ಮುಟ್ಟಿನ ಸಮಸ್ಯೆ, ಸರಿಯಾಗಿ ಋತುಚಕ್ರ ಆಗದೆ ಇರುವುದು, ಮುಟ್ಟಿನ ಹೊಟ್ಟೆ ನೋವು, ಏನೇ ಇರಲಿ ಈ ಮನೆಮದ್ದು ಸೇವಿಸಿ ಸಾಕು ಮಹಿಳೆಯರಿಗೆ ಸಂಜೀವಿ ಈ ಮದ್ದು.

ಮುಟ್ಟು ಅಥವಾ ಋತುಚಕ್ರ ಎನ್ನುವುದು ಮಹಿಳೆಯರ ಜೀವನದಲ್ಲಿ ಬಹುದೊಡ್ಡ ವಿಷಯವಾಗಿದೆ. ಮಹಿಳೆ ತಾನು ಆರೋಗ್ಯಕರವಾದ ಒಂದು ಮಗುವಿಗೆ ಜನ್ಮ ನೀಡುವುದಕ್ಕೆ ಹಾಗೂ ಅವಳು ಇರುವ ತನಕ ಆರೋಗ್ಯವಾಗಿರಲು ಋತುಚಕ್ರ ಎನ್ನುವುದು ಅವಳ ದೈಹಿಕ ಆರೋಗ್ಯದ ಮೇಲೆ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಕೂಡ ಬಹಳ ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ಋತುಚಕ್ರ ಸಾಮಾನ್ಯವಾಗಿ 28 ರಿಂದ 32 ದಿನದ ಒಳಗೆ ಪೂರ್ತಿಗೊಂಡು ಅದು ಮರುಕಳಿಸಬೇಕು. ಆಗಿದ್ದಾಗ ಮಾತ್ರ ಅವಳು ಆರೋಗ್ಯಕರವಾಗಿ ಇದ್ದಾಳೆ ಎಂದು ತಿಳಿದು ಕೊಳ್ಳಬಹುದು ಇಲ್ಲವಾದರೆ ಅವಳಿಗಾಗುವ ಮಾನಸಿಕ ಒತ್ತಡ ಹಾಗೂ ದೈಹಿಕ ವೇದನೆ ಬಗ್ಗೆ ಪದಗಳಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಈಗ ಬಹುತೇಕ ಮಹಿಳೆಯರು ಇಂತಹ ಒಂದು ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡು ನಿತ್ಯ ನರಕ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು.

ಇದಕ್ಕೆಲ್ಲಾ ಮುಖ್ಯ ಕಾರಣ ಏನೆಂದರೆ ಈಗಿನ ಕಾಲದಲ್ಲಿ ಮಹಿಳೆಯರು ಕೂಡ ಪುರುಷರ ಸಮಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ಒಳಗೊಂಡು ದುಡಿಯುತ್ತಿದ್ದಾರೆ. ಹೀಗಾಗಿ ಅವರಿಗೆ ದೈಹಿಕ ಒತ್ತಡದ ಜೊತೆ ಮಾನಸಿಕ ಒತ್ತಡವು ಹೆಚ್ಚಾಗುತ್ತಿದೆ ಮತ್ತು ಇದರ ಜೊತೆಗೆ ದೇಹದಲ್ಲಿ ಹಾರ್ಮೋನ್ ವೇರಿಯೇಷನ್ ಉಂಟಾಗುವುದರಿಂದ ಇಂತಹ ಸಮಸ್ಯೆ ಸುಳಿಗೆ ಇವರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ ಹಾಗೂ ಸ್ಪರ್ಧಾತ್ಮಕ ಬದುಕಿನಲ್ಲಿ ಎಲ್ಲರ ಸಮಕ್ಕೆ ಬದುಕುವ ಹೋರಾಟಕ್ಕೆ ಇಳಿದಿರುವ ಇವರು ಕೆಲವೊಂದು ಆರೋಗ್ಯಕರ ಪದ್ಧತಿಯ ಅನುಸರಣೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಮೂಲಕ ಅನಾರೋಗ್ಯಕರ ಜೀವನಶೈಲಿ ಅಳವಡಿಸಿ ಕೊಂಡಿರುತ್ತಾರೆ. ಈ ಕಾರಣಗಳು ಕೂಡ ಮಹಿಳೆಯ ಋತುಚಕ್ರದ ಅವಧಿಯ ಮೇಲೆ ಗಂಭೀರ ಪರಿಣಾಮ ಬೀರಿ ಆಕೆಯ ಮುಟ್ಟು ಅನಿಮಿತವಾಗಲು ಕಾರಣವಾಗುತ್ತಿದೆ. ಈ ಮುಟ್ಟಿನ ಅವಧಿಯಲ್ಲಿ ಹೆಚ್ಚು ಕಡಿಮೆ ಆಗುತ್ತಿದ್ದಂತೆ ಇದರಿಂದ ಆಕೆ ಗಂಭೀರವಾದ ಅನೇಕ ಸಮಸ್ಯೆಗಳಿಗೆ ಒಳಗಾಗ ಬೇಕಾಗುತ್ತದೆ.

