿಕ್ಕ ಸಮಸ್ಯೆ ಅಲ್ಲ ಇದು ತುಂಬಾ ದೊಡ್ಡ ಸಮಸ್ಯೆ ಅದನ್ನು ಅನುಭವಿಸಿದವರಿಗೆ ಮಾತ್ರ ಇದರ ನೋವು ಎನ್ನುವಂತಹದ್ದು ತಿಳಿಯುತ್ತದೆ. ತುಂಬಾ ಜನರು ಒಂದು ಮಲಬದ್ಧತೆಯ ಸಮಸ್ಯೆಯಿಂದ ನರಳುತ್ತಿದ್ದಾರೆ ಇದಕ್ಕೆ ನಾನಾ ಕಾರಣಗಳನ್ನು ನಾವು ನೋಡಬಹುದು ಸರಿಯಾಗಿ ನೀರು ಕುಡಿಯದೇ ಇರುವುದು, ಹೆಚ್ಚಿನ ಕಾರದ ಆಹಾರವನ್ನು ಊಟ ಮಾಡಿರುವುದು, ಹೆಚ್ಚಾಗಿ ನಾರಿನ ಅಂಶಗಳನ್ನು ಹೊಂದಿರುವ ಆಹಾರಗಳನ್ನು ಸೇವನೆ ಮಾಡದೆ ಇರುವುದು ಇನ್ನೂ ಅನೇಕ ಕಾರಣಗಳಿಗಾಗಿ ಈ ಒಂದು ಮಲಬದ್ಧತೆಯ ಸಮಸ್ಯೆ ನಮಗೆ ಉಂಟಾಗುತ್ತದೆ. ಈ ಒಂದು ಮಲಬದ್ಧತೆಯ ಸಮಸ್ಯೆಗಳನ್ನು ಹೋಗಲಾಡಿಸಲು ನಾವು ನಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಸರಿಯಾದ ವಿಧಾನದಲ್ಲಿ, ಸರಿಯಾದ ಸಮಯದಲ್ಲಿ ಉಪಯೋಗಿಸಿಕೊಂಡರೆ ಈ ಸಮಸ್ಯೆಯಿಂದ ಪಾರಾಗಬಹುದು. ಅಂತಹ ಕೆಲವೊಂದು ಪರಿಹಾರಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.
ಮೊದಲನೆಯದಾಗಿ ಒಣದ್ರಾಕ್ಷಿ ಇದು ನಮ್ಮ ಆರೋಗ್ಯದ ಮೇಲೆ ಉತ್ತಮವಾದಂತಹ ಪರಿಣಾಮವನ್ನು ಬೀರುತ್ತದೆ. ಹತ್ತು ಅಥವಾ ಹದಿನೈದು ಒಣದ್ರಾಕ್ಷಿಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿ ಇಡೀ ನೆನೆಸಿಟ್ಟು ಅದನ್ನು ಬೆಳಗ್ಗೆ ಎದ್ದು ನೀವು ನೀರನ್ನು ಕುಡಿದು ದ್ರಾಕ್ಷಿಯನ್ನು ತಿನ್ನಬಹುದು ಅಥವಾ ನೆನೆದಿರುವ ದ್ರಾಕ್ಷಿಯನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ ನಂತರ ಅದನ್ನು ನೀವು ಕುಡಿಯಬಹುದು. ಇದನ್ನು ಚಿಕ್ಕ ಮಕ್ಕಳಿಗೂ ಸಹ ಕೊಡಬಹುದು, ಚಿಕ್ಕ ಮಕ್ಕಳಲ್ಲಿಯೂ ಸಹ ಕೆಲವರಿಗೆ ಮಲಬದ್ಧತೆಯ ಸಮಸ್ಯೆ ಕಂಡುಬರುತ್ತದೆ ಅವರಿಗೂ ಸಹ ಇದನ್ನು ನೀಡಬಹುದು. ಮಕ್ಕಳಿಗೆ ನೀರಿನಲ್ಲಿ ಚೆನ್ನಾಗಿ ಕಿವುಚಿ ಕೊಡಬಹುದು ಅಥವಾ ನೀವು ಕೇವಲ ನೀರನ್ನು ಮಾತ್ರ ಕೊಡಬಹುದು, ಇಲ್ಲವಾದರೆ ನೆನೆದ ದ್ರಾಕ್ಷಿಯನ್ನು ಮಾತ್ರ ನೀವು ಮಕ್ಕಳಿಗೆ ನೀಡಬಹುದು.
