ಈಗ ನಮ್ಮ ದೇಶದಲ್ಲಿ ಪಾನ್ ಕಾರ್ಡ್ (Pan card) ಕೂಡ ಒಂದು ಅಗತ್ಯ ದಾಖಲಾತಿ ಆಗಿದೆ, ಇದನ್ನು ಗುರುತಿನ ಚೀಟಿ ಆಗಿ ಕೂಡ ಉಪಯೋಗಿಸಬಹುದು. ಈಗಾಗಲೇ ಹಲವು ದಾಖಲೆಗಳೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಸಹ ಮಾಡಲಾಗಿದೆ. ಬ್ಯಾಂಕ್ ಖಾತೆಗೆ, ಆಧಾರ್ ಕಾರ್ಡಿಗೆ ,ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಲಾಗಿದ್ದು ಅದರಂತೆ ಎಲ್ಲಾ ನಾಗರಿಕರು ಸಹ ಇದನ್ನು ಮಾಡಿದ್ದಾರೆ.
ಈಗ ಮತ್ತೊಂದು ಯೋಜನೆಗೂ ಕೂಡ ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಎನ್ನುವುದನ್ನು ತಿಳಿಸಲಾಗಿದೆ. ಭಾರತದ ಜೀವ ನಿಗಮ ಪಾಲಿಸಿ ಗ್ರಾಹಕರಿಗೆ ಕಂಪನಿಯು ಈ ಸೂಚನೆ ನೀಡಿದೆ. ಹಾಗಾಗಿ ನೀವು ಕೂಡ ಎಲ್ಐಸಿ (LIC) ಪಾಲಿಸಿದಾರರಾಗಿದ್ದರೆ ಆಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಈಗಾಗಲೇ ಎಲ್ಐಸಿ ಪಾಲಿಸಿ ಜೊತೆ ಪಾನ್ ಕಾರ್ಡ್ ಅನ್ನು ಜೋಡಿ ಮಾಡಿ ಎಂದು ಗ್ರಾಹಕರಿಗೆ ಎಲ್ಐಸಿ ಕಂಪನಿ ಮನವಿ ಮಾಡಿತ್ತು, ಆದರೆ ಅದರ ಅಂತಿಮ ದಿನಾಂಕವನ್ನು ನಿಗದಿಪಡಿಸಿರಲಿಲ್ಲ.
ಇತ್ತೀಚಿನ ಅಧಿಸೂಚನೆ ಪ್ರಕಾರ ಮ್ಯಾಚ್ 31ನೇ ತಾರೀಕಿನ ಒಳಗೆ ಎಲ್ಐಸಿ ಪಾಲಿಸಿ ಜೊತೆ ಪಾನ್ ಕಾರ್ಡನ್ನು ಕಡ್ಡಾಯವಾಗಿ ಜೋಡಣೆ ಮಾಡಲೇಬೇಕು ಎಂದು ಎಲ್ಐಸಿ ತನ್ನ ಗ್ರಾಹಕರುಗಳಿಗೆ ಸೂಚನೆ ನೀಡಿದೆ. ಎಲ್ಐಸಿಯ ಅಂತಿಮ ಗಡುವು ಮುಗಿಯುವುದರ ಒಳಗೆ ಎಲ್ಲಾ ಪಾಲಿಸಿದಾರರು ಕೂಡ ತಮ್ಮ ಪಾಲಿಸಿ ಜೊತೆ ತಾವು ಹೊಂದಿರುವ ಪಾನ್ ಕಾರ್ಡನ್ನು ಲಿಂಕ್ ಮಾಡಿಸುವುದು ಉತ್ತಮ.
