ಸ್ನೇಹಿತರೆ ಬಿಸಿನೀರು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳುತ್ತಿದ್ದೇವೆ ಆದರೆ ಕೆಲವರು ಬಿಸಿನೀರನ್ನು ಸೇವಿಸಲು ನಿರಾಕರಿಸುತ್ತಾರೆ ಹಾಗೆ ತಣ್ಣೀರನ್ನು ಪ್ರೀತಿಸುತ್ತಾರೆ ಇಂದಿನ ಪುಟದಲ್ಲಿ ನಮ್ಮ ವಿಷಯವೇನೆಂದರೆ ಬಿಸಿನೀರು ಅಪಾಯಕಾರಿ ಅಪಾಯಕಾರಿ ಆದರೆ ಕಾರಣವೇನು ಎಂದು ತಿಳಿಯೋಣ ಸಾಮಾನ್ಯವಾಗಿ ಇತ್ತೀಚೆಗೆ ಬಂದ ಕರುಣ ಕಾಯಿಲೆಯಿಂದ ಜನರು ಹೆಚ್ಚು ಬಿಸಿ ನೀರನ್ನು ಸೇವಿಸುತ್ತಾರೆ.
ಆದರೆ ಎಷ್ಟೋ ಮಂದಿಗೆ ಇರುವಂತಹ ಪ್ರಶ್ನೆಯೆಂದರೆ ತಣ್ಣೀರು ಹಾಗೂ ಬಿಸಿ ನೀರು ಸೇವನೆ ಯಾವುದು ಒಳ್ಳೆಯದು ಇವೆರಡರಲ್ಲಿ ಯಾವುದನ್ನು ಸೇರಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು. ಸ್ನೇಹಿತರೆ ನೀವು ಈಗಾಗಲೇ ಎಷ್ಟು ಯೌಟ್ಯೂಬ್ ಚಾನೆಲ್ ಗಳು ಹಾಗೂ ಲೇಖನಗಳನ್ನು ನೀವು ಓದಿರಬಹುದು ಅದರಲ್ಲಿ ಬಿಸಿನೀರಿನ ಸೇವನೆಯಿಂದ ಗ್ಯಾಸ್ಟಿಕ್ ಸಮಸ್ಯೆ ಹಾಗೂ ರಕ್ತದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಹಾಗೂ ನಮ್ಮ ದೇಹದ ಬೊಜ್ಜನ್ನು ಸುಲಭವಾಗಿ ಕಡಿಮೆಗೊಳಿಸಬಹುದು ಎಂದು ತಿಳಿಸಿದ್ದಾರೆ.
ಹಾಗೂ ಇನ್ಯಾವುದೋ ಒಂದು ಮಿಲಿಯನ್ ವ್ಯೂ ಪಡೆದಿರುವಂತಹ ವಿಡಿಯೋ ಒಂದು ಬಿಸಿ ನೀರನ್ನು ಕುಡಿದರೆ ಕ್ಯಾನ್ಸರ್ ನಮ್ಮ ಹತ್ತಿರ ಸುಳಿಯುವುದೇ ಇಲ್ಲ ಎಂದು ತಿಳಿಸಿದೆ. ಆದರೆ ಇದಕ್ಕೆ ಯಾವುದೇ ತರಹದ ಸಾಕ್ಷಿ ಇಲ್ಲ ಇವೆಲ್ಲವೂ ಜನರಿಗೆ ತಪ್ಪಾದ ಸಂದೇಶವನ್ನು ಸಾರುತ್ತಿದೆ ಹಾಗಾಗಿ ನಮ್ಮ ಜನತೆಯ ಕೂಡ ಇದರ ಬಗ್ಗೆ ಎಚ್ಚರ ವಹಿಸಬೇಕು. ಹಾಗಾದರೆ ಬಿಸಿ ನೀರನ್ನು ಕುಡಿಯುವುದು ಎಷ್ಟು ಕ್ಷೇಮ ಇದರಿಂದ ಏನೂ ಆಗುತ್ತದೆ ಎಂದು ನೋಡಿದರೆ ಅದು ಫಿಸಿಕಲ್ ಆಗಿ ಬದಾಲವಣೆ ಆಗುತ್ತದೆ ಆದರೆ ಯಾವುದೇ ತರಹ ಅದರ ರಾಸಾಯನಿಕ ಬದಲಾವಣೆ ಆಗುವುದಿಲ್ಲ.