ಹೀಗಾಗಿ ಪರಿಸ್ಥಿತಿ ಏನೇ ಇದ್ದರೂ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ನೋಡಿಕೊಳ್ಳಬೇಕಾದದ್ದು ಆಕೆಯ ಜವಾಬ್ದಾರಿಯಾಗಿದೆ. ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಅನುಭವಿಸುವಂತೆ ಆಕೆಯ ಮುಟ್ಟಿನ ದಿನದ ಬಗ್ಗೆ ಅರಿವಿಲ್ಲದೆ ಹೋದರೆ ಯಾವುದಾದರೂ ಪ್ರಮುಖ ದಿನದಲ್ಲಿ ಅಥವಾ ಹಬ್ಬ ಆಚರಣೆಗಳ ವಿಶೇಷ ಸಂದರ್ಭಗಳಲ್ಲಿ ಕುಟುಂಬಸ್ಥರ ಸಂಭ್ರಮದ ಆಚರಣೆಯಲ್ಲಿ ಪಾಲ್ಗೊಂಡಾಗ ಅಥವಾ ದೇವರ ದರ್ಶನಕ್ಕೆಂದು ಹೊರಟಾಗ ದೂರದ ಊರಿಗೆ ಎಲ್ಲೋ ಪ್ರಯಾಣ ಹೊರಟಾಗ ಇಂತಹ ಸಂದರ್ಭಗಳಲ್ಲಿ ಅಂತಹ ದಿನ ಬಂದು ಬಿಟ್ಟರೆ ಆಕೆ ಸಂಪೂರ್ಣವಾಗಿ ಆ ದಿನದ ಖುಷಿಯನ್ನು ಕಳೆದು ಕೊಂಡು ಬಿಡುತ್ತಾಳೆ. ಹಾಗೂ ಜೊತೆಗೆ ಸುತ್ತಮುತ್ತಲಿನವರಿಂದ ಭಾವನಾತ್ಮಕವಾಗಿ ಸ್ಪಂದನೆ ಸಿಗದೇ ಕೆಲವೊಮ್ಮೆ ಕಠಿಣ ಮಾತುಗಳನ್ನು ಕೇಳಬೇಕಾದ ಪರಿಸ್ಥಿತಿ ಬರಬಹುದು. ಇಂದು ಭಾರತದ ಹೆಚ್ಚು ಪಾಲು ಮಹಿಳೆಯರಿಗೆ ಇಂತಹ ಒಂದು ಕಹಿ ಸನ್ನಿವೇಶದ ಅರಿವು ಆಗಿಯೇ ಇರುತ್ತದೆ.

ಇದಕ್ಕಾಗಿ ಔಷಧಿಗಳ ಮೊರೆ ಹೋದರೆ ಅಡ್ಡ ಪರಿಣಾಮಗಳು ಕೂಡ ಆಗುವ ಸಾಧ್ಯತೆ ಇದೆ. ಇದರ ಬದಲಾಗಿ ನ್ಯಾಚುರಲ್ ಆಗಿ ಮುಟ್ಟು ಉಂಟಾಗಲು ಅನೇಕ ಮನೆಮದ್ದುಗಳು ಇವೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಿಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೀವೇನಾದರೂ ಇಂತಹ ಅನಿಯಮಿತ ಮುಟ್ಟಿನ ಸಮಸ್ಯೆ ಅನುಭವಿಸುತ್ತಾ ಇದ್ದಾಗ ಒಮ್ಮೆ ಈ ಮನೆ ಮದ್ದನ್ನು ಟ್ರೈ ಮಾಡಿ ನೋಡಿ. ಮೊದಲಿಗೆ 450 ml ಅಷ್ಟು ನೀರನ್ನು ಕುದಿಯಲು ಇಡಿ, ನಂತರ ಇದಕ್ಕೆ 2 ಇಂಚಿನಷ್ಟು ಶುಂಠಿಯನ್ನು ತೆಗೆದುಕೊಂಡು ಅದನ್ನು ಸಣ್ಣ ಸಣ್ಣಗೆ ಕಟ್ ಮಾಡಿ ಕುದಿಯುತ್ತಿರುವ ನೀರಿನ ಒಳಗಡೆ ಹಾಕಿ ಇದರ ಜೊತೆಗೆ ಎರಡು ಟೇಬಲ್ ಚಮಚದಷ್ಟು ಅಜ್ವಾನ ಮತ್ತು ಇದು ಟೇಬಲ್ ಚಮಚದಷ್ಟು ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ ಇದು ಬಿಸಿಯಾಗುತ್ತಿದ್ದಂತೆ ಸ್ಟೌ ಉರಿಯನ್ನು ಸಿಮ್ ಮಾಡಿ ಇಟ್ಟು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಯುವಂತೆ ನೋಡಿಕೊಳ್ಳಬೇಕು.