ಒಂದು ವೇಳೆ ನೀವು ಇನ್ನೂ ಪಾನ್ ಕಾರ್ಡ್ ಪಡೆದಿಲ್ಲ ನಿಮ್ಮ ಬಳಿ ನಿಮ್ಮ ಪಾನ್ ನಂಬರ್ ಇಲ್ಲ ಎನ್ನುವುದಾದರೆ ಈ ಕೂಡಲೇ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಪಡೆಯಬೇಕು. ಆದಾಯ ತೆರಿಗೆ ಸಲ್ಲಿಕೆಯ ಸಮಯದಲ್ಲಿ ಅತ್ಯಗತ್ಯ ದಾಖಲೆ ಆಗಿರುವ ಈ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ (Income tax department) ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು. ಆನ್ಲೈನ ಮೂಲಕ ಅರ್ಜಿ ಸಲ್ಲಿಸಿ ಮೊದಲಿಗೆ ಪಾನ್ ಕಾರ್ಡ್ ಪಡೆದು ನಂತರ ಅದನ್ನು ನಿಮ್ಮ ಇತರ ದಾಖಲಾತಿಗಳೊಂದಿಗೆ ಆದಷ್ಟು ಬೇಗ ಲಿಂಕ್ ಮಾಡಿಕೊಳ್ಳಿ.
ಪಾನ್ ಕಾರ್ಡ್ ಒಂದು 10 ಅಂಕಿಯ ಖಾಯಂಕಾತ ಸಂಖ್ಯೆ ಹೊಂದಿರುವ ದಾಖಲಾತಿ ಆಗಿದ್ದು ಈ ಸಂಖ್ಯೆ ಪ್ರತಿಯೊಬ್ಬರಿಗೂ ಕೂಡ ಪ್ರತ್ಯೇಕ ಆಗಿರುತ್ತದೆ. ಹಾಗೂ ಒಬ್ಬರಿಗೆ ಒಂದು ಮಾತ್ರ ಪಾನ್ ನಂಬರ್ ಇರುತ್ತದೆ. ಆದಾಯ ತೆರಿಗೆ ಇಲಾಖೆಯು ಇದನ್ನು ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ವಿತರಿಸುತ್ತದೆ. ಇದನ್ನು ಪಡೆದ ನಂತರ ಎಲ್ಐಸಿ ಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪಾಲಿಸಿ ಜೊತೆ ಪಾನ್ ನಂಬರ್ ಲಿಂಕ್ ಮಾಡಿ. ಎಲ್ಐಸಿ ಸೈಟ್ ಗೆ ಭೇಟಿ ನೀಡಿದ ನಂತರ ನಿಮ್ಮ ಪಾಲಿಸಿ ನಂಬರನ್ನು ದಾಖಲಿಸಿ ನಂತರ ನಿಗದಿತ ಸ್ಥಳದಲ್ಲಿ ನಿಮ್ಮ ಪಾನ್ ಸಂಖ್ಯೆ ಜೊತೆ ಕ್ಯಾಪ್ಚ್ ಕೋಡ್ ಮತ್ತು ಜನ್ಮ ದಿನಾಂಕ ನಮೂದಿಸಿ ಕೊನೆಗೆ ಸಬ್ಮಿಟ್ ಬಟನ್ ಒತ್ತಿ.
ಈಗ ಮಾನಿಟರ್ ಅಥವಾ ಮೊಬೈಲ್ ಸ್ಕ್ರೀನ್ ಮೇಲೆ ಪಾಲಿಸಿ ನಂಬರ್ ಜೊತೆ ಫ್ಯಾನ್ ಜೋಡಣೆ ಮಾಹಿತಿ ಕಾಣಿಸಿಕೊಳ್ಳುತ್ತದೆ. ಇನ್ನು ಲಿಂಕ್ ಆಗಿಲ್ಲ ಎಂದರೆ ಅಲ್ಲಿ ಇಂಗ್ಲಿಷ್ ಬರಹದಲ್ಲಿ ಬರೆದಿರುವ ಕ್ಲಿಪ್ ಟು ಲಿಂಕ್ ಯುವರ್ ಪ್ಯಾನ್ ವಿಥ್ ಅಸ್ ಕ್ಲಿಕ್ ಮಾಡಿ ಆ ಮೂಲಕ ಹೊಸ ಪುಟಗಳು ತೆರೆದುಕೊಳ್ಳುತ್ತದೆ. ಅಲ್ಲಿ ಅಗತ್ಯವಿರುವ ಕಡೆ ಮಾಹಿತಿಯನ್ನು ನಮೂದಿಸಿದರೆ ಯಶಸ್ವಿಯಾಗಿ ನಿಮ್ಮ ಪಾನ್ ಕಾರ್ಡ್ ಪಾಲಿಸಿ ಜೊತೆ ಲಿಂಕ್ ಆಗುತ್ತದೆ. ಈ ವಿಚಾರವನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಕೊಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