ರಾಜ್ಯದಲ್ಲಿ ಎಲ್ಲಾ ಗ್ರಾಮಗಳಲ್ಲೂ ಕೂಡ ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕೆ ಅನುಕೂಲತೆ ಇರುವುದಿಲ್ಲ ಆ ಭಾಗದಲ್ಲಿ ಓದುವ ಆಸಕ್ತಿಯಿಂದ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ಹೋಗಿ ನೆಲೆಸಬೇಕಾಗುತ್ತದೆ. ಈ ರೀತಿಯಾಗಿ ವಿದ್ಯಾಭ್ಯಾಸದ ಉದ್ದೇಶದಿಂದ ಪಟ್ಟಣ ಅಥವಾ ನಗರ ಪ್ರದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ನೆರವಾಗುತ್ತಿದೆ.
ಅದಕ್ಕಾಗಿ ಹಾಸ್ಟೆಲ್ ಗಳ ನಿರ್ಮಾಣ ಮಾಡಿದ್ದು 2023-24ನೇ ಸಾಲಿನಲ್ಲಿ ಈ ರೀತಿ ಹಾಸ್ಟೆಲ್ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗಿದೆ. ಅವಶ್ಯಕತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಅನುಕೂಲತೆ ಪಡೆದುಕೊಳ್ಳಬಹುದು. ಅದಕ್ಕಾಗಿ ಈ ಅಂಕಣದಲ್ಲಿ ಯಾವ ರೀತಿ ಅರ್ಜಿ ಸಲ್ಲಿಸಬೇಕು? ಬೇಕಾಗುವ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
ಯಾರೆಲ್ಲಾ ಅರ್ಹರು:-
● 2023-24ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾಭ್ಯಾಸ ಅಂದರೆ PUC, ಪದವಿ, ಡಿಪ್ಲೋಮೋ, ಸ್ನಾತಕೋತ್ತರ ಪದವಿ ಈ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯಬಹುದಾಗಿದೆ.
● ವಿದ್ಯಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
● ಯಾವ ನಿಗಮದಡಿ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಅದಕ್ಕೆ ಕೇಳಲಾಗುವ ಅರ್ಹತಾ ಮಾನದಂಡಗಳನ್ನು ಪೂರೈಸಲು ಪೂರಕ ದಾಖಲೆಗಳನ್ನು ತಪ್ಪದೆ ಒದಗಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವಿದ್ಯಾರ್ಥಿಯ SATS ID
● ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್
● ವಿದ್ಯಾರ್ಥಿ ಅಥವಾ ಪೋಷಕರ ಮೊಬೈಲ್ ಸಂಖ್ಯೆ
● ವಿದ್ಯಾರ್ಥಿಯ ಹೆಸರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಪುರಾವೆ.
● ಪೋಸ್ಟ್ ಮೆಟ್ರಿಕ್ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು
● ದಾಖಲಾಗಿರುವ ವಿಶ್ವವಿದ್ಯಾಲಯದ ನೋಂದಣಿ ಸಂಖ್ಯೆ
● ಕಳೆದ ತರಗತಿಯಲ್ಲಿ ಪಾಸಾಗಿರುವ ಅಂಕಪಟ್ಟಿ
● ಇನ್ಯಾವುದೇ ಪ್ರಮುಖ ದಾಖಲೆಗಳು.
ಅರ್ಜಿ ಸಲ್ಲಿಸುವ ವಿಧಾನ:-
● ವಿದ್ಯಾರ್ಥಿಗಳು ನೇರವಾಗಿ SHP ಪೋರ್ಟಲ್ ಗೆ ಲಾಗಿನ್ ಆಗಬೇಕು, ನೇರವಾಗಿ https://shp.karnataka.gov.in/ ವೆಬ್ ಸೈಟ್ ಗೆ ಭೇಟಿ ಕೊಡಿ.
● ವಿಭಾಗವಾರು ಅಲ್ಲಿ ಅಪ್ಲಿಕೇಶನ್ ಲಿಂಕ್ ಇರುತ್ತವೆ ನೀವು ಯಾವ ನಿಗಮದ ವತಿಯಿಂದ ಅಪ್ಲಿಕೇಶನ್ ಹಾಕುತ್ತಿದ್ದೀರಾ ಆ ಲಿಂಕ್ ಕ್ಲಿಕ್ ಮಾಡಿ.
● ವಿದ್ಯಾರ್ಥಿಗಳ ವಿವರವನ್ನು ಸರಿಯಾಗಿ ಭರ್ತಿ ಮಾಡಿ ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅಲ್ಲಿ ಸಲ್ಲಿಕೆ ಪೂರ್ತಿಯಾದ ಬಳಿಕತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-
● ಹಿಂದುಳಿದ ವರ್ಗಗಳ ಇಲಾಖೆ – 11 ಅಕ್ಟೋಬರ್, 2023
● ಅಲ್ಪಸಂಖ್ಯಾತರ ನಿಗಮ – 30 ಸೆಪ್ಟೆಂಬರ್, 2023
● ಸಮಾಜ ಕಲ್ಯಾಣ ಇಲಾಖೆ – 16 ಅಕ್ಟೋಬರ್, 2023
● ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ – 30 ಸೆಪ್ಟೆಂಬರ್, 2023.
ನಿಮಗೆ ಇನ್ನು ಸ್ಕಾಲರ್ಶಿಪ್ ಹಣ ರೂ.10,000 ಬಂದಿಲ್ವಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಈ ಕುರಿತಾದ ಹೆಚ್ಚಿನ ಮಾಹಿತಿ ಇದ್ದಲ್ಲಿ ಈ ಮೇಲೆ ತಿಳಿಸಿದ ವೆಬ್ಸೈಟ್ಗೆ ಭೇಟಿ ಕೊಟ್ಟು ಪೂರ್ತಿ ಮಾಹಿತಿ ಪಡೆಯಬಹುದು. ಮತ್ತು ಆಯಾ ನಿಗಮಕ್ಕೆ ಸಂಬಂಧಪಟ್ಟ ಹಾಗೆ ಪ್ರತ್ಯೇಕವಾದ ಅರ್ಹತ ಮಾನದಂಡಗಳಿದ್ದು ಅದನ್ನು ಪೂರೈಸುವ ಅಭ್ಯರ್ಥಿಗಳು ಆ ವಿಭಾಗಕ್ಕೆ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು. ಈ ಉಪಯುಕ್ತ ಮಾಹಿತಿ ಕರ್ನಾಟಕದಾದ್ಯಂತ ಇರುವ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಅನುಕೂಲವಾಗುತ್ತದೆ, ಹಾಗಾಗಿ ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.