ಈಗ ನಾವು ಇಟ್ಟಿದ್ದ ನೀರಿನ ಪ್ರಮಾಣ ಸ್ವಲ್ಪ ಕಮ್ಮಿ ಆಗಿರುತ್ತದೆ. ನಂತರ ಇದನ್ನು ಒಂದು ಲೋಟಕ್ಕೆ ಶೋಧಿಸಿಕೊಳ್ಳಿ ಈ ಕಷಾಯವನ್ನು ಹಾಗೆ ಕುಡಿಯಲು ಕೆಲವರಿಗೆ ಹಿಂಸೆ ಎನಿಸಿದರೆ ನೀವು ಇದಕ್ಕೆ ನಿಮ್ಮ ರುಚಿಗೆ ಅನುಗುಣವಾಗುವಷ್ಟು ಕಲ್ಲು ಸಕ್ಕರೆ ಅಥವಾ ನಾಟಿ ಬೆಲ್ಲ ಅಥವಾ ಪಚ್ಚ ಕರ್ಪೂರ ಇವುಗಳನ್ನು ಸೇರಿಸಬಹುದು ಮತ್ತು ಕೊನೆಯದಾಗಿ ಕುಡಿಯುವಾಗ ಇದಕ್ಕೆ ಒಂದು ಚಮಚದಷ್ಟು ಶುದ್ಧವಾದ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು. ಜೇನುತುಪ್ಪವನ್ನು ಸ್ವಲ್ಪ ಬಿಸಿ ಆರಿದ ನಂತರ ಹಾಕಬೇಕು ಇಲ್ಲವಾದರೆ ಅದು ರಿಯಾಕ್ಟ್ ಆಗುವ ಸಾಧ್ಯತೆಗಳು ಇರುತ್ತದೆ, ಹಾಗಾಗಿ ಕೊನೆಯಲ್ಲಿ ನೀವು ಕುಡಿಯುವ ಸಮಯದಲ್ಲಿ ಇದನ್ನು ಬೆರೆಸಿಕೊಂಡು ಕುಡಿಯಿರಿ. ಅಥವಾ ನೀವು ಸಕ್ಕರೆ ಬೆಲ್ಲ ಏನನ್ನು ಮಿಕ್ಸ್ ಮಾಡದೆ ಹಾಗೆ ಕುಡಿಯುವ ಅಭ್ಯಾಸ ಇದ್ದರೆ ಹಾಗೆ ಕೊನೆಯಲ್ಲಿ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯಬಹುದು.

ಇದನ್ನು ಯಾವಾಗ ಕುಡಿಯುವುದು ಒಳ್ಳೆಯದು ಎಂದರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟದಷ್ಟು ಕಷಾಯವನ್ನು ಕುಡಿಯಬೇಕು. ಮತ್ತು ದಿನಕ್ಕೆ ಎರಡು ಬಾರಿ ಬೇಕಾದರೂ ಇದನ್ನು ಕುಡಿಯಬಹುದು ಎರಡು ಬಾರಿ ಕುಡಿಯಲು ಇಚ್ಚಿಸುವವರು ರಾತ್ರಿ ಮಲಗುವ ಮುನ್ನ ಒಂದು ತಾಸಿಗೆ ಮುಂಚೆ ಒಂದು ಲೋಟ ಈ ಮಿಶ್ರಣವನ್ನು ಮಾಡಿಕೊಂಡು ಸೇವಿಸಿ ನಂತರ ಮಲಗಬಹುದು. ಈ ರೀತಿ ಐದು ದಿನಗಳು ತಪ್ಪದೇ ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಸೇವಿಸುತ್ತಾ ಬಂದರೆ ಖಂಡಿತವಾಗಿ ನಿಮ್ಮ ಪಿರಿಯಡ್ ಬಂದು ಬಿಡುತ್ತದೆ. ಈ ಮನೆ ಮದ್ದನ್ನು ನೀವು ಮಾಡಿ ನೋಡಿ ಫಲಿತಾಂಶ ತಿಳಿದುಕೊಂಡ ನಂತರ ನಿಮ್ಮ ಸಹೋದರಿಯರಿಗೆ ಹಾಗೂ ಸ್ನೇಹಿತೆಯರಿಗೆ, ಸಂಬಂಧಿಕರಿಗೆ ಮತ್ತು ಮಹಿಳಾ ಸಹೋದ್ಯೋಗಿಗಳಿಗೆ ತಿಳಿಸಿ. ಇದರಲ್ಲಿ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎನ್ನುವುದು ಮುಖ್ಯವಾದ ವಿಷಯವಾಗಿದೆ.

Leave a Comment

%d bloggers like this: