ಮೂಲವ್ಯಾಧಿ ಅಥವಾ ಪೈಲ್ಸ್ ಎಂದು ಕರೆಯುವ ಈ ಕಾಯಿಲೆಯನ್ನು ಒಂದು ರೀತಿಯ ವಿಚಿತ್ರವಾದ ಕಾಯಿಲೆ ಎನ್ನಬಹುದು. ಇತ್ತೀಚೆಗೆ ಮಕ್ಕಳಲ್ಲೂ ಕಾಣಿಸಿ ಕೊಡುತ್ತಿರುವ ಈ ಕಾಯಿಲೆಯಿಂದ ಮಕ್ಕಳು ಸೇರಿದಂತೆ ವೃದ್ಧರವರೆಗೆ ಎಲ್ಲರೂ ನೋವು ತಿನ್ನುತ್ತಿರುತ್ತಾರೆ. ಇಂತಹ ಪೈಲ್ಸ್ ಕಾಯಿಲೆಯನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದ್ದಾರೆ. ಈ ಎಲ್ಲಾ ಬಗೆಯ ಪೈಲ್ಸ್ ಗೂ ಕೂಡ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ ಎಂದು ಹಲವರು ತಿಳಿದುಕೊಂಡಿದ್ದಾರೆ. ಹಾಗೂ ಈ ಭಾಗದಲ್ಲಿ ಚಿಕಿತ್ಸೆ ಎಂದರೆ ಎಲ್ಲರೂ ಭಯಭೀತ ಕೂಡ ಆಗುತ್ತಾರೆ ಹಾಗಾಗಿ ಯಾರನ್ನು ಮುಕ್ತವಾಗಿ ಹಂಚಿಕೊಳ್ಳದೆ ತಾವೊಬ್ಬರೇ ಈ ನೋವನ್ನು ಅನುಭವಿಸುತ್ತಿರುತ್ತಾರೆ. ಆದರೆ ಇದರ ಬಗ್ಗೆ ಭಯ ಬೀಳುವ ಅಗತ್ಯ ಇಲ್ಲ ಯಾವುದೇ ಶಸ್ತ್ರಚಿಕಿಸಿ ಇಲ್ಲದೆ ಪೈಲ್ಸ್ ರೋಗವನ್ನು ಸಂಪೂರ್ಣವಾಗಿ ಗುಣಮುಖ ಮಾಡಬಹುದು ಅಂತಹ ಅದ್ಭುತವಾದ ಔಷಧಿಯು ನಮ್ಮ ನಿಸರ್ಗದಲ್ಲಿಯೇ ಇದೆ ಅದರ ಬಗ್ಗೆ ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ.
ಮೂಲವ್ಯಾದಿ ಸಮಸ್ಯೆ ಕಾಡಲು ಇರುವ ಮೊದಲ ಕಾರಣವೆಂದರೆ ದೇಹದ ಅತಿಯಾದ ಉಷ್ಣ. ಈ ರೀತಿ ಉಷ್ಣ ದೇಹ ಇರುವವರು ಅಥವಾ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಇರುವವರು ಖಂಡಿತವಾಗಿ ಈ ಸಮಸ್ಯೆಗೆ ಒಳಗಾಗಿರುತ್ತಾರೆ ಇದರಿಂದ ವಿಚಿತ್ರವಾದ ನೋವನ್ನು ಕೂಡ ಅನುಭವಿಸುತ್ತಿರುತ್ತಾರೆ ಮತ್ತು ಇದರಿಂದ ಆಗುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಮಲವಿಸರ್ಜನೆ ಮಾಡಲು ಇದು ಬಹಳ ತೊಂದರೆ ಕೊಡುತ್ತದೆ ಆ ಭಾಗದಲ್ಲಿ ಊದಿಕೊಳ್ಳುವುದು ಅಥವಾ ನೋವು ನೀಡುವುದು ಅಥವಾ ತುರಿಕೆ ಉಂಟಾಗುವುದು ಮಲ ವಿಸರ್ಜನೆ ಮಾಡುವಾಗ ರಕ್ತ ಬೀಳುವುದು ಈ ರೀತಿ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಖಂಡಿತವಾಗಿ ಎಲ್ಲರೂ ಕೂಡ ಒಂದು ಕ್ಷಣ ಗಾಬರಿಯಾಗಿ ಹೋಗುತ್ತಾರೆ ಮತ್ತು ಈ ವಿಷಯದ ಬಗ್ಗೆ ನಾಚಿಕೆ ಪಡುವವರೇ ಜಾಸ್ತಿ ಇದರಿಂದಾಗಿ ಇದಕ್ಕೆ ಇರುವ ಔಷಧಿಯ ಬಗ್ಗೆ ತಿಳಿದುಕೊಳ್ಳುವುದು ಇಲ್ಲ.
ಈ ಸಮಸ್ಯೆ ಇರುವವರು ಖಂಡಿತವಾಗಿ ಉತ್ತಮವಾದ ಆಹಾರ ಪದ್ಧತಿ ಪಾಲನೆ ಮಾಡುವುದರ ಜೊತೆಗೆ ನಾವು ಹೇಳುವ ಈ ಔಷಧಿಯನ್ನು ಸೇವಿಸುವುದರಿಂದ ನೂರಕ್ಕೆ ನೂರರಷ್ಟು ಈ ಸಮಸ್ಯೆಯಿಂದ ಆಚೆ ಬರಬಹುದು ಮತ್ತು ಸಂಪೂರ್ಣವಾಗಿ ಈ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಆಯುರ್ವೇದದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿರುವ ಹಾಗೂ ಹಲವಾರು ಕಾಯಿಲೆಗಳಿಗೆ ಔಷಧೀಯ ಗುಣ ಹೊಂದಿರುವ ತುತ್ತಿ ಎಲೆಗಳನ್ನು ಸಂಗ್ರಹಿಸಬೇಕು ಈ ತುತ್ತಿ ಗಿಡವನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ ಗ್ರಾಮೀಣ ಭಾಗಗಳಲ್ಲಿ ಇದನ್ನು ಮುದ್ರೆ ಗಿಡ ಎಂದು ಕೂಡ ಕರೆಯುತ್ತಾರೆ. ವಜ್ರಕಾಯ ವಜ್ರದೇಹಿ ವಜ್ರಮುಷ್ಟಿ ಕಂಕತಿಕ ಕಂಘಿನಿ ಪೋತರಿ ತುತ್ತರಿಚಟ್ಟು ತುತ್ತರಿ ಬೆಂಡ ಪೇರುನ್ ತುತ್ತಿ ಮಧುರ ಸ್ಕಂದ ಈ ಹೆಸರುಗಳಿಂದ ಕೂಡ ಈ ಗಿಡವನ್ನು ಗುರುತಿಸುತ್ತಾರೆ. ಈ ಗಿಡವು ಸಾಮಾನ್ಯವಾಗಿ ಹಳ್ಳಿಗಳ ಕಡೆ ರಸ್ತೆ ಬದಿಗಳಲ್ಲಿ ಹಿತ್ತಲಲ್ಲಿ ಹೊಲ ಮತ್ತು ಗದ್ದೆಗಳ ಬೇಲಿಗಳಲ್ಲಿ ನ್ಯಾಚುರಲ್ ಆಗಿ ಹುಟ್ಟಿಕೊಂಡು ಬೆಳೆದಿರುತ್ತದೆ.
ಕೆಲವರು ಇದಕ್ಕಿರುವ ಆಯುರ್ವೇದ ಅಂಶಗಳನ್ನು ಗಮನಿಸಿ ಮನೆಯಲ್ಲಿ ತಂದು ಬೆಳೆಸುವವರು ಕೂಡ ಇದ್ದಾರೆ ಮತ್ತು ಈ ಗಿಡದ ಎಲೆಗಳು ಸಿಗದೇ ಹೋದರೆ ತುತ್ತಿ ಗಿಡದ ಎಲೆಗಳ ಪೌಡರ್ ಎನ್ನುವುದು ಆಯುರ್ವೇದ ಮಳಿಗೆಗಳಲ್ಲಿ ಪೌಡರ್ ರೂಪದಲ್ಲಿ ಲಭ್ಯವಿದೆ. ಅದನ್ನು ಕೂಡ ಇದರ ಬದಲಾಗಿ ಬಳಸಬಹುದಾಗಿದೆ. ಮೊದಲಿಗೆ ನೀವು ತುತ್ತಿ ಗಿಡದ ಎಲೆಗಳನ್ನು ಸಂಗ್ರಹಿಸಬೇಕು ಮತ್ತು ಈ ರೀತಿ ಒಮ್ಮೆ ತಂದು ಗಿಡದ ಎಲೆಗಳನ್ನು ನೀವು ಫ್ರಿಜ್ ಅಲ್ಲಿ ಶೇಖರಿಸಿ ಹಲವು ದಿನಗಳ ವರೆಗೆ ಕೂಡ ಉಪಯೋಗಿಸಬಹುದು. ಸಾಮಾನ್ಯವಾಗಿ 10 ತುತ್ತಿ ಗಿಡದ ಎಲೆಗಳನ್ನು ತೆಗೆದುಕೊಳ್ಳಬೇಕು ನಿಮಗೆನಾದರೂ ವಿಪರೀತವಾಗಿ ನೋವು ಕಾಡುತ್ತಿದೆ ಎನ್ನುವುದಾದರೆ 15 ರಿಂದ 20ರವರೆಗೆ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧವಾಗಿ ತೊಳೆದು ಸ್ವಲ್ಪ ಹೊತ್ತಿನವರೆಗೆ ನೀರಿನಲ್ಲಿ ನೆನೆಸಿಡಿ. ನಂತರ ಈ ಎಲೆಗಳನ್ನು ಮಿಕ್ಸಿ ಜಾರಿಗೆ ಹಾಕಿ ಅರ್ಧ ಲೋಟ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಟ್ಟಲಿಗೆ ರುಬ್ಬಿದ ಈ ಮಿಶ್ರಣದಿಂದ ತುತ್ತೇ ಗಿಡದ ಎಲೆಯ ರಸವನ್ನು ಬರುವಂತೆ ಶೋಧಿಸಿಕೊಳ್ಳಿ.
ನಂತರ ಈ ಎಲೆಯ ರಸ ಎಷ್ಟು ಪ್ರಮಾಣದಲ್ಲಿ ಇದ್ದೀವೊ ಅಷ್ಟೇ ಪ್ರಮಾಣದ ಹಸುವಿನ ಹಾಲನ್ನು ಸೇರಿಸಿ ಇದಕ್ಕೆ ತುಂಬಾ ಬಿಸಿಯಾದ ಹಾಲನ್ನು ಸೇರಿಸಬಾರದು ಸಾಧ್ಯವಾದಷ್ಟು ಹಸಿ ಹಾಲು ಅಥವಾ ಪ್ಯಾಕೆಟ್ ಹಾಲನ್ನು ಹಾಕಿ ನಂತರ ಇದಕ್ಕೆ ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಸೇರಿಸಿ. ನೀವು ಹಾಲು ಬದಲು ಇದಕ್ಕೆ ಬೆಚ್ಚಗಿನ ನೀರು ಕೂಡ ಸೇರಿಸಿ ಕುಡಿಬಹುದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಏಳು ದಿನಗಳವರೆಗೆ ಸೇವಿಸುತ್ತಾ ಬರುವುದರಿಂದ ಮೂಲವ್ಯಾಧಿಗೆ ಸಂಬಂಧಿಸಿದ ನಿಮ್ಮ ನೋವು ಸಮಸ್ಯೆ ಎಲ್ಲವೂ ಕೂಡ ಕಡಿಮೆಯಾಗುತ್ತದೆ ಮತ್ತು ಹಲವು ದಿನಗಳ ವರೆಗೆ ಇದನ್ನು ಮುಂದುವರೆಸುವುದಿಲ್ಲ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆ. ಮದ್ದು ತುತ್ತಿ ಗಿಡದ ಎಲೆಯನ್ನು ಬಿಸಿ ಮಾಡಿ ಕಾಟನ್ ಬಟ್ಟೆಯೊಂದಿಗೆ ಮೂಳೆ ನೋವು ಇರುವ ಕಡೆ ಮಸಾಜ್ ಮಾಡುವುದರಿಂದ ಶೀಘ್ರವಾಗಿ ಮೂಳೆ ನೋವುಗಳು ಕಡಿಮೆ ಆಗುತ್ತದೆ ಎನ್ನುವುದು ಕೂಡ ಸಾಬೀತು ಆಗಿದೆ.
ಇಷ್ಟೆಲ್ಲಾ ಔಷಧಿಯ ಗುಣವಿರುವ ತುತ್ತಿ ಗಿಡದ ಎಲೆಗಳು ನಿಮ್ಮ ಅಕ್ಕಪಕ್ಕ ಸಿಕ್ಕರ ಖಂಡಿತವಾಗಿ ಇದರ ಉಪಯೋಗ ಪಡೆದುಕೊಳ್ಳಿ. ಮತ್ತು ಇದರ ಉಪಯೋಗವನ್ನು ನೀವು ಪರೀಕ್ಷೆ ಮಾಡಿ ನೀವು ಫಲಿತಾಂಶ ಅರಿತ ನಂತರ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಮತ್ತು ನಿಮಗೆ ತಿಳಿದಿರುವ ಯಾರಾದರೂ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೂ ಕೂಡ ಈ ತುತ್ತಿಗಿಡದ ಔಷಧಿಯ ಬಗ್ಗೆ ತಿಳಿಸಿ.