ಥೈರಾಯಿಡ್ ಸಮಸ್ಯೆ ಇರುವವರು 3 ದಿನ ಈ ಕಷಾಯ ಕುಡಿಯಿರಿ ಸಾಕು ಥೈರೊಯ್ಡ್ ಸಮಸ್ಯೆ ಸಂಪೂರ್ಣ ಗುಣವಾಗುತ್ತೆ ಟೆಸ್ಟ್ ಮಾಡಿ ನೋಡಿ ನಿಮಗೆ ಆಶ್ಚರ್ಯವಾಗುತ್ತೆ.

ಥೈರಾಯ್ಡ್ ಸಮಸ್ಯೆ ಈಗ ಇದು ಭಾರತದ ಬಹುತೇಕ ಮಹಿಳೆಯರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಬಿಟ್ಟಿದೆ. ಭಾರತ ದೇಶದಲ್ಲಿ ಪ್ರತಿ 10 ಮಹಿಳೆಯರಲ್ಲಿ ಒಬ್ಬರು ಈ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆಲ್ಲ ಕಾರಣ ನಾವು ರೂಡಿಸಿಕೊಂಡಿರುವ ಅಸಮತೋಲನ ಆಹಾರ ಪದ್ಧತಿ ಹಾಗೂ ನಾವು ಬದುಕುತ್ತಿರುವ ಅಸಂಬದ್ಧವಾದ ಜೀವನಶೈಲಿಯೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಪುರುಷರಲ್ಲಿ ಕೂಡ ಈ ಸಮಸ್ಯೆ ಇರುತ್ತದೆ ಆದರೆ ತೀರ ಬೆರಳಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಇರುತ್ತವೆ. ಆದರೆ ಮಹಿಳೆಯರಲ್ಲಿ ಪುರುಷರಿಗಿಂತಲೂ 11% ಹೆಚ್ಚು ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನುವುದು ಈಗಾಗಲೇ ಅನೇಕ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಒಮ್ಮೆ ಥೈರಾಯಿಡ್ ಸಮಸ್ಯೆಗೆ ತುತ್ತಾದರೆ ಸಾಕು ಅನೇಕ ತಿಂಗಳುಗಳ ಅಥವಾ ವರ್ಷಗಳವರೆಗೆ ಇದರ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಎಷ್ಟೋ ಜನರಲ್ಲಿ ಇದು ಪೂರ್ತಿ ಪ್ರಮಾಣದಲ್ಲಿ ವಾಸಿಯಾಗುತ್ತದೆ ಎನ್ನುವುದು ಕೂಡ ತೀರ ವಿರಳ.

ಆದರೆ ಆಸ್ಪತ್ರೆಯಲ್ಲಿ ವೈದ್ಯರು ನೀಡುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದು ಮತ್ತು ನಮ್ಮ ಜೀವನ ಶೈಲಿಯನ್ನು ಸ್ವಲ್ಪ ಉತ್ತಮವಾಗಿ ನಿಸರ್ಗದತ್ತವಾಗಿ ಬದಲಾಯಿಸಿಕೊಳ್ಳುವುದು ಮತ್ತು ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರಿಂದ ಇದನ್ನು ಬೇಗನೆ ಕಂಟ್ರೋಲ್ ಗೆ ತೆಗೆದುಕೊಂಡು ನಂತರ ಸಂಪೂರ್ಣವಾಗಿ ಈ ಸಮಸ್ಯೆಯಿಂದ ಆಚೆ ಬರಬಹುದಾಗಿದೆ. ಈಗಾಗಲೇ ಸಂಪೂರ್ಣ ಆಯುರ್ವೇದಿಕ್ ಪದ್ಧತಿಯಿಂದ ಕೂಡ ಥೈರಾಯ್ಡ್ ಸಮಸ್ಯೆಯನ್ನು ಪೂರ್ತಿಯಾಗಿ ಗುಣಪಡಿಸಿದ ಉದಾಹರಣೆಗಳು ಕೂಡ ಇವೆ. ಆದರೆ ಈಗಾಗಲೇ ಇಂಗ್ಲೀಷ್ ಔಷಧಿ ಅನುಸರಿಸಿದವರು ಭಯಪಡುವ ಅಗತ್ಯ ಇಲ್ಲ ಯಾವುದೇ ಅಡ್ಡ ಪರಿಣಾಮ ಇಲ್ಲದೆ ನೀವು ತೆಗೆದುಕೊಳ್ಳುತ್ತಿರುವ ಔಷಧೀಯ ಜೊತೆಗೆ ಕೆಲವು ಮನೆಮದ್ದುಗಳನ್ನು ಕೂಡ ಅನುಸರಿಸಬಹುದು. ನಿಮ್ಮ ಥೈರಾಯಿಡ್ ಸಮಸ್ಯೆ ಬೇಗನೆ ವಾಸಿಯಾಗುವುದಕ್ಕೆ ಅನುಕೂಲ ಮಾಡಿಕೊಡುತ್ತದೆ ಹೊರತು ಇದರಿಂದ ದೇಹಕ್ಕೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.