ಹಾಗಾದರೆ ಬಿಸಿನೀರನ್ನು ಕುಡಿದರೆ ಅದು ಗಂಟಲು, ಅನ್ನನಾಳ ಹಾಗೂ ಹೊಟ್ಟೆಗೆ ಕೆಲವು ಕ್ಷಣಗಳು ಮಾತ್ರ ಬಿಸಿನೀರಿನ ಅನುಭವವನ್ನು ಪಡೆಯಬಹುದು. ಹಾಗಾದರೆ ಬಿಸಿನೀರನ್ನು ಕುಡಿದರೆ ಏನು ಉಪಯೋಗ ಇಲ್ವಾ? ಎನ್ನುವ ಪ್ರಶ್ನೆಗೆ ಉತ್ತರ ಬಿಸಿನೀರನ್ನು ಕುಡಿದರೆ ಗಂಟಲಿನ ಕಿರಿ ಕಿರಿ ಕಡಿಮೆಯಾಗುತ್ತದೆ. ಇನ್ನು ಬಿಸಿ ನೀರನ್ನು ಕುಡಿದಾಗ ನೀರಿನಿಂದ ಉತ್ಪತಿಯಾಗುವಂತಹ ರೋಗಗಳನ್ನು ತಡೆಯಬಹುದು ಆದರೆ ಇದೇ ಬಿಸಿ ನೀರನ್ನು ಕುಡಿದಾಗ ಆಗುವ ಅಪಾಯಗಳೇನು ಎಂದು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಬಿಸಿ ನೀರನ್ನು ಹೆಚ್ಚಾಗಿ ಕುಡಿದರೆ ನಮ್ಮ ದೇಹದ ಅನ್ನನಾಳ ಬೇಗ ಹಾಳಾಗುತ್ತದೆ ಇದರಿಂದ ಹಲವು ಇನ್ಫೆಕ್ಷನ್ಸ್ ಗಳಿಗೆ ದಾರಿ ಮಾಡಿಕೊಳ್ಳುತ್ತದೆ. ಹಾಗಾಗಿ ಹೆಚ್ಚಾಗಿ ಬಿಸಿ ನೀರನ್ನು ಕುಡಿಯಬಾರದು. ಎಲ್ಲರಿಗೂ ತಿಳಿದಿರುವಂತೆ ಜ್ವರ ಬಂದಾಗ ಬಿಸಿನೀರನ್ನು ಕುದಿಯಲು ಹೇಳುತ್ತಾರೆ, ಬಿಸಿ ನೀರನ್ನು ಕುಡಿದರೆ ನಮ್ಮ ದಾಹವು ಕಡಿಮೆಯಾಗುತ್ತದೆ ಇದರಿಂದ ನಮ್ಮ ದೇಹಕ್ಕೆ ನೀರಿನ ಅಂಶ ಕಡಿಮೆಯಾಗಿ ಡಿ ಹೈಡ್ರೇಶನ್ ಆಗುತ್ತದೆ.
ಇನ್ನು ನೀರನ್ನು ಹೆಚ್ಚಾಗಿ ಕುದಿಸಿದರೆ ನೀರಿನಲ್ಲಿ ಇರುವಂತಹ ರಾಸಾಯನಿಕ ಅಂಶವು ಹೆಚ್ಚಾಗುತ್ತದೆ, ಅದೇ ರೀತಿ ನೀರಿನಲ್ಲಿ ಇರುವಂತಹ ಗ್ಯಾಸ್ ಅಂಶವು ಹಾವಿ ಆಗಿ ನೀರಿನ ರುಚಿಯು ಬದಲಾಗುತ್ತದೆ ಇದರಿಂದ ಸಾಮಾನ್ಯವಾಗಿ ಕಡಿಮೆ ನೀರನ್ನು ಕುಡಿಯುತ್ತಾರೆ. ಹಾಗಾದರೆ ಸ್ನೇಹಿತರೆ ಯಾವ ತರಹದ ನೀರನ್ನು ಕುಡಿಯಬೇಕು? ಎನ್ನುವ ಪ್ರಶ್ನೆಗೆ ಉತ್ತರ ನಮ್ಮ ನಾಲಿಗೆಗೆ ಯಾವುದು ರುಚಿ ಅನಿಸುತ್ತದೆಯೋ ಅದನ್ನು ನಾವು ಕುಡಿಯಬೇಕು.
ಮೊದಲೇನೆಯದಾಗಿ ನಾವು ಸ್ವಚ್ಛವಾದ ನೀರನ್ನು ಕುಡಿಯಬೇಕು, ಸಾಮಾನ್ಯವಾಗಿ ನೈಸರ್ಗಿಕವಾಗಿ ಝರಿಯಿಂದ ಬರುವ ನೀರು ಮೂಲ ಸ್ವಚ್ಛವಾಗಿ ಇರುವ ನೀರು, ಆದರೆ ಒಮ್ಮೆ ಏನಾದರೂ ಈ ನೀರು ನದಿಗೆ ಸೇರಿದರೆ ಕಲುಷಿತವಾಗುತ್ತದೆ. ಹಾಗಾದರೆ ನಾವು ಶುದ್ಧ ನೀರನ್ನು ಪ್ಯೂರಿಫಯ್ಯೇರ್ ಬಳಸಬೇಕು. ಅದರಿಂದ ಬರುವಂತಹ ನೀರು ಸ್ವಚ್ಛವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.