ಎರಡನೆಯದು ಜೀರಿಗೆ ಕಷಾಯ ಜೀರಿಗೆ ಸಾಮಾನ್ಯವಾಗಿ ಡೈಜೆಶನ್ ಆಗಲು ತುಂಬಾ ಸಹಾಯಕವಾಗಿದೆ. ಕೆಲವೊಂದು ಆಹಾರವನ್ನು ಸೇವಿಸಿದಾಗ ಗ್ಯಾಸ್ಟಿಕ್ ಆಗುತ್ತದೆ ಅಂತಹ ಗ್ಯಾಸ್ಟ್ರಿಕ್ ಅನ್ನು ಕಡಿಮೆ ಮಾಡುತ್ತದೆ ಈ ಜೀರಿಗೆ ಇದು ದೇಹಕ್ಕೆ ತುಂಬಾ ತಂಪನ್ನು ನೀಡುತ್ತದೆ. ಯಾರಿಗೆಲ್ಲ ಹೀಟ್ ಬಾಡಿ ಇರುತ್ತದೆ ಅಂತಹವರು ಸಹ ಇದನ್ನು ಸೇವನೆ ಮಾಡಬಹುದು. ಒಂದು ಲೋಟ ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಒಂದು ಲೋಟ ನೀರು ಅರ್ಧ ಲೋಟ ಆಗುವತನಕ ಇದನ್ನು ಚೆನ್ನಾಗಿ ಕುದಿಸಿಕೊಳ್ಳಿ, ನಂತರ ಇದನ್ನು ಒಂದು ಲೋಟಕ್ಜೆ ಶೋಧಿಸಿಕೊಂಡು ಕುಡಿಯಬೇಕು. ನಾವು ಪ್ರತಿದಿನ ಈ ರೀತಿಯಾಗಿ ಖಾಲಿ ಹೊಟ್ಟೆಗೆ ಕಷಾಯವನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಎನ್ನುವಂತಹದ್ದು ನಿವಾರಣೆಯಾಗುತ್ತದೆ.
ಇದು ಡೈಜೆಶನ್ ಗೆ ಸಹಾಯಮಾಡಿ ನಾವು ತಿಂದ ಆಹಾರ ಕರಗಲು ಸಹಾಯ ಮಾಡುತ್ತದೆ ಆದ್ದರಿಂದ ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಇನ್ನೂ ಅನೇಕ ರೀತಿಯಾದಂತಹ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ. ಮೂರನೆಯದಾಗಿ ಬಾಳೆಹಣ್ಣು ಇದು ನಮ್ಮ ಡೈಜೇಶನ್ ಸಿಸ್ಟಂಗೆ ತುಂಬಾ ಪ್ರಯೋಜನಕಾರಿ ಮೋಷನ್ ಪ್ರಾಬ್ಲಮ್ ಆಗಿದ್ದರೆ, ಮೋಷನ್ ತುಂಬಾ ಗಟ್ಟಿಯಾಗಿದ್ದರೆ ಎಲ್ಲವನ್ನು ಸಹ ನಿಯಂತ್ರಣ ಮಾಡುತ್ತದೆ. ಆದ್ದರಿಂದ ನಾವು ಪ್ರತಿದಿನ ಊಟದ ನಂತರ ಒಂದು ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ರಾತ್ರಿ ಊಟದ ನಂತರ ಸ್ವಲ್ಪ ಹೊತ್ತಿನ ನಂತರ ಒಂದು ಬಾಳೆ ಹಣ್ಣು ತಿನ್ನಬೇಕು ಹೀಗೆ ನಾವು ಪ್ರತಿದಿನ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ಆಹಾರದ ಜೀರ್ಣ ಆಗಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದ ನಂತರ ಮೋಷನ್ ಕ್ಲಿಯರ್ ಆಗಲು ಸಹಾಯ ಮಾಡುತ್ತದೆ. ನಾಲ್ಕನೆಯದಾಗಿ ಒಂದು ಲೋಟದಷ್ಟು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಸೇವನೆ ಮಾಡಿ. ನಿಂಬೆಹಣ್ಣು ತುಂಬಾ ಪ್ರಯೋಜನಕಾರಿ ಹಾಗೆಯೇ ಯಾರಿಗೆಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆಯೋ ಅಂತಹವರಿಗು ಸಹ ಇದು ಉತ್ತಮ ಎಂದು ಹೇಳಬಹುದು. ಪ್ರತಿದಿನ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಜೀರ್ಣ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದು ಸಹ ನಿವಾರಣೆಯಾಗುತ್ತದೆ.
ಐದನೆಯದಾಗಿ ಒಂದು ಲೋಟ ಬಿಸಿ ಹಾಲು, ನಾವು ಯಾವಾಗ ಬಿಸಿಬಿಸಿ ಹಾಲನ್ನು ಕುಡಿದಾಗ ನಮ್ಮ ಆಹಾರ ಜೀರ್ಣ ಆಗುತ್ತದೆ ಆದ್ದರಿಂದ ನಾವು ಯಾವಾಗಲೂ ಬಿಸಿ ಬಿಸಿ ಹಾಲನ್ನು ಕುಡಿಯಬೇಕು. ಒಂದು ಲೋಟ ಬಿಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ರೀತಿಯಾದಂತಹ ಹಾಲಿಗೆ ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಬೆಳಗ್ಗೆ ಎದ್ದ ತಕ್ಷಣ ಮೋಷನ್ ಕ್ಲಿಯರಾಗಿ ಹೋಗುತ್ತದೆ. ಹೀಗೆ ಕುಡಿಯುವುದರಿಂದ ಮಲಬದ್ದತೆ ನಿವಾರಣೆ ಸಹಾಯಕ. ಮಲಬದ್ಧತೆ ಸಮಸ್ಯೆ ಇರುವವರು ಈ ರೀತಿಯಾದಂತಹ ಕೆಲವೊಂದು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಪ್ರತಿನಿತ್ಯ ಇದನ್ನು ಸೇವನೆ ಮಾಡುವುದರಿಂದ ನಿಮಗೆ ಇರುವಂತಹ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.