ಥೈರಾಯಿಡ್ ಎನ್ನುವುದು ಮಾನವನ ದೇಹದ ಒಂದು ಪ್ರಮುಖ ಗ್ರಂಥಿಯಾಗಿದೆ. ಕುತ್ತಿಗೆಯ ಭಾಗದಲ್ಲಿ ಬರುವ ಈ ಥೈರಾಯ್ಡ್ ಗ್ರಂಥಿಯು ಸ್ರವಿಸುವ ಹಾರ್ಮೋನು ಇಂಬ್ಯಾಲೆನ್ಸ್ ಆದಾಗ ಹಾರ್ಮೋನ್ ಪ್ರಮಾಣ ಕಡಿಮೆ ಸ್ರವಿಸಿದಾಗ ಹೈಪೋ ಥೈರಾಯಿಡಿಸಂ ಮತ್ತು ಹಾರ್ಮೋನ್ ಪ್ರಮಾಣ ಹೆಚ್ಚಾದಾಗ ಹೈಪರ್ ಥೈರಾಯಿಡಿಸಂ ಎನ್ನುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇವು ಇದ್ದಕ್ಕಿದ್ದಂತೆ ತೂಕ ತುಂಬಾ ಹೆಚ್ಚಾಗುವುದು ಅಥವಾ ತುಂಬಾ ಕಡಿಮೆಯಾಗುವುದು, ಕೂದಲು ವಿಪರೀತ ಉದುರುವುದು, ತೀವ್ರ ನಿಶಕ್ತಿಗೆ ಒಳಗಾಗುವುದು, ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಗಾಯಗಳಾದಾಗ ಅದು ತುಂಬಾ ನಿಧಾನಕ್ಕೆ ವಾಸಿಯಾಗುವುದು, ಮಹಿಳೆಯರಲ್ಲಿ ಮುಖ್ಯವಾಗಿ ಅನಿಯಮಿತ ಮುಟ್ಟು ಇಂತಹ ಲಕ್ಷಣಗಳನ್ನು ತೋರಿಸಿಕೊಳ್ಳುತ್ತದೆ. ಈ ಲಕ್ಷಣಗಳ ಕಂಡು ಬಂದಾಗ ತಪ್ಪದೇ ವೈದ್ಯರ ಬಳಿ ತೆರಳಿ ಅವರು ಸೂಚಿಸಿದರೆ ಥೈರಾಯಿಡ್ ಟೆಸ್ಟ್ ಮಾಡಿಸಿ ಕೊಳ್ಳುವುದು ಒಳ್ಳೆಯದು.

ಇಲ್ಲವಾದರೆ ಇದು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ, ಅತೀ ಬೊಜ್ಜು ಉಂಟಾಗುವುದು ಮತ್ತು ಹೃದಯಘಾತದ ಸಮಸ್ಯೆಗಳಂತಹ ಅಪಾಯಕಾರಿ ತೊಂದರೆಗಳನ್ನು ತಂದು ಒಡ್ಡಬಹುದು. ಇದರಿಂದ ಯಾವಾಗಲೂ ಉತ್ತಮವಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಗಮನ ಇಡುವುದು ಹಾಗೂ ನಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಇಂತಹ ಅನೇಕ ಸಮಸ್ಯೆಗಳಿಂದ ನಮ್ಮನ್ನು ಪಾರು ಮಾಡುತ್ತದೆ. ಒಂದು ವೇಳೆ ನೀವೇನಾದರೂ ಈಗಾಗಲೇ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಉಪಾಯವನ್ನು ಮಾಡಿ ನೋಡಿ. ಇದಕ್ಕಾಗಿ ಯಾವುದೇ ವಸ್ತುವನ್ನು ಖರೀದಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿಯೇ ಇರುವ ದನಿಯ ಕಾಳುಗಳನ್ನು ಬಳಸಿ ನಿಮ್ಮ ಥೈರಾಯಿಡ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಈ ದನಿಯಾ ಬೀಜಗಳನ್ನು ಕೊತ್ತಂಬರಿ ಬೀಜ ಎಂದು ಕೂಡ ಕರೆಯುತ್ತಾರೆ. ಹೈಬ್ರಿಡ್ ದನಿಯಾ ಬದಲು ಆದಷ್ಟು ನಾಟಿ ದನಿಯ ಬೀಜಗಳನ್ನು ತೆಗೆದುಕೊಳ್ಳಿ.

ಮೊದಲಿಗೆ 200ರಿಂದ 300 ಗ್ರಾಂ ಗಳಷ್ಟು ದನಿಯಾ ಬೀಜವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಇದು ತುಂಬಾ ನುಣ್ಣಗೆ ಇರಬೇಕು ಎನ್ನುವ ಅಗತ್ಯವೇನು ಇಲ್ಲ ಸ್ವಲ್ಪ ತರಿತರಿಯಾಗಿ ಬಂದರು, ಪರವಾಗಿಲ್ಲ ಇದನ್ನು ಒಂದು ಡಬ್ಬದಲ್ಲಿ ಹಾಕಿ ಶೇಖರಿಸಿ ಇಟ್ಟುಕೊಳ್ಳಿ ಇದನ್ನು ಬಹಳ ದಿನಗಳವರೆಗೆ ಉಪಯೋಗಿಸಬಹುದು. ಈಗ ಉಪಯೋಗಿಸುವ ವಿಧಾನ ಹೇಗೆಂದರೆ. ಒಂದು ಬಾರಿಗೆ ಸುಮಾರು ಅರ್ಧ ಲೀಟರ್ ಅಷ್ಟು ನೀರನ್ನು ಬಿಸಿಯಾಗಲು ಇಡಿ ನಂತರ ಇದಕ್ಕೆ ಮೂರು ಟೇಬಲ್ ಚಮಚ ದನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಈಗ ಕುದಿಯುತ್ತಿರುವ ಈ ನೀರನ್ನು ಒಂದು ಲೋಟದಲ್ಲಿ ಒಂದು ಟೀ ಚಮಚ ಕಲ್ಲು ಸಕ್ಕರೆ ಅಥವಾ ನಾಟಿ ಬೆಲ್ಲದ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಪೂರ್ತಿ ಅರ್ಧ ಲೀಟರ್ ಅಷ್ಟು ದನಿಯ ಪುಡಿ ಹಾಕಿ ಕುದಿಸಿರುವ ನೀರು ರೆಡಿಯಾಯಿತು.

ಇದನ್ನು ತಪ್ಪದೇ ಪ್ರತಿದಿನವೂ ನೀವು ಬೆಳಗ್ಗೆ ಎದ್ದು ಮೊದಲಿಗೆ ಗಂಟಲನ್ನು ಬಿಸಿ ನೀರಿನಿಂದ ಗಾರ್ಲಿಂಗ್ ಮಾಡಿ ಇತರ ನಿಮಗೆ ಈಗಾಗಲೇ ವೈದ್ಯರು ನೀಡಿರುವ ಥೈರಾಯಿಡ್ ಸಂಬಂಧಿತ ಮಾತ್ರೆಗಳನ್ನು ಸೇವಿಸಿದ ಬಳಿಕ ಇದನ್ನು ಒಂದು ಲೋಟದಷ್ಟು ಸೇವಿಸಿ. ಹಾಗೆಯೇ ಮಧ್ಯಾಹ್ನ ಊಟದ ಬಳಿಕ ಹಾಗೂ ರಾತ್ರಿ ಊಟದ ಬಳಿಕ ಕೂಡ ಮೊದಲೇ ಮಾಡಿಟ್ಟುಕೊಂಡಿದ್ದ ಈ ನೀರನ್ನು ಬಿಸಿ ಮಾಡಿಕೊಂಡು ಬೇಕಾದರೆ ಸೇವಿಸಬಹುದು ಅಥವಾ ಮತ್ತೆ ಹೊಸದಾಗಿ ಮಾಡಿಕೊಂಡು ಸೇವಿಸಬಹುದು. ಹೀಗೆ ಆದಷ್ಟು 5 ಬಾರಿ ಆದರೂ ಸೇವಿಸಬೇಕು ಆದರೆ ರಾತ್ರಿ ಹೊತ್ತು ಮಲಗುವ ಒಂದು ಗಂಟೆಯ ಮೊದಲು ಇದನ್ನು ಸೇವಿಸಬೇಕು. ಈ ರೀತಿ ಮಾಡುತ್ತ ಬಂದರೆ ಹೈಪೋ ಥೈರಾಯ್ಡ್ ಅಥವಾ ಹೈಪರ್ ಥೈರಾಯ್ಡ್ ಯಾವುದೇ ಇದ್ದರೂ ಕೂಡ ಬಹುಬೇಗನೆ ಕಂಟ್ರೋಲ್ ಗೆ ಬರುತ್ತದೆ. ನಂತರ ವೈದ್ಯರ ಬಳಿ ಪರೀಕ್ಷಿಸಿಕೊಂಡು ಅವರು ಯಾವಾಗ ಮಾತ್ರೆಗಳು ಬೇಡ ಎಂದು ಹೇಳುತ್ತಾರೋ ಆ ನಂತರ ನೀವು ಈ ಕಷಾಯವನ್ನು ಕುಡಿಯುವುದನ್ನು ನಿಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ

Leave a Comment

%d bloggers like this: